Jewellery: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ?

(Jewellery:) ಮಹಿಳೆಯರಿಗೆ ಶಕ್ತಿ, ಧೈರ್ಯ ಹಾಗೂ ಆತ್ಮವಿಶ್ವಾಸ ಅತ್ಯಗತ್ಯವಾಗಿದ್ದು, ಈ ಗುಣಗಳನ್ನು ವೃದ್ಧಿಸಲು ನವರತ್ನಗಳಲ್ಲಿ ಮುತ್ತು ಮತ್ತು ಹವಳ ಪ್ರಮುಖ ಪಾತ್ರ ವಹಿಸುತ್ತವೆ. ಮಹಿಳೆಯರು ಈ ರತ್ನಗಳನ್ನು ಧರಿಸಿದಾಗ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುತ್ತವೆ ಹಾಗೂ ಧೈರ್ಯ, ಚೈತನ್ಯ ಮತ್ತು ಸಕಾರಾತ್ಮಕ ಮನೋಭಾವ ಹೆಚ್ಚುತ್ತದೆ.

ಮಾಂಗಲ್ಯ ಸರದಲ್ಲಿ ಮುತ್ತು ಮತ್ತು ಹವಳ ಧರಿಸುವುದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ, ಮಾಂಗಲ್ಯವು ದುಷ್ಟಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹವಳವು ಕುಜ (ಮಂಗಳ) ಗ್ರಹದ ಪ್ರತೀಕವಾಗಿದ್ದರೆ, ಮುತ್ತು ಚಂದ್ರ ಗ್ರಹದ ಪ್ರತೀಕವಾಗಿದೆ. ಈ ರತ್ನಗಳು ಮಹಿಳೆಯರಲ್ಲಿ ತಾಳ್ಮೆ, ಪ್ರಶಾಂತತೆ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಹಿಳೆ ಮನಶಾಂತಿಯಿಂದ ಕುಟುಂಬವನ್ನು ನಿರ್ವಹಿಸಿದಾಗ, ಕುಟುಂಬದಲ್ಲೂ ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸುತ್ತದೆ.

ಹವಳ ಧರಿಸುವುದರಿಂದ ಗರ್ಭಧಾರಣೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಜೊತೆಗೆ ಕುಜದೋಷದ ಪ್ರಭಾವ ಕಡಿಮೆಯಾಗಲು ಸಹ ಇದು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿವಾಹ ಪೂರ್ವ ಹಾಗೂ ನಂತರದ ಜೀವನದ ಮೇಲೂ ಇದು ಧನಾತ್ಮಕ ಪರಿಣಾಮ ಬೀರುತ್ತದೆ.

ಮುತ್ತು ಮತ್ತು ಹವಳವನ್ನು ಮಾಂಗಲ್ಯ ಸರದ ಎಡ ಹಾಗೂ ಬಲ ಭಾಗಗಳಲ್ಲಿ ಧರಿಸುವುದರಿಂದ ಮಹಿಳೆಯರಲ್ಲಿ ಜಾಗೃತಿ, ಆರೋಗ್ಯ ಮತ್ತು ಕುಟುಂಬ ನಿರ್ವಹಣೆಯ ಸಾಮರ್ಥ್ಯ ಹೆಚ್ಚುತ್ತದೆ. ನೈಸರ್ಗಿಕ ಹೆರಿಗೆಯ ಸಾಧ್ಯತೆ ಹೆಚ್ಚುತ್ತದೆ ಎಂಬ ನಂಬಿಕೆಯೂ ಜನರಲ್ಲಿ ಇದೆ.

ಸೂರ್ಯ ಮತ್ತು ಚಂದ್ರರ ಅನುಗ್ರಹ ಈ ರತ್ನಗಳ ಮೇಲೆ ಇರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದ್ದು, ಹವಳ ಧರಿಸಿದ ಭಾಗದ ಮೇಲೆ ಸೂರ್ಯನ ಕಿರಣಗಳ ಪ್ರಭಾವವೂ ದೇಹದ ಆರೋಗ್ಯಕ್ಕೆ ಸಹಕಾರಿ ಆಗುತ್ತದೆ.

Jewellery: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ?
Jewellery: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ?

ಇತ್ತೀಚಿನ ಜನಪ್ರಿಯ ಸುದ್ದಿಗಳು (Jewellery:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?