Rice Export Ban: ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ!

Rice Export Ban: ಭಾರತ ಸರ್ಕಾರ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ಬೆನ್ನಲ್ಲಿಯೇ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅಕ್ಕಿ ಅಭಾವ ಸೃಷ್ಟಿಯಾಗಿದೆ. ಅಮೆರಿಕದಲ್ಲಿ ಅಕ್ಕಿ ಖರೀದಿಸಲು ಭಾರತೀಯರು ಮುಗಿಬಿದ್ದಿದ್ದು, ಶಾಪಿಂಗ್ ಮಾಲ್‌ಗಳು ಹಾಗೂ ಕಾಸ್ಟ್ ಕೋ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಸರತಿ ಸಾಲು ಕಾಣುತ್ತಿವೆ. ಅಕ್ಕಿ ಅಭಾವ ಸೃಷ್ಟಿಯಾಗುವ ಆತಂಕದಲ್ಲಿರುವ ಭಾರತೀಯರು ಚೀಲಗಟ್ಟಲೇ ಅಕ್ಕಿ ಖರೀದಿಸುತ್ತಿರುವುದು ಕಂಡುಬರುತ್ತಿದೆ.

ಇದನ್ನೂ ಓದಿ; ಮಲೆನಾಡಲ್ಲಿ ಪತ್ರೋಡೆ ಘಮ; ಮಳೆಗಾಲದ ಸ್ಪೆಷಲ್ ಮರಗೆಸು ಎಲೆಯ ಪತ್ರೋಡೆ

ಮಿತಿಮೀರಿ ಏರುತ್ತಿರುವ ಅಕ್ಕಿ ಬೆಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತ ಸರ್ಕಾರ ಬಾಸ್ಮತಿ ಅಕ್ಕಿಯನ್ನು ಹೊರತುಪಡಿಸಿ ಉಳಿದ ಎಲ್ಲ ಅಕ್ಕಿಯ ರಫ್ತನ್ನು ನಿಷೇಧಿಸಿದೆ. ಆದರೆ, ಭಾರತದ ರಫ್ತು ನಿರ್ಬಂಧವನ್ನು ತೆರವುಗೊಳಿಸಲು ಐಎಂಎಫ್ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬೆನ್ನಲ್ಲೇ ಅಮೆರಿದಲ್ಲಿ ಅಕ್ಕಿ ಖರೀದಿಗೆ ಉದ್ದುದ್ದ ಸಾಲುಗಳು ಕಂಡುಬರುತ್ತಿವೆ.

ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ್ದೇ ತಡ ಅಮೆರಿಕದಿಂದ ಹಿಡಿದು ಆಸ್ಟ್ರೇಲಿಯಾ ಮತ್ತು ಕೆನಡಾದವರೆಗೆ ಜನರು ಅಕ್ಕಿ ಖರೀದಿಸಲು ಮುಗಿಬಿದ್ದಿದ್ದಾರೆ. ಈ ದೇಶಗಳಲ್ಲಿ ವಾಸಿಸುವ ಭಾರತೀಯರು ಮತ್ತು ಆಫ್ರಿಕನ್ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕಿ ಪ್ಯಾಕೆಟ್ ಗಳನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ; ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ

ಏಕೆಂದರೆ, ಇವರೆಲ್ಲರೂ ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ಅಕ್ಕಿಯ ಕೊರತೆ ಎದುರಿಸಬೇಕಾಗಬಹುದು ಎಂಬ ಆತಂಕದಲ್ಲಿದ್ದಾರೆ. ಚಿಲ್ಲರೆ ಅಂಗಡಿಗಳಲ್ಲಿ ಜನರ ಉದ್ದನೆಯ ಸರತಿ ಸಾಲುಗಳ ವೀಡಿಯೊಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹಾಗಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಈ ದೇಶಗಳ ಚಿಲ್ಲರೆ ಅಂಗಡಿಗಳೂ ಅಕ್ಕಿಯ ಬೆಲೆಯನ್ನು ವಿಪರೀತ ಹೆಚ್ಚಿಸಿವೆ. ಏಷ್ಯನ್ ಮತ್ತು ಆಫ್ರಿಕನ್ ಮೂಲದ ಜನರಿಗೆ, ಅಕ್ಕಿ ಅವರ ಆಹಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವುದೇ ಇದಕ್ಕೆ ಕಾರಣ.

Rice Export Ban:
Rice Export Ban:

ರಫ್ತು ನಿಷೇಧದಿಂದ ಬಿಕ್ಕಟ್ಟು ಹೆಚ್ಚಿದೆ:
ಜುಲೈ 20 ರಂದು ಭಾರತ ಸರ್ಕಾರವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿತ್ತು. ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತು ಮಾಡುವ ದೇಶವಾಗಿದೆ. ಜಾಗತಿಕ ಅಕ್ಕಿ ರಫ್ತಿನಲ್ಲಿ ಭಾರತವು ಶೇ. 40 ರಷ್ಟು ಪಾಲು ಹೊಂದಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದಾಗಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಹಣದುಬ್ಬರದ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ, ಮೋದಿ ಸರ್ಕಾರ ಅಕ್ಕಿ ರಫ್ತು ನಿಷೇಧಿಸಿತು. ಇದಾದ ನಂತರವೇ ಅಮೆರಿಕ, ಆಸ್ಟ್ರೇಲಿಯಾ, ಕೆನಡಾದಂತಹ ದೇಶಗಳಲ್ಲಿ ಭಾರತೀಯರು ಮತ್ತು ಆಫ್ರಿಕಾ ಮೂಲದ ನಾಗರಿಕರು ಅಕ್ಕಿ ಖರೀದಿಸಿ ಸಂಗ್ರಹಿಸುತ್ತಿದ್ದಾರೆ. ಬಾಸ್ಮತಿ ಅಲ್ಲದ ಅಕ್ಕಿಯ ರಫ್ತು ನಿಷೇಧಿಸುವ ಭಾರತದ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯಲ್ಲಿ ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ. ಇದೀಗ ಅಕ್ಕಿ ಬೆಲೆಯಲ್ಲಿಯೂ ಏರಿಕೆ ಕಾಣುತ್ತಿದೆ.

ಇದನ್ನೂ ಓದಿ; ನಿಮಗೆ ಮೈಗ್ರೇನ್ ತಲೆನೋವಿನ ಸಮಸ್ಯೆ ಇದೆಯಾ?; ಪದೇ ಪದೇ ಕಾಡೋ ಮೈಗ್ರೇನ್ ಸಮಸ್ಯೆ ಇಲ್ಲಿದೆ ಸರಳ ಪರಿಹಾರ

ಉತ್ಪಾದನೆ ಇಳಿಕೆಯಾಗುವ ಸಾಧ್ಯತೆ ಹೊಂದಿದೆ:
ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಪೂರೈಕೆ ಸಮಸ್ಯೆಗಳಿಂದಾಗಿ ಜಾಗತಿಕ ಆಹಾರ ಬಿಕ್ಕಟ್ಟು ಉಂಟಾಯಿತು. ಗೋಧಿ ಬೆಲೆಯೂ ಗಗನಕ್ಕೇರಿದ ಸಂದರ್ಭದಲ್ಲೇ ಖಾದ್ಯ ತೈಲಗಳ ಬೆಲೆಗಳೂ ಹೆಚ್ಚಿದವು. ಆ ಸಮಯದಲ್ಲಿ ಕೂಡ ದೇಶೀಯ ಮಾರುಕಟ್ಟೆಯಲ್ಲಿನ ಬೆಲೆಗಳನ್ನು ನಿಯಂತ್ರಿಸಲು ಭಾರತವು ಗೋಧಿ ರಫ್ತನ್ನು ನಿಷೇಧಿಸಿತ್ತು. ಈಗ ಅಕ್ಕಿ ರಫ್ತು ನಿಷೇಧಿಸಲಾಗಿದೆ. ಈ ವರ್ಷ ವಿಶ್ವಾದ್ಯಂತ ಅಕ್ಕಿ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಹಾಗೂ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆ ಹೊಂದಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು  


ಭಾರತದ ಅಕ್ಕಿ ರಫ್ತಿನಿಂದ ಯಾವ್ಯಾವ ದೇಶಗಳಿಗೆ ಆತಂಕ?:
ಜಾಗತಿಕವಾಗಿ ಒಟ್ಟು ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ. 40ರಷ್ಟಿದೆ. 2022 ರಲ್ಲಿ ಭಾರತ 22.2 ಮಿಲಿಯನ್ ಟನ್ ಗಳಷ್ಟು ಅಕ್ಕಿಯನ್ನು ವಿವಿಧ ದೇಶಗಳಿಗೆ ರಫ್ತು ಮಾಡಿತ್ತು. ಅದರಲ್ಲಿ ಅರ್ಧದಷ್ಟು ಅಕ್ಕಿ ಬಾಸ್ಮತಿಯೇತರದ್ದು. ಭಾರತದ ಅಕ್ಕಿಯ ಮೇಲೆ ಅತಿಹೆಚ್ಚು ಅವಲಂಬಿತವಾಗಿರುವುದು ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳ. ಹಾಗೆಯೇ, ಕ್ಯಾಮರೂನ್, ಡಿಜಿಬೋಟಿ, ಬೆನಿನ್, ಆಂಗೊಲಾ, ಗಿನಿಯಾ, ಐವರಿ ಕೋಸ್ಟ್, ಕೀನ್ಯಾ ಮೊದಲಾದ ದೇಶಗಳೂ ಕೂಡ ಭಾರತದಿಂದ ಬಾಸ್ಮತಿಯೇತರ ಅಕ್ಕಿಯನ್ನು ಹೆಚ್ಚು ಖರೀದಿಸುತ್ತವೆ.

ಇದನ್ನೂ ಓದಿ; ಮಲೆನಾಡಿನ ಜನತೆಗೆ ಗುಡ್ ನ್ಯೂಸ್; ವಿಮಾನ ಹಾರಾಟದ ದಿನಾಂಕ ಪ್ರಕಟಿಸಿದ ಇಂಡಿಗೋ ಸಂಸ್ಥೆ

Rice Export Ban:  ಅಮೆರಿಕ ಮತ್ತು ಕೆನಡಾದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನರು:
ಉತ್ತರ ಅಮೆರಿಕ ಖಂಡದ ರಾಷ್ಟ್ರಗಳಾದ ಕೆನಡಾ ಮತ್ತು ಅಮೆರಿಕಾದಲ್ಲಿ ಅಕ್ಕಿಗೆ ಬಹಳ ಬೇಡಿಕೆ ಇದೆ. ಇದಕ್ಕೆ ಕಾರಣ ಈ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರು. 2022-23ರ ವರ್ಷದಲ್ಲಿ ಉತ್ತರ ಅಮೆರಿಕನ್ ದೇಶಗಳು ಭಾರತದಿಂದ 64,330 ಟನ್ ಗಳಷ್ಟು ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಂಡಿದ್ದವು. ಈಗ ಭಾರತ ಅಕ್ಕಿ ರಫ್ತು ನಿಷೇಧ ಮಾಡುತ್ತಿದ್ದಂತೆಯೇ ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯ ಸಮುದಾಯದವರು ಅಕ್ಕಿ ಖರೀದಿಗೆ ಮುಗಿಬೀಳುತ್ತಿದ್ದಾರೆಂಬ ಸುದ್ದಿ ಇದೆ. ಹಾಗೆಯೇ, ಅಲ್ಲಿನ ಸೂಪರ್ ಮಾರ್ಕೆಟ್ ಗಳು ಅಕ್ಕಿ ಬೆಲೆಯನ್ನು ವಿಪರೀತ ಏರಿಸುತ್ತಿರುವ ಸುದ್ದಿಯೂ ಇದೆ.