Health Tips: ನಿಮಗೆ ಮೈಗ್ರೇನ್ ತಲೆನೋವಿನ ಸಮಸ್ಯೆಗೆ ಇದೆಯಾ?

Health Tips: ನಮಗೆ ಆಗಾಗ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ತಲೆ ನೋವು ಕೂಡ ಒಂದು. ಕೆಲವರಿಗೆ ದೀರ್ಘ ಕಾಲವಾಗಿ ಕಾಡುವ ತಲೆ ನೋವು ಮೈಗ್ರೇನ್ ರೀತಿ ಬದಲಾಗಿ ಪ್ರತಿ ನಿತ್ಯ ತುಂಬಾ ತೀವ್ರವಾಗಿ ಕಾಡುತ್ತದೆ. ಎಷ್ಟೋ ಜನರು ಇಂತಹ ಮೈಗ್ರೇನ್ ತಲೆ ನೋವನ್ನು ಸಹಿಸಿಕೊಳ್ಳಲಾಗದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ವೈದ್ಯರು ಕೊಡುವ ಔಷಧಿಗಳನ್ನು ತೆಗೆದುಕೊಂಡು ಸಹ ಪರಿಹಾರವಾಗಿಲ್ಲ ಎಂಬುದು ಹಲವರ ಮಾತು.

ಇದನ್ನೂ ಓದಿ; ಕೊಪ್ಪ: ಹಾಸ್ಟೆಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಈ ಲೇಖನದಲ್ಲಿ ಮೈಗ್ರೇನ್ ಸಮಸ್ಯೆಗೆ ನೈಸರ್ಗಿಕವಾದ ಮನೆ ಮದ್ದುಗಳ ಬೆಳಕೆ ಮತ್ತು ನೈಸರ್ಗಿಕ ಪದ್ಧತಿಗಳ ಮೂಲಕ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡಲಾಗಿದೆ.

ಮೈಗ್ರೇನ್ ಸಮಸ್ಯೆ ಮತ್ತು ಅದರ ರೋಗ ಲಕ್ಷಣಗಳು:
ಸಂಶೋಧನೆಗಳು ಹೇಳುವ ಪ್ರಕಾರ ಮೈಗ್ರೇನ್ ಸಮಸ್ಯೆ ತುಂಬಾ ಅಪರೂಪದ ಕಾಯಿಲೆ ಯೇನಲ್ಲ. ಏಕೆಂದರೆ ಇಂದು ನಮ್ಮ ನಿಮ್ಮ ಮಧ್ಯೆ ಹಲವಾರು ಜನರು ಈ ಒಂದು ಗಾಢವಾದ ತಲೆ ನೋವಿನ ಸಮಸ್ಯೆಯಿಂದ ಜರ್ಜರಿತರಾಗಿದ್ದಾರೆ.

ಅಧ್ಯಯನಗಳ ಮೂಲಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿರುವ ಹಾಗೆ ಮೈಗ್ರೇನ್ ಸಮಸ್ಯೆ ಅನುವಂಶೀಯವಾಗಿ ನಮ್ಮ ಹಿರಿಯ ಕುಟುಂಬ ಸದಸ್ಯರಿಂದ ನಮಗೆ ವರದಾನವಾಗಿ ಬರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಈಗಾಗಲೇ ಮೈಗ್ರೇನ್ ಸಮಸ್ಯೆಯನ್ನು ಯಾರಾದರೂ ನಿಮ್ಮ ಹಿರಿಯರಾದವರು ಹೊಂದಿದ್ದರೆ ಆ ಸಮಸ್ಯೆ ನಿಮಗೂ ಸಹ ಬರಬಹುದಾದ ಸಾಧ್ಯತೆ ಇದೆ. ಯಾವ ಸಂದರ್ಭದಲ್ಲಿ ನೀವು ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವಿರಿ, ಮಾನಸಿಕವಾಗಿ ಯಾವುದೋ ಒಂದು ವಿಚಾರವನ್ನು ತಲೆಗೆ ಹಚ್ಚಿಕೊಂಡು ಅತಿಯಾದ ಒತ್ತಡವನ್ನು ಅನುಭವಿಸುವಿರಿ, ಧೂಮಪಾನ ಮದ್ಯಪಾನದಂತಹ ಕೆಟ್ಟ ಚಟಗಳನ್ನು ರೂಢಿ ಮಾಡಿಕೊಳ್ಳುವಿರಿ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಣ್ಣದಾಗಿ ಕಂಡು ಬರುವ ತಲೆ ನೋವು ದೀರ್ಘ ಕಾಲದ ಮೈಗ್ರೇನ್ ಸಮಸ್ಯೆಯಾಗಿ ಬದಲಾಗುತ್ತದೆ.

Health Tips:
Health Tips:

ಮೈಗ್ರೇನ್ ಸಮಸ್ಯೆ ನಿಮ್ಮಲ್ಲಿ ಕಂಡು ಬಂದ ತಕ್ಷಣ ಈ ಕೆಳಗಿನ ರೋಗ ಲಕ್ಷಣಗಳು ಗೋಚರಿಸಬಹುದು:
* ವಾಕರಿಕೆ
* ವಾಂತಿ
* ಕಣ್ಣುಗಳು ಮಂಜಾಗುವುದು
* ಕೈ ಕಾಲುಗಳು ಹಿಡಿದುಕೊಂಡಂತೆ ಮತ್ತು ಮುಳ್ಳು ಚುಚ್ಚಿದಂತೆ ಅನುಭವ ಆಗಬಹುದು.
* ಬೆಳಕು ಮತ್ತು ಶಬ್ದದ ಸೂಕ್ಷ್ಮತೆ ಕಾಣಬಹುದು
* ಕೆಲವರಿಗೆ ಪ್ರತಿ ದಿನವೂ ತಲೆ ನೋವು ಕಂಡು ಬಂದರೆ ಇನ್ನು ಕೆಲವರಿಗೆ ದಿನ ಬಿಟ್ಟು ದಿನ ತಲೆ ನೋವು ಕಾಣಿಸಬಹುದು.


ಇತ್ತೀಚಿನ ಜನಪ್ರಿಯ ಸುದ್ದಿಗಳು 


ಮೈಗ್ರೇನ್ ಸಮಸ್ಯೆಗೆ ಇರುವಂತಹ ನೈಸರ್ಗಿಕ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ಮನೆ ಮದ್ದುಗಳು ನಿಮ್ಮ ಮೈಗ್ರೇನ್ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುತ್ತವೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ

Health Tips: ಕೋಲ್ಡ್ ಪ್ಯಾಕ್ ಒಮ್ಮೆ ಟ್ರೈ ಮಾಡಿ:
ನಿಮ್ಮ ತಲೆ ನೋವಿನ ಸಮಸ್ಯೆ ನಿವಾರಣೆಯಲ್ಲಿ ನಿಮ್ಮ ಬಳಕೆಗೆ ಬರುವ ಇನ್ನೊಂದು ವಿಧಾನ ಎಂದರೆ ಅದು ಐಸ್ ಪ್ಯಾಕ್ ಅಥವಾ ಕೋಲ್ಡ್ ಪ್ಯಾಕ್ ಬಳಕೆ ಮಾಡುವುದು. ಒಂದು ಶುದ್ಧ ವಾದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಹಣೆಯ ಮೇಲ್ಭಾಗದಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಬಹುದು. ಇಲ್ಲವೆಂದರೆ ಕಣ್ಣು ಮುಚ್ಚಿ ಅಂಗಾತ ಮಲಗಿ ಐಸ್ ಬ್ಯಾಗ್ ಅನ್ನು ಹಣೆಯ ಮೇಲ್ಭಾಗದಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಕಳೆದರೆ ತಲೆನೋವಿನಿಂದ ಮುಕ್ತಿ ಹೊಂದಬಹುದು.

ಈ ಕೋಲ್ಡ್ ಕಂಪ್ರೆಸ್ಸಿಂಗ್ ವಿಧಾನವನ್ನು ಹಣೆಯ ಮೇಲೆ ಸುಮಾರು 15 ರಿಂದ 20 ನಿಮಿಷಗಳು ಮಾಡುವುದು ಒಳ್ಳೆಯದು. ಒಂದು ವೇಳೆ ನಿಮಗೆ ಐಸ್ ಬ್ಯಾಗ್ ಲಭ್ಯವಾದರೆ ಅದರಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಹಾಕಿ ಒಂದು ಪೇಪರ್ ಟವೆಲ್ ನಲ್ಲಿ ಸುತ್ತಿ ನಿಮ್ಮ ಹಣೆಯ ಮೇಲ್ಭಾಗದಲ್ಲಿ ಇಟ್ಟುಕೊಳ್ಳಿ.

ಇದನ್ನೂ ಓದಿ; ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ

ಯೋಗ ಮತ್ತು ಸ್ಕೆಚಿಂಗ್ ವ್ಯಾಯಾಮಗಳು:
ನಿಮಗೆಲ್ಲಾ ಗೊತ್ತಿರುವ ಹಾಗೆ ಯೋಗಾಭ್ಯಾಸ ಮಾಡುವವರು ತುಂಬಾ ಆರೋಗ್ಯದಿಂದ ಕೂಡಿರುತ್ತಾರೆ. ಏಕೆಂದರೆ ಯೋಗದಲ್ಲಿ ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಿದೆ. ಹಾಗಾಗಿ ನಿಮ್ಮ ಮೈಗ್ರೇನ್ ಸಮಸ್ಯೆಯನ್ನು ಯೋಗದ ಭಂಗಿಗಳು ಪರಿಹರಿಸುತ್ತವೆ. ಪ್ರಮುಖವಾಗಿ ಮಾಡಲಾಗುವ ಬ್ರಾಹ್ಮರಿ ಪ್ರಾಣಾಯಾಮ ತಲೆ ನೋವು ಮತ್ತು ಮೈಗ್ರೇನ್ ಸಮಸ್ಯೆಗೆ ಪರಿಣಾಮಕಾರಿ ಯೋಗಾಭ್ಯಾಸ ಎಂದು ಹೇಳುತ್ತಾರೆ.

ಮಾಂಸ ಖಂಡಗಳ ಸೆಳೆತ ಕಡಿಮೆ ಮಾಡುವುದರಿಂದ ಹಿಡಿದು ತಲೆ ನೋವಿನ ಸಮಸ್ಯೆ ನಿವಾರಣೆಯಲ್ಲಿ ಯೋಗಾಭ್ಯಾಸದ ಭಂಗಿಗಳು ಕೆಲಸ ಮಾಡುತ್ತವೆ. ದೇಹದ ಅಂಗಾಂಗಗಳನ್ನು ವಿಸ್ತಾರ ಮಾಡಿ. ಯೋಗ ಮಾಡುವುದರಿಂದ ದೇಹಕ್ಕೆ ಆರಾಮದಾಯಕತೆ ಲಭ್ಯವಾಗಿ ಮೈಗ್ರೇನ್ ಸಮಸ್ಯೆಯನ್ನು ಪರಿಹರಿಸುತ್ತದೆ. ದೀರ್ಘ ಕಾಲದಿಂದ ಮೈಗ್ರೇನ್ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ವಿಶೇಷವಾದ ಯೋಗ ತರಗತಿಗಳಿಗೆ ನೀವು ಸೇರಬಹುದು.

ಶುಂಠಿಯ ಬಳಕೆ ಮಾಡಿ: (Health Tips:)
ಶುಂಠಿ ನಾವು ಪ್ರತಿ ದಿನ ನಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವ ಒಂದು ಅಡುಗೆ ಪದಾರ್ಥವೇ ಆಗಿದ್ದರೂ ಆಯುರ್ವೇದದಲ್ಲಿ ಇದಕ್ಕೆ ವಿಶೇಷವಾದ ಸ್ಥಾನಮಾನವಿದೆ. ಏಕೆಂದರೆ ಹಲವಾರು ಆರೋಗ್ಯ ಸಮಸ್ಯೆಗಳ ಪರಿಹಾರ ಮಾಡುವಲ್ಲಿ ಔಷಧಿ ತಯಾರಿಕೆ ಪ್ರಕ್ರಿಯೆಯಲ್ಲಿ ಶುಂಠಿಯನ್ನು ಉಪಯೋಗಿಸುವುದು ನಿಮಗೆಲ್ಲಾ ಗೊತ್ತೇ ಇದೆ. ನಿಮ್ಮ ತಲೆ ನೋವಿನ ಸಮಸ್ಯೆಗೆ ಶುಂಠಿಯಲ್ಲಿ ಪರಿಹಾರವಿದೆ. ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಶುಂಠಿ ಚಹಾ ಕೂಡ ಸೇವನೆ ಮಾಡಬಹುದು. ಶುಂಠಿಗೆ ಅಲರ್ಜಿ ಇಲ್ಲ ಎನ್ನುವವರು ತಮ್ಮ ದೀರ್ಘ ಕಾಲದ ಮೈಗ್ರೇನ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಶುಂಠಿಯ ಬಳಕೆ ಮಾಡಬಹುದು.

ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ:
ತಲೆ ನೋವಿಗೆ ಇನ್ನೊಂದು ಪ್ರಮುಖ ಕಾರಣ ಎಂದರೆ ಅದು ಅತಿಯಾಗಿ ನಾವು ಯಾವುದಾದರೂ ವಿಷಯಕ್ಕೆ ತಲೆ ಕೆಡಿಸಿಕೊಂಡು ಮಾನಸಿಕವಾಗಿ ಒತ್ತಡ ತಂದುಕೊಳ್ಳುವುದು. ಇದು ಮೈಗ್ರೇನ್ ಸಮಸ್ಯೆಯನ್ನು ಹೆಚ್ಚು ಮಾಡಿ ನಮ್ಮ ನಿಯಂತ್ರಣಕ್ಕೆ ಸಿಗದಂತೆ ಮಾಡುತ್ತದೆ. ಅತಿಯಾದ ಮಾನಸಿಕ ಒತ್ತಡ ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕರ ಕೂಡ. ಹಾಗಾಗಿ ಒತ್ತಡ ನಿವಾರಣೆಯಲ್ಲಿ ನಮ್ಮ ಸಹಾಯಕ್ಕೆ ಬರುವ ಹಲವಾರು ಚಟುವಟಿಕೆಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಉದಾಹರಣೆಗೆ, ಪೈಂಟಿಂಗ್ ಮಾಡುವುದು, ಡ್ಯಾನ್ಸಿಂಗ್ ಅಭ್ಯಾಸ ಮಾಡುವುದು, ಸ್ವಿಮ್ಮಿಂಗ್ ಗೆ ಹೋಗುವುದು, ಧ್ಯಾನ ಮಾಡುವುದು, ಕಥೆ ಕಾದಂಬರಿ ಪುಸ್ತಕಗಳನ್ನು ಓದುವುದು ಮತ್ತು ಬರೆಯುವುದು ಇತ್ಯಾದಿ ಅಭ್ಯಾಸಗಳನ್ನು ನಾವು ರೂಡಿ ಮಾಡಿಕೊಳ್ಳುವುದರಿಂದ ನಮ್ಮ ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದಂತೆ ಆಗಿ ಮಾನಸಿಕ ಒತ್ತಡ ದೂರವಾಗುತ್ತದೆ.

ಇದನ್ನೂ ಓದಿ; ಶೃಂಗೇರಿ: ಪಿಡಿಒ, ಕಾರ್ಯದರ್ಶಿ ಇಬ್ಬರೂ ಇಲ್ಲದೆ ಅನಾಥವಾದ ಗ್ರಾಮ ಪಂಚಾಯಿತಿ

ಗಿಡಮೂಲಿಕೆಗಳ ಬಳಕೆ:
ಆಯುರ್ವೇದದಲ್ಲಿ ಮೊದಲೇ ಹೇಳಿದ ಹಾಗೆ ನಮ್ಮ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರಲ್ಲಿ ನಮ್ಮ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆ ಕೂಡ ಸೇರಿದೆ ಎಂದರೆ ಆಶ್ಚರ್ಯವಾಗುತ್ತದೆ. ಅಲೋಪತಿ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಆಯುರ್ವೇದ ಅಥವಾ ಗಿಡಮೂಲಿಕೆಗಳ ಪ್ರಯೋಗ ಮಾಡಬಹುದು. ಒಂದು ವೇಳೆ ಮೊದಲ ಬಾರಿ ನೀವು ಆಯುರ್ವೇದ ಔಷಧಿ ಬಳಕೆ ಮಾಡಲು ಮುಂದಾಗಿದ್ದರೆ ನಿಮ್ಮ ವೈದ್ಯರ ಬಳಿ ಯಾವುದಕ್ಕೂ ಒಮ್ಮೆ ಮಾತನಾಡಿ ಅವರ ಒಪ್ಪಿಗೆ ಮೇರೆಗೆ ನೀವು ಇದನ್ನು ತೆಗೆದುಕೊಳ್ಳಬಹುದು.

ಲೈಟ್ ಗಳನ್ನು ಡಿಮ್ ಮಾಡಿ:
ಬೆಳಗಿನ ಸಮಯದಲ್ಲಿ ಹೆಚ್ಚಾಗಿ ತಲೆ ನೋವು ಕಂಡು ಬರುತ್ತಿದ್ದರೆ ಅದು ಬೆಳಕಿನ ಪ್ರಭಾವದಿಂದ ಎಂದು ತಿಳಿದುಕೊಳ್ಳಬಹುದು. ಹಾಗಾಗಿ ನಿಮ್ಮ ಮನೆಯಲ್ಲಿರುವ ತುಂಬಾ ಗಾಢವಾದ ಬೆಳಕು ಬೀರುವ ಲೈಟ್ ಗಳನ್ನು ಆರಿಸಿ ಮತ್ತು ಹೆಚ್ಚು ಶಬ್ದ ಬೀರುವ ಟೇಪ್ ರೆಕಾರ್ಡರ್ ಮತ್ತು ಟಿವಿ ಸ್ವಿಚ್ ಆಫ್ ಮಾಡಿ ಬೆಳಕಿಗೆ ಮತ್ತು ಶಬ್ದಕ್ಕೆ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರುವ ಜನರಿಗೆ ಮೈಗ್ರೇನ್ ಸಮಸ್ಯೆ ಹೆಚ್ಚಾಗಿ ಕಂಡು ಬರಬಹುದು. ಹಾಗಾಗಿ ನಿಮ್ಮ ಮೈಗ್ರಾನ್ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ಇದಕ್ಕಿಂತ ಅತ್ಯದ್ಭುತ ಪರಿಹಾರ ಮತ್ತೊಂದಿಲ್ಲ. ನಿಮ್ಮ ಮನಸ್ಸನ್ನು ವಿಶ್ರಾಂತ ವಾಗಿ ಇರಿಸಿ, ಶಬ್ದವಿಲ್ಲದ ಮನಸ್ಸಿಗೆ ಮುದ ನೀಡುವಂತಹ ಸಣ್ಣದಾಗಿ ತಂಪಾದ ಗಾಳಿ ಬೀಸುವ ಜಾಗದಲ್ಲಿ ಗಿಡ ಮರಗಳ ನೆರಳಿನಲ್ಲಿ ಹುಲ್ಲು ಹಾಸಿನ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡರೆ ಮಾನಸಿಕವಾಗಿ ನಿಮಗೆ ಹೆಚ್ಚು ಪ್ರಯೋಜನ ಉಂಟಾಗುವುದರ ಜೊತೆಗೆ ಮೈಗ್ರೇನ್ ಸಮಸ್ಯೆ ಪರಿಹಾರವಾಗಬಹುದು.