Nandini Milk: ನಂದಿನಿ ಹಾಲಿನ ಪ್ರಮಾಣ ತಗ್ಗಿಸಿಲ್ಲ

Nandini Milk: ಕೆ.ಎಂ.ಎಫ್ ನಂದಿನಿ ಹಾಲಿನ ಅರ್ಧ ಲೀಟರ್ ಪ್ಯಾಕೇಟ್‌ನಲ್ಲಿ 450 ಮಿಲೀ ಹಾಲು ನೀಡಲಾಗುತ್ತಿದೆ. ಹಾಲಿನ ದರ ಏರಿಕೆ ಜೊತೆಗೆ ಹಾಲಿನ ಪ್ರಮಾಣವನ್ನು ಕೆಎಂಎಫ್ ತಗ್ಗಿಸಿದೆ. ಅರ್ಧ ಲೀಟರ್ ಬದಲಿಗೆ 450 ಎಂಎಲ್ ಪ್ಯಾಕೇಟ್‌ನಲ್ಲಿ ಮಾರಾಟ ಮಾಡುವ ಮೂಲಕ ಕೆಎಂಎಫ್ ವಂಚಿಸುತ್ತಿದೆ ಎಂದು ಗ್ರಾಹಕರು ದೂರಿದ್ದರು.

ಇದನ್ನೂ ಓದಿ; ಮೂಡಿಗೆರೆ: ಪಟ್ಟಣದ ಅಂಗಡಿಗಳಲ್ಲಿ ಸರಣಿ ಕಳ್ಳತನ; ರಾತ್ರೋರಾತ್ರಿ ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು

ಇದಕ್ಕೆ ಸ್ಪಷ್ಟನೆ ನೀಡಿರುವ ಕೆಎಂಎಫ್ ಅಧಿಕಾರಿಗಳು, ಹಳೆಯ ಪ್ಯಾಕೇಟ್ ಗಳಲ್ಲಿ ಹಾಲು ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ 450 ಎಂ.ಎಲ್ ಎಂದು ಮುದ್ರಿತವಾಗಿರುವ ಪ್ಯಾಕೇಟ್‌ಗಳಲ್ಲೆ ಪೂರೈಸಲಾಗುತ್ತಿದೆ. ಆದರೆ ಆ ಪ್ಯಾಕೇಟ್‌ಗಳ ಮೇಲೆ ಹೆಚ್ಚುವರಿಯಾಗಿ 60 ಎಂ.ಎಲ್ ನೀಡುತ್ತಿರುವ ಕುರಿತು ಮುದ್ರಿಸಲಾಗಿದೆ. ಇದನ್ನು ಗ್ರಾಹಕರು ಗಮನಿಸುತ್ತಿಲ್ಲ. ದರ ಪರಿಷ್ಕರಣೆ ಬಳಿಕ ಸಮೃದ್ಧಿ ಹಾಲಿನ ಪ್ರಮಾಣ ಕಡಿಮೆ ಮಾಡಿಲ್ಲ. ಇದರಲ್ಲಿ ಕೊಬ್ಬಿನಾಂಶ ಜಾಸ್ತಿ ಇರುವುದರಿಂದ ಜನವರಿಯಿಂದಲೇ 50 ಎಂಎಲ್ ಕಡಿಮೆ ಮಾಡಿ, 450 ಎಂಎಲ್ ಪ್ಯಾಕೇಟ್ ಮಾರಾಟ ಮಾಡಲಾಗುತ್ತಿದೆ. ದರ ಏರಿಕೆ ಬಳಿಕ 450 ಎಂಎಲ್ ಜೊತೆಗೆ ಹೆಚ್ಚುವರಿಯಾಗಿ 60 ಎಂಎಲ್ ಸೇರಿಸಿ ಒಟ್ಟು 510 ಎಂಎಲ್ ಹಾಲಿನ ಪ್ಯಾಕೇಟ್ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   

ಸಾಕಷ್ಟು ಕಡೆ ವೈರಲ್
ಶುಕ್ರವಾರ ಬೆಳಿಗ್ಗೆಯಿಂದ ಈ ನಂದಿನ ಹಾಲಿನ 450 ಎಂಎಲ್ ಪಾಕೇಟ್ ಸಾಕಷ್ಟು ಕಡೆಗಳಲ್ಲಿ ವೈರಲ್ ಆಗುತ್ತಿದೆ. ಕೆಎಂಎಫ್‌ನ ನಡೆಯನ್ನು ಹಲವರು ಖಂಡಿಸುತ್ತಿದ್ದಾರೆ. ನಂದಿನಿ ಹಾಲಿನ ದರ ಏರಿಕೆ ಜೊತೆಗೆ ಹಾಲಿನ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-05.08.2023

Nandini Milk: ಆಗಸ್ಟ್ 1 ರಿಂದ ಹಾಲಿನ ದರ ಹೆಚ್ಚಿಸಿದ್ದ ಕೆ.ಎಂ.ಎಫ್:
ರಾಜ್ಯದ ರೈತರ ಜೀವನಾಡಿ ಹೈನೋದ್ಯಮಕ್ಕೆ ಬಲ ತುಂಬುವ ನಿಟ್ಟಿನಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರದಲ್ಲಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿದ್ದು, ಆಗಸ್ಟ್ 1 ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿತ್ತು.

ಚರ್ಮ ಗಂಟು ರೋಗ, ಹಾಲು ಉತ್ಪಾದನೆ ಕುಸಿತ, ರಾಸುಗಳ ನಿರ್ವಹಣಾ ವೆಚ್ಚ ಮತ್ತು ಪಶು ಆಹಾರದ ಬೆಲೆ ಹೆಚ್ಚಳದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಲು ಮಾರಾಟ ದರ ಹೆಚ್ಚಿಸುವಂತೆ ಕೆಎಂಎಫ್ ಹಾಗೂ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳು ಕಳೆದೊಂದು ವರ್ಷದಿಂದ ಸರಕಾರಕ್ಕೆ ಒತ್ತಾಯ ಮಾಡುತ್ತಾ ಬಂದಿದ್ದವು. ಲೀಟರ್‌ಗೆ 5 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಪಟ್ಟು ಹಿಡಿದಿತ್ತು.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1.  ಆಲ್ದೂರು: ಎಚ್ಚೆತ್ತುಕೊಳ್ಳದ ಅಧಿಕಾರಿಗಳು;ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ, ಸ್ಥಳೀಯರಿಂದಲೇ ದುರಸ್ತಿ
  2. ಕೊಟ್ಟಿಗೆಹಾರ: ಕಾಡಾನೆ ದಾಳಿಯಿಂದ ಅಪಾರ ಬೆಳೆ ಹಾನಿ, ಪರಿಹಾರಕ್ಕೆ ಒತ್ತಾಯ
  3. ಮೂಡಿಗೆರೆ: ಕೇದಾರನಾಥ ಯಾತ್ರೆ ಸಂದರ್ಭ ಮೃತಪಟ್ಟಿದ ಯುವಕ; ಗಿರೀಶ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ
  4. ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್; ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು
  5. ಎನ್.ಆರ್ ಪುರ: ಜೀವನದಲ್ಲಿ ಜಿಗುಪ್ಪೆಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
  6. ಕೊಪ್ಪದಲ್ಲಿ ಉಚಿತ ಚಲನಚಿತ್ರ ವೀಕ್ಷಣೆಗೆ ಅವಕಾಶ
  7. ಕಳಸ: 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ
  8. ಕೇರಳದಲ್ಲಿ ಅರೆಸ್ಟ್ ಆದ ಬೆಂಗಳೂರಿನ ಪೊಲೀಸರು; ನಾಲ್ವರು ಪೊಲೀಸರು ಸಸ್ಪೆಂಡ್!
  9. ಚಿಕ್ಕಮಗಳೂರು: ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಜಾರಿ
  10. ಮೂಡಿಗೆರೆ: ಪಟ್ಟಣದ ಅಂಗಡಿಗಳಲ್ಲಿ ಸರಣಿ ಕಳ್ಳತನ; ರಾತ್ರೋರಾತ್ರಿ ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು
  11. ಕಳಸ: ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು; ದೇವರಿಗೆ ಬರೆದ ಭಕ್ತನ ಪತ್ರ ವೈರಲ್‌
  12. ಚಿಕ್ಕಮಗಳೂರು: ಭೂ ಮಂಜೂರಾತಿ, ನಿಯಮ ಉಲ್ಲಂಘಿಸಿದರೆ ಜೈಲು
  13. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-05.08.2023
  14. ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ-05.08.2023

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇