ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾದ ವಿಮಾನ ನಿಲ್ದಾಣಕ್ಕೆ ಐಎಟಿಆರ್ ಕೋಡ್ ದೊರಕಿದೆ. ಈ ಕೋಡ್ ನೀಡಿರುವ ಬಗ್ಗೆ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆಯ ಎಐಪಿ ಮ್ಯಾಗಜಿನ್‌ನಲ್ಲಿ ಕಳೆದ ಒಂದು ವಾರದ ಹಿಂದೆ ಮಾಹಿತಿ ಪ್ರಕಟವಾಗಿದೆ. ಈ ಕೋಡ್ ದೊರೆತ 45 ದಿನಗಳ ನಂತರ ವಿಮಾನ ಹಾರಾಟಕ್ಕೆ ಚಾಲನೆ ನೀಡಬಹುದಾಗಿದೆ.
ಇದನ್ನೂ ಓದಿ; ಶುಭ ಕಾರ್ಯಕ್ಕೆ ಹೊರಟ್ಟಿದ್ದ ವೇಳೆ ಭೀಕರ ಅಪಘಾತ: ಓರ್ವ ಸಾವು
ಇದನ್ನೂ ಓದಿ; ರಸ್ತೆ ಅಪಘಾತ, ಫುಟ್ ಪಾತ್ ಮೇಲೆ ನಿಂತಿದ್ದ ಯುವಕ ಸಾವು
ಸೋಗಾನ ವಿಮಾನ ನಿಲ್ದಾಣದ ಭೌಗೋಳಿಕ ನೆಲೆ ಎಲ್ಲಿದೆ. ಅದರ ತಾಂತ್ರಿಕ ವಿವರಗಳೇನು ಎಂಬುದನ್ನು ಎಐಪಿ ತನ್ನ ಮ್ಯಾಗಜಿನ್‌ನಲ್ಲಿ ಪ್ರಕಟಿಸಿದೆ. ಎಐಟಿಆರ್ ಕೊಟ್ಟಿರುವ ಕೋಡ್ ವಿಶ್ವದಾದ್ಯಂತ ಇಲ್ಲಿಂದ ವಿಮಾನ ಹಾರಾಟಕ್ಕೆ ಬಳಕೆ ಆಗಲಿದೆ. ಇದರಿಂದ ವಿಮಾನ ಹಾರಾಟಕ್ಕೆ ಇದ್ದ ತಾಂತ್ರಿಕ ಅಡಚಣೆಯೂ ನಿವಾರಣೆ ಆಗಿದೆ. ನಾವು ಡೆಡ್‌ಲೈನ್ ಅವಧಿ (45 ದಿನಗಳು) ಪೂರ್ಣಗೊಳ್ಳುವುದನ್ನು ಕಾಯುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು. ವಿಮಾನ ಹಾರಾಟ ಆರಂಭಿಸಲು ಇಂಡಿಗೋ ಸಂಸ್ಥೆಯ ಜೊತೆ ಈಗಾಗಲೇ ಮಾತುಕತೆ ನಡೆದಿದೆ. ಅಂತಿಮ ಪ್ರಕ್ರಿಯೆಗಳು ಬಾಕಿ ಇವೆ ಎಂದು ತಿಳಿಸಿದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ
- ಪಟ್ಟಣದಲ್ಲಿ ಡಬಲ್ ಮರ್ಡರ್; ಕೊನೆಗೂ ಆರೋಪಿ ಅರೆಸ್ಟ್; ಹತ್ಯೆಗೆ ಕಾರಣವೇನು?
- ಕಾಡಾನೆ ದಾಳಿಗೊಳಗಾಗಿದ್ದ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಸಾವು
ಸೋಗಾನೆ ವಿಮಾನ ನಿಲ್ದಾಣವನ್ನು ಫೆಬ್ರುವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಆಗಿನಿಂದಲೂ ಇಲ್ಲಿಂದ ವಿಮಾನ ಕಾರ್ಯಾಚರಣೆ ಆರಂಭವಾಗುವುದನ್ನು ಮಲೆನಾಡಿನ ಜನರು ಕಾಯುತ್ತಿದ್ದಾರೆ. ಈ 3 ತಿಂಗಳ ಅವಧಿಯಲ್ಲಿ ವಿಮಾನ ನಿಲ್ದಾಣ ಸ್ಥಳೀಯರ ಬಳಕೆಗೆ ಮುಕ್ತವಾಗದಿದ್ದರೂ ವಿಧಾನಸಭೆ ಚುನಾವಣೆ ವೇಳೆ ಗಣ್ಯರ ಓಡಾಟಕ್ಕೆ ನೆರವಾಗಿತ್ತು.
ಬೆಂಗಳೂರು ಮುಂಬೈಗೆ ಮೊದಲು ಹಾರಾಟ:
ಪ್ರಾರಂಭಿಕ ಹಂತದಲ್ಲಿ ಮುಂಬೈ ಹಾಗೂ ಬೆಂಗಳೂರಿಗೆ ವಿಮಾನಗಳು ಹಾರಾಟ ನಡೆಸಲಿದ್ದು, ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ. ಗೋವಾ, ಚೆನ್ನೈಗೆ ವಿಮಾನಗಳ ಹಾರಾಟಕ್ಕೂ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಏಪೋರ್ಟ್ ನಲ್ಲಿ ಭದ್ರಾತಾ ವ್ಯವಸ್ಥೆ ಕೇಂದ್ರದಿಂದ ಅನುಮತಿ ವಿಎಐಗೆ ಹಸ್ತಾಂತರ ಸ್ಲಾಟ್ ವಿತರಣೆ ಕಾರ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಈಗ ಒಂದೂವರೆ ತಿಂಗಳಿನಿಂದ ಯಾರೂ ಇರಲಿಲ್ಲ. ಈಗ ಸರ್ಕಾರ ಬಂದಿದೆ. ಆ ಪ್ರಕ್ರಿಯೆ ಚುರುಕುಗೊಳ್ಳಲಿವೆ ಎಂದು ಮನೋಜ್ ಪ್ರಭು ಹೇಳಿದರು.
ಇದನ್ನೂ ಓದಿ; ಕಾಂಗ್ರೆಸ್ ಗೆದ್ದಿದ್ದಕ್ಕೆ ರಸ್ತೆಯಲ್ಲಿ ಪಟಾಕಿ ಸಿಡಿಸಿದ ದಲಿತ ಯುವಕನಿಗೆ ಹಲ್ಲೆ
ಗಳಿಕೆಯಲ್ಲಿ ಇತಿಹಾಸ ನಿರ್ಮಿಸಿದ ‘ದಿ ಕೇರಳ ಸ್ಟೋರಿ’
ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿರುವ ‘ದಿ ಕೇರಳ ಸ್ಟೋರಿ’ ನಿಧಾನವಾಗಿ ಸದ್ದು ಮಾಡಲು ಆರಂಭಿಸಿದೆ. ಈಗಾಗಲೇ ಕೆಲವೆಡೆ ಸಿನಿಮಾ ಪ್ರದರ್ಶನ ನಿಲ್ಲಿಸಲಾಗುತ್ತಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಇದು ಮತ್ತೊಂದು ‘ಕಾಶ್ಮೀರ್ ಫೈಲ್ಸ್’ ಆಗುವ ಸುಳಿವು ಸಿಗುತ್ತಿದೆ.
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ಸುದೀಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ರಿಲೀಸ್‌ಗೂ ಮೊದಲೇ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕೇರಳದಲ್ಲಿ ಒತ್ತಡ ಶುರುವಾಗಿತ್ತು. ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಕೋರ್ಟ್ ಅಸ್ತು ಎಂದಿತ್ತು.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಮೇ 5ರಂದು ದೇಶಾದ್ಯಂತ ಬಿಡುಗಡೆಗೊಂಡ ಈ ಚಿತ್ರ ೧೦ ದಿನಗಳಲ್ಲಿ ಮೈಲುಗಲ್ಲೊಂದನ್ನು ನೆಟ್ಟಿದೆ. ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ 135 ಕೋಟಿ ರೂ. ಗಳಿಸಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಈ ಮೂಲಕ 2023 ರಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ‘ದಿ ಕೇರಳ ಸ್ಟೋರಿ’ ಹೊರಹೊಮ್ಮಿದೆ.
ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವ್ಯವಸ್ಥಿತ ಮತಾಂತರ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಹೇಳಿರುವುದು ಕಟ್ಟು ಕತೆ, ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕೆಲವರು ಆಗ್ರಹಿಸಿದ್ದರು. ಐಪಿಎಲ್ ಭರಾಟೆ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೀತಿದೆ.
ಇದನ್ನೂ ಓದಿ; ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಇದನ್ನೂ ಓದಿ; ಮಗಳ ಮೊಬೈಲ್ ಫೋನ್ ನಿಂದಲೇ ಬಂತು 20 ಲಕ್ಷ ರೂ.ಗಳ ಬೇಡಿಕೆ
ಫಸ್ಟ್ ವೀಕೆಂಡ್ 35. 25 ಕೋಟಿ ರೂ. ಗಳಿಕೆ:
ಭಾರತದಲ್ಲಿ ಶುಕ್ರವಾರ 8.03 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಶನಿವಾರ 11.22 ಕೋಟಿ ರೂ. ಹಾಗೂ ಭಾನುವಾರ 16 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿದೆ. ಒಟ್ಟಾರೆ ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ 35. 25 ಕೋಟಿ ರೂ. ಬಾಚಿ ಗೆಲುವಿನ ಓಟ ಮುಂದುವರೆಸಿದೆ.