ಕೊಪ್ಪ; (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ಥಾಪಿತ ಬಜರಂಗದಳ ನಿಷೇಧವೆಂಬ ಅಂಶ ಬಜರಂಗದಳದ ಹೆಗಲ ಮೇಲಿನಿಂದ ಆರ್.ಎಸ್.ಎಸ್ ಮತ್ತು ಹಿಂದೂ ಪರ ಸಂಘಟನೆಗಳಿಗೆ ನೇರ ಗುರಿಯಿಟ್ಟಂತಿದೆ ಎಂದು ಪ್ರಜ್ಞಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆಯ ಕಾರ್ಯಕರ್ತ ನಾಗೇಶ್ ಅಂಗೀರಸ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ!
ಕರ್ನಾಟಕದ ಒಟ್ಟು ಮತದಾರರ ಪೈಕಿ ಶೇ12 ರಷ್ಟಿರುವ ಮುಸ್ಲಿಂ ಮತದಾರರ ಓಲೈಕೆಯ ಕಾರಣಕ್ಕಾಗಿ ದೆಹಲಿಯ ಸೂಚನೆಯ ಮೇರೆಗೆ ಪ್ರಣಾಳಿಕೆಯಲ್ಲಿ ಈ ಅಂಶವು ಒಳಗೊಂಡಿದೆ. ಮೋದಿಯವರ ಬೆಳವಣಿಗೆ, ಆಡಳಿತ, ದೃಷ್ಟಿಕೋನ ಹಿಂದಿನ ಶಕ್ತಿ ಆರ್.ಎಸ್.ಎಸ್ ಎಂಬುದೇ ಕಾಂಗ್ರೆಸ್ಸಿನ ಈ ಹತಾಶತೆಗೆ ಕಾರಣ. 2014 ರಲ್ಲಿ ಪಾರ್ಲಿಮೆಂಟ್‌ಗೆ 45 ಸೀಟು ಪಡೆದು ಹತಾಶ ಸ್ಥಿತಿಗೆ ಇಳಿದ ಕಾಂಗ್ರೆಸ್‌ಗೆ ಹಿರಿಯ ನಾಯಕ ಎ.ಕೆ.ಆಂಟೋನಿಯವರು ತಮ್ಮ ವರದಿಯಲ್ಲಿ ಅಲ್ಪಸಂಖ್ಯಾತರ ಮಿತಿಮೀರಿದ ಓಲೈಕೆಯು ಸೋಲಿನ ಪ್ರಮುಖ ಕಾರಣದಲ್ಲೊಂದು ಎಂಬ ವರದಿ ನೀಡಿದರು ಆ ಪಕ್ಷ ಪಾಠ ಕಲಿತಂತಿಲ್ಲ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ವಿವಿಧ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶಕ್ಕೆ
- ಉಡಾ ಶಿಕಾರಿ; ಆರೋಪಿ ಬಂಧನ
- ಅಕ್ರಮವಾಗಿ ದಾಸ್ತಾನು ಮಾಡಿದ್ದ 5.5 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ
ಭಾರತವನ್ನಾಳಿದ ಬ್ರಿಟೀಷರು ಬಹುಸಂಖ್ಯಾತ ದಲಿತರನ್ನು ಬದಿಗೊತ್ತಿ ಅನಾವಶ್ಯಕ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತವೆಂದು ಕರೆದು ಅವರಿಗೆ ವಿಶೇಷ ಸ್ಥಾನಮಾನ ಮತ್ತು ಸವಲತ್ತುಗಳನ್ನು ಒದಗಿಸುವ ತಂತ್ರದಿಂದ ಭಾರತವನ್ನು ಒಡೆದಾಳಿ ಹಿಂದೂ ಮುಸ್ಲಿಂ ವಿಷಬೀಜ ಬಿತ್ತಿದ್ದು ಸ್ವಾತಂತ್ರ್ಯ ನಂತರದ ನೆಹರೂ ಕಾಂಗ್ರೆಸ್ ಇಂದಿನವರೆಗೂ ಬ್ರಿಟೀಷರ ಆ ಒಡೆದಾಳುವ ತಂತ್ರವನ್ನೆ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್‌ನ ವರ್ತಮಾನದ ಈ ದುಸ್ಥಿತಿಗೆ ಕಾರಣವಾಗಿದೆ ಎಂದರು.
ಇಂದು ಬಿ.ಜೆ.ಪಿಯ ಈ ವಿರಾಟ ಸ್ವರೂಪದ ಶಕ್ತಿಯೇ ಭಾರತದ ಅಸ್ಮಿತೆಯ ಪ್ರತೀಕ. ನೆಹರೂ, ನರಸಿಂಹರಾವ್ ರಂತಹ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದರು ಆರ್.ಎಸ್.ಎಸ್ ಬೆಳವಣಿಗೆ ಕುಂಠಿತವಾಗದಿರುವುದೇ ಇದು.
ಪಶ್ಚಿಮ ಬಂಗಾಳ , ಕೇರಳದ ಹಿಂಸಾ ರಾಜಕೀಯಕ್ಕೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದೆ. ಕಾಂಗ್ರೆಸ್‌ನ ಈ ನಿಲುವು ಭವಿಷ್ಯದಲ್ಲಿ ಆ ಪಕ್ಷಕ್ಕೆ ತಿರುವು ಮುರುವು ಉಂಟಾಗಲಿದ್ದು, ಭವಿಷ್ಯದ ಒಂದೆರಡು ದಶಕದಲ್ಲಿ ತಮ್ಮ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಕಡೆ ಕೈಜೋಡಿಸುವ ಪರಿಸ್ಥಿತಿ ಬಂದರು ಅಚ್ಚರಿಯಿಲ್ಲ. ಈಗಾಗಲೇ ಇದಕ್ಕೆ ಪೂರಕವೆಂಬಂತೆ ತ್ರಿಪುರ ಸಹಿತ ಈಶಾನ್ಯ ರಾಜ್ಯಗಳ ಕ್ರೈಸ್ತ ಸಮುದಾಯ ಕೇರಳದ ಕ್ರೈಸ್ತರು ಮತ್ತು ಚರ್ಚ್ ಗಳನ್ನು ಬಿ.ಜೆ.ಪಿ ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ ಎಂದು ನಾಗೇಶ್ ಅಂಗೀರಸ ಹೇಳಿದರು.
ಕಾಂಗ್ರೆಸ್ಸಿಗರು ವೋಟ್ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ
ಚಿಕ್ಕಮಗಳೂರು: ಮಲೆನಾಡಿನ ಮನೆಯೊಂದರ ಮುಂದೆ ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿ ಬಿಡಲಾಗುವುದು ಎಂದು ಎಚ್ಚರಿಕೆಯ ಬೋರ್ಡ್ ಹಾಕಿ ಕಾಂಗ್ರೆಸ್ಸಿನ ಪ್ರಣಾಳಿಕೆಯ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರೊಬ್ಬರು ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ; ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಭಜರಂಗದಳ ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳದ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಇದು ಬಜರಂಗದಳದವರ ಮನೆ. ಕಾಂಗ್ರೆಸ್ಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿಯನ್ನು ಬಿಡಲಾಗುವುದು”ಎಂಬ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ.