Wcd Recruitment-25:ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್

(Wcd Recruitment-25:) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ.. ಏನಿದೆ ಇದರಲ್ಲಿ..?; ಅಲ್ಪಸಂಖ್ಯಾತರ ಕಲ್ಯಾಣ: ಹೆಚ್ಚಿನ ಘೋಷಣೆಗಳು – ಇಲ್ಲಿ ಹೈಲೈಟ್ಸ್


Wcd Recruitment-25: ನೇಮಕಾತಿ ಪ್ರಾಧಿಕಾರ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಹುದ್ದೆಗಳ ಹೆಸರು:
ಅಂಗನವಾಡಿ ಕಾರ್ಯಕರ್ತೆ
ಅಂಗನವಾಡಿ ಸಹಾಯಕಿ

ಒಟ್ಟು ಹುದ್ದೆಗಳ ಸಂಖ್ಯೆ:
2500.

ಹುದ್ದೆಗಳ ಸಂಖ್ಯೆ:
ಅಂಗನವಾಡಿ ಕಾರ್ಯಕರ್ತೆ: 1500
ಅಂಗನವಾಡಿ ಸಹಾಯಕಿ: 1000

ವೇತನ:
10,000-15,000 ವರೆಗೆ ಗೌರವಧನ ನೀಡಲಾಗುವುದು.


ಇದನ್ನೂ ಓದಿ: ಕರ್ನಾಟಕ ಬಜೆಟ್ 2025-26: SC/ST ಸಮುದಾಯಗಳಿಗೆ ಸಿದ್ದರಾಮಯ್ಯ ಗಿಫ್ಟ್


ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ:
ಶೀಘ್ರದಲ್ಲೇ ಅಪ್‌ಡೇಟ್‌ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
ಶೀಘ್ರದಲ್ಲೇ ಅಪ್‌ಡೇಟ್‌ ಮಾಡಲಾಗುವುದು.

ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆ:
12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಪಾಸಾಗಿರಬೇಕು.

ಅಂಗನವಾಡಿ ಸಹಾಯಕಿ:
10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಆಗಿರಬೇಕು. 35 ವರ್ಷ ವಯಸ್ಸು ಮೀರಿರಬಾರದು.
ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ಮೀರಿರಬಾರದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.


ಇದನ್ನೂ ಓದಿ: ಸೌರ ಪಂಪ್ ಯೋಜನೆಗೆ 1 ಲಕ್ಷ ಸಹಾಯಧನ; ಸಂಪೂರ್ಣ ಮಾಹಿತಿ ಇಲ್ಲಿದೆ


ಅರ್ಜಿ ಸಲ್ಲಿಕೆ ಹೇಗೆ?;
* ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಹಾಕುವ ವೆಬ್‌ ಪೋರ್ಟಲ್‌ ಲಿಂಕ್‌ ಕ್ಲಿಕ್ ಮಾಡಿ.(https://karnemakaone.kar.nic.in/abcd/ApplicationForm_JA_org.aspx)
* ತೆರೆದ ವೆಬ್‌ಪೇಜ್‌ನಲ್ಲಿ ಹುದ್ದೆ ಬಯಸುವ ಜಿಲ್ಲೆ, ತಾಲ್ಲೂಕು, ಹುದ್ದೆ ಮೊದಲು ಆಯ್ಕೆ ಮಾಡಿ.
* ನಂತರದ >> ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) >> ಅಧಿಸೂಚನೆ ಸಂಖ್ಯೆ >> ಆಯ್ಕೆ ಮಾಡಿ.
* ನಿಮ್ಮ ಕೆಟಗರಿ ಆಯ್ಕೆ ಮಾಡಿದ ನಂತರ, ಆರ್‌ಡಿ ಸಂಖ್ಯೆ ನೀಡಿ ಅರ್ಜಿ ಮುಂದುವರೆಸಿ.
* ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು.
* ಆನ್‌ಲೈನ್‌ ಅರ್ಜಿ ನಮೂನೆ ತೆರೆಯುತ್ತದೆ.
* ಕೇಳಲಾದ ಸಂಪೂರ್ಣ ವಿವರಗಳನ್ನು ನೀಡಿ ಅಪ್ಲಿಕೇಶನ್‌ ಸಲ್ಲಿಸಿ.
* ಅಗತ್ಯ ದಾಖಲೆಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಿ.

Wcd Recruitment-25:ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
1. ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ / ಪಿಯುಸಿ ಅಂಕಪಟ್ಟಿ.
2. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
3. ವಾಸಸ್ಥಳ ದೃಢೀಕರಣ ಪತ್ರ.
4. ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
5. ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
6. ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
7. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
8. ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.
9. ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.
10. ಇತರೆ ಅಗತ್ಯ ದಾಖಲೆಗಳು Wcd Recruitment-25:
ಸೂಚನೆ; ಶೀಘ್ರದಲ್ಲೇ ಜಿಲ್ಲಾವಾರು ನೋಟಿಫಿಕೇಶನ್‌ ಬಿಡುಗಡೆ ಆಗಲಿದ್ದು, ನಂತರದಲ್ಲಿ ಜಿಲ್ಲಾವಾರು ಅರ್ಜಿಗೆ ನಿಗದಿತ ದಿನಾಂಕಗಳ ಮಾಹಿತಿಗಳನ್ನು ತಿಳಿಸಲಾಗುವುದು.‌
Wcd Recruitment-25:ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್
Wcd Recruitment-25:ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್