Sunday, October 1, 2023
Homeಮಲೆನಾಡುಚಿಕ್ಕಮಗಳೂರುರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿ‌ಸಿ ಹೆಚ್ಚಿ‌ನ‌ ಬೆಲೆಗೆ ಮಾರಾಟ!; 1,100 ಚೀಲ ಯೂರಿಯಾ ಗೊಬ್ಬರ ವಶಕ್ಕೆ

ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿ‌ಸಿ ಹೆಚ್ಚಿ‌ನ‌ ಬೆಲೆಗೆ ಮಾರಾಟ!; 1,100 ಚೀಲ ಯೂರಿಯಾ ಗೊಬ್ಬರ ವಶಕ್ಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೋಳಿ ಫಾರ್ಮ್ ನಲ್ಲಿ ಮಾರಾಟ ಪರವಾನಿಗೆ ಇಲ್ಲದೆ ದಾಸ್ತಾನು ಮಾಡಿದ್ದ ವಿವಿಧ ಕಂಪನಿಗಳಿಗೆ ಸೇರಿದ 30.80 ಲಕ್ಷ ರೂ. ಮೌಲ್ಯದ 1,100 ಚೀಲ ಯೂರಿಯಾ ರಸಗೊಬ್ಬರ ಜಪ್ತಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ
ಸಖರಾಯಪಟ್ಟಣ ಹೋಬಳಿಯ ಬಾಣೂರು-ಹೊಸಳ್ಳಿ ಮಾರ್ಗದಲ್ಲಿ ನಡೆದಿದೆ.

ಇದನ್ನೂ ಓದಿ;  ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಆರೋಪಿ ಖಾದರ್ ಪಾಷಾ ಎಂಬಾತ ರೈತರಿಂದ ಆಧಾರ್ ಕಾರ್ಡ್  ಪಡೆದು ರಸಗೊಬ್ಬರವನ್ನು ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದಾನೆ. ಹೀಗೆ ದಾಸ್ತಾನು ಮಾಡಿದ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಆರೋಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹೆಚ್ಚಿನ ತನಿಖೆಗೆ ಆದೇಶಿಸಿಲಾಗಿದೆ ಎಂದು ಡಿಸಿ ರಮೇಶ್ ತಿಳಿಸಿದರು. ಎಸ್ಪಿ ಉಮಾ ಪ್ರಶಾಂತ್, ಸಖರಾಯಪಟ್ಟಣ ಪಿಎಸ್‌ಐ ನವೀನ್, ಕೃಷಿ ಇಲಾಖೆ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಚವ್ಹಾಣ್, ಕಡೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಎಸ್ ಪಾಟೀಲ್, ಕೃಷಿ ಅಧಿಕಾರಿ ಎಸ್.ಜೀವನ್ ಇದ್ದರು.

ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ “ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ”

ಜಯಪುರ/ಹರಿಹರಪುರ:  ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಮೇ 4ರ ಗುರವಾರದಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ ನಡೆಯಲಿದೆ.

ಇದನ್ನೂ ಓದಿ;  ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಬೆಳಗ್ಗೆ 9 ಕ್ಕೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಕಲ್ಪೋಕ್ತ ಪೂಜೆ, ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ ನಡೆಯಲಿದೆ. 11.30ಕ್ಕೆ ಪರಮಪೂಜ್ಯ ಜಗಧ್ಗುರುಗಳಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ, ಕರ್ನಾಟಕ ಬ್ಯಾಂಕಿನ ನಿವೃತ್ತ ಚೇರ್ಮನ್ ಮಹಬಲೇಶ್ವರ ಭಟ್, ಸಾಮಾಜಿಕ ಕಾರ್ಯಕರ್ತರಾದ ದೇವಾನಂದ್ ಹಾಗೂ ಶ್ರೀ ಮಠದ ಭಕ್ತರು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ; ಕುಂದಾಪುರಕ್ಕೆ ಹೋಗುತ್ತಿದ್ದ ಬಸ್‌ ಪಲ್ಟಿ; 15 ಮಂದಿಗೆ ಗಾಯ

ಸಂಜೆ 5ಕ್ಕೆ ಕಲ್ಯಾಣೋತ್ಸವ 7ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಬೈಂದೂರಿನ ಧಾರೇಶ್ವರ ಯಕ್ಷ ಚಾರಿಟೇಬಲ್ ಟ್ರಸ್ಟ್ ನ ಕಲಾವಿದರಿಂದ ” ರಾವಣ ಮೋಕ್ಷ” ಎಂಬ ಯಕ್ಷಗಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Most Popular

Recent Comments