Vehicle Tax Rules: ವಾಹನ ಮಾಲೀಕರಿಗೆ ಡಬಲ್ ಶಾಕ್!

(Vehicle Tax Rules:) ವಾಹನ ಮಾಲೀಕರಿಗೆ ಎರಡೆರಡು ಆಘಾತ ಎದುರಾಗಲಿದ್ದು, 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿಗೆ ಕೂಡ ಲೈಫ್ ಟೈಮ್ ಟ್ಯಾಕ್ಸ್ ವಿಧಿಸುವುದಾಗಿ ಬಜೆಟ್​​​ನಲ್ಲಿ ಘೋಷಿಸಿದೆ.


ನ್ನೂ ಓದಿ: HSRP ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಿದವರಿಗೆ ಬಂತು ಮತ್ತೊಂದು ಸುದ್ದಿ; RC, ವಿಮೆ ಕುರಿತು ಬಿಗ್‌ ಅಪ್ಡೇಟ್


ಏಪ್ರಿಲ್ 1ರಿಂದ ಹೊಸ ವಾಹನ ಖರೀದಿಗೆ ಸರ್ಕಾರದ ಹೊಸ ತೆರಿಗೆ ನೀತಿ ಅನ್ವಯವಾಗಲಿದ್ದು, ರಾಜ್ಯ ಸರ್ಕಾರವು 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿಗೆ ಕೂಡ ಲೈಫ್ ಟೈಮ್ ಟ್ಯಾಕ್ಸ್ ವಿಧಿಸುವುದಾಗಿ ಬಜೆಟ್​​​ನಲ್ಲಿ ಘೋಷಿಸಿದೆ. ಇದರಿಂದಾಗಿ ಹೊಸ ವಾಹನ ಖರೀದಿಗೆ ಹೆಚ್ಚಿನ ವೆಚ್ಚ ತಗುಲಲಿದೆ.

ಹತ್ತು ಲಕ್ಷ ರೂಪಾಯಿ ಮೊತ್ತದ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇ 5 ರ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದ್ದು, ಸೆಸ್ ಸೇರಿ ಈ ಮೊತ್ತ ಶೇ 7 ಆಗುವ ಸಾಧ್ಯತೆಯಿದೆ. 10 ಲಕ್ಷ ರೂ. ಬೆಲೆಯ ಕಾರು ಖರೀದಿಸಿದರೆ, ವಾಹನ ಮಾಲೀಕರು ಸುಮಾರು 50 ಸಾವಿರದಿಂದ 70 ಸಾವಿರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಈ ಹೊಸ ನಿಯಮವು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಿದೆ.


ನ್ನೂ ಓದಿ: CET ಪರೀಕ್ಷೆಯ ದಿನಾಂಕ ಬದಲಾವಣೆ.. ಹೆಚ್ಚಿನ ಇಲ್ಲಿದೆ ಮಾಹಿತಿ


ಕಳೆದ ವರ್ಷ ಹತ್ತು ಲಕ್ಷ ರೂಪಾಯಿ ಮೇಲಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇ 11 ರ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿತ್ತು. ಜೊತೆಗೆ ಶೇ 2 ರ ಸೆಸ್ ಸೇರಿ ಒಟ್ಟು ಶೇ 13 ರಷ್ಟು ತೆರಿಗೆ ವಿಧಿಸಲಾಗಿತ್ತು. ಈ ಬಾರಿ, ಹತ್ತು ಲಕ್ಷ ರೂಪಾಯಿ ವಾಹನಗಳಿಗೂ ಹೊಸ ನಿಯಮ ಅನ್ವಯಿಸಲಿದ್ದು, ಹೆಚ್ಚಿನ ವಾಹನ ಖರೀದಿದಾರರು ಆರ್ಥಿಕ ಹೊರೆ ಅನುಭವಿಸಬೇಕಾಗಲಿದೆ. ಇದೇ ವೇಳೆ, 25 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಎಲೆಕ್ಟ್ರಿಕ್ ಕಾರುಗಳಿಗೆ ಶೇ 10 ರ ತೆರಿಗೆ ವಿಧಿಸಲಾಗಿದೆ. ಮಿನಿ ಲಾರಿಗಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ 6 ರ ತೆರಿಗೆಯನ್ನು ಏಪ್ರಿಲ್‌ನಿಂದ ಶೇ 8 ಕ್ಕೆ ಹೆಚ್ಚಿಸಲಾಗಿದೆ.


ನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್‌ ಆಫರ್; ಆಕರ್ಷಕ ಸಂಬಳ


ಇನ್ನು ಉಕ್ಕಿನ ಬೆಲೆ ಏರಿಕೆಯ ಹೆಸರಲ್ಲಿ ವಾಹನ ತಯಾರಿಕಾ ಕಂಪನಿಗಳು ಏಪ್ರಿಲ್ 1 ರಿಂದ ಶೇ 3 ರಿಂದ 4 ರಷ್ಟು ದರ ಹೆಚ್ಚಳ ಮಾಡಲು ತಯಾರಿ ನಡೆಸುತ್ತಿದ್ದು, ಇದು ಹೊಸ ವಾಹನ ಖರೀದಿದಾರರಿಗೆ ಮತ್ತೊಂದು ಆಘಾತವಾಗಲಿದೆ. ನೂತನ ತೆರಿಗೆ ನಿಯಮಗಳು ಮತ್ತು ವಾಹನ ದರ ಏರಿಕೆಯಿಂದ ಹೊಸ ವಾಹನ ಖರೀದಿಗೆ ಮುಂದಾಗುತ್ತಿರುವ ಜನತೆ ಹೆಚ್ಚಿನ ಹಣ ವಿನಿಯೋಗಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.(Vehicle Tax Rules:)


ನ್ನೂ ಓದಿ: ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ವಿತರಣೆ!; ಸರ್ಕಾರದಿಂದ ಮಹತ್ವದ ನಿರ್ಧಾರ


Vehicle Tax Rules: ವಾಹನ ಮಾಲೀಕರಿಗೆ ಡಬಲ್ ಶಾಕ್!
Vehicle Tax Rules: ವಾಹನ ಮಾಲೀಕರಿಗೆ ಡಬಲ್ ಶಾಕ್!

ಇತ್ತೀಚಿನ ಜನಪ್ರಿಯ ಸುದ್ದಿಗಳು (Vehicle Tax Rules:) 

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?