Mudigere :ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಮೃತ್ಯು

Mudigere :ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಆಟವಾಡಲು ಹೋದ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿ ಜನ್ನಾಪುರದಲ್ಲಿ ಶವಿವಾರ ನಡೆದಿದೆ. ಸುನೀಲ್ ಎಂಬುವರ ಮಗ ಆಶಿರ್ ಮೃತಪಟ್ಟ ಬಾಲಕ.

ಇದನ್ನೂ ಓದಿ; ಮೂಡಿಗೆರೆ: ಪಟ್ಟಣದ ಅಂಗಡಿಗಳಲ್ಲಿ ಸರಣಿ ಕಳ್ಳತನ; ರಾತ್ರೋರಾತ್ರಿ ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು

ಸರಕಾರಿ ಕಟ್ಟಡವೊಂದರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿರ್ಮಾಣ ಮಾಡಿದ್ದ ಗುಂಡಿಯಲ್ಲಿ ನೀರು ತುಂಬಲಾಗಿತ್ತು. ಇಲ್ಲಿಗೆ ಮೂವರು ಬಾಲಕರು ಶನಿವಾರ ಆಟವಾಡಲು ತೆರಳಿದ್ದರು. ಈ ವೇಳೆ ಬಾಲಕ ಆಶಿರ್ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನ ಎಂದು ತಿಳಿದು ಬಂದಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-05.08.2023

Mudigere :ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿ:
ಜನ್ನಾಪುರದ ಚಿನ್ನಿಗ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿ ಇತ್ತೀಚಿಗಷ್ಟೇ ಗುದ್ದಲಿಪೂಜೆ ಮಾಡಿ ನೂತನವಾಗಿ ನಿರ್ಮಿಸುತ್ತಿರುವ. ಮುರಾರ್ಜಿ ವಸತಿ ಶಾಲೆ ನೂತನ ಕಟ್ಟಡಕ್ಕೆಂದು ನೀರಿಗೋಸ್ಕರ ತೋಡಿರುವ ತಾತ್ಕಾಲಿಕ ನೀರಿನ ಗುಂಡಿ ತೆಗೆದಿರುತ್ತಾರೆ. ಇದರ ಸುತ್ತಾ ಕಟ್ಟಡದ ಕಾಮಗಾರಿ ಅಧಿಕಾರಿಗಳು ಹಾಗೂ ಇಂಜಿನಿಯರ್ ನಿರ್ಲಕ್ಷತೆಯಿಂದ ಮೆಸ್ ಅಡ್ಡಗಾವಲು ಇಲ್ಲದ ಕಾರಣ ನಿನ್ನೆ ಶಾಲೆಯ ಪಕ್ಕದಲ್ಲಿ ಇರುವ ಸುನಿಲ್ ಎಂಬುವವರ ಮನೆಯ 8 ವರ್ಷದ ಮಗು ಆಟವಾಡಲು ಹೋಗಿ ಬಾವಿಯ ಸುತ್ತ ಏನು ಇಲ್ಲದ ಕಾರಣ ಕಾಲು ಜಾರಿ ನೀರಿಗೆ ಬಿದ್ದು ಕೊನೆಯುಸಿರು ಎಳೆದಿದ್ದಾನೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   

ಈ ಕಟ್ಟಡ ಕಾಮಗಾರಿ ಮಾಡುತ್ತಿರುವ ಜಾಗವನ್ನು ಕೂಡಲೇ ಮೂಡಿಗೆರೆಯ ಶಾಸಕಿ ಬೇಟಿ ನೀಡಿ ಜಾಗವನ್ನು ಪರಿಶೀಲಿಸಿ ಸಂಬಂಧ ಪಟ್ಟ ಕಟ್ಟಡ ಕಾಮಗಾರಿಯ ಅಧಿಕಾರಿಗಳು ಹಾಗೂ ಇಂಜಿನಿಯರ್ ಜೊತೆ ಚರ್ಚಿಸಿ ಕಟ್ಟಡದ ಸುತ್ತಾ ಮುತ್ತಾ ಕ್ರಮ ಜರುಗಿಸಬೇಕೆಂದು ಊರಿನ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1.  ಆಲ್ದೂರು: ಎಚ್ಚೆತ್ತುಕೊಳ್ಳದ ಅಧಿಕಾರಿಗಳು;ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ, ಸ್ಥಳೀಯರಿಂದಲೇ ದುರಸ್ತಿ
  2. ಕೊಟ್ಟಿಗೆಹಾರ: ಕಾಡಾನೆ ದಾಳಿಯಿಂದ ಅಪಾರ ಬೆಳೆ ಹಾನಿ, ಪರಿಹಾರಕ್ಕೆ ಒತ್ತಾಯ
  3. ಮೂಡಿಗೆರೆ: ಕೇದಾರನಾಥ ಯಾತ್ರೆ ಸಂದರ್ಭ ಮೃತಪಟ್ಟಿದ ಯುವಕ; ಗಿರೀಶ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ
  4. ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್; ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು
  5. ಎನ್.ಆರ್ ಪುರ: ಜೀವನದಲ್ಲಿ ಜಿಗುಪ್ಪೆಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
  6. ಕೊಪ್ಪದಲ್ಲಿ ಉಚಿತ ಚಲನಚಿತ್ರ ವೀಕ್ಷಣೆಗೆ ಅವಕಾಶ
  7. ಕಳಸ: 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ
  8. ಕೇರಳದಲ್ಲಿ ಅರೆಸ್ಟ್ ಆದ ಬೆಂಗಳೂರಿನ ಪೊಲೀಸರು; ನಾಲ್ವರು ಪೊಲೀಸರು ಸಸ್ಪೆಂಡ್!
  9. ಚಿಕ್ಕಮಗಳೂರು: ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಜಾರಿ
  10. ಮೂಡಿಗೆರೆ: ಪಟ್ಟಣದ ಅಂಗಡಿಗಳಲ್ಲಿ ಸರಣಿ ಕಳ್ಳತನ; ರಾತ್ರೋರಾತ್ರಿ ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು
  11. ಕಳಸ: ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು; ದೇವರಿಗೆ ಬರೆದ ಭಕ್ತನ ಪತ್ರ ವೈರಲ್‌
  12. ಚಿಕ್ಕಮಗಳೂರು: ಭೂ ಮಂಜೂರಾತಿ, ನಿಯಮ ಉಲ್ಲಂಘಿಸಿದರೆ ಜೈಲು
  13. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-05.08.2023
  14. ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ-05.08.2023

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇