Raksha Bandhan:ರಾಖಿ ಹಬ್ಬದ ದಿನ ಈ ಕೆಲಸಗಳನ್ನ ತಪ್ಪದೇ ಮಾಡಿ

(Raksha Bandhan) ಸಮಸ್ತ ಕನ್ನಡಿಗ ಸಹೋದರ, ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು. ಪ್ರತಿ ವರ್ಷದಂತೆ ಹಿಂದೂ ಧರ್ಮದ ಪದ್ಧತಿಯ ಪ್ರಕಾರ ಈ ವರ್ಷವೂ ಕೂಡ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ವರ್ಷ ಆಗಸ್ಟ್ ತಿಂಗಳ 19ನೇ ತಾರೀಕಿನಂದು ಆಚರಿಸಲಾಗುತ್ತಿದೆ. ಈ ಶುಭ ಸಮಾರಂಭದಂದು ಯಾವ ಸಮಯದಲ್ಲಿ ರಾಖಿ ಕಟ್ಟಿದರೆ ಶುಭವಾಗಲಿದೆ? ಯಾವ ಸಮಯದಲ್ಲಿ ರಾಖಿ ಕಟ್ಟಬಾರದು? ಈ ಹಬ್ಬದಂದು ಯಾವ ಕಾರ್ಯಗಳನ್ನು ಮಾಡಬೇಕು ಹಾಗೂ ಮಾಡಬಾರದು? ಈ ಹಬ್ಬದ ಇತಿಹಾಸವೇನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.


ಇದನ್ನೂ ಓದಿ; ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ


ರಕ್ಷಾಬಂಧನ ಎಂಬ ಸಂಪ್ರದಾಯ ಆರಂಭವಾಗಿದ್ದು ಹೇಗೆ?:
ಹಿಂದೂ ಧರ್ಮದ ನಂಬಿಕೆ ಮತ್ತು ಇತಿಹಾಸದ ಪ್ರಕಾರ ರಾಖಿ ಕಟ್ಟುವ ಆಚರಣೆಯು ಮಹಾಭಾರತ ಸಮಯದಿಂದ ಬಂದಿರುವ ಪದ್ಧತಿ. ಹಿಂದೂ ಧರ್ಮದ ನಂಬಿಕೆ ಮತ್ತು ಇತಿಹಾಸದ ಪ್ರಕಾರ ಮಹಾಭಾರತದ ಸಮಯದಲ್ಲಿ ಶ್ರೀ ಕೃಷ್ಣದೇವರ ಬೆರಳನ್ನು ಸುದರ್ಶನ ಚಕ್ರದಿಂದ ಕತ್ತರಿಸಲಾದ ಸಮಯದಲ್ಲಿ ಕೈ ಬೆರಳಿನಿಂದ ರಕ್ತಸ್ರಾವವಾಗುತ್ತಿರುತ್ತದೆ. ಈ ಸಮಯದಲ್ಲಿ ಇದನ್ನೂ ಕಂಡು ದ್ರೌಪದಿಯು ತಕ್ಷಣವೇ ತನ್ನ ಸೀರೆಯ ತುಂಡೊಂದನ್ನು ಹರಿದುಕೊಂಡು ಶ್ರೀ ಕೃಷ್ಣದೇವರಾಯನ ಕೈ ಗಾಯಕ್ಕೆ ಕಟ್ಟಿದಳು. ಆ ಕ್ಷಣದಿಂದಲೇ ಶ್ರೀಕೃಷ್ಣನು ದ್ರೌಪದಿಗೆ “ನಿನ್ನನ್ನು ಪ್ರತಿ ಕ್ಷಣದಲ್ಲೂ ರಕ್ಷಣೆ ಮಾಡುತ್ತೇನೆ” ಎಂದು ವಾಗ್ದಾನ ಮಾಡಿದ್ದನು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಸ್ತಿನಾಪುರದ ರಾಜಮನೆತನದಲ್ಲಿ ದ್ರೌಪದಿಯನ್ನು ಅವಮಾನದಿಂದ ರಕ್ಷಿಸಿದ್ದನು. ಈ ಸಮಯದಿಂದ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಸಂಪ್ರದಾಯ ಆರಂಭವಾಗಿದ್ದು, ಇದಕ್ಕೆ ಪ್ರತಿಫಲವಾಗಿ ಸಹೋದರನು ಶ್ರೀಕೃಷ್ಣನಂತೆ ತನ್ನ ಸಹೋದರಿಯರಿಗೆ ಪ್ರತಿ ಸಂದರ್ಭದಲ್ಲಿಯು ರಕ್ಷಣೆ ನೀಡುವುದಾಗಿ ಭರವಸೆ ನೀಡುವುದು ರಾಖಿ ಹಬ್ಬದ ವಿಶೇಷತೆಯಾಗಿದೆ.


ಇದನ್ನೂ ಓದಿ; 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಯಾವ ರೈತರ ಎಷ್ಟು ಸಾಲಮನ್ನಾ ಆಗಿದೆ, ಹೀಗೆ ಚೆಕ್ ಮಾಡಿ


ಈ ವರ್ಷದ ರಕ್ಷಾಬಂಧನದಂದು ರಾಖಿ ಕಟ್ಟಲು ಶುಭ ಸಮಯದ ಮಾಹಿತಿ :
ಈ ವರ್ಷದ ರಕ್ಷಾಬಂಧನದಂದು ಸಹೋದರರಿಗೆ ರಾಖಿ ಕಟ್ಟಲು ಮದ್ಯಾಹ್ನ 1:30 ಯಿಂದ ರಾತ್ರಿ 9:08 ರವರೆಗೆ ಶುಭ ಘಳಿಗೆಯಾಗಿದೆ.


ಇದನ್ನೂ ಓದಿ; ಸಿಎಂ ವಿರುದ್ಧ ಪ್ರಾಸಿಕ್ಯುಷನ್’ಗೆ ಅನುಮತಿ!; ಪ್ರಾಸಿಕ್ಯೂಷನ್ ಅಂದ್ರೆ ಏನು?; ಇದರಿಂದ ಸಿಎಂ’ಗೆ ಕಾದ ಗಂಡಾಂತರವೇನು?


ರಕ್ಷಾಬಂಧನದ ಈ ದಿನದಂದು ಯಾವ ಕಾರ್ಯಗಳನ್ನು ಮಾಡಿದರೆ ಶುಭವಾಗಲಿದೆ?
ರಕ್ಷಾಬಂಧನದ ಈ ಶುಭದಿನದಂದು ರಾಖಿ ಕಟ್ಟುವ ನಿಮ್ಮ ಸಹೋದರಿಯರಿಗೆ ಸಂತೋಷದ ಸಂಕೇತವಾಗಿ ಅವರಿಗೆ ಇಷ್ಟವಾಗುವ ಉಡುಗೊರೆಯನ್ನು ನೀಡಿ. ಶ್ರಾವಣ ಪೂರ್ಣಿಮೆಯ ಈ ದಿನವು ಪೂರ್ಣಿಮಾ ತಿಥಿಯು ಭಗವಾನ್ ವಿಷ್ಣು ದೇವರಿಗೆ ಸಮರ್ಪಿತವಾಗಿರುವುದರಿಂದ ಬೆಳಗ್ಗೆ ಸ್ನಾನ ಮಾಡಿ ಶ್ರೀ ಹರಿ ಮತ್ತು ಮಹಾಲಕ್ಷ್ಮಿ ದೇವರನ್ನು ಪೂಜಿಸಿದರೆ ಶುಭ ಫಲಗಳನ್ನು ನೀವು ಪಡೆಯುವಿರಿ.


ಇದನ್ನೂ ಓದಿ; ಇಂತಹ ಮಹಿಳೆಯರಿಗೆ ಸಿಗ್ತಿದೆ 11,000 ರೂಪಾಯಿ; ಈ ದಾಖಲೆ ಕಡ್ಡಾಯ, ಹೀಗೆ ಅರ್ಜಿ ಸಲ್ಲಿಸಿ


ರಕ್ಷಾಬಂಧನದ ಈ ದಿನದಂದು ಯಾವ ಕಾರ್ಯಗಳನ್ನು ಮಾಡಬಾರದು?
ನಿಮ್ಮ ರಕ್ಷಣೆ ಬಯಸಿ ನಿಮಗೆ ರಾಖಿ ಕಟ್ಟುವ ನಿಮ್ಮ ಸಹೋದರಿಯರನ್ನು ಅಥವಾ ಯಾವುದೇ ಮಹಿಳೆಯರನ್ನು ಈ ದಿನ ಅವಮಾನಿಸಬೇಡಿ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಸಮಯದಲ್ಲಿ ಪ್ಲಾಸ್ಟಿಕ್ ರಾಖಿಗಳನ್ನು ಕಟ್ಟಬೇಡಿ.

Raksha Bandhan:ರಾಖಿ ಹಬ್ಬದ ದಿನ ಈ ಕೆಲಸಗಳನ್ನ ತಪ್ಪದೇ ಮಾಡಿ
Raksha Bandhan:ರಾಖಿ ಹಬ್ಬದ ದಿನ ಈ ಕೆಲಸಗಳನ್ನ ತಪ್ಪದೇ ಮಾಡಿ

ಇದನ್ನೂ ಓದಿ; ವಿದ್ಯಾಭ್ಯಾಸ ಮುಂದುವರೆಸಲು ಶಿಕ್ಷಣ ಸಾಲ; ಈ ಅರ್ಹತೆ ಹೊಂದಿರುವವರು ಈಗಲೇ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?