Prosecution Case: ಸಿಎಂ ವಿರುದ್ಧ ಪ್ರಾಸಿಕ್ಯುಷನ್’ಗೆ ಅನುಮತಿ!

(Prosecution Case) ಕರ್ನಾಟಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವಂತಹ ಸಿಎಂ ಸಿದ್ದರಾಮಯ್ಯನವರು ಬಡವ ಹಿಂದುಳಿದ ವರ್ಗದವರಿಗಾಗಿ ಶ್ರಮಿಸಿದ ವ್ಯಕ್ತಿ. ಪ್ರಬಲ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಮೇಲೆ ಮುಡಾ (MUDA – Mysore Urban Development Authority) ಹಗರಣದಲ್ಲಿ ಮಡಿಕೇರಿಯ ಟಿ. ಜೆ ಅಬ್ರಹಾಂ ಮತ್ತು ಪ್ರದೀಪ್ ಎಂಬ ವ್ಯಕ್ತಿ ಇಬ್ಬರು ದೂರು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಹಾಗಿದ್ದರೆ ಏನಿದು ಪ್ರಾಸಿಕ್ಯೂಷನ್‌? ತನಿಖೆ ಆದಲ್ಲಿ ಸಿದ್ದರಾಮಯ್ಯನವರಿಗೆ ಯಾವ ರೀತಿ ಶಿಕ್ಷೆಯಾಗಲಿದೆ? ಎಂಬ ವಿವರ ಇಲ್ಲಿದೆ…


ಇದನ್ನೂ ಓದಿ; ಗಣೇಶ ಚತುರ್ಥಿಯಲ್ಲಿ ಈ ವಿಚಾರಕ್ಕೆ ಶಿಕ್ಷೆ ಗ್ಯಾರಂಟಿ; ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ!;ಏನದು? ಇಲ್ಲಿದೆ ನೋಡಿ


ಏನಿದು ಮುಡಾ ಕೇಸ್? (MUDA case): 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಆಗಿರುವಂತಹ ಕೇಸ್ ಏನೆಂದು ತಿಳಿದುಕೊಳ್ಳುವುದಾದರೆ, ಕೆಸರೆ ಎಂಬ ಗ್ರಾಮದಲ್ಲಿ ಒಂದು ಜಮೀನನ್ನು ಸಿದ್ದರಾಮಯ್ಯನವರ ಭಾವಮೈದುನ ಖರೀದಿ ಮಾಡಿ ಅದನ್ನು ಸಿಎಂ ಅವರ ಪತ್ನಿಗೆ ಕೊಟ್ಟಿದ್ದರು. ಆದರೆ ಈ ಒಂದು ಜಮೀನನ್ನು ಮುಡಾವು ಬಡಾವಣೆ ನಿರ್ಮಾಣದ ಸಲುವಾಗಿ ಸ್ವಾದಿನ ಪಡಿಸಿ ಇಟ್ಟುಕೊಂಡಿತ್ತು. ಆದ್ದರಿಂದ ಸಿದ್ದರಾಮಯ್ಯನವರ ಪತ್ನಿಗೆ ಬೇರೊಂದು ಬಡಾವಣೆಯಲ್ಲಿ ಭೂಪರಿಹಾರವನ್ನು ದೊರಕಿಸಿ ಕೊಟ್ಟಿತ್ತು. ಈ ಒಂದು ಪರಿಹಾರವನ್ನು ಒಪ್ಪದೇ ವಿಜಯನಗರ ಬಡಾವಣೆಯಲ್ಲಿಯೇ ಒತ್ತಡ ಹೇರಿ ನಿವೇಶನ ಪಡೆದಿದ್ದಾರೆ ಎಂದು ಆರೋಪ ದಾಖಲಾಗಿದೆ. ಇದರ ಕುರಿತಾಗಿ ಮಡಿಕೇರಿ ನಗರದ ಟಿ. ಜೆ ಅಬ್ರಹಾಂ ಮತ್ತು ಪ್ರದೀಪ್ ಎಂಬ ವ್ಯಕ್ತಿಗಳಿಬ್ಬರು ದೂರು ನೀಡಿದ ದಿನವೇ ರಾಜ್ಯಪಾಲರಾಗಿರುವ ಥಾವರ್ ಚಂದ್ ಗೆಹ್ಲೋಟ್ ರವರು ನೋಟಿಸ್ ಜಾರಿ ಮಾಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ; 8 ತಾಲೂಕಿನ ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸ್ ಆದರು ಈಗಲೇ ಅರ್ಜಿ ಸಲ್ಲಿಸಿ


ಹಾಗಿದ್ದರೆ ಏನಿದು ಪ್ರಾಸಿಕ್ಯೂಷನ್? ಯಾವ ಯಾವ ಸೆಕ್ಷನ್ ಗಳ ಅಡಿಯಲ್ಲಿ ಆರೋಪ ದಾಖಲಾಗಿದೆ ಹಾಗೂ ತನಿಖೆ ಆದಲ್ಲಿ ಸಿದ್ದರಾಮಯ್ಯನವರಿಗೆ ಯಾವ ರೀತಿ ಶಿಕ್ಷೆಯಾಗಲಿದೆ ಎಂಬ ವಿವರ ಇಲ್ಲಿದೆ..

ಪ್ರಾಸಿಕ್ಯೂಷನ್ ಅಂದರೆ ಏನು? (What is Prosecution?):
ಪ್ರಾಸಿಕ್ಯೂಷನ್ ಎಂದರೆ ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಯಾವುದಾದರೂ ಒಬ್ಬ ವ್ಯಕ್ತಿಯ ಮೇಲೆ ಕಾನೂನು ಬದ್ಧವಾಗಿ ತನಿಖೆ ನಡೆಸಲು ಅನುಮತಿ ನೀಡಲಾಗಿದೆ ಎಂಬರ್ಥ. ಯಾವುದಾದರೂ ಒಬ್ಬ ವ್ಯಕ್ತಿಯ ಮೇಲೆ ಕಾನೂನು ಬದ್ಧವಾಗಿ ತನಿಖೆ ನಡೆಸಲು ಪ್ರಾಸಿಕ್ಯೂಷನ್ ಅನುಮತಿ ಬಹು ಮುಖ್ಯವಾಗಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ಸರ್ಕಾರದ ಮುಖ್ಯ ವ್ಯಕ್ತಿಯಾಗಿದ್ದು, ಆಡಳಿತಾತ್ಮಕವಾಗಿ ಉನ್ನತ ಶ್ರೇಣಿಯ ಸ್ಥಾನದಲ್ಲಿರುವುದರಿಂದ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯು ಸಾಂವಿಧಾನಿಕ ನಡೆಯಾಗಿದೆ.


ಇದನ್ನೂ ಓದಿ; ಲೋನ್‌ ಹೊಂದಿರುವವರಿಗೆ ಗುಡ್‌ನ್ಯೂಸ್‌!; EMI ಕಟ್ಟಲು ಆಗಿಲ್ಲವೆಂದು ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ!


ಯಾವ ಯಾವ ಸೆಕ್ಷನ್ ಗಳ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ? ಆರೋಪ ಸಾಬೀತಾದರೆ ಯಾವ ಶಿಕ್ಷೆ ನೀಡಲಾಗುತ್ತದೆ?

  • ಮೊದಲನೆಯದಾಗಿ ಬಿಎನ್‌ಎಸ್‌ (BNS) ಸೆಕ್ಷನ್‌ 316(5) – ಈ ಸೆಕ್ಷನ್ ನ ಅಡಿಯಲ್ಲಿ, ಸರ್ಕಾರಿ ಸೇವಕರಾಗಿದ್ದು, ಆಸ್ತಿ ದುರುಪಯೋಗ ಮಾಡಿಕೊಂಡಿದ್ದರೆ ಜೀವಾವಧಿ ಅಥವಾ 10 ವರ್ಷ ಜೈಲು ಶಿಕ್ಷೆ ಸಿಗಲಿದೆ.
  • ಸೆಕ್ಷನ್‌ 11- ಈ ಸೆಕ್ಷನ್ ನ ಅಡಿಯಲ್ಲಿ ಸ್ವಕಾರ್ಯಕ್ಕೆ ಲಾಭ ಪಡೆದುಕೊಂಡಿದ್ದರೆ ಕನಿಷ್ಠ 6 ತಿಂಗಳು ಅಥವಾ ಗರಿಷ್ಠ 5 ವರ್ಷಗಳ ಶಿಕ್ಷೆ.
  • ಸೆಕ್ಷನ್‌ 9 – ಈ ಸೆಕ್ಷನ್ ನ ಅಡಿಯಲ್ಲಿ ವಾಣಿಜ್ಯ ಸಂಸ್ಥೆಗಳಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಂಡಿರುವುದರಿಂದ ಕನಿಷ್ಠ 3 ರಿಂದ 7 ವರ್ಷಗಳ ಜೈಲು ಸೆರೆವಾಸ.
  • ಸೆಕ್ಷನ್ 318(3)- ವಂಚನೆಯ ಕೇಸ್ ಅಡಿಯಲ್ಲಿ ಗರಿಷ್ಠ 7 ವರ್ಷಗಳ ಶಿಕ್ಷೆ.
  •  1988 (ಪಿಸಿ ಆ್ಯಕ್ಟ್) ಸೆಕ್ಷನ್‌ 12- ಅಪರಾಧ ಮಾಡಲು ಪ್ರಚೋದನೆಯಾಗಿರುವುದರಿಂದ ಕಾನೂನಿನ ಅಡಿಯಲ್ಲಿ 3 ರಿಂದ 7 ವರ್ಷಗಳ ಜೈಲು ಪಾಲು.
Prosecution Case: ಸಿಎಂ ವಿರುದ್ಧ ಪ್ರಾಸಿಕ್ಯುಷನ್'ಗೆ ಅನುಮತಿ!
Prosecution Case: ಸಿಎಂ ವಿರುದ್ಧ ಪ್ರಾಸಿಕ್ಯುಷನ್’ಗೆ ಅನುಮತಿ!

ಇದನ್ನೂ ಓದಿ; ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗಲಿದೆ 6,000 ಸ್ಕಾಲರ್ ಶಿಪ್;  ಹೀಗೆ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?