Koppa; ಕೊಪ್ಪದಲ್ಲಿ ಉಚಿತ ಚಲನಚಿತ್ರ ವೀಕ್ಷಣೆಗೆ ಅವಕಾಶ

Koppa; ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಅವರ ತಮ್ಮ ಜೀವನನ್ನೇ ಮುಡಿಪಾಗಿಟ್ಟ ಚಲನಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಲ್ಲವ ಮತ್ತು ಆರ್ಯ ಈಡಿಗ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಚ್.ಎಂ. ಸತೀಶ್ ಹೇಳಿದರು.

ಇದನ್ನೂ ಓದಿ; ಸಿನಿಮಾದಲ್ಲಿ ಶೃಂಗೇರಿ ನಟಿಯರ ಹವಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪದ ಜೆಎಂಜೆ ಚಿತ್ರಮಂದಿರದಲ್ಲಿ ಆಗಸ್ಟ್ 06 ಭಾನುವಾರ ದಂದು ಬೆಳಿಗ್ಗೆ 10.30 ಕ್ಕೆ ಕೊಪ್ಪ, ಶೃಂಗೇರಿ, ನ.ರಾ.ಪುರ ಮೂರು ತಾಲೂಕುಗಳ ಬಿಲ್ಲವ ಮತ್ತು ಆರ್ಯ ಈಡಿಗ ಸಮಾಜ ಬಾಂಧವರಿಂದ ಉಚಿತವಾಗಿ ಚನಚಿತ್ರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   

Koppa;ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ತನ್ನ ಜೀವನವನ್ನೇ ಮುಡಿಪಾಗಿಟ್ಟ ನಾರಾಯಣ ಗುರುಗಳು ಬಿಲ್ಲವ, ಆರ್ಯ ಈಡಿಗರು ಮಾತ್ರವಲ್ಲದೆ ಜಗತ್ತಿನ ಎಲ್ಲರೂ ಗೌರವಿಸುವಂತಹ ವ್ಯಕ್ತಿತ್ವ ಹೊಂದಿದವರು. ಗುರುಗಳ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಯುವ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮ ಇದಾಗಿದ್ದು, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್ ರವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಕನ್ನಡ ಚಲನಚಿತ್ರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯನ್ನು, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕೊಪ್ಪದ ನೇತೃತ್ವದಲ್ಲಿ ಡಾ.ರಾಜಶೇಖರ್ ಕೋಟ್ಯಾನ್‌ರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ ಹಾಗೂ ಶಾಸಕ ಟಿ.ಡಿ.ರಾಜೇಗೌಡರು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಲಂಚಕ್ಕೆ ಬೇಡಿಕೆ: ಸಾಂಖೀಕ ನಿರೀಕ್ಷಕ ಲೋಕಾಯುಕ್ತ ಬಲೆಗೆ

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪತ್ರಿಕೆಯ ಮೂಲಕ ವಿನಂತಿಸಿದ್ದಾರೆ. ಕೊಪ್ಪ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷಪ್ರಕಾಶ್, ಉಪಾಧ್ಯಕ್ಷರಾದ ಹರೀಶ್, ಎಂ.ಆರ್. ರಮೇಶ್, ಸಂದೇಶ್, ಸದಸ್ಯರಾದ ಅಣ್ಣಯ್ಯ ಪೂಜಾರಿ, ಆರ್ಯ ಈಡಿಗ ಸಂಘದ ಗಣೇಶ್ ಬಲಗಾರು ಮುಂತಾದವರಿದ್ದರು.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಗಗನಕ್ಕೇರಿದ ಟೊಮೆಟೊ ಬೆಲೆ; 30 ಲಕ್ಷದ ಒಡೆಯನಾದ ರೈತ
  2. ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಹೆಸರು ಇಲ್ವಾ
  3. ಮೂಡಿಗೆರೆ: ಪ್ರವಾಸಿಗರ ಹಾಟ್ ಸ್ಪಾಟ್ ಎತ್ತಿನಭುಜ ಚಾರಣಕ್ಕೆ ತಾತ್ಕಾಲಿಕ ಬ್ರೇಕ್
  4. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಅಟ್ರಾಸಿಟಿ ದೂರು, ದಾಖಲಾಗುತ್ತಾ ಕೇಸ್!
  5. ರಸ್ತೆ ಅಪಘಾತದಲ್ಲಿ ಸಾಯಿಸಲು ಯತ್ನ;ಬಾಮೈದನ ವಿರುದ್ಧ ಬಾವನ ದೂರು
  6. ಸಿನಿಮಾದಲ್ಲಿ ಶೃಂಗೇರಿ ನಟಿಯರ ಹವಾ;ನಭಾ, ಸಂಗೀತ ಬಳಿಕ ಶೃಂಗೇರಿಯಿಂದ ಇನ್ನೊಂದು ಪ್ರತಿಭೆ
  7. ಚಿಕ್ಕಮಗಳೂರು: ಲಂಚಕ್ಕೆ ಬೇಡಿಕೆ: ಸಾಂಖೀಕ ನಿರೀಕ್ಷಕ ಲೋಕಾಯುಕ್ತ ಬಲೆಗೆ
  8. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-03.08.2023
  9. ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 03-08-2023

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇