(Srividya Shastry) ಚಿತ್ರರಂಗಕ್ಕೆ ಹೊಸ ಕಲಾವಿದರ ಆಗಮನ ಆಗುತ್ತಲೇ ಇರುತ್ತದೆ. ಪ್ರತಿಭೆ ಮತ್ತು ಅದೃಷ್ಟ ಇದ್ದವರು ಗಟ್ಟಿಯಾಗಿ ಇಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಬಣ್ಣದ ಲೋಕದಲ್ಲಿನ ಏರಿಳಿತಗಳು ಏನೇ ಇದ್ದರೂ ಇದೊಂದು ಆಕರ್ಷಕ ಕ್ಷೇತ್ರ. ಹೊಸಬರ ಆಗಮನದಿಂದ ಕನ್ನಡ ಚಿತ್ರರಂಗಕ್ಕೆ ಹೊಸತನವೂ ಬರುತ್ತದೆ. ಹೊಸ ಭರವಸೆಗಳು ಹುಟ್ಟಿಕೊಳ್ಳುತ್ತವೆ. ಪ್ರೋತ್ಸಾಹವಿದ್ದರೆ ಸಾಧನೆಗೆ ಉಜ್ವಲ ಅವಕಾಶವಿದೆ ಎಂಬುದನ್ನು ಸಾಬೀತುಪಡಿಸಿದ, ಮಲೆನಾಡಿನ ಸುಂದರ ಪರಿಸರದಲ್ಲಿ ಹುಟ್ಟಿದ ಮತ್ತೊಂದು ಅದ್ವಿತೀಯ ಪ್ರತಿಭೆ ಎಂದರೆ ಅದು ಎ.ಸಿ ಶ್ರೀ ವಿದ್ಯಾ ಶಾಸ್ತ್ರಿ.
ಇದನ್ನೂ ಓದಿ; ವಾಹನಕ್ಕೆ ಲೈಸೆನ್ಸ್, ಎಫ್‌ಸಿ ಇಲ್ಲದಿದ್ದರೂ ಪರಿಹಾರ; ವಿಮಾ ಕಂಪನಿಗೆ ಕರ್ನಾಟಕ ಹೈಕೋರ್ಟ್ ಆದೇಶ
ಹೌದು, ಮಲೆನಾಡಿನ ಹಚ್ಚಹಸಿರಿನ ಸುಂದರ ಪರಿಸರದ ವಿದ್ಯಾಧಿದೇವತೆಯ ಶಾರದೆಯ ನೆಲೆಬೀಡಾದ ಶೃಂಗೇರಿಯ ಪುಟ್ಟ ಹಳ್ಳಿಯ ಹೊನ್ನವಳ್ಳಿ ಗ್ರಾಮದ ಎರಂಜಾಳುವಿನಲ್ಲಿ ಜನಿಸಿದ ಶ್ರೀ ವಿದ್ಯಾ ಶಾಸ್ತ್ರಿ ಬಾಲ್ಯದಿಂದಲೇ ಓದುವಿನಲ್ಲಿ ಅಪ್ರತಿಭ ಪ್ರತಿಭೆಯಾಗಿ ಹೊರಹೊಮ್ಮಿದವರು. ತಂದೆ ಚಿದಂಬರ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ಮೆಕಾನಿಕ್ ಆಗಿದ್ದು, ತಾಯಿ ಆಶಾ ಗೃಹಿಣಿಯಾಗಿದ್ದಾರೆ, ಇವರ ಏಕೈಕ ಪುತ್ರಿ ಶ್ರೀ ವಿದ್ಯಾ ಶಾಸ್ತ್ರಿ.

ಇದನ್ನೂ ಓದಿ; ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್; ಮನೆ ಕಟ್ಟಲು 3.50 ಲಕ್ಷ ರೂ ಸಹಾಯಧನ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸೀ ಬಯೋ ಕೆಮಿಸ್ಟ್ರಿ ಪೂರ್ಣಗೊಳಿಸಿದ ನಂತರ ನಟನೆಯಲ್ಲಿ ಆಸಕ್ತಿ ಮೂಡಿತು. ಪೋಷಕರು ಇವರ ಆಸಕ್ತಿಯನ್ನು ಗಮನಿಸಿ ಸಾಕಷ್ಟು ಪ್ರೋತ್ಸಾಹ ನೀಡಿದರು. ಬೆಂಗಳೂರಿನಲ್ಲಿ ನಿರ್ದೇಶಕ, ನಿರ್ಮಾಪಕರಾದ ನಾಗತಿಹಳ್ಳಿ ಚಂದ್ರಶೇಖರ್ ರವರ ನಟನಾ ಕಲಿಕೆಯ ಶಾಲೆಗೆ ಸೇರಿಕೊಂಡ ಕೇವಲ 2 ತಿಂಗಳಲ್ಲಿಯೇ ಇವಳ ಪ್ರತಿಭೆ ಗುರುತಿಸಿ ಅಡಿಷನ್ ಗೆ ಸೇರ್ಪಡೆಗೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಸ್ಟಾರ್ ಸುವರ್ಣ ಟಿವಿಯಲ್ಲಿ ಬರುವ ಧಾರವಾಹಿ “ಬೆಟ್ಟದ ಹೂ” ನಲ್ಲಿ ಗೌರಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇಡೀ ಕರ್ನಾಟಕದಲ್ಲೇ ಗೌರಿ ಮನೆಮಾತಾಗಿದ್ದಾರೆ.

ಇದನ್ನೂ ಓದಿ; ರೈತರು, ಗ್ರಾಹಕರಿಗೆ ಗುಡ್ ನ್ಯೂಸ್; ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಬೇಳೆ ಕಾಳು, ಬಿತ್ತನೆ ಬೀಜ
ಇದನ್ನೂ ಓದಿ; ಕೃಷಿ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ನೋಡಿ
ಹೊರರಾಜ್ಯ ಹೈದರಾಬಾದ್ ನಲ್ಲಿನ ಜೈಮಿನಿ ಟಿವಿಯಲ್ಲಿ ಇವರ ಮೂಡಲ ಮುಲ್ಲು (ಮೂರು ಗಂಟು) ಧಾರವಾಹಿಯು ಹೊರಹೊಮ್ಮಿ ಇದೀಗ ಎಲ್ಲರ ಜನಮನ ಸೆಳೆದಿದೆ. ಕಳೆದ 2 ವರ್ಷಗಳಿಂದ ಕಿರುತೆರೆ ನಟಿಯಾಗಿ ಪಾದಾರ್ಪಣೆ ಮಾಡಿದ ಶ್ರೀ ವಿದ್ಯಾ ಶಾಸ್ತ್ರಿ ಇದೀಗ “ಮಾಫಿಯಾ” ಎಂಬ ಸಿನಿಮಾದಲ್ಲೂ ಖ್ಯಾತ ನಟ ಪ್ರಜ್ವಲ್ ದೇವರಾಜ್ ಹಾಗೂ ಅಧಿತಿ ಪ್ರಭೂದೇವ್ ರವರು ನಟಿಸಿದ ಚಿತ್ರಕ್ಕೆ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಬಹುತೇಕ ಈ ಸಿನಿಮಾದ ಚಿತ್ರೀಕರಣ ಕಾರ್ಯ ಮುಗಿದಿದ್ದು, ಸದ್ಯದಲ್ಲಿಯೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ; ರೈತರೇ ಗಮನಿಸಿ; PM ಕಿಸಾನ್ 18 ನೇ ಕಂತಿನ ಹಣ ಜಮಾ ಆಗದಿದ್ರೆ ತಕ್ಷಣ ಈ ಕೆಲಸ ಮಾಡಿ

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಪಡೆಯಬಹುದು ವಿವಿಧ ಸೌಲಭ್ಯ
ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ ಇತ್ತು. ಮನೆಯಲ್ಲಿ ಓದು ನಂತರ ನೋಡೋಣ ಎಂದಿದ್ದರು. ಬಯೋ ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಮಾಡಿದೆ. ಹಾಗೆಂದು ಅಪ್ಪ ಅಮ್ಮನ ಒತ್ತಡಕ್ಕೆ ನಾನು ಓದಿಲ್ಲ. ಓದಿದ ಮೇಲೆ ಇರುವ ಪ್ರೀತಿ ಮತ್ತು ಆಸಕ್ತಿ ಅದಕ್ಕೆ ಕಾರಣ. ಪಿಯು ಓದುವಾಗ ವೈದ್ಯಳಾಗಬೇಕು ಎನ್ನುವ ಕನಸು ಕಂಡಿದ್ದೆ. ಅಂಕ ಕಡಿಮೆ ಬಂದಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯದಲ್ಲಿಯೇ ಸ್ನಾತಕೋತ್ತರ ಪದವಿಯನ್ನು ಪಡೆದೆ. ನನ್ನ ಆಸೆಯಂತೆ ಅಭಿನಯ ರಂಗಕ್ಕೆ ಬರಲು ಯೋಜನೆಯನ್ನು ಹಾಕಿಕೊಂಡು ತರಬೇತಿ ಶಾಲೆಗೆ ಸೇರಿಕೊಂಡೆ. ನಂತರ ಅಡಿಷನ್ ನೀಡಲು ಪ್ರಾರಂಭಿಸಿದೆ. ಮೊದಲಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಅದಾದ ಕೂಡಲೇ ಸ್ಟಾರ್ ಸುವರ್ಣ ದಲ್ಲಿ ಬೆಟ್ಟದ ಹೂ ಧಾರವಾಹಿಗೆ ಅಡಿಷನ್ ನೀಡಿದೆ. ಅದೇ ನನ್ನ ಮೊದಲ ಧಾರವಾಹಿ. ಆ ಪಾತ್ರವೇ ನನಗೆ ಈ ಅವಕಾಶವನ್ನು ತಂದುಕೊಟ್ಟಿದೆ. ಗೌರಿ ರೀತಿಯ ಪಾತ್ರವನ್ನು ಮಾಡಬೇಕು ಎಂಬ ನನ್ನ ಕನಸಾಗಿತ್ತು. ನನ್ನ ವ್ಯಕ್ತಿತ್ವಕ್ಕೆ ಆಕೆ ಬಹುತೇಕ ಹೋಲಿಕೆ ಆಗುತ್ತಾಳೆ. ನನ್ನ ಕನಸು ಸಾಕಾರಗೊಂಡಿದೆ. ಮುಂದೆ ಪೌರಾಣಿಕ ಕಥೆಯ ಪಾತ್ರವನ್ನು ಮಾಡಬೇಕೆಂಬ ಆಸೆ ಇದೆ. ಹಾಗೆಯೇ ರೋಚಕ ಅಕ್ಷನ್ ಪಾತ್ರದ ನಿರೀಕ್ಷೆಯಲ್ಲೂ ಇದ್ದೇನೆ. ನನ್ನ ಮಿತಿಯಲ್ಲಿ ಎಂಥಹಾ ಪಾತ್ರವಿದ್ದರೂ ಅದಕ್ಕೆ ನಾನು ಜೀವ ತುಂಬುತ್ತೇನೆ ಎಂಬ ವಿಶ್ವಾಸವಿದೆ.- ಶ್ರೀ ವಿದ್ಯಾ ಶಾಸ್ತ್ರಿ
ಇದನ್ನೂ ಓದಿ; ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 3 ಲಕ್ಷ ಸಾಲ ಸೌಲಭ್ಯ; ಅರ್ಜಿ ಸಲ್ಲಿಸಲು ಅರ್ಹತೆ ಇಲ್ಲಿದೆ ನೋಡಿ






