LOAN:- ಲೋನ್‌ ಪಡೆಯುವಾಗ ಈ ಅಂಶ ಎಂದಿಗೂ ಮರೆಯದಿರಿ

(LOAN:-) ಪರ್ಸನಲ್ ಲೋನ್‌ ಪಡೆಯವವರು ಕೆಲವೊಂದಿಷ್ಟು ಮಾನದಂಡವನ್ನು ಅನುಸರಿಸಬೃಕಾಗುತ್ತದೆ. ಅದು ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಪರ್ಸನಲ್ ಲೋನ್ ​ಗಳು ಬ್ಯಾಂಕುಗಳಿಗೆ ಒಂದು ರೀತಿಯಲ್ಲಿ ಅನ್​ ಸೆಕ್ಯೂರ್ಡ್ ಲೋನ್ ಆಗಿರುತ್ತವೆ. ಗೃಹಸಾಲ, ಚಿನ್ನದ ಸಾಲವಾದರೆ ಅಡಮಾನ ಇಟ್ಟು ಸಾಲ ನೀಡಲಾಗಿರುತ್ತದೆ. ಪರ್ಸನಲ್ ಲೋನ್​ನಲ್ಲಿ ಯಾವುದೇ ಅಡಮಾನ ಪಡೆಯಲಾಗುವುದಿಲ್ಲ. ಬ್ಯಾಂಕ್ ಅಥವಾ ಬ್ಯಾಂಕ್ ಸಿಬ್ಬಂದಿಯ ವಿವೇಚನೆಯ ಆಧಾರದ ಮೇಲೆ ನೀಡುವ ಸಾಲವಾಗಿರುತ್ತದೆ. ಅಂತೆಯೇ ಪ್ರತಿಯೊಂದು ಬ್ಯಾಂಕ್ ಕೂಡ ಪರ್ಸನಲ್ ಲೋನ್ ನೀಡುವಾಗ ಕೆಲವಿಷ್ಟು ಮಾನದಂಡಗಳನ್ನು ಅನುಸರಿಸುತ್ತವೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ಹೌದು, ಲೋನ್ ಪಡೆದುಕೊಳ್ಳ ಬಯಸುವ ವ್ಯಕ್ತಿಯ ವಯಸ್ಸು, ಮಾಸಿಕ ಆದಾಯ, ಕ್ರೆಡಿಟ್ ಸ್ಕೋರ್, ವೃತ್ತಿ, ಡಿಟಿಐ ಇತ್ಯಾದಿ ಅಂಶಗಳನ್ನು ಮೂಲಭೂತವಾಗಿ ಪರಿಗಣಿಸುತ್ತವೆ. ಇವೆಲ್ಲವೂ ಸಮರ್ಪಕವಾಗಿದ್ದರೆ ಆ ವ್ಯಕ್ತಿಗೆ ಸುಲಭವಾಗಿ ಸಾಲ ನೀಡುತ್ತದೆ. ಕೆಲ ಅಂಶಗಳು ಅಸಮರ್ಪಕ ಇದ್ದರೆ ಸಾಲ ನೀಡದೇ ಹೋಗಬಹುದು. ಸಾಲ ನೀಡಿದರೂ ಹೆಚ್ಚು ಬಡ್ಡಿ ವಿಧಿಸಬಹುದು. ಈ ಅಂಶಗಳಲ್ಲಿ ಡಿಟಿಐ ಪ್ರಮುಖವಾಗಿದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಹೋಟೆಲ್‌ ಗಳಿಗೆ ಹೊಸ ನಿಯಮ ಜಾರಿ; ಏನದು? ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ


(LOAN:-) ಡಿಟಿಐ ಎಂದರೆ ಏನು?;
ಡಿಟಿಐ ಎಂದರೆ ಡೆಟ್ ಟು ಇನ್ಕಮ್ ರೇಶಿಯೋ. ಅಂದರೆ, ನಿಮ್ಮ ಆದಾಯಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ಎಷ್ಟಿದೆ ಎನ್ನುವುದು ಡಿಟಿಐ. ಸಾಲಕ್ಕೆ ಅರ್ಜಿ ಸಲ್ಲಿಸಿರುವ ಹೊತ್ತಲ್ಲಿ ನಿಮ್ಮಲ್ಲಿ ಈಗಾಗಲೇ ಎಷ್ಟು ಸಾಲ ಇದೆ ಎನ್ನುವುದನ್ನು ಬ್ಯಾಂಕುಗಳು ಪರಿಗಣಿಸುತ್ತವೆ. ಇಲ್ಲಿ ಸಾಲ ಎಂದರೆ ಕ್ರೆಡಿಟ್ ಕಾರ್ಡ್ ಇಎಂಐ ಆಗಿರಬಹುದು, ಬೇರೆ ಸಾಲಗಳ ಇಎಂಐ ಕೂಡ ಆಗಿರಬಹುದು.


ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಡಿಟಿಐ ರೇಶಿಯೋ ಆದಷ್ಟೂ ಕಡಿಮೆ ಇದ್ದರೆ ಉತ್ತಮ. ತಜ್ಞರ ಪ್ರಕಾರ ಸಾಮಾನ್ಯವಾಗಿ ಶೇ. 35ಕ್ಕಿಂತಲೂ ಕಡಿಮೆ ಡಿಟಿಐ ಅನುಪಾತ ಇದ್ದರೆ ಅವರಿಗೆ ಆದ್ಯತೆ ಸಿಗುತ್ತದೆ. ಕೆಲ ಬ್ಯಾಂಕುಗಳು ಹೆಚ್ಚು ಸಾಲ ಒದಗಿಸುವ ಒತ್ತಡದಲ್ಲಿದ್ದಾಗ ಒಂದಷ್ಟು ರಿಸ್ಕ್ ತೆಗೆದುಕೊಂಡು ಶೇ. 40ಕ್ಕಿಂತಲೂ ಹೆಚ್ಚು ಡಿಟಿಐ ಅನುಪಾತ ಇರುವ ವ್ಯಕ್ತಿಗಳಿಗೂ ಸಾಲ ನೀಡಬಹುದು.


ಇದನ್ನೂ ಓದಿ; ಬ್ಯಾಂಕ್ ಆಫ್ ಬರೋಡದಲ್ಲಿ ಜಾಬ್‌ ಆಫರ್‌; 10,000-15,000 ಸಂಬಳ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ ನೋಡಿ


ಶೇ. 40ಕ್ಕಿಂತಲೂ ಹೆಚ್ಚು ಡಿಟಿಐ ಇದ್ದರೆ ಅದು ಬಹಳ ರಿಸ್ಕಿ ಎನಿಸುತ್ತದೆ. ಪರ್ಸನಲ್ ಲೋನ್ ತೆಗೆದುಕೊಳ್ಳುವ ಮುನ್ನವೇ ನೀವು ಶೇ. 40ರಷ್ಟು ಆದಾಯವನ್ನು ಸಾಲಗಳಿಗೆ ವಿನಿಯೋಗಿಸುತ್ತಿದ್ದೀರಿ, ಎಂದರೆ ನಿಮಗೆ ಹೊಸ ಸಾಲದ ಕಂತು ಕಟ್ಟಲು ಸಾಕಷ್ಟು ಹಣ ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ, ಬ್ಯಾಂಕುಗಳು ಈ ಅಧಿಕ ಡಿಟಿಐ ರೇಶಿಯೋವನ್ನು ರಿಸ್ಕಿ ಎಂದು ಪರಿಗಣಿಸುತ್ತವೆ.

LOAN: ಲೋನ್‌ ಪಡೆಯುವಾಗ ಈ ಅಂಶ ಎಂದಿಗೂ ಮರೆಯದಿರಿ
LOAN: ಲೋನ್‌ ಪಡೆಯುವಾಗ ಈ ಅಂಶ ಎಂದಿಗೂ ಮರೆಯದಿರಿ

ಇತ್ತೀಚಿನ ಜನಪ್ರಿಯ ಸುದ್ದಿಗಳು