Fake Insurance: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕಲಿ ಇನ್ಸೂರೆನ್ಸ್ ಜಾಲ ಹೆಚ್ಚಾಗಿದ್ದು, ತಪಾಸಣೆ ವೇಳೆ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ 30 ಆಟೋಗಳ ಇನ್ಸೂರೆನ್ಸ್ ಪ್ರತಿಗಳು ನಕಲಿ ಎಂದು ದೃಢಪಟ್ಟಿದೆ.
ಇದನ್ನೂ ಓದಿ; ಶೃಂಗೇರಿ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ಗೂಳಿ ದಾಳಿ ಪ್ರಕರಣಗಳು: ನಿದ್ದೆಯಲ್ಲಿರುವ ಪಟ್ಟಣ ಪಂಚಾಯಿತಿ
ಹೌದು, ಕೆಲ ದಿನಗಳ ಹಿಂದೆ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವಿನಾಶ್ ಹಾಗೂ ಸಿಬ್ಬಂದಿ ಕರುಣ ವಾಹನ ದಾಖಲಾತಿ ತಪಾಸಣೆ ನಡೆಸುವಾಗ ಎನ್.ಎಂ.ಸಿ ವೃತ್ತದ ಬಳಿ ಆಟೋವನ್ನು ತಡೆದು ದಾಖಲಾತಿ ಪರಿಶೀಲಿಸಿದಾಗ ನಕಲಿ ಇನ್ಸೂರೆನ್ಸ್ ಪ್ರತಿ ಎಂದು ದೃಢಪಟ್ಟಿತ್ತು. ಆಟೋ ಚಾಲಕನನ್ನು ವಿಚಾರಿಸಿದಾಗ ಆಕಾಶ್ ಎಂಬ ವ್ಯಕ್ತಿಗೆ ಇನ್ಸೂರೆನ್ಸ್ ಮಾಡಿಕೊಡಲು 8041 ರೂಪಾಯಿ ನೀಡಿದ ಆತ ಈ ಪ್ರತಿಯನ್ನು ನೀಡಿದ್ದಾನೆ ಎಂದು ಹೇಳಿಕೆ ನೀಡಿದ.
ಇದನ್ನೂ ಓದಿ; ಅಡಿಕೆ ತೋಟದ ಮೇಲೆ ಪೊಲೀಸರ ದಾಳಿ | ಇಬ್ಬರು ಅರೆಸ್ಟ್
Fake Insurance: ಸುಮೋಟೋ ಕೇಸ್ ದಾಖಲಿಸಿ ತನಿಖೆ ಕೈಗೊಂಡಾಗ ಪೊಲೀಸರು:
ನಕಲಿ ಇನ್ಸೂರೆನ್ಸ್ ಹಿಂದಿರುವ ಮರ್ಮ ಮನಗಂಡ ಠಾಣಾಧಿಕಾರಿ ತಾವೇ ಬಸವನಹಳ್ಳಿ ಠಾಣೆಯಲ್ಲಿ ಸುಮೋಟೋ ಕೇಸ್ ದೂರು ದಾಖಲಿಸಿ ತನಿಖೆ ಕೈಗೊಂಡಾಗ ಮತ್ತೆ 30 ಆಟೋಗಳ ಇನ್ಸೂರೆನ್ಸ್ ಪ್ರತಿಗಳು ನಕಲಿ ಎಂದು ದೃಢಪಟ್ಟಿದೆ.
ನಕಲಿ ಇನ್ಸೂರೆನ್ಸ್ ಪ್ರತಿ ನೀಡುವ ತಂಡ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದೆಂಬ ಶಂಕೆ ಬಲವಾಗಿದ್ದು, ಇಂತಹ ನಕಲಿ ದಂಧೆಕೋರರಿಂದ ವಾಹನ ಅಪಘಾತವಾದರೂ ಯಾವುದೇ ವಿಮೆ ಸೌಲಭ್ಯಗಳು ದೊರೆಯದೆ ಜೀವನಪರ್ಯಂತ ಪರಿತಪಿಸುವ ದುಸ್ಥಿತಿ ಸಂಭವಿಸುತ್ತದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಮಳೆ; ಇಂದಿನ ಹವಾಮಾನ ವರದಿ
- ಬಾಳೆಹೊನ್ನೂರು: ಸಾಮಾಜಿಕ ಜಾಲತಾಣದಲ್ಲಿ ಕಾನೂನುಬಾಹಿರ ಪೋಸ್ಟ್; 12 ಜನರ ವಿರುದ್ದ ಪ್ರಕರಣ ದಾಖಲು
- ಕೊಪ್ಪ: ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡುವಂತೆ ಆಗ್ರಹ
ಈ ಹಿಂದೆಯೂ ಕೂಡ ಬಾಳೆಹೊನ್ನೂರಿನ ಆಟೋ ಚಾಲಕರಿಗೂ ಹೀಗೆ ವಂಚನೆ ನಡೆದಿತ್ತು ಎನ್ನಲಾಗಿದೆ.






ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಶೃಂಗೇರಿ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ಗೂಳಿ ದಾಳಿ ಪ್ರಕರಣಗಳು: ನಿದ್ದೆಯಲ್ಲಿರುವ ಪಟ್ಟಣ ಪಂಚಾಯಿತಿ
- ಅಡಿಕೆ ತೋಟದ ಮೇಲೆ ಪೊಲೀಸರ ದಾಳಿ | ಇಬ್ಬರು ಅರೆಸ್ಟ್
- ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಮಳೆ; ಇಂದಿನ ಹವಾಮಾನ ವರದಿ
- ಬಾಳೆಹೊನ್ನೂರು: ಸಾಮಾಜಿಕ ಜಾಲತಾಣದಲ್ಲಿ ಕಾನೂನುಬಾಹಿರ ಪೋಸ್ಟ್; 12 ಜನರ ವಿರುದ್ದ ಪ್ರಕರಣ ದಾಖಲು
- ಕೊಪ್ಪ: ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡುವಂತೆ ಆಗ್ರಹ
- ಚಿಕ್ಕಮಗಳೂರು: ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಧರಿಸಿ ತರಗತಿ ಕೇಳಿದ ವಿದ್ಯಾರ್ಥಿನಿಯರು
- ಮೆಟಾದಿಂದ ಹೊಸ ಅಪ್ಡೇಟ್ | ವಾಟ್ಸಾಪ್ನಲ್ಲೂ ’ಸ್ಕ್ರೀನ್ ಶೇರ್‘ ಮಾಡ್ಬಹುದು
- ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 10-08-2023
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-10.08.2023
- ಬೆಕ್ಕು ತಾನೆ? ಕಚ್ಚಿದರೆ ಏನಾಗುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply