post office scheme: ಹೂಡಿಕೆ ಮಾಡಲು ಈ ಸ್ಕೀಮ್ ಬೆಸ್ಟ್

(post office scheme) ಭವಿಷ್ಯದಲ್ಲಿ ತುರ್ತು ಸಂದರ್ಭದಲ್ಲಿ ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳಲು ಸಾಕಷ್ಟು ಜನ ಉಳಿತಾಯ ಮಾಡಲು ಬಯುಸುತ್ತಾರೆ. ಅದರಲ್ಲೂ ಹೆಚ್ಚಾಗಿ ಪೋಸ್ಟ್ ಆಫೀಸ್ ಮೂಲಕ ಹೂಡಿಕೆ ಮಾಡಿ ಹಣ ಉಳಿತಾಯ ಮಾಡಲು ಬಯಸುತ್ತಾರೆ. ಅದರಲ್ಲೂ ಮುಖ್ಯವಾಗಿ ಪೋಸ್ಟ್ ಆಫೀಸ್ ನಲ್ಲಿ ಹೆಚ್ಚಾಗಿ ಹೂಡಿಕೆ ಮಾಡಲು ಬಯಸುವ ಮಂತ್ಲಿ ಇನ್ಕಂ ಸ್ಕೀಮ್ ಆದಾಯವು ನಿಮ್ಮ ನಿಯಮಿತ ಮಾಸಿಕ ವೆಚ್ಚಗಳನ್ನು ಪೂರೈಸುತ್ತದೆ ಎಂಬ ಭರವಸೆಯನ್ನು ಈ ಯೋಜನೆ ನೀಡುತ್ತದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಸ್ವಾತಂತ್ರ‍್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ


1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ:
ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಅದು ಐದು ವರ್ಷಗಳವರೆಗೆ ಪ್ರತಿ ತಿಂಗಳು 616.67 ರೂಪಾಯಿ ಬಡ್ಡಿಯನ್ನು ನೀಡುತ್ತದೆ.


ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್‌ ಶಾಕ್‌; ಇನ್ಮುಂದೆ 1.70 ಲಕ್ಷ ಮಹಿಳೆಯರಿಗೆ ಬರಲ್ಲ ಗೃಹಲಕ್ಷ್ಮಿಯ 2000 ಹಣ!


2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ:
ಸುಮಾರು 2 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ 1,233.34 ರೂಪಾಯಿಯನ್ನು ಬಡ್ಡಿಯ ರೂಪದಲ್ಲಿ ಪ್ರತಿ ತಿಂಗಳು ನೀವು ಪಡೆಯಬಹುದು. 3 ಲಕ್ಷ ರೂಪಾಯಿ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 1,850 ರೂಪಾಯಿ ಬಡ್ಡಿಯನ್ನು ಪಡೆಯಬಹುದಾಗಿದೆ.


ಇದನ್ನೂ ಓದಿ: ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ; 1.73 ಲಕ್ಷ BPL ರೇಷನ್ ಕಾರ್ಡ್ ವಿತರಣೆ


ಐದು ಲಕ್ಷ ಹೂಡಿಕೆ ಮಾಡಿದರೆ:
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಂ ಸ್ಕೀಮ್‌ನಲ್ಲಿ ಐದು ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ನಿಮಗೆ 3083.35 ರೂಪಾಯಿ ಪಡೆಯಬಹುದು. ಈ ಸ್ಕೀಮ್ ನಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ತೆರೆಯಲಾದ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿಯವರೆಗೆ ಹೂಡಿಕೆ ಮಾಡಬಹುದು. ಇದರಿಂದ ತಿಂಗಳಿಗೆ 5,550.03 ರೂಪಾಯಿ ಬಡ್ಡಿ ಬರುತ್ತದೆ. ಇನ್ನು ಒಬ್ಬರು ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿಕೊಂಡು ಜಂಟಿಯಾಗಿ ಈ ಖಾತೆಯನ್ನು ತೆರೆದರೆ ಅದರಲ್ಲಿ ಗರಿಷ್ಠ ಹೂಡಿಕೆಯು 15 ಲಕ್ಷ ರೂಪಾಯಿಯವರೆಗೆ ಮಾಡಬಹುದಾಗಿದೆ. 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಖಾತೆದಾರರು ಪ್ರತಿ ತಿಂಗಳು 9,250.05 ರೂಪಾಯಿ ಬಡ್ಡಿಯನ್ನು ಪಡೆಯುತ್ತಾರೆ ಮತ್ತು ಪಾವತಿಯು 1ನೇ ತಿಂಗಳಿನಿಂದ 60 ನೇ ತಿಂಗಳವರೆಗೆ ಹೀಗೆಯೇ ಮುಂದುವರಿಯುತ್ತದೆ.


ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; 44,228 ಹುದ್ದೆಗಳಿಗೆ ಅರ್ಜಿ ಆಹ್ವಾನ; 10,000 ದಿಂದ 29,380 ಸಂಬಳ


5 ವರ್ಷಗಳ ಮುಂಚೆಯೇ ಹಣ ಹಿಂತೆಗೆದುಕೊಂಡರೆ ಬೀಳುತ್ತೆ ದಂಡ:
ಇನ್ನು 5 ವರ್ಷಗಳ ಅವಧಿಯ ಮೊದಲು ಹೂಡಿಕೆ ಮಾಡಿದ ಹಣವನ್ನು ಹಿಂತೆಗೆದುಕೊಳ್ಳಲು ನೀವು ಬಯಸಿದರೆ ಅದಕ್ಕೆ ದಂಡ ಕಟ್ಟಬೇಕಾಗಿ ಬರಬಹುದು. ಆದಾಗ್ಯೂ ಮೊದಲ ವರ್ಷದಲ್ಲಿ ಯಾವುದೇ ಹಿಂಪಡೆಯುವಿಕೆಯನ್ನು ಅನುಮತಿಸಲಾಗುವುದಿಲ್ಲ. 1 ರಿಂದ 3 ವರ್ಷಗಳ ನಡುವೆ ಈ ಯೋಜನೆಯ ಖಾತೆಯನ್ನು ಮುಚ್ಚಿದರೆ, ಅಸಲು ಮೊತ್ತದ ಮೇಲೆ 2 ಪ್ರತಿಶತ ದಂಡವನ್ನು ವಿಧಿಸಲಾಗುತ್ತದೆ. ಇನ್ನೂ 4 ಮತ್ತು 5ನೇ ವರ್ಷದ ನಡುವೆ ಈ ಖಾತೆಯನ್ನು ಮುಚ್ಚಿದರೆ 1 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗುತ್ತದೆ.

post office scheme: ಹೂಡಿಕೆ ಮಾಡಲು ಈ ಸ್ಕೀಮ್ ಬೆಸ್ಟ್
post office scheme: ಹೂಡಿಕೆ ಮಾಡಲು ಈ ಸ್ಕೀಮ್ ಬೆಸ್ಟ್

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 18ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ; ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಹಣ ಜಮಾ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಶೀಘ್ರವೇ ರಾಜ್ಯದಲ್ಲಿ ಟೀ ಪುಡಿ ಬ್ಯಾನ್
    3. ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ಮತ್ತೊಂದು ಹೊಸ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ
    4. ಪಿಎಂ ಕಿಸಾನ್ ಯೋಜನೆ; 6,000 ಬದಲು 8,000ಕ್ಕೆ ಹೆಚ್ಚಿಸುವ ಸಾಧ್ಯತೆ; ಯೋಜನೆಗೆ ನೋಂದಣಿ ಹೇಗೆ?, ಇಲ್ಲಿದೆ ಮಾಹಿತಿ
    5. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    6. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    7. ಈ ಗ್ರಾಮ ಪಂಚಾಯತ್ ನಲ್ಲಿ ಜಾಬ್ ಆಫರ್; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ; 15,000 ಸಂಬಳ
    8. ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ
    9. ಕರ್ನಾಟಕ ಬ್ಯಾಂಕ್ ನಲ್ಲಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
    10. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    11. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ