New Govt: ನೂತನ ಸರ್ಕಾರದಿಂದ ಜನರ ನಿರೀಕ್ಷೆಗಳೇನು ?

(New Govt)

  • ಒಂದು ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿಯ ಪ್ರತಿಯೊಬ್ಬ ಜನರ ಜೀವನ ಮಟ್ಟ ಸುಧಾರಿಸಬೇಕು. ಹೊಸ ಸರ್ಕಾರಗಳು ತನ್ನ ದೇಶದ ಪ್ರಜೆಗಳಿಗೆ ಅಗತ್ಯವಿರುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಫಲವಾದರೆ ಆ ದೇಶ ಕೂಡ ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ. ನಮ್ಮ ದೇಶದ ಕೋಟ್ಯಂತರ ಜನರು ಹೊಟ್ಟೆಗೆ ಆಹಾರವಿಲ್ಲದೆ, ಇರಲು ಮನೆ ಇಲ್ಲದೆ, ಕುಡಿಯೋದಿಕ್ಕೆ ಸ್ವಚ್ಛ ನೀರಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಸರ್ಕಾರಗಳು ಶೀಘ್ರವಾಗಿ ಪರಿಹರಿಸಬೇಕು. ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರನ್ನು ಸಮಾನವಾಗಿ ಕಾಣಬೇಕು. ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವುದನ್ನು ಬಿಡಬೇಕು. ಎಲ್ಲಕ್ಕೂ ಮುಖ್ಯವಾಗಿ ಸರ್ಕಾರದ ಆಡಳಿತ ಪಾರದರ್ಶಕವಾಗಿರಬೇಕು. – ಶಮೀರ್ ಕೆ ಎಸ್, ಬ್ಯುಸಿನೆಸ್, (ಕಿಗ್ಗಾ, ಶೃಂಗೇರಿ)

  • ಸರ್ಕಾರ ಯಾವುದೇ ಇರಲಿ ಹಳ್ಳಿಗಳ ಅಭಿವೃದ್ಧಿ ಅವರ ಉದ್ದೇಶವಾಗಿರಲಿ
    * ಬಾಳೆಹೊನ್ನೂರು ಸುತ್ತಮುತ್ತಲಿನ ಹಳ್ಳಿಗಳ ರಸ್ಥೆ ತೀರಾ ಹದಗೆಟ್ಟಿದೆ. ಜೆಸಿ ವೃತ್ತ ಬಾಳೆಹೊನ್ನೂರು ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ರಸ್ತೆ ತುಂಬಾ ಕಲ್ಲು ಮರಳು. ಪೊಲೀಸ್ ಠಾಣೆ ಮುಂಭಾಗದಲ್ಲೇ ಹೀಗೆ,
    ಇನ್ನು ಸರ್ಕಾರಿ ಶಾಲೆ ಮುಂಭಾಗದ ರಸ್ತೆ ನೋಡಲಾಗದು. ಗುಂಡಿ ಬಿದ್ದು ಹದಗೆಟ್ಟಿದೆ. ಈ ಮಳೆಯಲ್ಲಿ ಆ ಮಕ್ಕಳು ಬಟ್ಟೆ ಹಾಳು ಮಾಡಿಕೊಂಡು ಶಾಲೆಗೆ ತೆರಳುವ ಪರಿಸ್ಥಿತಿ.
    ಶಾಸಕರು/ಸಂಸದರು ಯಾರಾದರೇನು ಗಮನ ಹರಿಸಿ:
    * ಇನ್ನು ಎಲ್ಲಡೆ ತಾಂಡವ ಆಡುತ್ತಿರುವ ಲಂಚವತಾರಕ್ಕೆ ಕಡಿವಾಣ ಹಾಕಿ. ಗ್ರಾಮ ಪಂಚಾಯತ್, ನಾಡಕಛೇರಿ, ಹಲವಾರು ಇಲಾಖೆಗಳು ಈ ಸ್ವತ್ತಿಗೂ ಲಂಚ, ಖಾತೆ ಬದಲಾವಣೆಗೂ ಲಂಚ ಕಡಿವಾಣ ಯಾವಾಗ?
    * ಬಾಳೆಹೊನ್ನೂರು ಬಸ್ ನಿಲ್ದಾಣ ಸರಿಪಡಿಸಿ
    * ಆಸ್ಪತ್ರೆ ಮೇಲ್ದರ್ಜೆಗೆರಿಸಿ
    * ಪಾರ್ಕಿಂಗ್ ಸಮಸ್ಯೆ, ಬಾಳೆಹೊನ್ನೂರು ಎಲ್ಲಾ ಊರುಗಳಿಗೂ ಜಂಕ್ಷನ್ ವಾಹನ ದಟ್ಟನೆ ಇದ್ದೆ ಇರುತ್ತದೆ. ಬೈಪಾಸ್ ವ್ಯವಸ್ಥೆ ಕಲ್ಪಿಸಿ.
    * BPL ಕಾರ್ಡ್ ಮಾರ್ಗಸೂಚಿ ಕಡ್ಡಾಯಗೊಳಿಸಿ. BPL ಕಾರ್ಡ್ 3 ತಿಂಗಳು ಅಕ್ಕಿ ಪಡೆಯದ ಕಾರ್ಡ್ ರದ್ದುಗೊಳಿಸಿ. ಆಹಾರ ಭದ್ರಾತಾ ಕಾಯ್ದೆ ಎಲ್ಲರೂ ಪಾಲಿಸಿ
    * ಸ್ವಚ್ಛ ಪರಿಸರದ ಪಾರ್ಕ್ ಅವಶ್ಯಕತೆ ಇದೆ. ಅದರ ನಿರ್ಮಾಣದತ್ತ ಗಮನ ಹರಿಸಿ.
    * ರಾಜ್ಯದ ಎಲ್ಲಾ ಜಿಲ್ಲೆಗಳು ಅಭಿವೃದ್ಧಿ ಹೊಂದಿವೆ. ನಮ್ಮ ಚಿಕ್ಕಮಗಳೂರು ಜಿಲ್ಲೆ ಬಿಟ್ಟು. ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಿ.
    * ಇಂದಿರಾ ಕ್ಯಾಂಟೀನ್ ನಂತಹ ಯೋಚನೆ ಪ್ರತಿ ಹೋಬಳಿಗಳಿಗೂ ವಿಸ್ತರಿಸಿ.
    * ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಿಸಿ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಕ್ರೀಡೆ, ಸಂಗೀತ, ಮನರಂಜನೆ, ಆಹಾರ, ಕಂಪ್ಯೂಟರ್ ಇಂತಹ ಯೋಜನೆಗಳಲ್ಲಿ ಗಮನ ಹರಿಸಿ.
    * ವಾರದಲ್ಲಿ ಒಂದು ದಿನ ಶಾಸಕರು /ಸಂಸದರು ಗ್ರಾಮ ವಾಸ್ತವ್ಯ ಮಾಡಬೇಕು. ಇದರಿಂದ ದೇಶದ ಪ್ರತಿ ಹಳ್ಳಿ, ಪ್ರತಿ ಗ್ರಾಮ, ಹೋಬಳಿ ಎಲ್ಲವೂ ಅಭಿವೃದ್ಧಿ ಸಾಧ್ಯ.
    ಇಂತಹ ಸಮಸ್ಯೆಗಳು ಪ್ರತಿಯೊಂದು ಕಡೆ ಇದ್ದೆ ಇದೆ. ದೇಶದ ಒಂದು ಲೋಕಸಭಾ /ವಿಧಾನಸಭಾ ಕ್ಷೇತ್ರದಲ್ಲಾದರೂ ಅಭಿವೃದ್ಧಿ ಕಾಣಲಿ ಎಂಬುದೇ ನಮ್ಮ ಆಶಯ. – ಪ್ರತಾಪ್ ಪಿರೇರಾ, ಡೆವಲಪ್ಮೆಂಟ್ ಆಫೀಸರ್, ಅಭಿವೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ, ಬಾಳೆಹೊನ್ನೂರು

  • ಮೊದಲನೆಯದು ಸಣ್ಣ ರೈತರಿಗೆ 53 57 ಅರ್ಜಿಯ ಖಾತೆ ಆಗಬೇಕು. ಸಣ್ಣ ಹಳ್ಳಿಯ ರಸ್ತೆ ಸರಿ ಮಾಡಬೇಕು. –

  • ಲೋಕಸಭಾ ಚುನಾವಣೆಯ ಫಲಿತಾಂಶ ಏನೇ ಆಗಿರಲಿ ಸೋಲು ಗೆಲುವು ಇದ್ದದ್ದೇ. ಆದರೆ ಇಂಡಿಯಾ ಮೈತ್ರಿಕೂಟ ಮಾತನಾಡುತ್ತಿರುವುದು ಕೇಳಿದರೆ ವಿಚಿತ್ರ ಎನಿಸುತ್ತದೆ. ಬಿಜೆಪಿಗೆ ಬಹುಮತವಿಲ್ಲ ರಾಜಿನಾಮೆ ಕೊಡಬೇಕು ಅಂತ ಇದಾವೆ. ಇವರೆಲ್ಲ ಸೇರಿ ಮೋದಿನ ಸೋಲಿಸಬೇಕು ಅಂತ ದ್ವೇಷದ ರಾಜಕೀಯ ಮಾಡಿದರು ಮೋದಿಗೆ ಬಾಯಿಗೆ ಬಂದ ಹಾಗೆ ಬೈದರು. ಆದರೂ ಬಿಜೆಪಿಯ ಹತ್ತಿರವೂ ಬಂದಿಲ್ಲ 234 ಮಾತ್ರ, ಬಿಜೆಪಿ ಒಂದೇ 242 ಸ್ಥಾನ ಪಡೆದರು ಅದು ದೇಶ ಅಳಬಾರದು. ಖರ್ಗೆಯವರೇ ನೀವೆಷ್ಟು ಸ್ಥಾನ ಗಳಿಸಿದ್ದೀರಾ ಮಮತಾ ಬ್ಯಾನರ್ಜಿಯವರೇ ನಿಮ್ಮ ಪಕ್ಷ ಎಷ್ಟು ಸ್ಥಾನ ಗಳಿಸಿದೆ. 292 ದೊಡ್ಡದೋ 234 ದೊಡ್ಡದೋ, ನೀವೇ ಯೋಚಿಸಿ ನೋಡಿ. ನಮಗೆ ನಮ್ಮ ದೇಶ ಕಾಪಾಡುವ
    ಸರ್ಕಾರಬೇಕು. ಫ್ರೀ ಆಸೆ ತೋರಿಸಿ ರಾಜ್ಯ ದೇಶ ಹರಾಜು ಹಾಕುವ ಸರ್ಕಾರ ಬೇಡ. ಅರವತ್ತು ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ. ಹತ್ತು ವರ್ಷಕ್ಕೆ ದೇಶ ಉದ್ದಾರವಾಗಲು ನೀವು ಅದೆಷ್ಟು ಗಬ್ಬು ಮಾಡಿದ್ದೀರಿ ಅಷ್ಟನ್ನು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ. ರಾಜಕೀಯ ಅಂದ್ರೆ ಹೊಲಸು ಒಳ್ಳೆಯವರನ್ನು ಬೂತ ಕನ್ನಡಿ ಇಟ್ಟು ಹುಡುಕಬೇಕು. ಎಲ್ಲೋ ಮೋದಿಯಂತವರು ಅಪರೂಪಕ್ಕೆ ಸಿಗುತ್ತಾರೆ. ಮುಂದೆ ಅಂತವರು ಬರುವುದು ಅನುಮಾನ. ನಿತೇಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಬೆಂಬಲಿಸಿ ವಾಜಪೇಯಿ ಸರ್ಕಾರಕ್ಕೂ ನಿಮ್ಮ ಬೆಂಬಲವಿತ್ತು. ಅಧಿಕಾರವನ್ನು ಆಗ ಸಿಕ್ಕಿತ್ತು. ಮತ್ತೊಮ್ಮೆ ನಿಮಗೆ ಸಹಾಯ ಮಾಡುವ ಅವಕಾಶ ಬಂದಿದೆ. ಇನ್ನು ಗೆದ್ದ ಎಲ್ಲ ಸಂಸದರು ಬೇರೆಯವರಿಗೆ ಕೆಟ್ಟದಾಗಿ ಮಾತನಾಡದೆ ನಿಮಗೆ ಸಿಗುವ ಅನುದಾನಗಳನ್ನು ಹೋರಾಡಿಯಾದರು ತಂದು ನಿಮ್ಮ ಕ್ಷೇತ್ರ ಅಭಿವೃದ್ಧಿಪಡಿಸಿ ಮಾದರಿ ನಾಯಕರಾಗಿರಿ. ಭ್ರಷ್ಟರು ಅಂತ ಹೆಸರು ಮಾಡಬೇಡಿ. ಆಗ ರಾಮರಾಜ್ಯ ಆಗಬಹುದು. ಕಾರ್ಯಕರ್ತರ ಉಪಯೋಗ ಪಡೆದು ಸಿಪ್ಪೆ ಎಸೆಯುವಂತೆ ಎಸೆಯಬೇಡಿ. ನಿಮ್ಮ ಗೆಲುವಿನ ಹಿಂದೆ ಅವರ ಶ್ರಮ ಇದ್ದೆ ಇರುತ್ತೆ. ಅವರಿಗೂ ಗೌರವ ಕೊಡಿ ಅವರಿಂದ ಕೆಟ್ಟ ಕೆಲಸಕ್ಕೆ ಕೈ ಹಾಕಿಸಬೇಡಿ ಆಗ ಯಾವ ಗಲಭೆ ನಡೆಯದು. – ಭಾರತಿ ಹೆಬ್ಬಾರ್, ಪತ್ರಕರ್ತೆ, ಶಾರದನಗರ್, ಶೃಂಗೇರಿ

  • ಹೊಸ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ನಮ್ಮ ಮನವಿ. ಕೊಪ್ಪ ಪಟ್ಟಣದಲ್ಲಿ ಸರ್ಕಲ್ ನಿಂದ ಬಸ್ ನಿಲ್ದಾಣದ ವರೆಗೆ ಪಾದಚಾರಿಗಳು ಓಡಾಡಲಿಕ್ಕೆ ಫುಟ್ ಪಾತ್ ಇದೆ. ಆದರೆ ಕೊಪ್ಪ ಎಮ್ ಎಸ್ ದ್ಯಾವೇಗೌಡ ಸರ್ಕಲ್ ನಿಂದ ಮೇಲಿನಪೇಟೆ ಟೋಲ್ ಗೇಟ್ (ಶೃಂಗೇರಿ-ತೀರ್ಥಹಳ್ಳಿ ರಸ್ತೆ ಕೂಡುವಲ್ಲಿ) ವರೆಗೆ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳು ಓಡಾಡಲಿಕ್ಕೆ ಫುಟ್ ಪಾತ್ ವ್ಯವಸ್ಥೆ ಇಲ್ಲ. ಚುನಾವಣಾ ಪ್ರಚಾರಕ್ಕೆ ಬಂದಾಗ ಪಕ್ಷಗಳ ಗಮನಕ್ಕೆ ತಂದಿದ್ದೇವೆ. ಸಣ್ಣ, ದೊಡ್ಡ ವಾಹನಗಳು ಬಂದಾಗ ಚರಂಡಿಯಲ್ಲಿಯೇ ನಡೆಯಬೇಕಾದ ಪರಿಸ್ಥಿತಿ ಬಂದಿದೆ. ನಾವು ರಸ್ತೆಯಿಂದ ಕೆಳಗಿಳಿದರೆ ಫುಟ್ ಪಾತ್ ಇರುವುದಿಲ್ಲ. ವಾಹನಗಳ ಓಡಾಟ ಸಿಕ್ಕಾಪಟ್ಟೆ ಹೆಚ್ಚಾಗಿದೆ. ದಿನನಿತ್ಯ ಓಡಾಡಲು ತೊಂದರೆ ಆಗಿದೆ. ಈ ವಿಷಯ ತುರ್ತು ಎಂದು ತಿಳಿದು ರಸ್ತೆ ಅಗಲ ಮಾಡುವುದರೊಂದಿಗೆ ಪಾದಚಾರಿಗಳ ಅನುಕೂಲಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಫುಟ್ ಪಾತ್ ನಿರ್ಮಿಸಲು ನಮ್ಮ ಕೋರುತ್ತೇವೆ. – ಕೆ. ಪಿ. ಪ್ರಶಾಂತ, ಅಂಬೇಡ್ಕರ್ ರಸ್ತೆ, ಮೇಲಿನಪೇಟೆ, ಕೊಪ್ಪ.

  • ವೈದ್ಯಕೀಯ ಹಾಗೂ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ವ್ಯವಸ್ಥೆ ಬಡವರಿಗೆ ಕೈಗೆ ಎಟಕುವ ದರದಲ್ಲಿ ಸಿಗುವ ಹಾಗೆ ತರಬೇಕು. ಹೋಬಳಿ/ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗಬೇಕು. – ರಾಜೇಂದ್ರ ಡಿ, ಕೆಸುವಿನಮನೆ, ಮಾಗುಂಡಿ

  • ನಾನು ಉಗ್ಗೇಹಳ್ಳಿ ಪೇಟೆಹಿತ್ತಲು ಗ್ರಾಮದ ನಿವಾಸಿ ನಮಗೆ ಸುಮಾರು ಹತ್ತು ವರ್ಷಗಳಿಂದ ಜೀವನ ನಡೆಸಲು ಒಂದು ಪುಟ್ಟ ಮನೆಯು ಸಹ ಇಲ್ಲಾ. ನಮ್ಮ ಊರಿನಲ್ಲಿ ಇರುವ ಯಾವುದೇ ವ್ಯಕ್ತಿಗಳಿಗೂ ಸರಿಯಾದ ರೀತಿಯಲ್ಲಿ ಮನೆ ಇಲ್ಲ. ಎಲ್ಲರೂ ಗುಡಿಸಿನಲ್ಲಿ ವಾಸವಿದ್ದಾರೆ. ನೀವು ನಮ್ಮ ಹೆಸರಿನಲ್ಲಿ ಬಂದ ಮನೆಗಳನ್ನು ನಮಗೆ ದೊರೆಯುವಂತೆ ಮಾಡಿಕೊಡಬೇಕು. ಎಲ್ಲಾ ಮನೆಯಲ್ಲಿಯೂ ವಿದ್ಯಾರ್ಥಿಗಳು ಇದ್ದಾರೆ ಅವರಿಗೆ ರಾತ್ರಿ ಓದಲು ವಿದ್ಯುತ್ ವ್ಯವಸ್ಥೆಯು ಸಹ ಇಲ್ಲಾ. ಜೊತೆಗೆ ನೀರಿನ ಸಮಸ್ಯೆ ಕೂಡ ಇದೆ ಇದನ್ನು ಆದಷ್ಟು ವೇಗಾ ಸರಿಪಡಿಸಿ. – ಯಶ್ವಂತ್, ವಿದ್ಯಾರ್ಥಿ.

  • ದೇಶದ ಹಿತರಕ್ಷಣೆ ವಿಚಾರಕ್ಕೆ ಬಂದಾಗ ಫಲಿತಾಂಶ ನಿರಾಶೆಯಾಗಿದೆ. – ಮಂಜುನಾಥ ಇ

  • ಹೊಸ ಸರ್ಕಾರ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದು. ನಮ್ಮ ಹೊರನಾಡು, ಎಳಕುಂಬರೀ ರಸ್ತೆ ಡಾಂಬರೀಕರಣ ಆಗಬೇಕು. ಆಟೋ ಬಾಡಿಗೆ ಕಡಿಮೆ ಆಗಬೇಕು. ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಹಳ್ಳಿಗಳಿಗೆ ಭೇಟಿ ಕೊಡು ವ್ಯವಸ್ಥೆ ಆಗಬೇಕು. ಹಳ್ಳಿಗಳಿಗೆ ಪಶು ವೈದ್ಯಕೀಯ ಸಿಬ್ಬಂದಿಗಳು ಉಚಿತ ಔಷಧಿ ನೀಡಬೇಕು. ಬಂದ ಚಾರ್ಜ್ ಅಂತ ದುಡ್ಡು ತಗೋಳಬಾರದು. – ಶಿವಕುಮಾರ್ ಭಟ್, ಎಳಕುಂಬರೀ, ಹೊರನಾಡು

  • ನೂತನ ಸರ್ಕಾರದಿಂದ ನಿರುದ್ಯೋಗ ಕಡಿಮೆಯಾಗಬೇಕು. ಬೆಲೆ ಏರಿಕೆ ಕಡಿಮೆಯಾಗಬೇಕು. ಕಸ್ತೂರಿ ರಂಗನ್ ವರದಿ ಮಲೆನಾಡು ಭಾಗದ ಜನರಿಗೆ ಕಂಟಕವಾಗಿದೆ ಅದನ್ನು ಹಿಂಪಡೆಯಬೇಕು. ಜಾತಿ ರಾಜಕಾರಣ ಮಾಡಿ ಜನ ಜನಗಳ ನಡುವೆ ಘರ್ಷಣೆ ನಡೆಯುವಂತೆ ಮಾಡಿ ರಾಜಕೀಕರಣಗೊಳಿಸಬಾರದು. ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು. ದೇವಸ್ಥಾನ ರಾಜಕಾರಣ ಮಾಡಿ ಘರ್ಷಣೆಗೊಳಿಸಿ ರಾಜಕೀಕರಣಗೊಳಿಸಬಾರದು. ದೇವಸ್ಥಾನ, ಮಸೀದಿ, ಚರ್ಚ್ ಗಳು, ರಾಜಕಾರಣವಾಗಬಾರದು. ಧಾರ್ಮಿಕ ಕ್ಷೇತ್ರಗಳು ಧಾರ್ಮಿಕ ಕ್ಷೇತ್ರಗಳಾಗಿರಬೇಕು. ರೈತ ದೇಶದ ಬೆನ್ನೆಲುಬು ಆದರೆ, ರೈತನಿಗೆ ಬೆಂಬಲ ಬೆಲೆ ಸಿಗಬೇಕು. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಿಗೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಗ್ರಾಮಗಳು ಮೊದಲು ಉದ್ಧಾರವಾದರೆ ದೇಶ ಉದ್ಧಾರವಾದಂತೆ. ಯಾವುದೇ ಸರ್ಕಾರ ಬಂದರೆ ಪಾರದರ್ಶಕ ಆಡಳಿತ ನಡೆಸಬೇಕು. ಮಲೆನಾಡು ಭಾಗದಲ್ಲಿ ಪ್ರಾಣಿ ಮತ್ತು ರೈತರ ನಡುವೆ ಘರ್ಷಣೆ ಮತ್ತು ಸಾವು ನೋವುಗಳು ಜಾಸ್ತಿ ಆಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಅವೈಜ್ಞಾನಿಕ ನೀತಿ ಕಾರಣವಾಗಿದೆ. ಇದನ್ನು ಸಡಿಲಗೊಳಿಸಿ ರೈತರಿಗೆ ಅನುಕೂಲವಾಗುವ ರೀತಿ ತಿದ್ದುಪಡಿ ತರಬೇಕು. – ರಘುಪತಿ ವಿ. ಸಿ ಗೌಡ, ಬಿದರೆ, ಖಾಂಡ್ಯ ಹೋಬಳಿ
New Govt: ನೂತನ ಸರ್ಕಾರದಿಂದ ಜನರ ನಿರೀಕ್ಷೆಗಳೇನು ?
New Govt: ನೂತನ ಸರ್ಕಾರದಿಂದ ಜನರ ನಿರೀಕ್ಷೆಗಳೇನು ?

  • ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಎಷ್ಟೋ ಜನ ಪೋಷಕರಿಗೆ ಫೀಸ್ ಕಟ್ಟಕ್ಕೆ ಆಗದೇ ಕಷ್ಟ ಪಡುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ತುಂಬಾ ಫೀಸ್ ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಹಾಗೆಯೇ ಎಷ್ಟೋ ಜನರಿಗೆ ಮನೆಗಳು ಇಲ್ಲ. ಎಷ್ಟೋ ಜನರಿಗೆ ಒಳ್ಳೆ ಶಿಕ್ಷಣ ಇದ್ದರೆ ಅದಕ್ಕೆ ಸರಿಯಾಗಿ ಉದ್ಯೋಗ ಸಂಬಳ ಸಿಗುತ್ತಿಲ್ಲ. – ನಾಗರಾಜ್ ಶೆಟ್ಟಿ, ಹಾಸನ

  • ಮಲೆನಾಡಿನ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿ ಮೀರಿದೆ, ಹಿಂದಿನ ಸಂಸದರು ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದರು. ಈಗಿನವರಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಲಿ – ಶೋಭಾ, ಕೃಷಿಕರು, ಮೂಡಿಗೆರೆ

  • ಶೃಂಗೇರಿಯಲ್ಲಿ ಒಳ್ಳೆಯ ಆಸ್ಪತ್ರೆ ಸೌಲಭ್ಯ ಇಲ್ಲ, ಮಹಿಳೆ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ಪ್ರಾರಂಭಿಸಬೇಕು ಹಾಗೇ ಕೊಪ್ಪ ಕೇಂದ್ರಿತವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ ಮಾಡಬೇಕು – ಆದರ್ಶ, ಶೃಂಗೇರಿ

  • ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಈ ಹಿಂದೆ ಬಿಜೆಪಿ ಶಾಸಕರು ಸೋತಿದ್ದರು, ಈಗಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಇದರಿಂದ ನಮ್ಮ ನಾಯಕರುಗಳ ವೈಫಲ್ಯ ಕಾಣುತ್ತಿದೆ. ಹಾಗೆಯೇ ಮುಂದೆ ಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಥಳೀಯ ನಾಯಕರ ಅರ್ಹತೆ ಅಥವಾ ವೈಫಲ್ಯ ಏನು ಎಂಬುದು ಜನರಿಗೆ ಮತ್ತು ಮೇಲಿನ ನಾಯಕರಿಗೆ ತಿಳಿಯುತ್ತದೆ – ನೂತನ್ ಗೌಡ, ಚಿಕ್ಕಮಗಳೂರು

  • ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೂ ಹೆಚ್ಚಿನ ಬಿಜೆಪಿ ಸ್ಥಳೀಯ ನಾಯಕರಿಗೂ ಸಂಬಂಧವೇ ಇಲ್ಲ, ಮೋದಿ ಅವರ ವಿಚಾರಗಳಿಗೆ ತದ್ವಿರುದ್ಧ ಎಂಬಂತೆ ಬಹುತೇಕ ಸ್ಥಳೀಯ ನಾಯಕರು ಇದ್ದಾರೆ. ಮೋದಿ ಅವರು ಅದನ್ನು ಸರಿ ಮಾಡಬೇಕು – ದಿನೇಶ್ , ಕಡೂರು

  • ಬೇರೊಬ್ಬರ ಕಾಲು ಎಳೆಯಲು ನೋಡಿದರೆ ನಾವೇ ಕೆಳಗೆ ಇರುತ್ತೇವೆ ಎಂಬುದಕ್ಕೆ ಕಾಂಗ್ರೆಸ್ ಉದಾಹರಣೆ. ಮೋದಿಯನ್ನು ಸೋಲಿಸಬೇಕು ಎಂದು ಹೋರಾಡುವ ಬದಲು ನಾವು ಗಮನಿಸಬೇಕು ಗೆಲ್ಲಬೇಕು ಎಂದು ಹೋರಾಡಿದ್ದರೆ 100 ಸೀಟ್ ಆದರೂ ದಾಟುತ್ತಿತ್ತೇನೋ. – ಸುಧೀಶ್ ಕುಮಾರ್, ವ್ಯಾಪಾರಿ, ತೀರ್ಥಹಳ್ಳಿ

  • ನಿರ್ಮಲಾ ಸೀತಾರಾಮನ್ ಅವರ ನಿಲುವುಗಳಿಂದ ಕನಿಷ್ಠ 5 ಸೀಟನ್ನು ಬಿಜೆಪಿ ಕಳೆದುಕೊಂಡಿದೆ. ಮುಂದಿನ ಬಾರಿ ಉತ್ತಮ ಆರ್ಥಿಕ ಸಚಿವರನ್ನು ನೇಮಿಸಿ – ಮೋಹನ್, ಖಾಸಗಿ ಉದ್ಯೋಗಿ, ಬೆಂಗಳೂರು