Kitchen Vastu: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!

(Kitchen Vastu:) ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!

(Kitchen Vastu:) ಒಂದು ಮನೆಯ ಮುಖ್ಯವಾದ ಸ್ಥಳ ಎಂದರೆ ಅದು ಅಡುಗೆ ಮನೆ. ಇಲ್ಲಿ ಎಲ್ಲರ ಆರೋಗ್ಯ, ಸಂತೋಷ, ತೃಪ್ತಿ ಅಡಗಿರುತ್ತದೆ. ಒಬ್ಬ ಮನುಷ್ಯ ತೃಪ್ತಿ ಅಂತಾ ಕಾಣುವುದು ಕೇವಲ ಊಟದಿಂದ ಅಂತೆ. ಅದಕ್ಕಾಗಿ ಅಡುಗೆ ಮನೆ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳು, ಅದರ ಸ್ವಚ್ಛತೆ ಕಡೆ ಪ್ರಮುಖವಾಗಿ ಗಮನ ನೀಡಬೇಕು. ಅಡುಗೆ ಮನೆ ಎಂದರೆ ತಕ್ಷಣ ನೆನಪಾಗೋದೆ ಅಲ್ಲಿನ ಆಹಾರ ಪದಾರ್ಥ, ಪಾತ್ರೆಗಳು. ಅಡುಗೆಮನೆ ಎಷ್ಟು ಮುಖ್ಯವೋ ಇಲ್ಲಿ ಪಾತ್ರೆಗಳು ಸಹ ಅಗತ್ಯ. ಈ ಪಾತ್ರೆಗಳಿಗೂ ಕೆಲ ವಾಸ್ತು ನಿಯಮಗಳು ಅನ್ವಯವಾಗುತ್ತವೆ. ಹಾಗಾದರೆ ಈ ಪಾತ್ರೆಗಳಲ್ಲಿ ಬಳಸುವ ತವಾಕ್ಕೆ ಸಂಬಂಧಿಸಿದಂತೆ ಕೆಲ ವಾಸ್ತು ನಿಯಮಗಳನ್ನು ನಾವಿಲ್ಲಿ ನೋಡೋಣ.


ನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್; 10th, PUC ವಿದ್ಯಾರ್ಹತೆ: 15,000 ಸಂಬಳ


ಅಡುಗೆಮನೆಯಲ್ಲಿ ಇರಿಸಬೇಕಾದ ಪಾತ್ರೆಯನ್ನ ಸರಿಯಾಗಿ ಇಡದಿದ್ದರೆ ಲಕ್ಷ್ಮೀ ಕೋಪಗೊಳ್ಳುತ್ತಾಳಂತೆ. ಈ ಎರಡು ಪಾತ್ರೆ ಉಲ್ಟಾ ಇಟ್ಟರೆ ಲಕ್ಷ್ಮೀ ಕೋಪಗೊಂಡು ನೀವು ಬಡವರಾಗ್ತೀರಿ ಎಂದು ಜ್ಯೋತಿಷ್ಯ ಹೇಳಿದೆ. ಹಾಗಾದರೆ ಯಾವ ಪಾತ್ರೆ ಎಂಬುದರ ಕುರಿತು ಇಲ್ಲಿದೆ ನೋಡಿ.

ಅಡುಗೆ ಮನೆಯಲ್ಲಿ ಮುಖ್ಯವಾಗಿ ತವಾ ಮತ್ತು ಬಾಣಲೆಯನ್ನು ತಲೆಕೆಳಗಾಗಿ ಇಡುವುದು ಅಶುಭ ಅಂತ ಹೇಳಲಾಗಿದೆ. ಒಂದು ವೇಳೆ ಅಡುಗೆಮನೆಯಲ್ಲಿ ತವಾ ಮತ್ತು ಬಾಣಲೆಯನ್ನ ಉಲ್ಟಾ ಇಟ್ಟಿದ್ರೆ ಮನೆಯಲ್ಲಿ ಅನಾರೋಗ್ಯ ಹೆಚ್ಚುತ್ತದೆ. ಅಷ್ಟೇ ಅಲ್ಲ, ಈ ಪಾತ್ರೆಗಳನ್ನು ಯಾವಾಗಲೂ ಸ್ವಚ್ಛವಾಗಿ ಇಡಬೇಕು. ಇಲ್ಲದಿದ್ದರೆ ಲಕ್ಷ್ಮೀ ಕೋಪಗೊಂಡು, ನೀವು ಬಡವರಾಗಬಹುದು.

ವಾಸ್ತು ಶಾಸ್ತ್ರದ ಪ್ರಕಾರ ರೊಟ್ಟಿ ಮಾಡುವ ತವಾವನ್ನ ತಲೆಕೆಳಗಾಗಿ ಇಡಬಾರದು. ಮತ್ತು ಬಾಣಲೆಯನ್ನ ಬಾಣಲೆಯನ್ನು ತಲೆಕೆಳಗಾಗಿ ಇಡಬಾರದು ಎನ್ನಲಾಗಿದೆ. ತವಾವನ್ನು ತಲೆಕೆಳಗಾಗಿ ಇಟ್ಟರೆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತವೆ. ನಿಮ್ಮ ಮನೆಯಲ್ಲಿ ಯಾರಾದರೂ ಹೀಗೆ ಮಾಡುತ್ತಿದ್ದರೆ ಅವರಿಗೆ ತಿಳಿಹೇಳಿ. ವಾಸ್ತು ಪ್ರಕಾರ ಬಾಣಲೆಯನ್ನು ಕೂಡ ತಲೆಕೆಳಗಾಗಿ ಇಡಬಾರದು. ನೀವು ತಿಳಿಯದೆ ಹೀಗೆ ಮಾಡಿದರೂ ಮನೆಗೆ ನಕಾರಾತ್ಮಕ ಶಕ್ತಿ ಆವರಿಸುತ್ತದೆ. ಆದ್ದರಿಂದ ಇನ್ಮುಂದೆ ಈ ಪಾತ್ರೆಗಳನ್ನು ತಲೆಕೆಳಗಾಗಿ ಇಡುವ ತಪ್ಪು ಮಾಡಲೇಬೇಡಿ.


ನ್ನೂ ಓದಿ: ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಕ್ಲೀಯರ್!; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ


ವಾಸ್ತು ಶಾಸ್ತ್ರದ ಪ್ರಕಾರ, ಈ ವಿಷಯಗಳನ್ನು ಪಾಲಿಸದಿದ್ದರೆ ಲಕ್ಷ್ಮಿ ದೇವಿ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾಳೆ ಎಂಬ ನಂಬಿಕೆ ಇದೆ. ತವಾ ಅಥವಾ ಬಾಣಲೆಯನ್ನ ಬಳಸಿದ ನಂತರ ಯಾವಾಗಲೂ ಶುಚಿತ್ವ ಕಾಪಾಡಿ. ತವಾ ಮತ್ತು ಬಾಣಲೆಯನ್ನ ಅಡುಗೆ ಮಾಡಿದ ನಂತರ ಶುಚಿಯಾಗಿ ತೊಳೆದು ಇಡಬೇಕು. ಅದನ್ನು ಕೊಳಕಾಗಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಬಡತನ ಬರುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಜ್ಞಾನವನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನ್ಯೂಸ್‌ ಮಲ್ನಾಡ್‌ ಇದಕ್ಕೆ ಖಾತರಿ ನೀಡುವುದಿಲ್ಲ.)
Kitchen Vastu: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!
Kitchen Vastu: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!