Sunday, September 24, 2023
Homeಮಲೆನಾಡುಚಿಕ್ಕಮಗಳೂರುಬಾಳೆಹೊನ್ನೂರು: ಉಡಾ ಶಿಕಾರಿ; ಆರೋಪಿ ಬಂಧನ

ಬಾಳೆಹೊನ್ನೂರು: ಉಡಾ ಶಿಕಾರಿ; ಆರೋಪಿ ಬಂಧನ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮೀಸಲು ಅರಣ್ಯದಲ್ಲಿ ಉಡ ಬೇಟೆಯಾಡಿದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಹುಯಿಗೆರೆ ಗ್ರಾಮದ ಕರಗಣಿ ಬಸವನಕೋಟೆಯಲ್ಲಿ ನಡೆದಿದೆ. ಲಕ್ಷಣ ಬಂಧಿತ ಆರೋಪಿ.

ಇದನ್ನೂ ಓದಿ;  ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಈತ ಮೀಸಲು ಅರಣ್ಯದಲ್ಲಿ ಬೇಟೆಯಾಡಿ ಚೀಲದಲ್ಲಿ ಕೊಂಡೊಯ್ಯುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಉಡ, ಶಿಕಾರಿಗೆ ಬಳಸಿದ ವಿವಿಧ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕಾರ್ಯಾಚರಣೆಯಲ್ಲಿ ಎಸಿಎಫ್ ಚೇತನ್ ಮಂಗಲ್ ಗಸ್ತಿ, ಆರ್‌ಎಫ್‌ಒ ಸಂದೀಪ್, ಡಿಆರ್ ಎಫ್‌ಒ ಮಂಜುನಾಥ್, ಪರಶುರಾಮ್, ಅರಣ್ಯ ರಕ್ಷಕ ಕಾರ್ತಿಕ್, ಶಿವಶಂಕರ್, ಯೋಗಾನಂದ್, ವಾಹನ ಚಾಲಕ ರಾಜು ಇತರರಿದ್ದರು

ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ “ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ”

ಜಯಪುರ/ಹರಿಹರಪುರ:  ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಮೇ 4ರ ಗುರವಾರದಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ ನಡೆಯಲಿದೆ.

ಇದನ್ನೂ ಓದಿ;  ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಬೆಳಗ್ಗೆ 9 ಕ್ಕೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಕಲ್ಪೋಕ್ತ ಪೂಜೆ, ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ಲಕ್ಷ್ಮೀನರಸಿಂಹ ಸಹಸ್ರನಾಮ ಪಾರಾಯಣ ನಡೆಯಲಿದೆ. 11.30ಕ್ಕೆ ಪರಮಪೂಜ್ಯ ಜಗಧ್ಗುರುಗಳಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಚನ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ, ಕರ್ನಾಟಕ ಬ್ಯಾಂಕಿನ ನಿವೃತ್ತ ಚೇರ್ಮನ್ ಮಹಬಲೇಶ್ವರ ಭಟ್, ಸಾಮಾಜಿಕ ಕಾರ್ಯಕರ್ತರಾದ ದೇವಾನಂದ್ ಹಾಗೂ ಶ್ರೀ ಮಠದ ಭಕ್ತರು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ; ಕುಂದಾಪುರಕ್ಕೆ ಹೋಗುತ್ತಿದ್ದ ಬಸ್‌ ಪಲ್ಟಿ; 15 ಮಂದಿಗೆ ಗಾಯ

ಸಂಜೆ 5ಕ್ಕೆ ಕಲ್ಯಾಣೋತ್ಸವ 7ಕ್ಕೆ ರಥೋತ್ಸವ, ರಾತ್ರಿ 8ಕ್ಕೆ ಬೈಂದೂರಿನ ಧಾರೇಶ್ವರ ಯಕ್ಷ ಚಾರಿಟೇಬಲ್ ಟ್ರಸ್ಟ್ ನ ಕಲಾವಿದರಿಂದ ” ರಾವಣ ಮೋಕ್ಷ” ಎಂಬ ಯಕ್ಷಗಾನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Most Popular

Recent Comments