Yuva-nidhi Yojana:ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ

(Yuva-nidhi Yojana) ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಈಗಾಗಲೇ ಯುವನಿಧಿ ಯೋಜನೆಗೆ ಅರ್ಹರಾದ ಎಲ್ಲಾ ಫಲಾನುಭವಿಗಳು ಪ್ರತಿ ಮಾಹೆಯ 25 ನೇ ತಾರೀಖಿನ ಒಳಗೆ ಉನ್ನತ ವ್ಯಾಸಂಗ ಮುಂದುವರೆಸದಿರುವ ಕುರಿತು ಹಾಗೂ ಯಾವುದೇ ಉದ್ಯೋಗ ಹೊಂದಿಲ್ಲದಿರುವ ಕುರಿತು ಸೇವಾಸಿಂಧು ಪೋರ್ಟಲ್ http://sevasindhugs.karnataka.gov.in ನಲ್ಲಿ ಕಡ್ಡಾಯವಾಗಿ ಸ್ವಯಂ ಘೋಷಣೆ ನೀಡಿದರೆ ಮಾತ್ರ ಮುಂದಿನ ತಿಂಗಳ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರ ಗಮನಕ್ಕೆ; ಬೆಳೆ ವಿಮೆಗೆ ನೋಂದಾಯಿಸಲು ನಾಳೆ ಲಾಸ್ಟ್‌ ಡೇಟ್


ಹೀಗಾಗಿ ಉನ್ನತ ವ್ಯಾಸಂಗ ಮುಂದುವರೆಸದಿರುವ ಹಾಗೂ ಉದ್ಯೋಗ ಹೊಂದಿಲ್ಲದಿರುವ ಕುರಿತು ಕಡ್ಡಾಯವಾಗಿ ಸ್ವಯಂ ಘೋಷಣೆ ನೀಡಿ.


ಇದನ್ನೂ ಓದಿ; SC/ST ಸಮುದಾಯದವರಿಗೆ ಭರ್ಜರಿ ಸುದ್ದಿ; ಈ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ


ಇನ್ನು ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ http://sevasindhugs.karnataka.gov.in ಪೋರ್ಟಲ್ ಮೂಲಕ ಉಚಿತವಾಗಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ; ರಾಜ್ಯದ ಜನತೆಗೆ ಗುಡ್‌ ನ್ಯೂಸ್‌; ಇ-ಸ್ವತ್ತು ಕುರಿತು ಮಹತ್ವದ ಕ್ರಮ


ಎಲ್ಲಾ ಪದವೀಧರರಿಗೆ, ಸ್ನಾತಕೋತ್ತರ ಪದವಿ, ಬಿಎಡ್ ಪದವೀಧರರಿಗೆ ಪ್ರತಿ ತಿಂಗಳು ರೂ.3 ಸಾವಿರ ಗಳು ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1500 ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ.

Yuva-nidhi Yojana:ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ
Yuva-nidhi Yojana:ಯುವನಿಧಿ ಯೋಜನೆ ಫಲಾನುಭವಿಗಳ ಗಮನಕ್ಕೆ

ಇದನ್ನೂ ಓದಿ; ರೈತರಿಗೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಇತ್ತೀಚಿನ ಜನಪ್ರಿಯ ಸುದ್ದಿಗಳು