Sunday, October 1, 2023
Homeಮಲೆನಾಡುಗಡಿಪಾರಾಗಿದ್ದ ರೌಡಿಶೀಟರ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಆರೋಪ!

ಗಡಿಪಾರಾಗಿದ್ದ ರೌಡಿಶೀಟರ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಆರೋಪ!

ಬೆಳ್ತಂಗಡಿ/ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಚುನಾವಣೆ ಹಿನ್ನಲೆ ಪೊಲೀಸ್ ಇಲಾಖೆ ಗಡಿಪಾರು ಮಾಡಿದ್ದ ರೌಡಿಶೀಟರ್ ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಲಾಗಿದ್ದು, ಇದೀಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೌಡಿಶೀಟರ್ ಆಗಿರುವ ಕೋಡಿಕೆರೆ ಲೋಕೇಶ್ ಯಾನೆ ಲೋಕು ಈತನನ್ನು ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಿದ್ದರು.

ಇದನ್ನೂ ಓದಿ; ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಕರಣ ದಾಖಲು

ಲೋಕೇಶ್ ಗುರುವಾರ ರಾತ್ರಿ ತಾಲ್ಲೂಕಿನ ಪುದುವೆಟ್ಟು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾನೆ ಎಂದು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರಿಗೆ ದೂರು ನೀಡಿದ್ದರು. ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಈ ವಿಷಯ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಶಿವಮೊಗ್ಗಕ್ಕೆ ಗಡಿಪಾರು ಮಾಡಲಾಗಿದ್ದ ಸುರತ್ಕಲ್ ಠಾಣಾ ವ್ಯಾಪ್ತಿಯ ಕೋಡಿಕೆರೆ ನಿವಾಸಿ ಲೋಕೇಶ್ ಶಿವಮೊಗ್ಗ ಬಿಟ್ಟು ಬೆಳ್ತಂಗಡಿ ಪರಿಸರದಲ್ಲಿ ಇರುವುದು ಕಂಡುಬಂತು. ಆದೇಶ ಉಲ್ಲಂಘಿಸಿದ ಕಾರಣ ಪೊಲೀಸರು ಈತನನ್ನು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದು, ಬೇರೆ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಜತೆ ರೌಡಿಶೀಟರ್ ಲೋಕೇಶ್ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಲೋಕೇಶ್ ಪ್ರಚಾರಕ್ಕೆ ಬಂದಿದ್ದಾನೆಂಬ ದೂರು ಬಂದಿತ್ತು. ಆದರೆ, ಸ್ಥಳಕ್ಕೆ ಭೇಟಿ ನೀಡಿದಾಗ ಆತ ಅಲ್ಲಿ ಇರಲಿಲ್ಲ. ಸುರತ್ಕಲ್‌ನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದರು.

ಇದನ್ನೂ ಓದಿ; ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ – ಸಿ.ಟಿ.ರವಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಬೇಕೇ; ಇಲ್ಲಿದೆ‌ ಸರಳ ವಿಧಾನ, ಹೀಗೆ ಪರಿಶೀಲಿಸಿ.

ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದ್ದು, ವೋಟರ್ ಐಡಿ ಪ್ರಮುಖ ದಾಖಲೆಯಾಗಿದೆ ಏಕೆಂದರೆ ಚುನಾವಣೆಯಲ್ಲಿ ಮತ ಚಲಾಯಿಸುವುದು ಅತ್ಯಗತ್ಯ. ಎಲ್ಲಾ ಅರ್ಹ ನಾಗರಿಕರಿಗೆ ಮಾನ್ಯವಾದ ಮತದಾರರ ಗುರುತಿನ ಚೀಟಿಯ ಅಗತ್ಯವಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬ ಸಂಶಯ ಹಲವರನ್ನು ಕಾಡುತ್ತಿರಬಹುದು. ಈ ಗೊಂದಲ ನಿವಾರಿಸುವ ವಿಧಾನ ಇಲ್ಲಿ ವಿವರಿಸುತ್ತೇವೆ.

ಇದನ್ನೂ ಓದಿ; ʻಕೈ ʼ-jds ಕಾರ್ಯಕರ್ತರ ನಡುವೆ ಘರ್ಷಣೆ

ಒಂದು ನಿರ್ದಿಷ್ಟ ಕ್ಷೇತ್ರದ ಮತದಾರರ ಹೆಸರು ಮತ್ತು ಇತರ ವಿವರಗಳನ್ನು ಒಳಗೊಂಡಿರುವ ಸಮಗ್ರ ಮಾಹಿತಿಯನ್ನು ಮತದಾರರ ಪಟ್ಟಿ ಎಂದು ಕರೆಯಲಾಗುತ್ತದೆ. ಭಾರತದ ಚುನಾವಣಾ ಆಯೋಗವು ನಿಯಮಿತವಾಗಿ ನವೀಕರಿಸಿದ ಮತದಾರರ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ. ಆನ್ ಲೈನ್ ಮೂಲಕ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಪತ್ತೆ ಹಚ್ಚಬಹುದು.

ಮತದಾರರ ಗುರುತಿನ ಚೀಟಿ ಎಂದರೇನು?
ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಕಾರ್ಡ್ ಭಾರತದ ಚುನಾವಣಾ ಆಯೋಗವು(election commission) ತನ್ನ ಮತವನ್ನು ಚಲಾಯಿಸಲು ಅರ್ಹರಾಗಿರುವ ಭಾರತೀಯ ನಾಗರಿಕರಿಗೆ ನೀಡಿದ ಫೋಟೋ ಗುರುತಿನ ಪುರಾವೆಯಾಗಿದೆ. ಮತದಾರರ ನೋಂದಣಿ ಕಾರ್ಡ್ ಎಂದೂ ಕರೆಯಲ್ಪಡುವ ಮತದಾರರ ಗುರುತಿನ ಚೀಟಿಯು ಒಬ್ಬರ ಪೌರತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ, ಒಬ್ಬ ವ್ಯಕ್ತಿಯನ್ನು ಭಾರತದಲ್ಲಿ ಮತ ಚಲಾಯಿಸಲು ಅರ್ಹರನ್ನಾಗಿ ಮಾಡುತ್ತದೆ.

ಇದನ್ನೂ ಓದಿ; ವರದಕ್ಷಿಣೆ ಕಿರುಕುಳ, ಮಹಿಳೆಯ ಕೊಲೆ

ಮತದಾರರ ಗುರುತಿನ ಚೀಟಿ ಏಕೆ ಅತ್ಯಗತ್ಯ?
ಇದು ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗುರುತಿನ ರೂಪವಾಗಿ ಕಾರ್ಯನಿರ್ವಹಿಸುತ್ತದೆ.
ಇದು ಒಬ್ಬರ ಮತದಾರರ ನೋಂದಣಿಯ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ.
ಚುನಾವಣೆಗಳಲ್ಲಿ ಬಹು ಮತದಾನವನ್ನು ಗುರುತಿಸುವಿಕೆಯ ಮೂಲಕ
ಕಡಿಮೆ-ಸಾಕ್ಷರತೆಯ ಜನಸಂಖ್ಯೆಯ ಚುನಾವಣಾ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಸ್ಥಿರ ವಿಳಾಸವನ್ನು ಹೊಂದಿರದ ಮತದಾರರಿಗೆ ಇದು ಪ್ರಮುಖ ಗುರುತಿನ ಪುರಾವೆಯಾಗಿದೆ. ತಮ್ಮ ಉದ್ಯೋಗದ ಕಾರಣದಿಂದಾಗಿ ಆಗಾಗ್ಗೆ ಚಲಿಸುವ ವ್ಯಕ್ತಿಗಳಿಗೆ ಇದು ಸೂಕ್ತವಾಗಿದೆ. ಇದು ಫೋಟೋ ಗುರುತಿನ ಪುರಾವೆಯಾಗಿರುವುದರಿಂದ, ಇದು ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸುತ್ತದೆ ಮತ್ತು ಚುನಾವಣಾ ವಂಚನೆಯ ಪ್ರಕರಣಗಳನ್ನು ಪರಿಶೀಲಿಸುತ್ತದೆ.

ಇದನ್ನೂ ಓದಿ; ರಸ್ತೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ

ಮೊದಲಿಗೆ https://electoralsearch.in ಸೈಟ್ ಭೇಟಿ ನೀಡಿ ಸರ್ಚ್ ಬೈ ಡೀಟೇಲ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ನಿಮ್ಮ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಮಾಹಿತಿ ನೀಡಲಾಗುತ್ತದೆ.

ಇನ್ನೊಂದು ವಿಧಾನ:
ನೀವು ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದರ ಸಂಖ್ಯೆ ಬಳಸುವುದರ ಮೂಲಕ ಪರಿಶೀಲಿಸಬಹುದು.

https://electoralsearch.in ಸೈಟ್ ಗೆ ಭೇಟಿ ನೀಡಿ, ಸರ್ಚ್ ಬೈ ಎಪಿಕ್ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಗುರುತಿನ ಚೀಟಿಯ ಸಂಖ್ಯೆ, ರಾಜ್ಯ, ಕ್ಯಾಪ್ಚಾ ಕೋಡ್ ನ್ನು ನಮೂದಿಸಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ವಿವರ ಮೂಡುತ್ತದೆ.

ಇದನ್ನೂ ಓದಿ; ಜಿಲ್ಲೆಯ ಹಲವು ಕಡೆ ಬಜರಂಗದಳದ ಕಾರ್ಯಕರ್ತರಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಗಮನಿಸಬೇಕಾದ ಸಂಗತಿ ಎಂದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಚುನಾವಣೆಗೆ ಕನಿಷ್ಠ 10 ದಿನಗಳ ಮೊದಲು ಪರಿಶೀಲನೆ ಮಾಡಬೇಕು. ಇದರಿಂದ ಯಾವುದೇ ರೀತಿಯ ದೋಷವನ್ನು ಆದಷ್ಟು ಬೇಗ ಸರಿಪಡಿಸಬಹುದು.

Most Popular

Recent Comments