LPG Price: ಹೋಳಿಗೂ ಮುನ್ನ ಗ್ಯಾಸ್ ಗ್ರಾಹಕರಿಗೆ ಕೆಟ್ಟ ಸುದ್ದಿಯೊಂದಿದೆ. ಗ್ಯಾಸ್ ಸಿಲಿಂಡರ್ ಬೆಲೆಗಳು ಹೆಚ್ಚಾಗಿದೆ. ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿವೆ.. ಕಂಪನಿಗಳು ಪ್ರತಿ ತಿಂಗಳ 1 ನೇ ತಾರೀಖಿನಂದು ಹೊಸ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪ್ರಕಟಿಸುತ್ತವೆ. ಅದರ ಭಾಗವಾಗಿ, ಮಾರ್ಚ್ 1 ರಂದು ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗಿದೆ.
ಎಲ್‌ಪಿಜಿ ದರ ಭಾರೀ ಏರಿಕೆ
ತೈಲ ಮಾರುಕಟ್ಟೆ ಕಂಪನಿಗಳು ಭಾರತದಲ್ಲಿ ಎಲ್‌ಪಿಜಿ ದರಗಳಲ್ಲಿ ಭಾರೀ ಏರಿಕೆ ಮಾಡಿದ್ದು, ಈ ನಿರ್ಧಾರ ಗ್ರಾಹಕರಿಗೆ ಶಾಕ್ ನೀಡಿದೆ. ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್‌ಗಳ ಬೆಲೆ 28 ರಿಂದ 31 ರೂಪಾಯಿವರೆಗೆ ಹೆಚ್ಚಳವಾಗಿದೆ. ಗೃಹ ಬಳಕೆಯ ಎಲ್‌ಪಿಜಿ (14.2 ಕೆಜಿ) ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ: 6 ತಿಂಗಳು ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್; ಕಾರಣವೇನು ಗೊತ್ತಾ…?
ಯಾವ ನಗರದಲ್ಲಿ ದರ ಎಷ್ಟಿದೆ?
ನವದೆಹಲಿಯಲ್ಲಿ ಎಲ್‌ಪಿಜಿ ದರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 28 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 1, 202680 1768.50 ໕ ໖. ಹಿಂದಿನ ತಿಂಗಳಲ್ಲಿ 1740.50 ರೂಪಾಯಿ ಆಗಿತ್ತು.
ಕೋಲ್ಕತ್ತಾದಲ್ಲಿ ಎಲ್‌ಪಿಜಿ ದರ: 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ 31 ರೂಪಾಯಿ ಹೆಚ್ಚಳವಾಗಿದ್ದು, ಕಳೆದ ತಿಂಗಳಲ್ಲಿ 1,844.50 ರೂಪಾಯಿ ಇತ್ತು ಈಗ 1,875.50 ರೂಪಾಯಿ ಆಗಿದೆ.
ಮುಂಬೈನಲ್ಲಿ ಎಲ್‌ಪಿಜಿ ದರ: ಎಲ್‌ಪಿಜಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.ಕಳೆದ ತಿಂಗಳಲ್ಲಿ 1,692 ರೂಪಾಯಿ ಇದ್ದು, 28.50 ರೂಪಾಯಿ ಹೆಚ್ಚಾಗಿದೆ.
ಚೆನ್ನೈನಲ್ಲಿ ಎಲ್‌ಪಿಜಿ ದರ: ಚೆನ್ನೈಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 29.50 ರೂಪಾಯಿ ಹೆಚ್ಚಳ ಆಗಿದ್ದು, ಪ್ರತಿ ಸಿಲಿಂಡರ್ ಬೆಲೆ 1,929 ರೂಪಾಯಿ ಆಗಿದೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 12,000 ದಿಂದ ಸಂಬಳ
ಕಳೆದ ಮೂರು ತಿಂಗಳಲ್ಲಿ ಹೆಚ್ಚಳ
ಕಳೆದ ಮೂರು ತಿಂಗಳಿನಿಂದ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಜನವರಿಯಲ್ಲಿ 111 ರೂ., ಫೆಬ್ರವರಿಯಲ್ಲಿ 49 ರೂ. ಮತ್ತು ಮಾರ್ಚ್‌ನಲ್ಲಿ ಮತ್ತೆ ಏರಿಕೆಯಾಗಿದೆ. ಅದಕ್ಕೂ ಮೊದಲು, ಡಿಸೆಂಬರ್‌ನಲ್ಲಿ ಬೆಲೆ ಸ್ವಲ್ಪ ಕಡಿಮೆಯಾಗಿತ್ತು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (LPG Price:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





