Raajakeeya: ಒಂದೇ ವಾರದಲ್ಲಿ ಸಖತ್ ಸದ್ದು ಮಾಡಿದ ‘ರಾಜಕೀಯ’ ರ‍್ಯಾಪ್ ಸಾಂಗ್

(Raajakeeya) ಜನರಿಗೆ ಹಾರ್ಟ್ ಗೆ ಟಚ್ ಆಗೋದು ಅಂದ್ರೆ ಒನ್ ಅಂಡ್ ಓನ್ಲಿ ಮ್ಯೂಸಿಕ್, ಇದರಲ್ಲೇ ಏನಾದರೂ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘ರಾಜಕೀಯ‘ ಎನ್ನುವ ನೈಜ ವಿಷಯ ವಸ್ತುವನ್ನು ಇಟ್ಟುಕೊಂಡು ರ‍್ಯಾಪ್ ಸಾಂಗ್ ವೊಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ; ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ; ಈ ಯೋಜನೆಯಲ್ಲಿ ನಿಮಗೂ ಸಹ ಹಣ ಸಿಗುತ್ತಾ?

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಬಿಕಾಂ ಪದವೀಧರನಾಗಿರುವ ರ‍್ಯಾಪರ್ ಚೇತನ್ ರಾಜಕೀಯ (Raajakeeya)  ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಅಣಕಿಸುವ ರ‍್ಯಾಪ್ ಸಾಂಗ್ ವೊಂದು ಸಾಕಷ್ಟು ಸದ್ದು ಮಾಡುತ್ತಿದ್ದು, ಸಾರ್ವಜನೀಕ ವಲಯದಲ್ಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ; ನಿರುದ್ಯೋಗಿಗಳಿಗೆ ಗುಡ್ ನ್ಯೂಸ್; ಉಚಿತ ಸಿಸಿಟಿವಿ ಅಳವಡಿಕೆ ತರಬೇತಿಗೆ ಅರ್ಜಿ ಆಹ್ವಾನ

ಕಳೆದ ಆರು ವರ್ಷಗಳಿಂದ ರ‍್ಯಾಪ್ ಮ್ಯೂಸಿಕ್ ನಲ್ಲಿಯೇ ಸಕ್ರೀಯವಾಗಿ ಗುರುತಿಸಿಕೊಂಡಿರುವ ರ‍್ಯಾಪರ್ ಚೇತನ್, ರಾಜಕೀಯ ವ್ಯವಸ್ಥೆಯ ವೈಫಲ್ಯದ ಅಣುಕನ್ನು ಈ ಹಾಡಿನ ಮೂಲಕ ಹೇಳಲಾಗಿದೆ. ಮತ ಚಲಾಯಿಸಿ ಯೋಚಿಸುವ ಮೊದಲು ಯೋಚಿಸಿ ಮತ ಚಲಾಯಿಸು ಎನ್ನುವುದನ್ನು ಈ ಸಾಂಗ್ ಮೂಲಕ ಹೇಳಿದ್ದಾರೆ. ರ‍್ಯಾಪ್ ಸಾಂಗ್ ಎಂದರೆ ಕೇವಲ ಮನರಂಜನೆ ಎನ್ನುವಂತಹ ಸಮಯದಲ್ಲಿ ‘ರಾಜಕೀಯ’ (Raajakeeya) ಎನ್ನುವ ನೈಜ ವಿಷಯವನ್ನು ಇಟ್ಟುಕೊಂಡು ರ‍್ಯಾಪ್ ಸಾಂಗ್ ಮಾಡಿರುವುದು ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ; ಬೆಳಗಾವಿ ನ್ಯಾಯಾಲಯದಲ್ಲಿ ಉದ್ಯೋಗ; 10th, 12th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಈ ಹಿಂದೆ ರ‍್ಯಾಪರ್ ಚೇತನ್, ಆರ್ ಸಿ ಬಿ, ನಮ್ಮ ಸಿಟಿ ರ‍್ಯಾಪ್ ಸೇರಿದಂತೆ ಹಲವಾರು ರ‍್ಯಾಪ್ ಸಾಂಗ್ ಗಳನ್ನು ಮಾಡಿದ್ದಾರೆ. ಆರ್ ಸಿ ಬಿ ಸಾಂಗ್ ಸಾಕಷ್ಟು ಟ್ರೆಂಡ್ ಆಗಿತ್ತು.

ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ

ರಾಜಕೀಯ ರ‍್ಯಾಪ್ ಸಾಂಗ್ ಲಿರಿಕ್ಸ್
ಪಾರ್ಲಿಮೆಂಟೊಳಗೆ ನಾಯ್ ತರ ಕಚ್ಚಾಟ
ರೆಸ್ಟೋರೆಂಟ್ ಒಳಗೆ ಫ್ರೆಂಡ್ ಶಿಪ್ಪಲ್ ಬಾಡೂಟ
ವರ್ಷಕ್ ಐವತ್ತ್ ಸಲ ಕ್ಯಾಂಪೇನು ಮಾಡೋದು
ಎಲೆಕ್ಷನ್ ಟೈಮಲ್ಲಿ ಭಿಕ್ಷೇನ ಬೇಡೋದು

ನಾವ್ ಕಟ್ಟೋ ಟ್ಯಾಕ್ಸು ಜಿ,ಎಸ್,ಟಿ ಇತ್ಯಾದಿ
ಮಂತ್ರಿಗಳ್ ಮನೇಲಿ ದಿನಾಲೂ ಯುಗಾದಿ
ಅನಕ್ಷರಸ್ತರು ನಮ್ಗೆ ರೂಲರ್ ಗಳು
ಅಕ್ಷರ ಇದ್ದೋರು ಅವ್ರ್ಗೆ ಪಿ,ಎ ಗಳು
ಹೇ ತಿನ್ನೋ ಅನ್ನದಲ್ಲೂ ರಾಜಕೀಯ ರಾಜಕೀಯ
ಜಾತಿಮತದಲಿ ರಾಜಕೀಯ ರಾಜಕೀಯ
ಸಿಕ್ಕಿದ್ದೆಲ್ಲ ದೋಚು ಬಿಡ್ಲೇ ಬೇಡ ಅಂತು ರಾಜಕೀಯ
ನ್ಯಾಯ ನೀತಿ ಬಿಟ್ಟು ಮುಂದೆ ನುಗ್ಗು ಅಂತು ರಾಜಕೀಯ

ಇದನ್ನೂ ಓದಿ; ಸ್ವಂತ ಕೃಷಿ ಭೂಮಿ ಹೊಂದಿರೋ ರೈತರಿಗೆ ಗುಡ್ ನ್ಯೂಸ್; ಸರ್ಕಾರದಿಂದ ಸಿಗುತ್ತೆ 25,000 ಹಣ! ಈಗಲೇ ಅರ್ಜಿ ಸಲ್ಲಿಸಿ

ಐನೂರು ಜೇಬಿಗೆ,ಐನೂರು ಬಾರಿಗೆ ಸಿಕ್ರೆ ಸಾಕು ಹಾಕು ಜೈಕಾರ
ಆಸೇನ ತೋರ್ಸ್ಬಿಟ್ಟು,ಮತ ಹಾಕುಸ್ಕೊಂಡು ಕೆಲ್ಸ ಮಾಡೋಕ್ ಇವ್ರ್ಗೆ ಮೈಭಾರ
ಪಾಲಿಟಿಕ್ಸ್ ಅನ್ನೋದು ಒಂಥರಾ ಬ್ಯುಸಿನೆಸ್ಸು
ಇನ್ವೆಷ್ಟ್ಮೆಂಟ್ ಮಾಡ್ಬುಟ್ರೆ ಸಿಗೋ ಲಾಭ ಹತ್ರಷ್ಟು
ಡವ್ಲಪ್ ಮೆಂಟ್ ಅನ್ನೋದು ಕಾಣದ ಕಡಲು
ಹೊತ್ಕೊಂಡು ಉರೀತೈತೆ ರೈತರ ಒಡಲು.

ಅಧಿಕಾರ ಅನ್ನೋದು ಇರುವ ತನಕ ನೀಯತ್ತನ್ನುವುದು ಮರೀಚಿಕೆ
ಕಂತೆ ಕಂತೆ ಕಾಸು ಸ್ವಿಜ್ಃ ಬ್ಯಾಂಕಲ್ಲಿಟ್ಟಿದ್ರು ಭ್ರಷ್ಟಾಚಾರದ ಬಾಯಾರಿಕೆ
ಅವ್ರ್ ಪವರ್ ಇದ್ದಾಗ ಇವ್ರ್ ಮೇಲೆ ದಾಳಿ
ಇವ್ರ್ ಪವರ್ ಇದ್ದಾಗ ಅವ್ರ್ ಮೇಲೆ ದಾಳಿ
ರಾಜ್ಯದ ಬೊಕ್ಕಸ ಯಾವಾಗ್ಲೂ ಖಾಲಿ
ನಮ್ದೆ ದುಡ್ಡಲ್ ಇವ್ರು ಮಾಡೋದು ಜಾಲಿ

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 11,000

ಮಾಡ್ಬಾರ್ದು ಮಾಡಿ,ಬೆಡ್ರೂಮಲ್ ಸಿ.ಡಿ ಬೀಜ ಬಾಯಿಗ್ ಬಂತು ಪೆಟ್ರೋಲ್ ರೇಟ್ ನೋಡಿ
ಮಾತಲ್ಲೆ ಮೋಡಿ ಮಾಡ್ತಾರೆ ನೋಡಿ ಪ್ರಶ್ನೆ ಮಾಡ್ದೋನ್ ಎರೆಡು ಕೈಯಿಗೆ ಬೇಡಿ

ಲಾಕ್ ಡೌನ್ ಆದ್ಮೇಲಂತೂ ಹೆಚ್ಚಾಯ್ತು ಪಾವರ್ಟಿ
ಆದ್ರು ನಿಂತೆ ಇಲ್ಲ ಬೀಳೋದು ಪೆನಾಲ್ಟಿ
ಆಡಿದ್ದ ಮಾತಿಗೆ ಎಲ್ಲಿದೆ ಅರ್ಥ
ಆ ಪಕ್ಷ ಈ ಪಕ್ಷ ಎಲ್ಲಾನು ವ್ಯರ್ಥ

ಇದನ್ನೂ ಓದಿ; sslc, puc ಪಾಸಾದವರಿಗೆ ಬಂಪರ್ ಉದ್ಯೋಗ; ಜಿಲ್ಲಾ ಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಕಂಡ ಕಂಡಲ್ಲಿ ಖಂಡನೆ, ಅಮಾಯಕರಿಗೆ ದಂಡನೆ ಹೋದಲ್ಲಿ ಬಂದಲ್ಲಿ ನಿಂತಲ್ಲಿ ಕುಂತಲ್ಲಿ ಕಿತ್ತೋಗಿರೋ ವಾದ ಮಂಡನೆ
ಸೋಮಾರಿಗಳ ಗುಂಪಿದು ಪ್ರತಿ ದಿನವೂ ಸಂಡೇನೆ ರಾಜಕೀಯ ರಂಗದಲ್ಲಿ ಮತದಾರನು ಮಂಗನೇ

ನಮ್ ಪಕ್ಷಕ್ ಒಂದ್ ಓಟು, ಸಾಯಂಕಾಲ ಫುಲ್ ಟೈಟು
ಒಂದ್ ಕ್ವಾಟ್ರಿಗ್ ಆಸೆ ಪಟ್ರೆ ಹಣೆ ಮೇಲೆ ರೆಡ್ಡು ವೈಟು
ಕ್ರಮ ಸಂಖ್ಯೆ ಹದಿನೆಂಟು,ಮನೆಗೆಲ್ಲ ಫ್ರೀ ಕರೆಂಟು
ಆಶ್ವಾಸನೆಗಳನೂ ನಂಬ್ಕೊಂಡ್ರೆ ಪ್ರಾಬ್ಲಮ್ ಪರ್ಮನೆಂಟು

ಇದನ್ನೂ ಓದಿ; ಅಪಘಾತ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ; ಈ ಯೋಜನೆಯಲ್ಲಿ ಫಲಾನುಭವಿಗಳಿಗೆ 2 ಲಕ್ಷ ಪರಿಹಾರ

ನಮ್ದೂಕಿ ನಿಮ್ದೂಕಿ ಓಟ್ ಗೆ ಹಾಕ್ಬಿಟ್ಟಿ
ಒಳ್ಳೆ ಟೈಂ ಬರತ್ತೆ ಅಂನ್ಕೊಂಡು ಕೂತ್ಬಿಟ್ಟಿ
ವರ್ಷಾನೆ ಉರುಳೋಯ್ತು,ದೇಶಾನೆ ಮುಳುಗೋಯ್ತು,ತಲೆಲಿದ್ದ ನಾಕು ಕೂದ್ಲೂನು ಬೆಳ್ಗಾಯ್ತು

ರಿಸಲ್ಟ್ ಇದ್ರೂ ರಿಸರ್ವೇಷ್ ನ ಭೂತ
ಮೆರಿಟ್ ಇದ್ದೋನಿಗೆ ಯಾವಾಗ್ಲೂ ಗೂಟ
ಬಡೋರ್ ಮಕ್ಳು ಇಲ್ಲಿ ಮುಂದೆ ಬರ್ಬೇಕಂದ್ರೆ ಕೊಳ್ಳೆಗಾಲಕ್ ಹೋಗಿ ಮಾಡ್ಸ್ಬೇಕು ಮಾಟ

ಹೇ ತಿನ್ನೋ ಅನ್ನದಲ್ಲೂ ರಾಜಕೀಯ ರಾಜಕೀಯ
ಜಾತಿಮತದಲಿ ರಾಜಕೀಯ ರಾಜಕೀಯ
ಸಿಕ್ಕಿದ್ದೆಲ್ಲ ದೋಚು ಬಿಡ್ಲೇ ಬೇಡ ಅಂತು ರಾಜಕೀಯ
ನ್ಯಾಯ ನೀತಿ ಬಿಟ್ಟು ಮುಂದೆ ನುಗ್ಗು ಅಂತು ರಾಜಕೀಯ

ಪ್ರಮುಖ ಸುದ್ದಿಗಳನ್ನು ಓದಿ

  1. ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
  2. ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
  3. ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
  4. ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ