Red Ant Chutney: ಪ್ರಪಂಚದಲ್ಲಿ ಚಿತ್ರ ವಿಚಿತ್ರವಾದ ಆಹಾರ ಪದ್ಧತಿ ಇದೆ. ಆಯಾ ಪ್ರದೇಶ, ಅಲ್ಲಿನ ಪಾಕೃತಿಕ ರೀತಿಗಳು, ಹವಾಮಾನಕ್ಕನುಗುಣವಾಗಿ ಆಹಾರ ಪದ್ಧತಿಯೂ ರೂಪಿಸಲ್ಪಟ್ಟಿರುತ್ತದೆ. ಕೆಲವು ಕಡೆ ರೊಟ್ಟಿ ತಿಂದರೆ ಇನ್ನು ಕೆಲವೆಡೆ ಕಡಬು, ಮತ್ತೆ ಕೆಲವೆಡೆ ಗಂಜಿ ಹೀಗೆ ಬೇರೆ ಬೇರೆ ರೀತಿಯ ಆಹಾರವಿರುತ್ತದೆ. ಕರಾವಳಿ ಭಾಗಗಳಲ್ಲಿ ತೆಂಗಿನ ಕಾಯಿ ಚಟ್ನಿ ಫೇಮಸ್. ನಾರ್ತ್ ನಲ್ಲಿ ದಾಲ್ ಬೇಕೇ ಬೇಕು, ಉತ್ತರ ಕರ್ನಾಟಕ ಕಡೆ ಚಟ್ನಿಪುಡಿ ಇಲ್ಲದೆ ಊಟವೇ ಇಲ್ಲ. ಹೀಗೆ ಆಹಾರ ಪದ್ಧತಿ ವೈವಿಧ್ಯ. ವಿಶೇಷ ಎಂದರೆ ಇದು ಆರೋಗ್ಯಕ್ಕೂ ತುಂಬಾ ಬೆಸ್ಟ್ ಅಂತೆ. ಚರ್ಮದ ಮೇಲೆ ತೀಕ್ಷ್ಣವಾದ ನೋವು ಮತ್ತು ಕೆಂಪು ಉಬ್ಬುಗಳನ್ನು ಉಂಟುಮಾಡುವ ಸಾಮರ್ಥ್ಯವಿರುವ ಕೆಂಪು ಇರುವೆಗಳಂದರೆ ನಿಮಗೆ ಭಯ ಇದೆಯಾ? ಇದರಿಂದ ಜನರು ಸಾಮಾನ್ಯವಾಗಿ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಅಲ್ವೇ. ಆದರೆ ಮಲೆನಾಡಿನಲ್ಲಿ ಕೆಂಪು ಇರುವೆಗಳೆಂದರೆ ಎಲ್ಲಿದ್ದಾವೆ ಅಂತಾ ಕೇಳುತ್ತಾರೆ. ಅಷ್ಟೇ ಅಲ್ಲದೆ ಕೆಂಪು ಇರುವೆಗಳನ್ನು ಮನೆಗೆ ತಂದು ಬಾಯಲ್ಲಿ ನೀರುಣಿಸುವಂತೆ ಖಡಕ್ ಚಟ್ನಿ ಮಾಡಿ ಆಸ್ವಾದಿಸುತ್ತಾರೆ. ಕೆಂಪು ಇರುವೆನಾ ತಿನ್ನುತ್ತಾರಾ? ಚಟ್ನಿ ಮಾಡುತ್ತಾರಾ? ಅಂತಾ ಹುಬ್ಬೇರಿಸಬೇಡಿ.
ಕೊರೊನಾಕ್ಕೆ ಪರಿಣಾಮಕಾರಿ ಮದ್ದು ಈ ಕೆಂಪು ಇರುವೆ ಚಟ್ನಿ:
ಕೆಂಪು ಇರುವೆ ಚಟ್ನಿಯಲ್ಲಿ ಫಾರ್ಮಿಕ್ ಆಯಸಿಡ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಜಿಂಕ್ ಸೇರಿದಂತೆ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಹೀಗಾಗಿ ಪರಿಣಾಮಕಾರಿ ಮದ್ದು ಎನ್ನುವುದು ಕೆಲ ಸಂಶೋಧನೆಗಳು ಹೇಳಿದ್ದು, ಕೆಂಪು ಇರುವೆ ಚಟ್ನಿಗೆ ಇದೀಗ ಭಾರಿ ಮಹತ್ವ ಬಂದಿದೆ.

ಇದರ ವಿಶೇಷತೆ ಏನು?;
ಚಳಿಗಾಲದಲ್ಲಿ ಗೂಡು ಕಟ್ಟುವ ಕೆಂಪು ಇರುವೆ, ಬೇರೆ ಸಮಯದಲ್ಲಿ ಗೂಡು ಕಟ್ಟಲ್ಲ. ಚಳಿಗಾಲದಲ್ಲಿ ಮಾತ್ರ ಗೂಡನ್ನು ಕಟ್ಟಿ ಮೊಟ್ಟೆ ಮಾಡಿ ಮರಿಗಳಿಗೆ ಜನ್ಮ ಕೊಡುತ್ತವೆ. ಹಾಗಾಗಿ ಈ ಕೆಂಪು ಇರುವೆಗಳನ್ನು ಇದೇ ಸಮಯದಲ್ಲಿ ಜನರು ಶಿಕಾರಿ ಮಾಡುತ್ತಾರೆ. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನ ಜನರು ಬಹಳ ಹಿಂದಿನಿಂದಲೂ ಕೆಂಪು ಇರುವೆಗಳನ್ನು ತಿನ್ನುತ್ತಾ ಬಂದಿದ್ದಾರೆ.
ಹಾಗಾದರೆ ಈ ಚಗಳಿ ಚಟ್ನಿ ಮಾಡುವುದು ಹೇಗೆ?:
ಇರುವೆಗಳನ್ನು ಮನೆಗೆ ತಂದು ಆ ಪಾತ್ರೆಗೆ ಸ್ವಲ್ಪ ಶಾಕ ಕೊಟ್ಟು ಮತ್ತೊಮ್ಮೆ ಚಗಳಿಯನ್ನು ಸೊಪ್ಪು ಸದೆಯಿಂದ ಬೇರ್ಪಡಿಸುತ್ತಾರೆ. ಮತ್ತೊಂದು ಕಡೆ ಹಸಿ ಮೆಣಸಿನಕಾಯಿ ಅಥವಾ ಜೀರಿಗೆ ಮೆಣಸಿನಕಾಯಿ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿದುಕೊಂಡು ಚಗಳಿ ಜೊತೆ ಹಾಕಿ ರುಬ್ಬುವ ಕಲ್ಲಿನಲ್ಲಿ ಕಡೆಯುತ್ತಾರೆ. ಈ ವೇಳೆ ಅರಿಶಿನ ಮತ್ತು ಉಪ್ಪಿನ ಪುಡಿಯನ್ನು ಕೂಡ ಮಿಶ್ರಣ ಮಾಡಿ ಚೆನ್ನಾಗಿ ನುಣ್ಣಗೆ ಆಗುವ ತನಕ ಕಲ್ಲಿನಲ್ಲಿ ಕಡೆಯಲಾಗುತ್ತದೆ. ಚಗಳಿಯಲ್ಲಿ ಹುಳಿ ಅಂಶ ಇರುವುದರಿಂದ ಯಾವುದೇ ಹುಳಿ ಪದಾರ್ಥಗಳನ್ನು ಚಟ್ನಿಗೆ ಬಳಸುವುದಿಲ್ಲ. ಚೆನ್ನಾಗಿ ರುಬ್ಬುವ ಕಲ್ಲಿನಲ್ಲಿ ಕಡೆದ ಬಳಿಕ ರುಚಿ ರುಚಿಯಾದ ಚಗಳಿ ಚಟ್ನಿ ಸಿದ್ಧವಾಗುತ್ತದೆ. ರೆಡಿಯಾದ ಚಗಳಿ ಚಟ್ನಿಯನ್ನು ಅಕ್ಕಿ ರೊಟ್ಟಿ ಜೊತೆ ಸವಿದರೆ ಅದರ ಮಜಾನೇ ಬೇರೆ ಅಂತಾರೆ ಕಾಫಿನಾಡಿಗರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್; ಸರ್ಕಾರದಿಂದ ಆದೇಶ
- ಈ ಟಿಪ್ಸ್ ಫಾಲೊ ಮಾಡಿದ್ರೆ ನಿಮ್ಮ ಹಲ್ಲುಗಳು ಹಾಳಾಗೋದಿಲ್ಲ; ಫಳ ಫಳ ಹೊಳೆಯುತ್ತೆ!
- ಪದೆ ಪದೇ ಲಟಿಕೆ ತೆಗೀತಾನೇ ಇರ್ತೀರಾ?; ಈ ಅಭ್ಯಾಸವಿದೆಯೇ? ಇದು ಒಳ್ಳೇಯದಲ್ಲ!; ಜೀವಕ್ಕೆ ಕುತ್ತು ತರಬಹುದು ಈ ಚಟ ಹುಷಾರ್..!
ಇನ್ನು ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಅಂಜಿಕೆಯಿಂದ ಚಗಳಿ ಚಟ್ನಿ ಎಂದರೆ ಮೂಗು ಮರಿಯುತ್ತಾರೆ. ಆದರೆ ಮಲೆನಾಡಿನ ಬಹುತೇಕರಿಗೆ ಚಗಳಿ ಚಟ್ನಿ ಅಂದ್ರೆ ಬಹಳ ಅಚ್ಚುಮೆಚ್ಚು. ಚಗಳಿ ಚಟ್ನಿ ತಿಂದರೆ ಒಳ್ಳೆಯದು ಎನ್ನುವ ವಿಚಾರ ಮಲೆನಾಡಿಗರಿಗೆ ತುಂಬಾ ಹಿಂದಿನಿಂದಲೇ ಗೊತ್ತಿರುವುದರಿಂದ ಚಗಳಿ ಅಥವಾ ಕೆಂಪು ಇರುವೆ ಮೇಲಿನ ಪ್ರೀತಿ ಇಂದಿಗೂ ಕೂಡ ಕಡಿಮೆಯಾಗಿಲ್ಲ.
Red Ant Chutney: ಕೆಂಪು ಇರುವೆ ಚಟ್ನಿ ಮಾಡಿದ ಬಿಗ್ ಬಾಸ್ ಕಿಶನ್ :
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಕಿಶನ್ ಅವರು ಆಗಾಗ ಅಡುಗೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಿಶನ್ ಅವರು ಆ ಇರುವೆಗಳನ್ನು ತಂದು ಚಟ್ನಿ ಮಾಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ವಿಮರ್ಶೆಯ ಬಗ್ಗೆಯೂ ಮಾತನಾಡಿದ್ದಾರೆ. ಈ ವಿಡಿಯೋ ಅಪ್‌ಲೋಡ್ ಮಾಡುವ ಮುನ್ನ ಕೆಲವರು ನೆಗೆಟಿವ್ ಕಾಮೆಂಟ್ ಹಾಕುತ್ತಾರೆ ಎನ್ನೋದನ್ನು ಅರಿತು ಕಿಶನ್ ಒಂದಷ್ಟು ಮಾಹಿತಿ ಮೊದಲೇ ನೀಡಿದ್ದಾರೆ.
ಇದನ್ನೂ ಓದಿ; ಕಡೂರು ಸಮೀಪ ಕೈ ಶಾಸಕನ ಆಪ್ತನ ಕಾರು ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಚಾಲಕ ಪರಾರಿ
ಈ ಚಟ್ನಿ ಬಗ್ಗೆ ಕಿಶನ್ ಏನಂದ್ರು?:
“ಚಾಗಲಿ ಇರುವೆ, ಮಲೆನಾಡಿನ ವಿಶೇಷ. ಇದರ ಬಗ್ಗೆ ಕಾಮೆಂಟ್ ಮಾಡುವ ಮುನ್ನ ಗೂಗಲ್ ಮಾಡಿ ಸ್ವಲ್ಪ ವಿಷಯ ತಿಳಿದುಕೊಳ್ಳಿ. ನಿಮಗೆ ಇದು ಇಷ್ಟ ಆಗಿಲ್ಲ ಅಂದರೆ ತು, ಚಿ ಎನ್ನಬೇಡಿ. ಈ ಚಟ್ನಿಯಲ್ಲಿ ಜಿಂಕ್, ಕ್ಯಾಲ್ಸಿಯಂ, ಪ್ರೋಟೀನ್ ಇರುತ್ತದೆ, ಇದು ನಮಗೆ ರೋಗ ನಿರೋಧಕ ಶಕ್ತಿ ನೀಡುವುದು. ಅಷ್ಟೇ ಅಲ್ಲದೆ ಕಫ, ನೆಗಡಿ, ಉಸಿರಾಟ ಸಮಸ್ಯೆ ಮುಂತಾದ ರೋಗಗಳಿಗೆ ಉತ್ತಮ ಔಷಧಿ” ಎಂದು ಕಿಶನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು.