SSLC Exam: SSLC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

(SSLC Exam:) 2025-26ನೇ ಸಾಲಿಗೆ 10ನೇ ತರಗತಿಗೆ ದಾಖಲಾಗಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳನ್ನು ಎಸ್. ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.


ನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ


2026ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ 2025-26ನೇ ಸಾಲಿನ SSLC ಮುಖ್ಯ ಪರೀಕ್ಷೆ-1 ಕ್ಕೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿದಂತೆ, SATS ನ ದಾಖಲೆಗಳ ಪ್ರಕಾರ ಒಟ್ಟು 8,40,196 ವಿದ್ಯಾರ್ಥಿಗಳ ಮಾಹಿತಿ ಇದ್ದು, ಇವರಲ್ಲಿ 7,99,762 ವಿದ್ಯಾರ್ಥಿಗಳು ಮಾತ್ರ SSLC ಪರೀಕ್ಷೆಗೆ ನೋಂದಣಿಯಾಗಿರುತ್ತಾರೆ ಉಳಿದ 40,434 ವಿದ್ಯಾರ್ಥಿಗಳ ನೋಂದಣಿ ಬಾಕಿ ಇರುವುದಾಗಿ ತಿಳಿಸಿರುತ್ತಾರೆ. ಹೀಗಾಗಿ ಬಾಕಿ ಇರುವ ನೋಂದಣಿ ಪೂರ್ಣಗೊಳಿಸಲು ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ರವರಿಗೆ ನಿರ್ದೇಶನ ನೀಡಲು ಕೋರಿದ್ದಾರೆ.


ನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ


KSEAB ಮಂಡಳಿ ನಿಗಧಿಪಡಿಸಿರುವ ಅರ್ಹತೆಯನ್ನು ಹೊಂದಿರುವ ಹಾಗೂ SSLC ಪರೀಕ್ಷೆಗೆ ನೊಂದಣಿ ಬಾಕಿ ಇರುವ ವಿದ್ಯಾರ್ಥಿಗಳು ಕೂಡಲೇ SSLC ಪರೀಕ್ಷೆಗೆ ನೊಂದಣಿ ಮಾಡಿಸಲು ಕ್ರಮವಹಿಸುವುದು. ಈ ಸಂಬಂಧ ತಮ್ಮ ಅಧೀನ ಅಧಿಕಾರಿಗಳಿಗೆ ಶಾಲಾವಾರು ಜವಾಬ್ದಾರಿ ಹಂಚಿಕೆ ಮಾಡಿ, ಸದರಿಯವರು ಹಂಚಿಕೆ ಮಾಡಿರುವ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ SATS ನೋಂದಣಿ ಮತ್ತು SSLC ನೊಂದಣಿಗೆ ಸಂಬಂಧಿಸಿದಂತೆ ವ್ಯತ್ಯಾಸ ಪರಿಶೀಲಿಸಿ ಅರ್ಹ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ SSLC ಪರೀಕ್ಷೆಗೆ ನೊಂದಣಿಯಾಗುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

SSLC Exam: SSLC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ
SSLC Exam: SSLC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಇತ್ತೀಚಿನ ಜನಪ್ರಿಯ ಸುದ್ದಿಗಳು (SSLC Exam:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ