KJ George: ಮಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ, ಪರಿಶೀಲನೆ

KJ George: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಬಹಳ ನಷ್ಟ ಸಂಭವಿಸುತ್ತಿದೆ. ಈ ಹಿನ್ನೆಲೆ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿದ್ದಾರೆ.

ಇದನ್ನೂ ಓದಿ; ಹವಾಮಾನ ಆಧಾರಿತ ಬೆಳೆವಿಮೆ; 23 ಜಿಲ್ಲೆಗಳ ರೈತರಿಗೆ ಕಂತು ಪಾವತಿಸಲು ಅವಕಾಶ

ಕೆ.ಜೆ.ಜಾರ್ಜ್ ರವರು ಕೊಪ್ಪ ಮತ್ತು ಎನ್. ಆರ್ ಪುರ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಕೊಪ್ಪ ತಾಲ್ಲೂಕಿನ ಕೊಗ್ರೆ ಸೇತುವೆ ವೀಕ್ಷಣೆ ಮಾಡಿ ಮಾಹಿತಿ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಗೋಡೆ ಕುಸಿತ ಮತ್ತು ಮನೆಗಳಿಗೆ ಉಂಟಾದ ಹಾನಿಗಳ ಬಗ್ಗೆ ಉಸ್ತುವಾರಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು 

KJ George: ಭಾನುವಾರ ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಭೂಕುಸಿತವಾದ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ; ನದಿಯಲ್ಲಿ ಮುಳುಗಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶಾಸಕಿ ನಯನ ಮೋಟಮ್ಮ ಸಾಂತ್ವಾನ

gruha laxmi: ಮೊಬೈಲ್‌ನಲ್ಲೇ ನೋಂದಣಿ ಟೈಮ್ ಫಿಕ್ಸ್ ಮಾಡಿಕೊಳ್ಳಿ

gruha laxmi: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೀರಾ? ನಿಮ್ಮ ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿಯ ವಿವರಗಳನ್ನು ಪಡೆಯಬೇಕಾ?, ಹಾಗಿದ್ದರೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ, ಓದಿ ನೋಂದಣಿ ವೇಳಾಪಟ್ಟಿಯನ್ನು ಹೇಗೆ ನೋಡುವುದು ಎಂಬುದನ್ನು ತಿಳಿದಿಕೊಳ್ಳಿ

ಗೃಹಲಕ್ಷ್ಮಿಯೋಜನೆ ನೋಂದಣಿ ವೇಳಾಪಟ್ಟಿ ಹೇಗೆ ನೋಡುವುದು?
ನೀವೆಲ್ಲರೂ ಗೃಹ ಲಕ್ಷ್ಮೀ ಅರ್ಜಿ ಸಲ್ಲಿಸಲು ನಿಮಗೆ ಯಾವ ದಿನಾಂಕ, ಯಾವ ಸಮಯ ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಕೇಳಗಿನ ಸರಳ ವಿಧಾನದ ಮೂಲಕ ತಿಳಿಯಿರಿ.

* ಮೊದಲಿಗೆ ಗೃಹ ಲಕ್ಷ್ಮಿಸೇವಾ ಸಿಂಧು ಅಧಿಕೃತ ವೆಬ್‌ಸೈಟ್ ಲಿಂಕ್‌ಗೆ ಭೇಟಿ ನೀಡಿ.
* ಅಲ್ಲಿ“ ನಿಮ್ಮಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ” ಎಂದಿರುತ್ತದೆ. ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.

* ಅಲ್ಲಿಯೇ ಕೇಳಗೆ ಇರುವ 6 ಅಕ್ಷರಗಳ ಕ್ಯಾಪ್ಟಾ ಎಂಟರ್ ಮಾಡಿ, ಸ್ಥಿತಿಯನ್ನು ಪರೀಶಿಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

* ಒಂದು ಹೊಸ ಪುಟ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ನೋಂದಣಿ ದಿನಾಂಕ, ಸಮಯ, ಸ್ಥಳ ಕಾಣುತ್ತದೆ.
* ನಿಮಗೆ ನಿಗದಿ ಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳಕ್ಕೆ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಮತ್ತು ಬಾಪುಜಿ ಸೇವಾ ಕೇಂದ್ರ) ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಎಸ್.ಎಮ್.ಎಸ್ ಮಾಡುವ ಮೂಲಕ ನೋಂದಣಿ ಡೇಟ್ ಫಿಕ್ಸ್ ಮಾಡಿಕೊಳ್ಳಿ:
ಈ ಬಾರಿ ನೋಂದಣಿಗಾಗಿ ಯಾರೂ ಪರದಾಡಬೇಕಿಲ್ಲ ಕೆಲಸ ಬಿಟ್ಟು ದಿನಗಟ್ಟಲೆ ಪರಿತಪಿಸಬೇಕಿಲ್ಲ ಮೊಬೈಲ್‌ನಿಂದ ಕೇವಲ ಒಂದು ಎಸ್.ಎಮ್.ಎಸ್ ಮಾಡಿದರೂ ಸಾಕು ನಿಮ್ಮ ನೋಂದಣಿಯ ದಿನಾಂಕ, ಸ್ಥಳ, ಸಮಯದ ಸಂಪೂರ್ಣ ವೇಳಾಪಟ್ಟಿಯೇ ನಿಮ್ಮ ಮೊಬೈಲ್‌ಗೆ ಬರುತ್ತದೆ.

ಆ ಪ್ರಕಾರ ಗೊತ್ತು ಮಾಡಿದ ದಿನದಂದು, ಸೂಕ್ತ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ನಿಮಗೆ ಗೊತ್ತುಪಡಿಸಿದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಕ್ಕೆ ಹೋದರೆ ಸಾಕು, ಕೆಲವೇ ನಿಮಿಷಗಳಲ್ಲಿ ನೋಂದಣಿ ಕಾರ್ಯ ಮುಗಿಯುತ್ತದೆ ಇದಕ್ಕಾಗಿ ಯಾವುದೇ ಶುಲ್ಕ, ಪಾವತಿಸಬೇಕಿಲ್ಲ.

Gruha Laxmi:
gruha laxmi:

ಎಸ್.ಎಮ್.ಎಸ್ ಕಳಿಸುವ ವಿಧಾನ:
ಸಾಮಾನ್ಯವಾಗಿ ಮೊಬೈಲ್ ಬಳಸುವ ಎಲ್ಲರಿಗೂ ಎಸ್.ಎಮ್.ಎಸ್ ಸಂದೇಶ ಕಳಿಸುವ ವಿಧಾನ ಗೊತ್ತಿರುತ್ತದೆ, ರೇಷನ್ ಕಾರ್ಡಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ನಿಂದ ಎಸ್.ಎಮ್.ಎಸ್ ಮಾಡಬೇಕು.

ಮೊಬೈಲ್‌ನ text message ಬಾಕ್ಸ್ ನಲ್ಲಿ ನಿಮ್ಮ ರೇಷನ್ ಕಾರ್ಡ್ 12 ಸಂಖ್ಯೆಯ ನಂಬರ್ ಅನ್ನು ಟೈಪ್ ಮಾಡಿ ಯೋಜನೆಯ 8147500500 ಸಂಖ್ಯೆಗೆ ಸೆಂಡ್ ಮಾಡಬೇಕು.

ಎಸ್.ಎಮ್.ಎಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮಗೆ ಸರ್ಕಾರದಿಂದ ‘ಗೃಹಲಕ್ಷ್ಮಿ, ಯೋಜನೆ ನೋಂದಣಿ ವೇಳಾಪಟ್ಟಿ, ಸಂದೇಶ ಬರುತ್ತದೆ. ಅದರಲ್ಲಿ ಆರ್‌ಸಿ (ರೇಷನ್ ಕಾರ್ಡ್ ನಂಬರ್, ಸ್ಥಳ: ದಿನಾಂಕ ಹಾಗೂ ಸಮಯದ ಮಾಹಿತಿ ಇರುತ್ತದೆ ಆ ಪ್ರಕಾರ ಸೂಕ್ತ ದಾಖಲಾತಿಗಳೊಂದಿಗೆ ಹೋಗಿ ಸರಳವಾಗಿ ನೋಂದಣಿ ಮಾಡಬಹುದು.

ನಿಗಧಿತ ಸಮಯಕ್ಕೆ ಭೇಟಿ ನೀಡಿ ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಕಚೇರಿ ಸಮಯದ ನಂತರ (ಸಂಜೆ 5.00 ಗಂಟೆ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಕಂಡೊಯ್ಯಬೇಕಾದ ದಾಖಲೆಗಳು ಯಾವುದು?:

* ರೇಷನ್ ಕಾರ್ಡ್
* ಯಜಮಾನಿಯ ಹಾಗೂ ಯಜಮಾನಿಯ ಪತಿಯ ಆಧಾರ್ ಕಾರ್ಡ್
* ಯಜಮಾನಿಯ ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್/ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಯ ವಿವರ

gruha laxmi: ಆಗಸ್ಟ್ 15ಕ್ಕೆ ಹಣ ಜಮಾ:
ನೋಂದಣಿಯಾದ ಮೇಲೆ ಈಗಾಗಲೇ ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಅಥವಾ ಫಲಾನುಭವಿಯು ಇಚ್ಛಿಸುವ ಪರ್ಯಾಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೇರ ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ. ಆಗಸ್ಟ್ 16ಕ್ಕೆ ಮೊದಲ ತಿಂಗಳ ಕಂತು ಜಮೆಯಾಗಲಿದೆ.

ಸಹಾಯವಾಣಿ:
ಗೃಹಲಕ್ಷ್ಮಿ, ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ, 1902ಗೆ ಬೆಳಿಗೆ 9-00 ರಿಂದ ಸಂಜೆ 6-00 ಗಂಟೆಯವರೆಗೆ ಕರೆ ಮಾಡಬಹುದು.