Gold and Silver:- ಚಿನ್ನಾಭರಣದ ತಂಟೆಗೆ ಹೋಗದಿರೋದು ಉತ್ತಮ

(Gold and Silver:-) ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ರಾಜಕೀಯ ಅಶಾಂತಿ, ಯುದ್ಧದ ಭೀತಿ, ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ಪರಿಣಾಮ ಬೀರಿವೆ. ಇದರೊಂದಿಗೆ ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಕಂಡುಬಂದ ಕುಸಿತವೂ ಚಿನ್ನ ಮತ್ತು ಬೆಳ್ಳಿ ದರ ಏರಿಕೆಗೆ ಪ್ರಮುಖ ಕಾರಣವಾಗಿತ್ತು. ಸುರಕ್ಷಿತ ಹೂಡಿಕೆ ಎನ್ನುವ ಕಾರಣಕ್ಕೆ ಹೂಡಿಕೆದಾರರು ಚಿನ್ನ–ಬೆಳ್ಳಿಯತ್ತ ಮುಖ ಮಾಡಿದ ಪರಿಣಾಮ ದರಗಳು ದಾಖಲೆಯ ಮಟ್ಟ ತಲುಪಿದ್ದವು.


ನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ


ಆದರೆ ಇದೀಗ ಪರಿಸ್ಥಿತಿ ಸ್ವಲ್ಪ ಬದಲಾಗಿದ್ದು, ಹಲವಾರು ಹೂಡಿಕೆದಾರರು ಚಿನ್ನ ಹಾಗೂ ಬೆಳ್ಳಿಯನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವತ್ತ ಮುಂದಾಗಿದ್ದಾರೆ. ಈ ಕಾರಣದಿಂದಲೇ ಕಳೆದ ಕೆಲ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏಕಾಏಕಿ ಇಳಿಕೆ ಕಂಡುಬಂದಿದೆ.

ಗ್ರಹಣಗಳ ಪ್ರಭಾವ ಮತ್ತು ಮಾರುಕಟ್ಟೆ ಚಲನೆ
ಜ್ಯೋತಿಷ್ಯ ತಜ್ಞರ ಪ್ರಕಾರ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು ಕೇವಲ ಆಕಾಶೀಯ ಘಟನೆಗಳಷ್ಟೇ ಅಲ್ಲ, ಅವುಗಳ ಪ್ರಭಾವ ಆರ್ಥಿಕ ಚಟುವಟಿಕೆಗಳ ಮೇಲೆಯೂ ಬೀರುತ್ತದೆ ಎನ್ನಲಾಗುತ್ತದೆ. 2026ರ ಮಾರ್ಚ್ 03ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಅದಕ್ಕೂ ಮುನ್ನ ಹಾಗೂ ನಂತರ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ


ಯುಗಾದಿ 2026ರ ನಂತರ ಬರುವ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳ ಅವಧಿಯನ್ನು “ಸಂಕ್ರಮಣ ಕಾಲ” ಎಂದು ವಿವರಿಸಲಾಗುತ್ತಿದ್ದು, ಈ ಸಮಯದಲ್ಲಿ ದೊಡ್ಡ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ. ಪಂಚಗ್ರಹಗಳ ಸಂಯೋಗದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತಾತ್ಕಾಲಿಕ ಅಲುಗಾಟ ಕಂಡುಬರಬಹುದು ಎಂಬ ನಂಬಿಕೆ ಇದೆ.

(ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಿರುವ ಜ್ಯೋತಿಷ್ಯ ಸಂಬಂಧಿತ ಮಾಹಿತಿ ಧಾರ್ಮಿಕ ನಂಬಿಕೆಗಳ ಮೇಲೆ ಆಧಾರಿತವಾಗಿದ್ದು, ವೈಜ್ಞಾನಿಕ ದೃಢೀಕರಣ ಇಲ್ಲ. ಹೂಡಿಕೆ ನಿರ್ಧಾರಗಳು ವೈಯಕ್ತಿಕ ವಿವೇಚನೆಗೆ ಒಳಪಟ್ಟಿರುತ್ತವೆ. ನ್ಯೂಸ್‌ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್‌ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.‌

Gold and Silver:- ಚಿನ್ನಾಭರಣದ ತಂಟೆಗೆ ಹೋಗದಿರೋದು ಉತ್ತಮ
Gold and Silver:- ಚಿನ್ನಾಭರಣದ ತಂಟೆಗೆ ಹೋಗದಿರೋದು ಉತ್ತಮ

ಇತ್ತೀಚಿನ ಜನಪ್ರಿಯ ಸುದ್ದಿಗಳು (Gold and Silver:-)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
  6. ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ