Sunday, October 1, 2023
Homeಮಲೆನಾಡುರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಫಾರಿ

ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಫಾರಿ

ಸಕಲೇಶಪುರ: (ನ್ಯೂಸ್ ಮಲ್ನಾಡ್ ವರದಿ) ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಸಫಾರಿ ಮಾಡುತಿದ್ದ ವಾಹನ ವಶಕ್ಕೆ ಪಡೆದು ರೆಸಾರ್ಟ್ ಮಾಲಿಕನೋರ್ವನ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದಿ; ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿ‌ಸಿ ಹೆಚ್ಚಿ‌ನ‌ ಬೆಲೆಗೆ ಮಾರಾಟ!

ತಾಲೂಕಿನ ಹಾನುಬಾಳ್‌ ಹೋಬಳಿ ಮೂರು ಕಣ್ಣು ಗುಡ್ಡ ರಕ್ಷಿತ ಅರಣ್ಯ ಸೆಕ್ಷನ್‌ 4 ಅರಣ್ಯ ಪ್ರದೇಶದ ಅಚ್ಚನಹಳ್ಳಿ ಗ್ರಾಮದ ರ‍್ವೆ ನಂ.93 ರಲ್ಲಿ ಸ್ಟೋನ್‌ವ್ಯಾಲಿ ಎಂಬ ರೆಸಾರ್ಟ್ ನ ವಾಹನದಲ್ಲಿ ಪ್ರವಾಸಿಗರು ಅಕ್ರಮವಾಗಿ ರಕ್ಷಿತಾರಣ್ಯ ಪ್ರವೇಶಿಸಿ ಮೋಜು ಮಸ್ತಿ ಮಾಡುತಿದ್ದರೆಂಬ ಖಚಿತ ಮಾಹಿತಿ ಪಡೆದು, ವಲಯ ಅರಣ್ಯಾಧಿಕಾರಿ ಶಿಲ್ಪ ಅವರು ಅರಣ್ಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ತಕ್ಷಣ ಜೀಪ್‌ ಚಾಲಕ ಜೀಪನ್ನು ಬಿಟ್ಟು ಪರಾರಿಯಾಗಿದ್ದು, ನಂತರ ಅರಣ್ಯ ಪ್ರದೇಶದೊಳಗಿದ್ದ ಜೀಪನ್ನು ವಶ ಪಡಿಸಿ ಕೊಳ್ಳಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ವಾಣಿಜ್ಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾ ಅರಣ್ಯ ಪ್ರದೇಶದೊಳಗೆ ವಾಹನದಲ್ಲಿ ಸಫಾರಿ ಕರೆದುಕೊಂಡು ಹೋ ಗುತ್ತಿರುವುದು ಕಂಡು ಬಂದ ಹಿನ್ನೆಲೆ ಸ್ಟೋನ್‌ವ್ಯಾಲಿ ರೆಸಾರ್ಟ್ ಮಾಲಿಕ ಸುಭಾಷ್‌ ಸ್ಟೀಫ‌ನ್‌ ಹಾಗೂ ಚಾಲಕನ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ 1960 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ 24,62,104 ಇನ್ನಿತರ ಪ್ರಕರಣ ದಾಖಲಿಸಲಾಗಿದೆ.

ಪದೇ ಪದೇ ರೆಸಾರ್ಟ್ ಮಾಲಿಕರು ರಜೆ ಸಂದರ್ಭದಲ್ಲಿ ವಾಣಿಜ್ಯ ಉದ್ದೇಶಕ್ಕೆ ಪ್ರವಾಸಿಗರನ್ನು ರಕ್ಷಿತಾರಣ್ಯ ಪ್ರದೇಶ ದೊಳಗೆ ಸಫಾರಿಗೆ ಕರೆದುಕೊಂಡು ಹೋಗುವುದು ಹೆಚ್ಚಿದ್ದರಿಂದ ಎಸಿಎಫ್ ಸುರೇಶ್‌ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಗಿದೆ.

ಈ ಸಂರ‍್ಭದಲ್ಲಿ ವಲಯ ಅರಣ್ಯ ಅಧಿಕಾರಿ ಶಿಲ್ಪ, ಅರಣ್ಯ ಸಿಬ್ಬಂದಿಗಳಾದ ಮಹದೇವ್‌, ಹನುಮಂತು, ಲೋಕೇ ಶ್‌, ಯೋಗೇಶ್‌, ರಮೇಶ್‌, ಸುನೀಲ್‌ ಹಾಗೂ ಚಾಲಕ ಚಿದಾನಂದ ಮುಂತಾದವರು ಪಾಲ್ಗೊಂಡಿದ್ದರು.

ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಮನೆಯೊಂದರ ಮುಂದೆ ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿ ಬಿಡಲಾಗುವುದು ಎಂದು ಎಚ್ಚರಿಕೆಯ ಬೋರ್ಡ್ ಹಾಕಿ ಕಾಂಗ್ರೆಸ್ಸಿನ ಪ್ರಣಾಳಿಕೆಯ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರೊಬ್ಬರು ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ;  ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಭಜರಂಗದಳ ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳದ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಇದು ಬಜರಂಗದಳದವರ ಮನೆ. ಕಾಂಗ್ರೆಸ್ಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದ್ರೆ ನಾಯಿಯನ್ನು ಬಿಡಲಾಗುವುದು”ಎಂಬ ಎಚ್ಚರಿಕೆ ಬೋರ್ಡ್ ಹಾಕಿದ್ದಾರೆ.

Most Popular

Recent Comments