Bhagyalakshmi Bond 26: ಭಾಗ್ಯಲಕ್ಷ್ಮಿ ಬಾಂಡ್ ಹಣ ಪಡೆಯುವುದು ಹೇಗೆ?

(Bhagyalakshmi Bond 26:) ಬೆಂಗಳೂರು: ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷೆಯ ‘ಭಾಗ್ಯಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ ಹೆಣ್ಣುಮಕ್ಕಳು, ಬಾಂಡ್ ಮೆಚ್ಯೂರಿಟಿ ನಂತರ ಸುಮಾರು 1 ಲಕ್ಷ ರೂಪಾಯಿವರೆಗೆ ಹಣ ಪಡೆಯಲು ಅನುಸರಿಸಬೇಕಾದ ನಿಯಮಗಳು ಹಾಗೂ ಅಗತ್ಯ ದಾಖಲೆಗಳ ಕುರಿತು ಇಲಾಖೆ ಮಾಹಿತಿ ನೀಡಿದೆ.

ಬಾಂಡ್ ಹಣ ಪಡೆಯಲು ಮುಖ್ಯ ಷರತ್ತುಗಳು
ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಹೆಣ್ಣುಮಗುವಿಗೆ ಕಡ್ಡಾಯವಾಗಿ 18 ವರ್ಷ ಪೂರ್ಣಗೊಂಡಿರಬೇಕು. ಜೊತೆಗೆ ಕನಿಷ್ಠ 8ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

18 ವರ್ಷಕ್ಕೆ ಮುನ್ನ ಬಾಲ್ಯ ವಿವಾಹವಾಗಿರಬಾರದು ಹಾಗೂ ಯಾವುದೇ ಬಾಲಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು ಎಂಬ ಷರತ್ತುಗಳನ್ನೂ ಇಲಾಖೆ ಸ್ಪಷ್ಟಪಡಿಸಿದೆ.

ಅಗತ್ಯ ದಾಖಲೆಗಳು
ಮೂಲ ಭಾಗ್ಯಲಕ್ಷ್ಮಿ ಬಾಂಡ್
ಬಾಂಡ್ ಕಳೆದುಹೋಗಿದ್ದರೆ ಜೆರಾಕ್ಸ್ ಪ್ರತಿ ಮತ್ತು ಸ್ವಯಂ ಘೋಷಣಾ ಪತ್ರ
ಮಗುವಿನ ಆಧಾರ್ ಕಾರ್ಡ್
ತಂದೆ-ತಾಯಿಯ ಆಧಾರ್ ಕಾರ್ಡ್ ಪ್ರತಿಗಳು
3ರಿಂದ 4 ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳು
ಮಗುವಿನ ಹೆಸರಿನ ಬ್ಯಾಂಕ್ ಖಾತೆ ಅಥವಾ ಪೋಷಕರೊಂದಿಗೆ ಜಂಟಿ ಖಾತೆ ವಿವರ
8ನೇ ತರಗತಿಯವರೆಗಿನ ವ್ಯಾಸಾಂಗ ಪ್ರಮಾಣಪತ್ರ
ಜನನ ಪ್ರಮಾಣಪತ್ರ

ಬಾಂಡ್‌ನಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಒಂದೇ ಆಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ
ಫಲಾನುಭವಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅರ್ಜಿ ಸಲ್ಲಿಸಬಹುದು. ಅಲ್ಲದೆ ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಕಚೇರಿಗೆ ಭೇಟಿ ನೀಡಿ ‘ಮೆಚ್ಯೂರಿಟಿ ಕ್ಲೇಮ್ ಫಾರ್ಮ್’ ಪಡೆದು ಭರ್ತಿ ಮಾಡಿ ಸಲ್ಲಿಸುವ ಅವಕಾಶವೂ ಇದೆ.

ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡಬೇಕು.

ಹಣ ಜಮೆಯಾಗುವ ಅವಧಿ
ಅರ್ಜಿಯ ಪರಿಶೀಲನೆ ಪೂರ್ಣಗೊಂಡು ದಾಖಲೆಗಳು ಸರಿಯಾಗಿದ್ದರೆ, ಅಧಿಕಾರಿಗಳ ಅನುಮೋದನೆಯ ಬಳಿಕ ಸುಮಾರು 1 ರಿಂದ 2 ತಿಂಗಳೊಳಗೆ ಹಣ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇಲಾಖೆ ನೀಡಿರುವ ಸೂಚನೆ
18 ವರ್ಷ ಪೂರ್ಣಗೊಳ್ಳುವ ಮುನ್ನ ಮಗು ಮೃತಪಟ್ಟರೆ ಯೋಜನೆಯ ಹಣ ಲಭ್ಯವಾಗುವುದಿಲ್ಲ. ಆದರೆ 18 ವರ್ಷ ನಂತರ ಮರಣ ಹೊಂದಿದರೆ ಪೋಷಕರಿಗೆ ಸೌಲಭ್ಯ ಸಿಗುವ ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ.
ಸುಳ್ಳು ಮಾಹಿತಿ ನೀಡಿ ಹಣ ಪಡೆಯಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಗನವಾಡಿ ಕೇಂದ್ರ ಅಥವಾ ಸಿಡಿಪಿಓ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆ ಮನವಿ ಮಾಡಿದೆ.

Bhagyalakshmi Bond 26: ಭಾಗ್ಯಲಕ್ಷ್ಮಿ ಬಾಂಡ್ ಹಣ ಪಡೆಯುವುದು ಹೇಗೆ?
Bhagyalakshmi Bond 26: ಭಾಗ್ಯಲಕ್ಷ್ಮಿ ಬಾಂಡ್ ಹಣ ಪಡೆಯುವುದು ಹೇಗೆ?

ಇತ್ತೀಚಿನ ಜನಪ್ರಿಯ ಸುದ್ದಿಗಳು (Bhagyalakshmi Bond 26:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?