kasturirangan report: ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ

kasturirangan report:  ಪಶ್ಚಿಮ ಘಟ್ಟಗಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದೆ. ಆದರೆ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಬದ್ಧ ಎಂದು ಹೇಳಿಲ್ಲ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ; ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ

ಏಟ್ರಿಯಾ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಜುಲೈ 28ರಂದು ನಡೆದ ಅಂತರ ಜೀವಿ ಪ್ರಭೇದ ಸಮಾವೇಶದಲ್ಲಿನ ತಮ್ಮ ಭಾಷಣದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಪತ್ರಿಕಾ ಹೇಳಿಕೆ ಮೂಲಕ ಸಚಿವರು ಅಲ್ಲಗಳೆದರು.

ಇದನ್ನೂ ಓದಿ; ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು

ಆ ಕಾರ್ಯಕ್ರಮದಲ್ಲಿದ್ದ ಕೆಲವರು ಕಸ್ತೂರಿರಂಗನ್ ವರದಿ ಕುರಿತಂತೆ ನನ್ನನ್ನು ಪ್ರಶ್ನಿಸಿದರು. ಕೇಂದ್ರ ಸರ್ಕಾರ ನೇಮಿಸಿರುವ ಸಂಜಯ್ ಕುಮಾರ್ ನೇತೃತ್ವದ ಪುನರ್ ಪರಿಶೀಲನಾ ಸಮಿತಿ ಡಿಸೆಂಬರ್ ವೇಳೆಗೆ ವರದಿ ಸಲ್ಲಿಸಲಿದೆ. ಆ ಬಳಿಕ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ನಂತರ ಈ ವರದಿಯ ವಿಚಾರದಲ್ಲಿ ಸರ್ಕಾರ ನಿರ್ಧಾರಕ್ಕೆ ಬರಲಿದೆ ಎಂದಷ್ಟೇ ಹೇಳಿದ್ದೆ ಎಂದು ಹೇಳಿದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು   

kasturirangan report: ಕಸ್ತೂರಿರಂಗನ್ ವರದಿ ಹತ್ತು ವರ್ಷಗಳಷ್ಟು ಹಳೆಯದು. ಅದು ಈಗ ಪ್ರಸ್ತುತವೇ ಎಂಬ ಪ್ರಶ್ನೆಯೂ ಇದೆ. ವರದಿ ಬಗ್ಗೆ ಪಶ್ಚಿಮ ಘಟ್ಟಗಳ ಪ್ರದೇಶದ ಜನರಲ್ಲಿ ಭೀತಿ ಇದೆ. ಇದೊಂದು ಸೂಕ್ಷ್ಮ ವಿಷಯ. ಈ ವಿಚಾರದಲ್ಲಿ ಸರ್ಕಾರ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಕೆಂಪು ಪ್ರವರ್ಗದ ಕೈಗಾರಿಕೆಗಳು ನಡೆಯಬಾರದು, ಅದರ ತ್ಯಾಜ್ಯ ಪಶ್ಚಿಮ ಘಟ್ಟದ ಜಲ ಮೂಲಗಳಿಗೆ ಅಪಾಯ ತಂದೊಡ್ಡುತ್ತದೆ ಎಂಬ ಆತಂಕ ಇದೆ. ಅದು ಸರಿ ಎನಿಸುತ್ತದೆ. ಆದರೆ, ಅಂಗನವಾಡಿ, ಆಸ್ಪತ್ರೆ, ಶಾಲೆ, ಜನವಸತಿ, ಮೂಲಸೌಕರ್ಯ ವಿಚಾರದಲ್ಲಿ ಹಾಗೆ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಇದರಿಂದ ಹಲವು ದಶಕದಿಂದ ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ಸ್ಥಳೀಯ ಜನರಿಗೆ ತೊಂದರೆ ಆಗುತ್ತದೆ. ಪರಿಸರವೂ ಉಳಿಯಬೇಕು, ಜನರ ಜೀವನೋಪಾಯಕ್ಕೂ ಧಕ್ಕೆ ಆಗಬಾರದು, ಸುಸ್ಥಿರ ಅಭಿವೃದ್ಧಿ ಸರ್ಕಾರದ ನಿಲುವು ಎಂದರು.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
  2. ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು
  3. ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ
  4. ಚಿಕ್ಕಮಗಳೂರು: ಯಾರೂ ಬಿ.ಆರ್.ಪಾಟೀಲ್ ಅವರ ಕ್ಷಮೆ ಕೇಳಿಲ್ಲ
  5. easy life: ಕೃಷಿಕರಿಗೆ ಬೇಕಾದ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯ
  6. ಳೆದು ಹೊದ ಮೊಬೈಲ್ ಹೇಗೆ ಹುಡುಕೊದು?;ಮೊಬೈಲ್ ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ
  7. ಕೊಪ್ಪ: ಸಮಬಲದ ಹೋರಾಟದ ನಡುವೆ ಶಾನುವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶರತ್ ಬಿಳುಕೊಪ್ಪ ಆಯ್ಕೆ
  8. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-31.07.2023
  9. ಉಚಿತ ಭಾಗ್ಯಗಳ ಬೆನ್ನಲ್ಲೇ ನಾಳೆಯಿಂದ ಬೆಲೆ ಏರಿಕೆ ಶಾಕ್!

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇