credit score: ಜುಲೈನಿಂದ ಕ್ರೆಡಿಟ್ ಸ್ಕೋರ್’ನಲ್ಲಿ ಮಹತ್ವದ ಬದಲಾವಣೆ

(credit score:) ಮುಂಬೈ: ದೇಶದ ಬ್ಯಾಂಕ್ ಖಾತೆದಾರರು ಮತ್ತು ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಮಹತ್ವದ ಸಿಹಿ ಸುದ್ದಿ ನೀಡಿದ್ದು, ಸಾಲ ಮರುಪಾವತಿ, ಕ್ರೆಡಿಟ್ ಸ್ಕೋರ್ ಹಾಗೂ ನಾಮಿನೇಷನ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಬದಲಾವಣೆಗಳಲ್ಲಿ ಕೆಲವು ಈಗಾಗಲೇ ಜಾರಿಗೆ ಬಂದಿದ್ದು, ಇನ್ನೂ ಕೆಲವು ಜುಲೈ ತಿಂಗಳಿಂದ ಅನ್ವಯವಾಗಲಿವೆ.

ಫ್ಲೋಟಿಂಗ್ ಬಡ್ಡಿದರದಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಹಾಗೂ ವಾಹನ ಸಾಲ ಪಡೆದ ಗ್ರಾಹಕರಿಗೆ ಇದೀಗ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಜನವರಿ 1ರಿಂದ ಮಂಜೂರಾದ ಅಥವಾ ನವೀಕರಿಸಲಾದ ಸಾಲಗಳನ್ನು ಯಾವುದೇ ಹೆಚ್ಚುವರಿ ‘ಫೋರ್ಕ್ಲೋಸರ್ ಚಾರ್ಜ್’ ಇಲ್ಲದೆ ಮುಂಚಿತವಾಗಿ ತೀರಿಸಲು ಆರ್ಬಿಐ ಅವಕಾಶ ನೀಡಿದೆ. ಇದುವರೆಗೆ ಸಾಲವನ್ನು ಅವಧಿಗಿಂತ ಮುಂಚಿತವಾಗಿ ಪಾವತಿಸಿದರೆ ಬ್ಯಾಂಕುಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದವು. ಹೊಸ ನಿಯಮದಿಂದ ಗ್ರಾಹಕರು ಬಡ್ಡಿ ಹೊರೆಯನ್ನು ಕಡಿಮೆ ಮಾಡಿಕೊಂಡು ಸುಲಭವಾಗಿ ಸಾಲ ಮುಕ್ತರಾಗಬಹುದು.

ಕ್ರೆಡಿಟ್ ಸ್ಕೋರ್ ವ್ಯವಸ್ಥೆಯಲ್ಲೂ ಆರ್ಬಿಐ ಮಹತ್ವದ ಬದಲಾವಣೆ ಮಾಡಿದೆ. ಸದ್ಯ ತಿಂಗಳಿಗೊಮ್ಮೆ ಮಾತ್ರ ನವೀಕರಿಸಲಾಗುತ್ತಿದ್ದ ಕ್ರೆಡಿಟ್ ಸ್ಕೋರ್, ಜುಲೈ 1ರಿಂದ ವಾರಕ್ಕೊಮ್ಮೆ ಅಪ್ಡೇಟ್ ಆಗಲಿದೆ. ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವವರ ಕ್ರೆಡಿಟ್ ಸ್ಕೋರ್ ವೇಗವಾಗಿ ಸುಧಾರಿಸಲಿದ್ದು, ಸಾಲ ಮರುಪಾವತಿಯಲ್ಲಿ ವಿಳಂಬವಾದರೆ ಅದರ ನೆಗೆಟಿವ್ ಪರಿಣಾಮ ಕೂಡ ತಕ್ಷಣವೇ ಗೋಚರಿಸಲಿದೆ. ಈ ಕ್ರಮದಿಂದ ಗ್ರಾಹಕರಲ್ಲಿ ಆರ್ಥಿಕ ಶಿಸ್ತು ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರ ಜೊತೆಗೆ, ಬ್ಯಾಂಕ್ ಖಾತೆ, ಫಿಕ್ಸೆಡ್ ಡಿಪಾಸಿಟ್ (FD) ಹಾಗೂ ಲಾಕರ್‌ಗಳಿಗೆ ನಾಮಿನೇಷನ್ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಇನ್ನು ಮುಂದೆ ಗ್ರಾಹಕರು ಒಂದೇ ಖಾತೆಗೆ ನಾಲ್ಕು ಜನರನ್ನು ನಾಮಿನಿಗಳಾಗಿ ಸೇರಿಸಿಕೊಳ್ಳಲು ಅವಕಾಶ ಸಿಗಲಿದೆ. ಇದರಿಂದ ಖಾತೆದಾರರ ಮರಣಾನಂತರ ಹಣ ಹಾಗೂ ಆಸ್ತಿಯನ್ನು ವಾರಸುದಾರರಿಗೆ ವರ್ಗಾಯಿಸುವ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ.

ಚಿನ್ನದ ಸಾಲ ಪಡೆದ ಆಭರಣ ವ್ಯಾಪಾರಿಗಳಿಗೆ ಕೂಡ ಆರ್ಬಿಐ ಸಮಾಧಾನಕರ ನಿರ್ಧಾರ ಕೈಗೊಂಡಿದೆ. ಚಿನ್ನದ ಭದ್ರತೆಯ ಮೇಲೆ ಪಡೆಯುವ ಸಾಲದ ಮರುಪಾವತಿ ಅವಧಿಯನ್ನು 180 ದಿನಗಳಿಂದ 270 ದಿನಗಳಿಗೆ ವಿಸ್ತರಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಹಣಕಾಸು ನಿರ್ವಹಣೆಗೆ ಹೆಚ್ಚುವರಿ ಸಮಯ ಸಿಗಲಿದೆ.

credit score: ಜುಲೈನಿಂದ ಕ್ರೆಡಿಟ್ ಸ್ಕೋರ್'ನಲ್ಲಿ ಮಹತ್ವದ ಬದಲಾವಣೆ
credit score: ಜುಲೈನಿಂದ ಕ್ರೆಡಿಟ್ ಸ್ಕೋರ್’ನಲ್ಲಿ ಮಹತ್ವದ ಬದಲಾವಣೆ

ಇತ್ತೀಚಿನ ಜನಪ್ರಿಯ ಸುದ್ದಿಗಳು (credit score:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?