ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಖಂಡಿಸಿ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಗುರುವಾರ ನಗರದ ಐ.ಜಿ. ರಸ್ತೆ ಶ್ರೀರಾಮ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಪ್ರತಿಭಟಿಸಿದರು.
ಇದನ್ನೂ ಓದಿ; ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ – ಸಿ.ಟಿ.ರವಿ
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಮಾತನಾಡಿ, ಬಜರಂಗದಳ ನಿಷೇಧಿಸುತ್ತೇವೆ ಎಂದಿರುವ ಕಾಂಗ್ರೆಸ್ ಪ್ರಣಾಳಿಕೆಯನ್ನು ಖಂಡಿಸಿ ಎಲ್ಲ ಮಠ ಮಂದಿರಗಳಲ್ಲಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಲಾಗಿದೆ. ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಬಜರಂಗದಳದ ನಗರ. ಸಂಯೋಜಕ ಶ್ಯಾಮ್ ವಿ. ಗೌಡ ಮಾತನಾಡಿ, ದೇಶಾದ್ಯಂತ ಗೋಹತ್ಯೆ, ಮತಾಂತರ ವಿರುದ್ಧ ಹೋರಾಟ ಮಾಡುತ್ತಿರುವ ಹಿಂದು ಸಂಘಟನೆಯನ್ನು ಉಗ್ರಗಾಮಿ ನಿಷೇಧಿತ ಪಿಎಫ್‌ಐ ಜತೆ ಹೋಲಿಕೆ ಮಾಡಿರುವ ಕಾಂಗ್ರೆಸ್ ವಿರುದ್ಧ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಪ್ರತಿಭಟಿಸಿದ್ದೇವೆ. ಕಾಂಗ್ರೆಸ್‌ನವರು ಯುದ್ಧಕ್ಕೆ ಕರೆ ಕೊಟ್ಟ ಮೇಲೆ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಅವರಿಗೆ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದನ್ನು ಶಕ್ತಿ ಪ್ರದರ್ಶನ ಮೂಲಕ ತೋರಿಸಲಿದ್ದೇವೆ ಎಂದು ಹೇಳಿದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾಂಗ್ರೆಸ್ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಕಡೆ ಕೈಜೋಡಿಸುವ ಪರಿಸ್ಥಿತಿ ಬಂದರು ಅಚ್ಚರಿಯಿಲ್ಲ
- ಚುನಾವಣಾ ಪ್ರಚಾರಕ್ಕೆ ಬಂದಾಗ ಪ್ರಶ್ನಿಸಿದ ಮಹಿಳೆ ಮೇಲೆ ಪ್ರೀತಂಗೌಡ ಬೆಂಬಲಿಗನಿಂದ ಹಲ್ಲೆ
- ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಫಾರಿ
ವಿಎಚ್‌ಪಿ ಸಹಕಾರ್ಯದರ್ಶಿ ರಂಗನಾಥ್, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ ಗುರು, ಜಿಲ್ಲಾ ಸಹ ಸಂಯೋಜಕರಾದ ಅಮಿತ್, ಭುವನ್, ಆಕಾಶ್ ಇತರರಿದ್ದರು.
ಶೃಂಗೇರಿಯ ಕಟ್ಟೆಬಾಗಿಲಿನಲ್ಲಿ ಬಜರಂಗದಳದಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ:
ಶೃಂಗೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಧರ್ಮಕ್ಕಾಗಿ ಬಜರಂಗದಳ ನಿರಂತರ ಶ್ರಮಿಸುತ್ತಿದೆ. ಮತಾಂತರ, ಲವ್ ಜಿಹಾದ್, ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವ ಶಕ್ತಿ ಹೊಂದಿರುವ ಬಜರಂಗದಳ ನಿಸ್ವಾರ್ಥದಿಂದ ದೇಶದ ಉನ್ನತಿಗೆ ಶ್ರಮಿಸುತ್ತಿದೆ ಎಂದು ಬಜರಂಗದಳದ ಪ್ರಮುಖ್ ದಿವೀರ್ ಮಲ್ನಾಡ್ ತಿಳಿಸಿದರು.
ಕಟ್ಟೆಬಾಗಿಲಿನಲ್ಲಿ ಗುರುವಾರ ತಾಲೂಕು ಬಜರಂಗದಳದಿಂದ ಕಾಂಗ್ರೆಸ್ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಬಜರಂಗದಳವನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಬಜರಂಗದಳದ ಕಾರ್ಯಕರ್ತರು ಅನ್ಯಧರ್ಮೀಯರನ್ನು ಎಂದಿಗೂ ದ್ವೇಷ ಮಾಡಿಲ್ಲ. ಹಿಂದುಗಳು ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟುಕೊಂಡು ಸನಾತನ ಧರ್ಮದ ಮೌಲ್ಯ ಎತ್ತಿಹಿಡಿಯುವ ಕಾರ್ಯಕರ್ತರು ಎಂದರು.
ಇದನ್ನೂ ಓದಿ; ʻಕೈ ʼ-jds ಕಾರ್ಯಕರ್ತರ ನಡುವೆ ಘರ್ಷಣೆ
ಕರ್ನಾಟಕದ ಅಂಜನಾದ್ರಿ ಬೆಟ್ಟ ಹನುಮ ಜನಿಸಿದ ನಾಡು, ಬಜರಂಗದಳದ ಒಬ್ಬ ಕಾರ್ಯಕರ್ತ ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ ಸಮಾನ. ಸ್ವಹಿತ ಲಾಭವಿಲ್ಲದೆ ಮನೆಯ ಸಮಸ್ಯೆಗಳನ್ನು ಬದಿಗಿಟ್ಟು ಹಿಂದು ಧರ್ಮದ ಏಳಿಗೆಗಾಗಿ ದುಡಿಯುವ ಬಜರಂಗದಳವನ್ನು ಬ್ಯಾನ್ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗದಳ ಸಮಾಜಕ್ಕೆ ಎಂದಿಗೂ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಈಗಾಗಲೇ ನಿಷೇಧಿಸಿರುವ ಪಿಎಫ್‌ಐಯನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳಿ ಮೂರ್ಖತನ ಪ್ರದರ್ಶಿಸಿದೆ ಎಂದು ವ್ಯಂಗ್ಯವಾಡಿದರು.
ಬಜರಂಗದಳದ ಕಾರ್ಯಕರ್ತರು ಶ್ರದ್ಧಾಭಕ್ತಿ, ಭಾವನೆಯಿಂದ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ವಿಪಕ್ಷದವರು ರಾಜಕೀಯ ಲಾಭಕ್ಕೆ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಅಲ್ಪಸಂಖ್ಯಾತರನ್ನು ಅಭಿವೃದ್ಧಿ ಮಾಡುತ್ತಿದೆ. ಬಜರಂಗದಳಕ್ಕೆ ಅದರದೇ ಆದ ಅಸ್ತಿತ್ವವಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕಾರ್ಯಕರ್ತರ ಹೃದಯದಲ್ಲಿ ನಿರಂತರ ಹಿಂದುತ್ವ ಮೊಳಗುತ್ತಿದೆ ಎಂದರು. ಪ್ರತಿಭಟನೆ ನಂತರ ಚಪ್ಪರದಾಂಜನೇಯ ದೇವಾಲಯಲ್ಲಿ ಬಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾ ಸರಿಸಿ ಅಂಜನೇಯನಿಗೆ ವಿಶೇಷಪೂಜೆ ಸಲ್ಲಿಸಿದರು.
ಇದನ್ನೂ ಓದಿ; ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ!
ಪಪಂ ಅಧ್ಯಕ್ಷ ಹರೀಶ್ ಪಿ. ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ವೇಣುಗೋಪಾಲ್, ತಾಲೂಕು ಯುವಮೋರ್ಚಾ ಅಧ್ಯಕ್ಷ ಮನೇಲ್, ಪ್ರಧಾನಕಾರ್ಯದರ್ಶಿ ಸನ್, ಯುವ ಮುಖಂಡರಾದ ವಿಜೇಶ್ ಕಾಮತ್, ಪ್ರದೀಪ್ ಚೋಳರಮನೆ, ನಾಗೇಶ್ ಕಾಮತ್, ಟಿ.ಕೆ.ಪರಾಶರ, ಕಟ್ಟೋಡಿ ಶ್ರೀನಿವಾಸ್, ಡಿ.ಸಿ.ಶಂಕರಪ್ಪ ಇದ್ದರು.
ಕಾಂಗ್ರೆಸ್ ಗೆ ಇದು ಕೊನೆಯ ಚುನಾವಣೆ ಆಗಬೇಕು: ಪ್ರವೀಣ್ ಖಾಂಡ್ಯ
ಬಾಳೆಹೊನ್ನೂರು: ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಪ್ರಣಾಳಿಕೆ ಮಾಡಿ ರಾಜ್ಯದ ಚುಕ್ಕಾಣಿ ಹಿಡಿಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಪ್ರವೀಣ್ ಖಾಂಡ್ಕ ಆರೋಪಿಸಿದರು. ವಿದ್ಯುತ್, ಬಸ್ ಪಾಸ್, ಅಕ್ಕಿ ವಿತರಣೆ ಸೇರಿ ವಿವಿಧ ಪುಕ್ಕಟೆ ಯೋಜನೆಗಳನ್ನು ನೀಡುತ್ತೇವೆ ಎಂದು ಪ್ರಚಾರ ಮಾಡುತ್ತ ಜನರನ್ನು ಪರಾವಲಂಬಿ ಜೀವನದ ಕಡೆ ಮಾಡುತ್ತಿರುವುದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ ಎಂದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಸಾಧ್ಯವಿದ್ದರೆ ನಿಮಗೆ ಅಧಿಕಾರ ಇರುವ ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸಿ. ನಿಮಗೆ ಹಿಂದು ಸಮಾಜ ಯಾವ ಉತ್ತರ ಕೊಡುತ್ತದೆ ಎಂಬುದು ಗಮನಕ್ಕೆ ಬರುತ್ತದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ; ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ
ಬಜರಂಗದಳ ಹೋರಾಡುತ್ತಿದೆ. ಪಿಎಫ್‌ಐ ರೀತಿ ಬಾಂಬ್ ಸ್ಫೋಟಿಸಿ ಜನರನ್ನು ಹತ್ಯೆ ಮಾಡುತ್ತಿಲ್ಲ. ಸಮಾಜಘಾತುಕ ಕೃತ್ಯಕ್ಕೆ ಬಜರಂಗದಳ ಎಂದಿಗೂ ಕೈ ಹಾಕಿಲ್ಲ. ಇಂಥ ಸಂಘಟನೆ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಲವ್ ಜಿಹಾದ್ – ಗೋಹತ್ಯೆ, ಮತಾಂತರ ತಡೆಯುವುದು, ಜಾತಿಗಳ ಒಡಕು ಸರಿಪಡಿಸಿ, ಸಾಮರಸ್ಯ ಮೂಡಿಸುವುದು ಬಜರಂಗದಳದ ಮೂಲ ಕಾರ್ಯ, ಕಾಂಗ್ರೆಸ್ ಗೆ ಇದು ಕೊನೆಯ ಚುನಾವಣೆ ಆಗಬೇಕು ಎಂದು ಒಂದು ಸಮಾಜ ನಿರ್ಧರಿಸಿದ್ದು ರಾಷ್ಟ್ರೀಯತೆ, ಕ್ಷೇತ್ರದ ಹಿತದೃಷ್ಟಿಯಿಂದ ಬಿಜೆಪಿಯನ್ನು ಜನತೆ ಆಯ್ಕೆ ಮಾಡುತ್ತಾರೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಹುಡಕಬೇಕಾದ ಸ್ಥಿತಿಗೆ ಹಿಂದೂ ಸಂಘಟನೆ ಕಾರ್ಯಕರ್ತರೆ ತಳ್ಳುತ್ತಾರೆ- ರಾಕೇಶ್ ಹಿರೇಕುಡಿಗೆ:
ಬಜರಂಗದಳವನ್ನು ಉಗ್ರ ಸಂಘಟನೆಯೊಂದಿಗೆ ಹೋಲಿಸಿರುವ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಈ ಸಮಾಜಕ್ಕೆ ಅಪಾಯಕಾರಿ, ಇವತ್ತು ನಿಷೇಧ ಮಾಡುತ್ತೇವೆ ಅಂದವರೆಲ್ಲ ಕೊವೀಡ್ ನಂತಹ ಸಾಂಕ್ರಮಿಕ ರೋಗ ಬಂದಾಗ, ಜೀವಕ್ಕೆ ಹೆದರಿ ಬೆಚ್ಚನೆ ಮನೆಯಲ್ಲಿ ಕೂತಿದ್ದರು, ಆದರೆ ಬಜರಂಗದಳ ಕಾರ್ಯಕರ್ತರು ಮಾತ್ರ ಶವಸಂಸ್ಕಾರದಲ್ಲಿ ತೊಡಗಿದ್ದರು.
ಬಜರಂಗದಳ ಸಂಘಟಣೆಯನ್ನು ನಿಷೇದ ಮಾಡುತ್ತೇವೆ ಅಂದವರಿಗೆ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ, 13 ರ ನಂತರ ಕಾಂಗ್ರೆಸ್ ಅನ್ನು ಈ ರಾಜ್ಯದಲ್ಲಿ ಹುಡಕಬೇಕಾದ ಸ್ಥಿತಿಗೆ ಈ ಬಾರಿ ಹಿಂದೂ ಸಂಘಟನೆ ಕಾರ್ಯಕರ್ತರೆ ತಳ್ಳುತ್ತಾರೆ ಎಂದು ರಾಕೇಶ್ ಹಿರೇಕುಡಿಗೆ ಹೇಳಿದರು.