Agumbe Ghat: (ನ್ಯೂಸ್ ಮಲ್ನಾಡ್ ವರದಿ) ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕರೊಬ್ಬರು ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ನೆಡೆದಿದೆ.
ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ
ಸ್ಕ್ರಾಪ್ ಗಾಡಿಯನ್ನು ಟ್ರ‍್ಯಾಕ್ಟರ್ ಟೋಯಿಂಗ್ ಮಾಡುತ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ.
ಇದನ್ನೂ ಓದಿ; ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,
Agumbe Ghat: ಇನ್ನು ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಪಾಷಾಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ ಬಿದ್ದ ರಭಸಕ್ಕೆ ಪಾಷಾ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬರೋಬ್ಬರಿ 12 ಸಾವಿರಕ್ಕೆ ಮಾರಾಟವಾಯ್ತು ಎನ್ ಆರ್ ಪುರದಲ್ಲಿ ಸಿಕ್ಕ ಈ ಮೀನು
- ಕಾಂಗ್ರೆಸ್ ವಿರುದ್ಧ ಕಾಫಿನಾಡಲ್ಲಿ ಸಂಸದೆ ಶೋಭಾ ಕರಾಂದ್ಲಾಜೆ ರೆಬಲ್
- ಕೊಪ್ಪ: ರಸ್ತೆಯಲ್ಲಿ ಸಿಕ್ಕಿದ 12,900 ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು
ಹಿಂದೂ ಜಾಗರಣೆ ವೇದಿಕೆಯಿಂದ ರಕ್ಷಣೆ:
ಹಿಂದೂ ಜಾಗರಣೆ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್ ಕೆಳಗಡೆ ಇಳಿದು ಮಹಮ್ಮದ್ ಪಾಷಾರನ್ನ ಬೆಡ್ ಶೀಟ್ ಹಾಗೂ ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ. ಇನ್ನು ನಿತ್ಯಾನಂದ ಮತ್ತು ತಂಡದ ರಕ್ಷಣಾ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,
mudigere: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯೊಬ್ಬ ಚಲಾಯಿಸುತ್ತಿದ್ದ ಆಟೋ, ತನ್ನ ಮಾಲಿಕನಂತೆಯೇ ತೂರಾಡುತ್ತಾ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ತನ್ನ ಮಾಲಿಕನನ್ನು ಹೊರಗೆಸೆದು ತಾನು ಗುಂಡಿಗೆ ಬಿದ್ದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ; ತಂತಿ ಬೇಲಿಯಲ್ಲಿ ಸಿಲುಕಿ ಚಿರತೆಯ ನರಳಾಟ;ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡು
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಂಡಗೋಡು ಗ್ರಾಮದಲ್ಲಿ. ಮದ್ಯ ಸೇವಿಸಿ ನಶೆಯಲ್ಲಿಯೇ ಆಟೋ ಚಾಲನೆ ಮಾಡಿದ್ದಾನೆ. ಅಷ್ಟೇ ಅಲ್ಲ ಇಡೀ ರಸ್ತೆಯೇ ತನ್ನದೆಂಬಂತೆ ಅಡ್ಡಾದಿಡ್ಡಿ ಚಾಲನೆ ಚಾಲನೆ ಮಾಡಿದ್ದಾನೆ. ಕೊನೆಗೆ ನಿಯಂತ್ರಣ ತಪ್ಪಿ ತಾನೇ ಆಟೋದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆಟೋ ಹೊಂಡಕ್ಕೆ ಬಿದ್ದಿದೆ.
ಸದ್ಯ ಈ ಆಟೋದಲ್ಲಿ ಯಾವ ಪ್ರಯಾಣಿಕರು ಹಾಗೂ ಎದುರಿನಿಂದ ಯಾವುದೆ ವಾಹನ ಬರದೇ ಇದ್ದ ಕಾರಣ ಯಾವ ಅಪಾಯ ಸಂಭವಿಸಿಲ್ಲ. ಈ ದೃಶ್ಯವನ್ನು ಹಿಂದಿನಿಂದ ಬರುತ್ತಿದ್ದ ಕಾರು ಚಾಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.