Indian Banking: ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಸಾಲ-ಠೇವಣಿ(ಡೆಪೊಸಿಟ್) ಅನುಪಾತವು ಡಿಸೆಂಬರ್ ಮೂರು ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇಕಡಾ 81ಕ್ಕೆ ಏರಿಕೆಯಾಗಿದೆ. ಪ್ರಮುಖ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ, ಬ್ಯಾಂಕ್ ಆಫ್ ಬರೋಡಾ ಮತ್ತು ಪಿಎನ್‌ಬಿಗಳಲ್ಲಿ ಠೇವಣಿ ಸಂಗ್ರಹಕ್ಕಿಂತ ಸಾಲದ ಬೇಡಿಕೆ ಹೆಚ್ಚಿದೆ. ಸಾಲದ ಬೆಳವಣಿಗೆ ವೇಗವಾಗಿದ್ದರೂ, ಠೇವಣಿ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ ಬ್ಯಾಂಕುಗಳ ಆರ್ಥಿಕ ಸಮತೋಲನದ ಮೇಲೆ ಒತ್ತಡ ಬೀಳುತ್ತಿದೆ. ಇದು ಬ್ಯಾಂಕಿಂಗ್ ವಲಯದಲ್ಲಿ ಆರ್ಥಿಕ ಅಸಮತೋಲನದ ಆತಂಕವನ್ನು ಹುಟ್ಟುಹಾಕಿದೆ.ಸಾಲ ನೀಡಿಕೆ ಮತ್ತು ಠೇವಣಿ ನಡುವಿನ ಈ ಅಂತರವು ಬ್ಯಾಂಕುಗಳ ಆರ್ಥಿಕ ನಿರ್ವಹಣೆಯ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ
ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ, ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್ ತ್ರೈಮಾಸಿಕದಲ್ಲಿ ಸಾಲ ನೀಡಿಕೆಯಲ್ಲಿ ಶೇ. 12ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ, ಠೇವಣಿ ಬೆಳವಣಿಗೆ ಶೇ. 11.5ಕ್ಕೆ ಸೀಮಿತವಾಗಿದೆ. ಇದೇ ಠೇವಣಿ ಸಂಗ್ರಹದಲ್ಲಿನ ಏರಿಕೆ ಜೂನ್ ತ್ರೈಮಾಸಿಕದಲ್ಲಿ ಶೇ. 16ರಷ್ಟಿತ್ತು. ಈಗ ಬ್ಯಾಂಕಿನ ಒಟ್ಟು ಸಾಲದ ಮೊತ್ತ 28.44 ಲಕ್ಷ ಕೋಟಿ ರೂ.ಗಳಾಗಿದೆ, ಠೇವಣಿ ಮೊತ್ತ 28.59 ಲಕ್ಷ ಕೋಟಿ ರೂ. ಇದರಿಂದಾಗಿ ಎಚ್‌ಡಿಎಫ್‌ಸಿಯ ಎಲ್‌ಡಿಆರ್ ಅನುಪಾತವು ಶೇ. 100ರ ಹತ್ತಿರಕ್ಕೆ ತಲುಪಿದೆ.
* ಸಾರ್ವಜನಿಕ ರಂಗದ ಬ್ಯಾಂಕ್ ಆಫ್ ಬರೋಡಾದ ಸಾಲದ ಪ್ರಮಾಣ ಶೇ. 14.57ರಷ್ಟು ಏರಿಕೆಯಾಗಿ 13.44 ಲಕ್ಷ ಕೋಟಿ ರೂ. ತಲುಪಿದ್ದರೆ, ಠೇವಣಿ ಬೆಳವಣಿಗೆ ಶೇ. 10.25ರಷ್ಟು ಮಾತ್ರ (15.47 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
* ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸಾಲದ ಬೆಳವಣಿಗೆ ಶೇ. 11ರಷ್ಟಿದ್ದು, ಠೇವಣಿ ಬೆಳವಣಿಗೆ ಕೇವಲ ಶೇ. 8.5 ರಷ್ಟಿದೆ.
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಅದೇ ಕಥೆ. ಇಲ್ಲಿ ಸಾಲದ ಬೆಳವಣಿಗೆ ಶೇ. 7.13 ರಷ್ಟಿದ್ದರೆ, ಠೇವಣಿ ಬೆಳವಣಿಗೆ ತೀರಾ ಕಡಿಮೆ ಶೇ. 3.4ರಷ್ಟಿದೆ.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
* ಖಾಸಗಿ ಬ್ಯಾಂಕುಗಳಾದ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳಲ್ಲಿ ಸಾಲ ಮತ್ತು ಠೇವಣಿ ಎರಡೂ ಉತ್ತಮ ಬೆಳವಣಿಗೆ ಕಂಡರೂ, ಸಾಲದ ಬೇಡಿಕೆಯೇ ಮೇಲುಗೈ ಸಾಧಿಸಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಬಜಾಜ್ ಫೈನಾನ್ಸ್, ಪೂನಾವಾಲಾ ಫಿನ್‌ಕಾರ್ಪ್ ಮತ್ತು ಮಹೀಂದ್ರಾ ಫೈನಾನ್ಸ್‌ಗಳು ಕೂಡ ಸಾಲದ ಮಾರುಕಟ್ಟೆಯಲ್ಲಿ ಬಲವಾದ ಬೆಳವಣಿಗೆಯನ್ನು ದಾಖಲಿಸಿವೆ. ಬಜಾಜ್ ಫೈನಾನ್ಸ್‌ನ ನಿರ್ವಹಣೆಯ ಆಸ್ತಿ ಶೇ.22ರಷ್ಟು ಏರಿಕೆಯಾಗಿದೆ.
ಒಟ್ಟಾರೆಯಾಗಿ, ಜನರು ಬ್ಯಾಂಕುಗಳಲ್ಲಿ ಹಣ ಇಡುವುದಕ್ಕಿಂತ ಸಾಲ ಪಡೆಯಲು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತಿದೆ. ಇದು ಮುಂಬರುವ ದಿನಗಳಲ್ಲಿ ಬಡ್ಡಿ ದರಗಳ ಮೇಲೆ ನೇರ ಪರಿಣಾಮ ಬೀರಬಹುದು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Indian Banking:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ





