AADHAAR CARD UPDATE: ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ವಾ!?

(AADHAAR CARD UPDATE) ಸರ್ಕಾರದಿಂದ ಯಾವುದೇ ಯೋಜನೆಗಳಿಗೂ ಅರ್ಜಿ ಸಲ್ಲಿಸಬೇಕಾದರೆ ಆಧಾರ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ. ಆದರೆ, ಆಧಾರ್ ಕಾರ್ಡ್ ಪಡೆದು 10 ವರ್ಷ ದಾಟಿದವರು ಕಡ್ಡಾಯವಾಗಿ ಆಧಾರ್ ಅಪ್ಡೇಟ್ ಮಾಡಿಸುವಂತೆ ಸರ್ಕಾರ ಹಲವು ಸ್ಪಷ್ಟಪಡಿಸಿತ್ತು. ಇದೀಗ ಆಧಾರ್ ಕಾರ್ಡ್ ಅಪ್ಡೇಟ್ ಗೆ ಜೂನ್ 14 ರಂದು ಕೊನೆಯ ದಿನವಾಗಿದೆ. ಹಾಗಾದರೆ ಆಧಾರ್ ಕಾರ್ಡ್ ಅನ್ನು ಎಲ್ಲಿ ಅಪ್ಡೇಟ್ ಮಾಡಬೇಕು ಹಾಗೂ ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ರೈತರ ಗಮನಕ್ಕೆ; ಈ ಕೆಲಸ ಮಾಡದಿದ್ದರೆ ಖಾತೆಗೆ ಬರಲ್ಲ ಪಿಎಂ ಕಿಸಾನ್ ಯೋಜನೆಯ ಹಣ; ತಕ್ಷಣವೇ ಈ ರೀತಿ ಮಾಡಿ


ಆಧಾರ್ ಕಾಡ್ ಅಪ್ಡೇಟ್ (Aadhaar card update) ಮಾಡುವುದು ಹೇಗೆ?
* uidai.gov.in ನಲ್ಲಿ ಅಧಿಕೃತ ಪೋರ್ಟಲ್‌ ಗೆ ಭೇಟಿ ನೀಡಿ
* ಹೋಮ್‌ ಪೇಜ್‌ ನಲ್ಲಿ, ಮೈ ಅಧಾರ್ ಟ್ಯಾಬ್ ಅಡಿಯಲ್ಲಿ, ಅಪ್‌ ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್ ಅನ್ನು ಕ್ಲಿಕ್ ಮಾಡಿ.
* ಲಾಗಿನ್ ಪುಟಕ್ಕೆ ಹೋದ ನಂತರ, ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಲು OTP ಆಯ್ಕೆಯನ್ನು ಆರಿಸಿ.
* ಒಮ್ಮೆ ಹೀಗೆ ಮಾಡಿದ ನಂತರ, ಅಪ್‌ ಡೇಟ್ ಆಧಾರ್ ಆನ್‌ ಲೈನ್ ವಿಭಾಗಕ್ಕೆ ಹೋಗಿ ಮತ್ತು ಅಪ್‌ ಡೇಟ್ ಆಧಾರ್ ಕ್ಲಿಕ್ ಮಾಡಿ.
* ಈ ವಿಂಡೋದಲ್ಲಿ ನೀವು ನವೀಕರಿಸಲು ಬಯಸುವ ಡೇಟಾವನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ ಗಳನ್ನು ಅಪ್‌ ಲೋಡ್ ಮಾಡಿ.
* ಇದೆಲ್ಲಾ ಆದ ಬಳಿಕ ಸಬ್‌ ಮಿಟ್‌ ಕೊಡಿ.
* ಇದಿಷ್ಟು ಮಾಡಿದರೆ ನಿಮ್ಮ ಆಧಾರ್‌ ನವೀಕರಣಗೊಳ್ಳುತ್ತದೆ.


ಇದನ್ನೂ ಓದಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ; ಗ್ರಾಮ ಆಡಳಿತ ಅಧಿಕಾರಿ ಸೇರಿ 5 ಇಲಾಖೆಗಳ ಹುದ್ದೆಗೆ ಪರೀಕ್ಷೆ ಪ್ರಕಟ


ಯಾರು ಅಪ್ಡೇಟ್ ಮಾಡಬೇಕು?
ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಫೋನ್ ನಂಬರ್ ಹಾಗೂ ಇತರ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡುವುದು ಅಗತ್ಯ.


ಇದನ್ನೂ ಓದಿ: ಬಿಪಿಎಲ್‌, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕ್; ಅನ್ನಭಾಗ್ಯ ನಗದು ವರ್ಗಾವಣೆ ಸ್ಥಗಿತ


ಇನ್ನು ಮಗುವಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಐದು ವರ್ಷವಾದಾಗ ಹಾಗೂ 15 ವರ್ಷವಾದಾಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಈ ಸನ್ನಿವೇಶಗಳನ್ನು ಹೊರತುಪಡಿಸಿದರೆ ಸದ್ಯ UIDAI ಸೂಚನೆಯಂತೆ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದರೆ ಅದನ್ನು ಅಪ್ಡೇಟ್ ಮಾಡುವುದು ಅಗತ್ಯ.

AADHAAR CARD UPDATE: ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ವಾ!?
AADHAAR CARD UPDATE: ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ವಾ!?

ಇದನ್ನೂ ಓದಿ: ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
    3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
    4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
    5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
    6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
    7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
    8. ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ತಪ್ಪದೆ ಈ ಸುದ್ದಿ ಓದಿ
    9. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    10. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ