Nail: ನಿಮ್ಮ ಉಗುರುಗಳು ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು!

Nail: ನಿಮ್ಮ ಉಗುರುಗಳೇ ಹೇಳುತ್ತವೇ ನಿಮ್ಮ ಆರೋಗ್ಯದ ಗುಟ್ಟು! ರೋಗ ಬರೋ ಮುನ್ನವೇ ಉಗುರುಗಳು (Nail) ಸೂಚನೆ ಕೊಡುತ್ತೆ.

ಉಗುರುಗಳು ಕೈಗಳ ಅಂದ ಹೆಚ್ಚಿಸುವುದು ಮಾತ್ರವಲ್ಲ, ಅವುಗಳಲ್ಲಿ ಆರೋಗ್ಯದ ಗುಟ್ಟು ಕೂಡ ಅಡಗಿದೆ. ಉಗುರುಗಳ ಬಣ್ಣ-ಆಕಾರದಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ನಿರ್ಲಕ್ಷ್ಯ ಮಾಡದಿರಿ. ಅವು ನಿಮಗೆ ಆರೋಗ್ಯ ಸಮಸ್ಯೆಗಳನ್ನು ತೋರಿಸುತ್ತವೆ. ನಿಮ್ಮಲ್ಲಿ ಯಾವುದಾದ್ರೂ ಸಮಸ್ಯೆ ಇದ್ರೆ ಉಗುರು ಬಣ್ಣ, ಆಕಾರ ಬದಲಾಗುತ್ತೆ ಎನ್ನುತ್ತಾರೆ ತಜ್ಞರು.ಸಾಕಷ್ಟು ಜನರು ಉಗುರಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಮೆನಿಕ್ಯೂರ್, ಪೆಡಿಕ್ಯೂ‌ರ್ ಎಂದುಕೊಂಡು ಉಗುರಿನ ಅಂದ, ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ನೀಡುತ್ತಾರೆ.

ಉಗುರು (Nail) ಬೆಳೆಯುವುದು ಅದರ ಬುಡದಿಂದ. ಸಾಮಾನ್ಯವಾಗಿ ವಾರಕ್ಕೆ 0.5 ಮಿ.ಮೀ. ಬೆಳೆಯುತ್ತದೆ. ಮತ್ತು ಬೇರೆ ಬೇರೆ ಬೆರಳಿನ ಉಗುರು ಬೇರೆ ಬೇರೆ ರೀತಿಯಲ್ಲಿ ಬೆಳೆಯುತ್ತದೆ. ಕೈ ಬೆರಳಿನ ಉಗುರು ಕಾಲಿಗಿಂತ ನಾಲ್ಕು ಪಟ್ಟು ವೇಗದಲ್ಲಿ ಬೆಳೆಯುತ್ತದೆ. ಅದರಲ್ಲು ನಡು ಬೆರಳಿನ ಉಗುರು ಅತ್ಯಂತ ವೇಗವಾಗಿಯೂ ಸಣ್ಣ ಉಗುರಿನ ಬೆರಳು ನಿಧಾನವಾಗಿಯೂ ಬೆಳೆಯುತ್ತದೆ. ಆದ್ದರಿಂದ ಉಗುರುಗಳ ಆರೈಕೆ ಸಹ ಮುಖ್ಯವಾಗಿರುವುದರಿಂದ ಆ ಉಗುರುಗಳು ನೀಡುವಂತಹ ಕೆಲವೊಂದು ಸೂಚನೆಗಳಿ ಇಲ್ಲಿವೆ.


ಇದನ್ನೂ ಓದಿ: ಔಷಧಿ ಪ್ಯಾಕೆಟ್ ಮೇಲೆ “ರೆಡ್ ಲೈನ್” ಏಕೆ ಇರುತ್ತೆ ಏನಿದರ ಅರ್ಥ!…


* ಉಗುರಿನ ಬದಿಯಿಂದ ಚರ್ಮ ಕಿತ್ತು ಬರುವುದು:
ಉಗುರಿನ ಬದಿಯಿಂದ ಚರ್ಮ ಕಿತ್ತು ಬರುವುದು ನಮಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇದರ ಹಿಂದೆ ಒಂದು ಉದ್ದೇಶವಿದೆ. ಇದು ಒಳಗಿರುವ ಚರ್ಮಕ್ಕೆ ತೇವಾಂಶವನ್ನು ನೀಡಿ ಕೀಟಾಣುಗಳಿಂದ ರಕ್ಷಿಸುತ್ತದೆ.

* ಉಗುರುಗಳಲ್ಲಿ ಕಾಣಿಸಿಕೊಳ್ಳುವ ಬಣ್ಣಗಳು:
ಉಗುರುಗಳು(Nails ) ಬಿಳಿ ಹಳದಿ ಅಥವಾ ಬೇರೆ ಬಣ್ಣಕ್ಕೆ ತಿರುಗುವುದು ನಿಮ್ಮ ಆರೊಗ್ಯದ ಲಕ್ಷಣವನ್ನು ಸೂಚಿಸುತ್ತದೆ. ಇದು ಗಂಭೀರ ಅನಾರೋಗ್ಯದ ಲಕ್ಷಣವಾಗಿರಬಹುದು ಅಥವಾ ಪ್ರಾಣಹಾನಿಯುಂಟು ಮಾಡುವ ರೋಗವಾಗಿರಬಹುದು. ಉಗುರಿನ ಬಣ್ಣ ಬದಲಾದರೆ ಎಚ್ಚರ ವಹಿಸಿ.

* ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಇದಾರ ಅರ್ಥ ಏನು?
ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಆಗ ನೀವು ದೀರ್ಘಕಾಲಿಕವಾಗಿ ಧೂಮಪಾನ ಮಾಡುತ್ತಲಿದ್ದೀರಿ ಇದು ಸಾಮಾನ್ಯವಾಗಿ ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಸೈನುಟಿಸ್‌ನಂತಹ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ವಯಸ್ಸಿಗೆ ಅನುಗುಣವಾಗಿಯೂ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಇದೇ ವೇಳೆ ದೀರ್ಘಕಾಲಿಕ ಉಗುರುಗಳಿಗೆ ಪಾಲಿಷ್ ಮಾಡುವಂತಹ ಹುಡುಗಿಯರಲ್ಲಿ ಕೂಡ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇದೆ.


ಇದನ್ನೂ ಓದಿ: ಸರ್ಕಾರದಿಂದ ತಾಲ್ಲೂಕು ಪಂಚಾಯತಿ ನೌಕರರಿಗೆ ಗುಡ್‌ ನ್ಯೂಸ್‌ ಏನದು? ಇಲ್ಲಿದೆ ಡಿಟೈಲ್ಸ್…


* ಅರ್ಧದಂತಿರುವ ಉಗುರುಗಳು:
ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಹೊಂದಿರುವ ಶೇ. 20-50 ರೋಗಿಗಳಲ್ಲಿ ಈ ರೋಗಲಕ್ಷಣ ಕಂಡು ಬರುತ್ತದೆ. ಕೆಲಮೊಮ್ಮೆ ಆರೋಗ್ಯವಂತ ವ್ಯಕ್ತಿಗಳಲ್ಲೂ ಇದು ಕಾಣಿಸುತ್ತದೆ.

* ಉಗುರಿನಲ್ಲಿ ಅಡ್ಡ ರೇಖೆ:
ಕೆಲವು ಜನರು ತಮ್ಮ ಉಗುರಿನ ಮೇಲೆ ಅಥವಾ ರೇಖೆಗಳ ಮೇಲೆ ಮೇಲಕ್ಕೆ ಮತ್ತು ಕೆಳಕ್ಕೆ ಅಥವಾ ಪಕ್ಕಕ್ಕೆ ಚಲಿಸುವ ಗೆರೆಗಳು ಕಾಣಿಸಿಕೊಳ್ಳುತ್ತವೆ. ಈ ರೇಖೆಗಳು ಸಾಮಾನ್ಯವಾಗಿ ನಿಮ್ಮ ಉಗುರಿಗೆ (Nails) ನೇರವಾದ ಆಘಾತ ಅಥವಾ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಉಗುರುಗಳಾಗಿದ್ದರೆ ಹೆಚ್ಚು ತೀವ್ರವಾದ ಅನಾರೋಗ್ಯದ ಪರಿಣಾಮವಾಗಿರುತ್ತದೆ.

* ಉಗುರುಗಳು ಬಿರುಕು ಬಿಡುವುದು:
ಬಯೋಟಿನ್ ಮತ್ತು ಪ್ರೋಟೀನ್ ನಂತಹ ಪೋಷಕಾಂಶಗಳ ಕೊರತೆಯಿಂದಾಗಿ ಉಗುರುಗಳು (Nail) ಬಿರುಕು ಬಿಡುವುದು ಮತ್ತು ತೆಳು ಆಗುವುದು. ಒತ್ತಡದಿಂದಾಗಿ ದೇಹದಲ್ಲಿ ಪೋಷಕಾಂಶಗಳು ಹೀರಿಕೊಳ್ಳದೆ ಇದ್ದ ಸಂದರ್ಭದಲ್ಲಿ ಇಂತಹ ಸಮಸ್ಯೆಯು ಕಂಡುಬರುತ್ತದೆ. ಇದಕ್ಕೆ ಕಬ್ಬಿನಾಂಶ, ವಿಟಮಿನ್ ಬಿ ಕಾಂಪ್ಲೆಕ್ಸ್, ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಅಧಿಕವಾಗಿ ಇರುವಂತಹ ಆಹಾರಗಳನ್ನು ಸೇವನೆ ಮಾಡಿ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಉಚಿತ ಚಿಕಿತ್ಸೆ ಯಾವ ಯೋಜನೆ? ಚಿಕಿತ್ಸಾ ವೆಚ್ಚ ಎಷ್ಟು?


* ಹ್ಯಾಂಗ್‌ನೈಲ್‌ಗಳನ್ನು ನಿರ್ಲಕ್ಷಿಸಬೇಡಿ:
ಹ್ಯಾಂಗ್‌ನೈಲ್ ಎನ್ನುವುದು ಬೆರಳಿನ ಉಗುರು ಅಥವಾ ಕಾಲ್ಕೆರಳ ಉಗುರಿನ ಪಕ್ಕದಲ್ಲಿರುವ ಒಂದು ಸಣ್ಣ ಹರಿದ ಚರ್ಮದ ತುಂಡಾಗಿದೆ. ಇವು ಸಾಮಾನ್ಯವಾಗಿ ಒಣ ಚರ್ಮದಿಂದ (ಡ್ರೈ ಸ್ಕಿನ್) ಉಂಟಾಗುತ್ತದೆ. ಪ್ರೊಟೀನ್ ಕೊರತೆ ಮತ್ತು ಫೋಲಿಕ್ ಆಮ್ಲ, ವಿಟಮಿನ್ ಬಿ, ವಿಟಮಿನ್ ಸಿ, ಮತ್ತು ಬಯೋಟಿನ್ ಸೇರಿದಂತೆ ಅಗತ್ಯ ಜೀವಸತ್ವಗಳ ಕೊರತೆಯಿಂದ ಈ ರೋಗಲಕ್ಷಣ ಕಂಡುಬರುತ್ತದೆ.

Nail: ನಿಮ್ಮ ಉಗುರುಗಳು ಹೇಳುತ್ತವೇ ನಿಮ್ಮ ಆರೋಗ್ಯದ ಗುಟ್ಟು!
Nail: ನಿಮ್ಮ ಉಗುರುಗಳು ಹೇಳುತ್ತವೇ ನಿಮ್ಮ ಆರೋಗ್ಯದ ಗುಟ್ಟು!

ಇದನ್ನೂ ಓದಿ: ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ, ಏನದು ಆದೇಶ? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ