Government Subsidy: ತುಂತುರು ನೀರಾವರಿ ಘಟಕ ಪಡೆಯಲು ಅರ್ಜಿ ಆಹ್ವಾನ

0
586

(Government Subsidy:) 2025-26ನೇ ಸಾಲಿನ ಪಿಎಂ – ಆರ್.ಕೆ.ವಿ.ವೈ – ಪಿಡಿಎಂಸಿ ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ತುಂತುರು ನೀರಾವರಿ ಘಟಕವನ್ನು ಸರ್ಕಾರದ ಸಹಾಯಧನದಡಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.


ನ್ನೂ ಓದಿ: ಮತ್ತೊಮ್ಮೆ ವಿದ್ಯುತ್ ದರ ಏರಿಕೆ;  ರಾಜ್ಯದ ಜನತೆಗೆ ಕರೆಂಟ್ ಶಾಕ್


ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಶಿ ಯೋಜನೆಯಲ್ಲಿ ಒಂದಾದ ಪಿಎಂ – ಆರ್.ಕೆ.ವಿ.ವೈ – ಪಿಡಿಎಂಸಿ ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕವನ್ನು (ಸ್ಪ್ರಿಂಕ್ಲರ್ಸ್) ಶೇ. 90 ರಷ್ಟು ಸರ್ಕಾರ ಸಹಾಯಧನದಡಿ ವಿತರಿಸಲಾಗುತ್ತಿದೆ.


ನ್ನೂ ಓದಿ: ಈ ಯೋಜನೆಯಡಿ ತಿಂಗಳಿಗೆ ಸಿಗಲಿದೆ 5000 ರೂ!


5 ಹೆಕ್ಟರ್ ವರೆಗೆ ಸಹಾಯಧನ:
ರೈತರು ಹೊಂದಿರುವ ಹಿಡುವಳಿಗನುಗುಣವಾಗಿ ಗರಿಷ್ಟ 5 ಹೆಕ್ಟರ್ ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಈ ಯೋಜನೆಯಡಿಯಲ್ಲಿ ಎಲ್ಲಾ ವರ್ಗದ ರೈತರಿಗೆ ಮೊದಲು 2 ಹೆಕ್ಟರ್ ಪ್ರದೇಶದವರಗೆ ಶೇ. 90 ರಷ್ಟು ಮತ್ತು 2 ಹೆಕ್ಟರ್ ತದನಂತರದ ಪ್ರದೇಶಕ್ಕೆ ನಂತರ ಶೇ 45 ರಷ್ಟು ಸಹಾಯಧನ ಪಡೆಯಬಹುದಾಗಿದೆ.


ನ್ನೂ ಓದಿ: ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಐಫೋನ್​ಗಳ ಡಿಸ್ಕೌಂಟ್ ಬೆಲೆ ಪ್ರಕಟ


ಆಸಕ್ತ ರೈತರು ಪಹಣಿ, ಆಧಾರ ಕಾರ್ಡ ಪ್ರತಿ, ರೈತರ ಎಫ್.ಐ.ಡಿ ಸಂಖ್ಯೆ, ನೀರಾವರಿ ಧೃಡೀಕರಣ ಪ್ರಮಾಣ ಪತ್ರ (ಕಡ್ಡಾಯ), ಛಾಪ ಕಾಗದ ಮೇಲೆ ಮುಚ್ಚಳಿಕೆ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ ಸೈಜ್ ಇತ್ತಿಚ್ಚಿನ ಎರಡು ಭಾವಚಿತ್ರ, ಪರಿಶಿಷ್ಟ ಜಾತಿ & ಪರಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

Government Subsidy: ತುಂತುರು ನೀರಾವರಿ ಘಟಕ ಪಡೆಯಲು ಅರ್ಜಿ ಆಹ್ವಾನ
Government Subsidy: ತುಂತುರು ನೀರಾವರಿ ಘಟಕ ಪಡೆಯಲು ಅರ್ಜಿ ಆಹ್ವಾನ

ಇತ್ತೀಚಿನ ಜನಪ್ರಿಯ ಸುದ್ದಿಗಳು (Government Subsidy:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ