(Silk Department:) ರೇಷ್ಮೆ ಇಲಾಖೆಯಲ್ಲಿ ರೈತರಿಗೆ ಹಲವು ಯೋಜನೆಗಳು ಮತ್ತು ಸಹಾಯಧನ ನೀಡುತ್ತಿದ್ದು, ಈ ಕುರಿತು ಡಿಟೈಲ್ಸ್ ಇಲ್ಲಿದೆ ನೋಡಿ.
ಯಾವುದೆಲ್ಲಾ ಯೋಜನೆಗಳು ಮತ್ತು ಸಹಾಯಧನ:
ರೇಷ್ಮೆ ಹುಳು ಸಾಕಾಣಿಕೆ (ಸುಧಾರಿತ ಮೌಂಟೇಜಸ್‌ಗಳು ಸೇರಿದಂತೆ) ಸಲಕರಣೆಗಳ/ಹಿಪ್ಪುನೇರಳೆ ತೋಟ
ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
ಸಹಾಯಧನ:
ರಾಜ್ಯದ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ಸಲಕರಣೆ ಖರೀದಿಗೆ ಘಟಕ ದರ ರೂ.75.000/- ನಿಗದಿಪಡಿಸಿದ್ದು, ಸಹಾಯಧನ ರೂ.56250/-(ಶೇಕಡ 75), ಸಲಕರಣೆ ಖರೀದಿಗೆ ಹೊಸ ರೈತರಿಗೆ ಮೊದಲ ಆಧ್ಯತೆ ನೀಡುವುದು.
* ಮೈಸೂರು ಶುದ್ಧ ತಳಿ/ದ್ವಿತಳಿ/ಸುಧಾರಿತ ಮಿಶ್ರ ತಳಿ ಗೂಡು ಬೆಳೆಯುವ ರೇಷ್ಮೆ ಬೆಳೆಗಾರರನ್ನು ಸಲಕರಣೆ ಖರೀದಿಗೆ ಸಹಾಯಧನ ನೀಡಲು ಆಯ್ಕೆ ಮಾಡಬೇಕು. ಇಲಾಖೆಯ ಖರೀದಿ ಸಮಿತಿ ಅನುಮೋದಿಸುವ ಸಲಕರಣೆಗಳ ಘಟಕ ದರಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಥೆಗಳಿಂದ ಮಾತ್ರ ಖರೀದಿಸಬೇಕು. ಇಲಾಖೆಯು ಅನುಮೋದಿಸುವ ಸಲಕರಣೆಗಳನ್ನು ಖರೀದಿಸಬಹುದಾಗಿದೆ. ಈ ಕುರಿತು ರೇಷ್ಮೆ ನಿರ್ದೇಶನಾಲಯದಿಂದ ಪ್ರತ್ಯೇಕ ಸುತ್ತೋಲೆ ನೀಡಲಾಗುವುದು.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಈ ದಾಖಲೆಗಳು ಕಡ್ಡಾಯ:
* ಹುಳು ಸಾಕಾಣಿಕೆ ಮಾಡುವ ಬಗ್ಗೆ ಚಾಲ್ತಿಯಲ್ಲಿರುವ ಪಾಸ್ ಪುಸ್ತಕ/ರೇಷ್ಮೆ ಕಾರ್ಡ್ ಹೊಂದಿರಬೇಕು.
* ಹುಳು ಸಾಕಾಣಿಕೆಯನ್ನು ಮುಂದಿನ 3 ವರ್ಷಗಳವರೆಗೆ ಮುಂದುವರೆಸಿಕೊಂಡು ಹೋಗುವ ಬಗ್ಗೆ ರೂ.50/-ಗಳ ಛಾಪಾಕಾಗದದಲ್ಲಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪಡೆಯಬೇಕು.
* ರೇಷ್ಮೆ ಬೆಳೆಗಾರರು ಸಲಕರಣೆ ಸರಬರಾಜು ಪಡೆಯಲು ಇಚ್ಛಿಸುವ ಸಲಕರಣೆ ಮತ್ತು ಸಂಸ್ಥೆಗಳ ವಿವರಗಳನ್ನು ರೇಷ್ಮೆ ಬೆಳೆಗಾರರಿಂದ ಪಡೆಯುವ ಕೋರಿಕೆಯ ಅರ್ಜಿಯಲ್ಲಿ ವಿವರಗಳನ್ನು ಪಡೆಯುವುದು.
ಸಲಕರಣೆಗಳ ಸರಬರಾಜು ಪಡೆದು ಸಹಾಯಧನ ವಿತರಣೆ:
ಇಲಾಖೆಯು ಅನುಮೋದಿಸಿ empanel ಮಾಡಿರುವ ಸಂಸ್ಥೆಗಳಿಂದ ಮಾತ್ರ ಸಲಕರಣೆಗಳನ್ನು ಸರಬರಾಜು ಪಡೆಯುವುದು ಕಡ್ಡಾಯವಾಗಿದೆ.
ರೇಷ್ಮೆ ಬೆಳೆಗಾರರು ಸಲಕರಣೆಗಳ ಸಂಪೂರ್ಣ ಮೊತ್ತವನ್ನು ಪಾವತಿಸಿ empanel ಮಾಡಿರುವ ಸಂಸ್ಥೆಗಳಿಂದ ಸರಬರಾಜು ಪಡೆದಿದ್ದಲ್ಲಿ ಸಹಾಯಧನದ ಮೊತ್ತವನ್ನು ಖಜಾನೆ ಮುಖಾಂತರ ರೇಷ್ಮೆ ಬೆಳೆಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾಮಾಡುವುದು. ಬ್ಯಾಂಕ್/ಸಂಘ ಸಂಸ್ಥೆಗಳಿಂದ ಸಾಲ ಪಡೆದಿದ್ದಲ್ಲಿ ಸಹಾಯಧನವನ್ನು ಬ್ಯಾಂಕಿಗೆ ಜಮಾ ಮಾಡಲಾಗುತ್ತದೆ.
Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Silk Department:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





