Black color: ಈ ಮೂರು ರಾಶಿಯವರು ಕಪ್ಪು ಬಟ್ಟೆ ಧರಿಸಲೇಬೇಡಿ

(Black color:) ಬಣ್ಣಗಳು ಮಾನವ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತವೆ ಎನ್ನುವುದು ಜ್ಯೋತಿಷ್ಯಶಾಸ್ತ್ರದ ನಂಬಿಕೆ. ವಿಶೇಷವಾಗಿ ಕಪ್ಪು ಬಣ್ಣ ಎಲ್ಲರಿಗೂ ಒಂದೇ ರೀತಿಯ ಫಲ ನೀಡುವುದಿಲ್ಲ. ಕೆಲವರಿಗೆ ಇದು ಅನುಕೂಲಕರವಾಗಿದ್ದರೂ, ಇನ್ನೂ ಕೆಲವರಿಗೆ ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆ, ಅಸ್ಥಿರತೆ ಮತ್ತು ನಿರಾಸಕ್ತಿ ಹೆಚ್ಚಿಸುವ ಸಾಧ್ಯತೆ ಇದೆ.


ನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ


ಪ್ರಸ್ತುತ ಯುಗಾದಿ ಮತ್ತು ಚೈತ್ರ ಮಾಸದ ಸಂಧಿಕಾಲದಲ್ಲಿ, ಮೂರು ನಿರ್ದಿಷ್ಟ ರಾಶಿಯವರು ಕಪ್ಪು ಬಣ್ಣವನ್ನು ಅತಿಯಾಗಿ ಬಳಸುವುದು ಒಳಿತಲ್ಲ. ಈ ಅವಧಿಯಲ್ಲಿ ಬಣ್ಣಗಳ ಆಯ್ಕೆ ಜೀವನದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೇಷ ರಾಶಿ:
ಅಗ್ನಿ ತತ್ವದ ಗ್ರಹ ಕುಜ (ಮಂಗಳ) ಮೇಷ ರಾಶಿಗೆ ಅಧಿಪತಿ. ಈ ರಾಶಿಯವರು ಉತ್ಸಾಹಿ, ಶಕ್ತಿಶಾಲಿ ಮತ್ತು ಗುರಿ ಸಾಧನೆಗೆ ಹಠ ಹೊಂದಿರುವವರು. ಯುಗಾದಿಯವರೆಗೆ ಕೈಗೊಳ್ಳುವ ಕಾರ್ಯಗಳಲ್ಲಿ ಉತ್ತಮ ಫಲ ಸಿಗುವ ಸಾಧ್ಯತೆ ಇದ್ದರೂ, ಈ ಸಮಯದಲ್ಲಿ ಕಪ್ಪು ಬಟ್ಟೆಗಳನ್ನು ಧರಿಸುವುದು ಯೋಜನೆಗಳಿಗೆ ಅಡ್ಡಿಯಾಗಬಹುದು. ಬದಲಾಗಿ ಕೆಂಪು, ಕಿತ್ತಳೆ ಅಥವಾ ಗುಲಾಬಿ ಬಣ್ಣಗಳು ಶುಭಕರವೆಂದು ಹೇಳಲಾಗಿದೆ.

ಕರ್ಕಾಟಕ ರಾಶಿ:
ಚಂದ್ರನ ಅಧಿಪತ್ಯ ಹೊಂದಿರುವ ಕರ್ಕಾಟಕ ರಾಶಿ ಮನಸ್ಸಿನೊಂದಿಗೆ ನೇರ ಸಂಬಂಧ ಹೊಂದಿದೆ. ಚಂದ್ರನಿಗೆ ಸಂಬಂಧಿಸಿದ ಬಿಳಿ ಬಣ್ಣ ಮತ್ತು ಶುದ್ಧ ವಸ್ತುಗಳು ಈ ರಾಶಿಗೆ ಅನುಕೂಲಕರವಾಗಿವೆ. ಯುಗಾದಿಯವರೆಗೆ ಕಪ್ಪು ಬಟ್ಟೆಗಳ ಬಳಕೆ ಹೆಚ್ಚಾದರೆ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ, ಅಶಾಂತಿ ಮತ್ತು ಅಸ್ಥಿರತೆ ಕಾಣಿಸಿಕೊಳ್ಳಬಹುದು.


ನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ


ಕನ್ಯಾ ರಾಶಿ:
ಬುಧನ ಅಧೀನದಲ್ಲಿರುವ ಕನ್ಯಾ ರಾಶಿಯವರು ಸೂಕ್ಷ್ಮವಾಗಿ ಯೋಚಿಸುವ ಸ್ವಭಾವ ಹೊಂದಿರುತ್ತಾರೆ. ಈ ಅವಧಿಯಲ್ಲಿ ಕಪ್ಪು ಬಣ್ಣದ ಪ್ರಭಾವದಿಂದ ಮಾನಸಿಕ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವವರು ಹಾಗೂ ವ್ಯಾಪಾರಸ್ಥರು ವಿಶೇಷವಾಗಿ ಎಚ್ಚರ ವಹಿಸಬೇಕು ಎಂದು ಜ್ಯೋತಿಷ್ಯರು ತಿಳಿಸಿದ್ದಾರೆ. ಮನೆಯಲ್ಲಿ ಶಾಂತಿ ಕಮ್ಮಿಯಾಗುವುದು ಮತ್ತು ಕೆಲಸದಲ್ಲಿ ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, 12 ರಾಶಿಗಳಲ್ಲಿ ಮೇಷ, ಕರ್ಕಾಟಕ ಮತ್ತು ಕನ್ಯಾ ರಾಶಿಯವರು ಯುಗಾದಿ ಹಾಗೂ ಚೈತ್ರ ಮಾಸ ಮುಗಿಯುವವರೆಗೆ ಕಪ್ಪು ಬಣ್ಣದ ಬಟ್ಟೆಗಳನ್ನು ಕಡಿಮೆ ಬಳಸಿ, ತಮ್ಮ ರಾಶಿಗೆ ಅನುಕೂಲಕರವಾದ ಬಣ್ಣಗಳನ್ನು ಆಯ್ಕೆ ಮಾಡುವುದು ಉತ್ತಮ.

Black color: ಈ ಮೂರು ರಾಶಿಯವರು ಕಪ್ಪು ಬಟ್ಟೆ ಧರಿಸಲೇಬೇಡಿ
Black color: ಈ ಮೂರು ರಾಶಿಯವರು ಕಪ್ಪು ಬಟ್ಟೆ ಧರಿಸಲೇಬೇಡಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Black color:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ