CLT: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ

CLT: ರಾಜ್ಯ ಸರ್ಕಾರಿ ನೌಕರರ ಕಂಪ್ಯೂಟರ್‌ ಸಾಕ್ಷಾರತಾ ಪರೀಕ್ಷೆಗೆ ಸಂಬಂಧಿಸಿದಂತೆ ತಿದ್ದುಪಡಿ ವಿಧೇಯಕದ ಕುರಿತು ರಾಜ್ಯ ಸರ್ಕಾರವು ಪತ್ರವನ್ನು ಪ್ರಕಟಿಸಿದೆ.

CLT: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ
CLT: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ

ಇದನ್ನೂ ಓದಿ: ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; SC-ST ಸಮುದಾಯದವರು ಮಿಸ್‌ ಮಾಡ್ಡೆ ಈ ಸುದ್ದಿ ಓದಿ


ಈ ಮೆಲ್ಕಂಡ ಪತ್ರದಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ (14) 8ನೇ ಪ್ರಕರಣದೊಂದಿಗೆ ಓದಲಾದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ರಚಿಸಿರುವ ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಈ ಕೆಳಗಿನ ನಿಯಮಗಳ ಕರಡನ್ನು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಇದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ, ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಸದರಿ ಕರಡು ನಿಯಮಗಳಿಗೆ ಸಂಬಂಧಪಟ್ಟಂತೆ ಮೇಲೆ ಗೊತ್ತುಪಡಿಸಿದ ಅವಧಿ ಕೊನೆಗೊಳ್ಳುವ ಮುಂಚೆ ಯಾರೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು.


ಇದನ್ನೂ ಓದಿ: 1000 VAO ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಪ್ರಕಟ; ಚೆಕ್‌ ಮಾಡುವ ವಿಧಾನ ಇಲ್ಲಿದೆ…


ಕರಡು ನಿಯಮಗಳು:
1. ಶೀರ್ಷಿಕೆ ಮತ್ತು ಪ್ರಾರಂಭ:-
* ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (CLT) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು
* ಈ ನಿಯಮಗಳು ಅಧಿಕೃತ ರಾಜ್ಯ ಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 2ಕ್ಕೆ ತಿದ್ದುಪಡಿ:-
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ನಿಯಮ 2ರಲ್ಲಿ ದಿನಾಂಕ: 31/12/2024 ರೊಳಗೆ ಎಂಬ ಪದ ಮತ್ತು ಅಂಕಿಗಳ ಬದಲಿಗೆ ದಿನಾಂಕ: 31/12/2025 ರೊಳಗೆ” ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01/01/2025ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಷ್ಠಾಪಿಸತಕ್ಕದ್ದು.

3. ನಿಯಮ 3ಕ್ಕೆ ತಿದ್ದುಪಡಿ :-
* (ಎ) ಉಪ ನಿಯಮ (1)ರಲ್ಲಿ ದಿನಾಂಕ: 31/12/2024 ರೊಳಗೆ, ಎಂಬ ಪದ ಮತ್ತು ಅಂಕಿಗಳ ಬದಲಿಗೆ ದಿನಾಂಕ: 31/12/2025 ರೊಳಗೆ, ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01/01/2025ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಷ್ಠಾಪಿಸತಕ್ಕದ್ದು
* (ಬಿ) ಉಪ ನಿಯಮ (2)ರಲ್ಲಿ ದಿನಾಂಕ: 31/12/2024ರೊಳಗೆ, ಎಂಬ ಪದ ಮತ್ತು ಅಂಕಿಗಳ ಬದಲಿಗೆ ದಿನಾಂಕ: 31/12/2025ರೊಳಗೆ, ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01/01/2025ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಷ್ಠಾಪಿಸತಕ್ಕದ್ದು.


ಇದನ್ನೂ ಓದಿ: ಕಾರ್ಮಿಕರಿಗೆ ಸರ್ಕಾರದಿಂದ ಸಿಗಲಿದೆ ಈ ಸಹಾಯಧನ; ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ