Education Departement: ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ

Education Departement: ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸಿಹಿ ಸುದ್ದಿ, ಸರ್ಕಾರ ಹೊಸ ಹೆಜ್ಜೆಯತ್ತ ಸಾಗುತ್ತಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಹಿನ್ನಲೆಯಲ್ಲಿ ಶೂ ಮತ್ತು ಸಾಕ್ಸ್‌ ವಿತರಿಸುತ್ತಿದ್ದು, ಈಗ ಹೊಸ ಪ್ಲಾನ್‌ ಮಾಡುತ್ತಿದೆ. ಆ ಹೊಸ ಪ್ಲಾನ್‌ ಏನು? ಯಾವ ಯೋಜನೆ? ಇದರ ಮೂಲ ಉದ್ದೇಶ ಏನು? ಇವೆಲ್ಲದರ ಬಗ್ಗೆ ಈ ಅಂಕಣದಲ್ಲಿ ವಿಸ್ತಾರವಾಗಿ ಮಾಹಿತಿ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರೆತಿ ವರ್ಷ ಶೂ ಮತ್ತು ಸಾಕ್ಸ್‌ ನೀಡುತ್ತಿತ್ತು. ಆದರೆ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳ ಬಗ್ಗೆ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಯೋಜನೆಗೆ ಶಿಕ್ಷಣ ಇಲಾಖೆ ಪ್ಲಾನ್​ ಮಾಡುತ್ತಿದ್ದು, ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹವಾಮಾನ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸೌಕರ್ಯ ಆಗುವಂತೆ ಈ ಬದಲಾವಣೆ ತರಲು ಮುಂದಾಗಿದೆ. ಶೂ ಮತ್ತು ಸಾಕ್ಸ್ ಬದಲು ಈ ಬಾರಿ ಚಪ್ಪಲಿ ಕೊಡುವ ಸಾಧ್ಯತೆ ಇದೆ. ಇದಕ್ಕೆ ಇಲಾಖೆ ಈಗಾಗಲೇ ತಯಾರಿ ನಡೆಸುತ್ತಿದೆ.

ನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ

ಶೂ, ಸಾಕ್ಸ್​​ ಬದಲಿಗೆ ಚಪ್ಪಲಿ ಭಾಗ್ಯ:
1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಂದು ಜೊತೆ ಶೂ ಮತ್ತು ಎರಡು ಜತೆ ಸಾಕ್ಸ್ ವಿತರಿಸುತ್ತಿತ್ತು.ನಿಗದಿಪಡಿಸಿರುವ ಮೊತ್ತ ತರಗತಿ ಬದಲಾವಣೆ ಅನುಸಾರ ನೀಡಲಾಗುತ್ತಿದ್ದು, 1ರಿಂದ 5ನೇ ತರಗತಿಯ ವಿದ್ಯಾರ್ಥಿಗೆ 265 ರೂ, 6 ರಿಂದ 8ನೇ ತರಗತಿಗೆ 295 ರೂಪಾಯಿ ಹಾಗೂ ರಿಂದ 10ನೇ ತರಗತಿಗೆ 325 ರೂಪಾಯಿ ಈ ಹಿಂದೆ ನಿಗದಿಪಡಿಸಿತ್ತು.ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಅಭಿವೃದ್ದಿಗೊಳಿಸಲು ಈ ಯೋಜನೆ ಸಮವಸ್ತ್ರ ಜೊತೆಗೆ ಚಪ್ಪಲಿಗಳನ್ನ ಉಚಿತವಾಗಿ ನೀಡುವ ಉದ್ದೇಶವನ್ನು ಒಳಗೊಂಡಿದೆ.

ನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಕೆಲವು ಜಿಲ್ಲೆಗಳಲ್ಲಿ ಹವಾಮಾನದ ರೀತಿ ಕಾರಣದಿಂದ ಮಕ್ಕಳೀಗೆ ಶಾಲೆಗೆ ಶೂ ಧರಿಸಿಕೊಂಡು ಬರುವುದು ಕಷ್ಟಕಾವಾಗಿದೆ.ಇದರಿಂದ ಸುಮಾರು ಜಿಲ್ಲೆಯಿಂದ ಈ ತರ ದೂರುಗಳು ಬರುತ್ತಲೇ ಇರುವ ಕಾರಣ ಶಿಕ್ಷಣ ಇಲಾಖೆ ಶೂ ಬದಲು ಚಪ್ಪಲಿ ವಿತರಿಸಬೇಕು ಎಂದು ಪ್ಲಾನ್​ ಮಾಡಲಾಗುತ್ತಿದೆ. ಶೂ ಬದಲಿಗೆ ಚಪ್ಪಲಿ ನೀಡುವ ಈ ಯೋಜನೆಯು ವಿದ್ಯಾರ್ಥಿಗಳ ಆರೋಗ್ಯ ಮತ್ತು ಸೌಕರ್ಯಕ್ಕೆ ಆದ್ಯತೆ ನೀಡುವಂತಹದ್ದು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Education Departement: ಶೂ, ಸಾಕ್ಸ್​​ ಬದಲಿಗೆ ಮಕ್ಕಳಿಗೆ ಚಪ್ಪಲಿ ಭಾಗ್ಯ
Education Departement: ಶೂ, ಸಾಕ್ಸ್​​ ಬದಲಿಗೆ ಮಕ್ಕಳಿಗೆ ಚಪ್ಪಲಿ ಭಾಗ್ಯ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Education Departement:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ