Wednesday, November 29, 2023
HomeಕರಾವಳಿFISH; ಮೀನುಗಾರರ ಬಲೆಗೆ ಬಿದ್ದ 350 ಕೆಜಿ ತೂಕದ ಮೀನು

FISH; ಮೀನುಗಾರರ ಬಲೆಗೆ ಬಿದ್ದ 350 ಕೆಜಿ ತೂಕದ ಮೀನು

FISH; ಮಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರರ ಬಲೆಗೆ 350 ಕೆಜಿ ತೂಕದ ಬೃಹತ್ ಮುರು ಮೀನು ಸಿಕ್ಕಿದೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಇನ್ನೂ ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಶು ವೈದ್ಯರ ಸೇವೆ

ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಎಂದು ಹೊರಟ ಬೋಟ್‌ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 350 ಕೆಜಿಯಷ್ಟು ತೂಕ ಇರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಟೆಂಪೊಗೆ ಹಾಕಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಈ ಜಾತಿಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ. ಒಂದೊಂದು ಮೀನು 250 ಗ್ರಾಂ ನಿಂದ 500 ಗ್ರಾಂ ವರೆಗೆ ಮಾರುಕಟ್ಟೆ ಗೆ ಬರುತ್ತದೆ. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು (FISH;) ಕಾಣಲು ಸಿಗುವುದು ವಿರಳ. ಸಾಮಾನ್ಯವಾಗಿ ಸಿಗುವ ಮುರು ಮೀನುಗಳು 100 ರಿಂದ 150 ಕ್ಕೆ ಮಾರಾಟವಾದರೆ ಈ ಮೀನು ಕೆಜಿಗೆ 200 ರೂ. ಬೆಲೆಗೆ ಮಾರಾಟವಾಗಿದೆ.

ಬುಧವಾರ ದೊಡ್ಡ ಪಿಲಿ ತೊರಕೆ ಸಿಕ್ಕಿತ್ತು:
ಉಳ್ಳಾಲದಲ್ಲಿ ಸೋಮೇಶ್ವರ ಉಚ್ಚಿಲ ಮೀನುಗಾರರು ಸಮುದ್ರ ತಟದ ಸಮೀಪ ಬೀಸಿದ ಬಲೆಗೆ ೭೫ ಕೆಜಿಯ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬುಧವಾರ ಸಂಜೆ ಹೊತ್ತಿಗೆ ಬಿದ್ದಿತ್ತು. ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ವೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಸಿಕ್ಕಿತ್ತು.

ಇದನ್ನೂ ಓದಿ; ಡಾ. ಬ್ರೋ ವೀಡಿಯೋ ಬ್ಯಾನ್ ಮಾಡಿದ ಯೂಟ್ಯೂಬ್

ಚಿಕ್ಕಮಗಳೂರಿನಲ್ಲಿ ಬರೋಬ್ಬರಿ 340 ಕೆಜಿ ಅಂಬೂರು ಮೀನು(FISH;):
ಕಳೆದ ತಿಂಗಳು ಆಗಸ್ಟ್.20 ರಂದು ಬರೋಬ್ಬರಿ 340 ಕೆಜಿ ತೂಕದ ಬೃಹತ್ ಮೀನನ್ನು ನೋಡಲು ಜನರು ಮುಗಿಬಿದ್ದಿದ್ದ ಘಟನೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿತ್ತು. ಇಲ್ಲಿನ ಅಂಗಡಿಯೊಂದರಲ್ಲಿ ಮತ್ತ್ವ ಜಾತಿಯಲ್ಲೇ ಅಪರೂಪದ ತಳಿಯಾದ ಅಂಬೂರು ಸಮುದ್ರ ಮೀನನ್ನು ಕಂಡು ಜನರು ಅಚ್ಚರಿಗೊಂಡಿದ್ದರು.

ಇಲ್ಲಿನ ಮತ್ರ‍್ಯ ವ್ಯಾಪಾರಿಯೊಬ್ಬರು ಮೊದಲ ಬಾರಿಗೆ 340 ಕೆಜಿ ತೂಕದ ಅಂಬೂರು ಸಮುದ್ರ ಮೀನನ್ನು ಗ್ರಾಹಕರ ಬೇಡಿಕೆ ಮೇರೆಗೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ತರಿಸಿದ್ದರು. ಇದಕ್ಕೆ ಪ್ರತಿ ಕೆಜಿ ಮೀನಿಗೆ 600 ರೂಪಾಯಿ ನಿಗದಿಪಡಿಸಿದ್ದರು. ಗ್ರಾಹಕರ ಬೇಡಿಕೆ ಹೆಚ್ಚಾದಂತೆ ಒಂದು ಕೆಜಿಗೆ ಸಾವಿರ ರೂಪಾಯಿ ಮಾಡಿದ್ದರು. ಆದರೂ ಗ್ರಾಹಕರು ಮೀನಿನ ಬೆಲೆಯನ್ನು ಲೆಕ್ಕಿಸದೇ ಖರೀದಿಸಿ ಕೊಂಡೊಯ್ದಿದ್ದರು.

ಪ್ರಮುಖ ಸುದ್ದಿಗಳನ್ನು ಓದಿ

  1. psi ನೇಮಕಾತಿ ಹಗರಣ; ಅಮೃತ್ ಪೌಲ್‌ಗೆ ಹೈಕೋರ್ಟ್‌ ನಿಂದ ಜಾಮೀನು
  2. ಗೂಗಲ್‌ಗೆ 25ರ ಸಂಭ್ರಮ; ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್ ಎಂಜಿನ್
  3. ಈ ನಾಯಕರುಗಳಿಗೆ ಶೃಂಗೇರಿ ಶ್ರೀಗಳು ಆಶೀರ್ವಾದ ನೀಡಲು ನಿರಾಕರಿಸಿದರೆ?; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ನ ಸತ್ಯಾಸತ್ಯತೆ ಏನು?
  4. ಡಾ. ಬ್ರೋ ವೀಡಿಯೋ ಬ್ಯಾನ್ ಮಾಡಿದ ಯೂಟ್ಯೂಬ್
  5. ರೈತರಿಗೆ ಗುಡ್ ನ್ಯೂಸ್; ಇನ್ನೂ ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಶು ವೈದ್ಯರ ಸೇವೆ
  6. ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಹಾಲಶ್ರೀ; ಹಾಲಶ್ರೀ ಲಾಕ್ ಗಾಗಿ ಅರ್ಚಕರ ವೇಷ; ಶೃಂಗೇರಿ ಅರ್ಚಕರ ಪೋಷಾಕಿನಲ್ಲಿ ಹೋಗಿದ್ದ ಸಿಸಿಬಿ ಟೀಂ
  7. ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ; ಏನಿದು ಪಿಎಂ ವಿಶ್ವಕರ್ಮ ಯೋಜನೆ; ಇದಕ್ಕೆ ಯಾರು ಅರ್ಹರು
  8. hsrp ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ; ಏನಿದು hsrp? ಅಳವಡಿಕೆ ಹೇಗೆ?
  9. ಕರ್ನಾಟಕದಲ್ಲಿ ಬರ ಪಟ್ಟಿ ಘೋಷಣೆ; ಯಾವೆಲ್ಲಾ ಜಿಲ್ಲೆಗಳು, ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?
  10. 2,000 ರೂ. ನೋಟ್ ಹಿಂಪಡೆದ rbi; ಆದಷ್ಟು ಬೇಗ ಬದಲಾಯಿಸಿ 2000 ನೋಟು; ಇನ್ನುಳಿದಿದೆ ಕೆಲವೇ ದಿನಗಳು
  11. ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?
  12. ಪೊಲೀಸರ ಮಿಂಚಿನ ಕಾರ್ಯಾಚರಣೆ; ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ
  13. ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚಿಸಿದ ಚೈತ್ರಾ ಗ್ಯಾಂಗ್ ನ ಮೋಸದ ರೋಚಕ ಸ್ಟೋರಿ ಸಿನಿಮಾ ಸ್ಟೋರಿಯನ್ನೂ ಮೀರಿಸುತ್ತದೆ.
  14. ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಮುಸ್ಲಿಂ ಫ್ರೆಂಡ್, ಎನ್ನುವ ಸುದ್ದಿ ನಿಜನೋ? ಸುಳ್ಳೋ?; ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ
  15. ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್; ಈ ಐಫೋನ್‌ಗೆ ಈಗ ಸಖತ್ ಡಿಸ್ಕೌಂಟ್‌..!;  ಆಫರ್‌ ತಿಳಿದ್ರೆ ವಾವ್ ಅಂತೀರಾ!?

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇

Most Popular

Recent Comments