Monday, December 11, 2023
Homeರಾಜ್ಯಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು?- ಇಲ್ಲಿದೆ ಸಂಪೂರ್ಣ ವಿವರ

ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು?- ಇಲ್ಲಿದೆ ಸಂಪೂರ್ಣ ವಿವರ

ಮಳೆಗಾಲ ಆರಂಭವಾದಂತೆ ಸಿಡಿಲು, ಗುಡುಗಿನ ಶಬ್ದ ಸರ್ವೇ ಸಾಮಾನ್ಯ, ಮಳೆಯ ನಡುವೆ ಸಿಡಿಲು ಬಡಿದು ಹಲವಾರು ಜನ ಹಾಗೂ ಪ್ರಾಣಿಗಳು ಪ್ರತಿವರ್ಷ ಸಾವನ್ನಪ್ಪುತ್ತಲೇ ಇದ್ದಾರೆ. ಈ ಸಾವುಗಳಿಗೆ ಪ್ರಮುಖ ಕಾರಣ ಸಿಡಿಲಿನ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಹಾಗೂ ತಪ್ಪು ಅಭಿಪ್ರಾಯಗಳು.

ಇದನ್ನೂ ಓದಿ; ದೇವರು ಮನೆ ಗುಡ್ಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಕಂಡು ಪ್ರವಾಸಿಗಳು ಶಾಕ್

ಇದನ್ನೂ ಓದಿ; ಹಾಸ್ಟೆಲ್ ನಲ್ಲಿ ಬಾಲಕಿ ಅನುಮಾನಾಸ್ಪದ ಸಾವು

ಪ್ರತಿವರ್ಷ ಸಿಡಿಲಿನಿಂದ ಸಾಯುತ್ತಿರುವವರಲ್ಲಿ ಬಹುತೇಕರು ರೈತರು ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರು. ಇವರಿಗೆ ಸಿಡಿಲಿನಿಂತ ಹೇಗೆ ಪಾರಬೇಕು ಎನ್ನುವುದನ್ನು ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಸಿಡಿಲಿನ ಅಘಾತದಿಂದ ಹೇಗೆ ತಪ್ಪಿಸಿಕೊಳ್ಳಬೇಕು. ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಪ್ರಕಟಣೆಗಳನ್ನು ಕೂಡ ಹೊರಡಿಸಿತ್ತು.

ಪಕ್ಕದ ಅಡಕೆ ತೋಟದಲ್ಲಿ ಔಷಧ ಸಿಂಪಡಿಸುತ್ತಿದ್ದವರು ಚಹಾ ಕುಡಿಯ ಒಂದು ಒಂದೆಡೆ ಕುಳಿತಿದ್ದರು. ಅಷ್ಟರಲ್ಲಿ ಆಗ ತಾನೇ ಔಷಧ ಸಿಂಪಡಿಸಿದ ಅಡಕೆ ಗಿಡಕ್ಕೆ ಸಿಡಿಲು ಬಡಿದ ಬಿಟ್ಟಿತು. ನೋಡ ನೋಡುತ್ತಿದ್ದಂತೆ ಸುತ್ತಮುತ್ತಲಿನ ಐವತ್ತಕ್ಕೂ ಹೆಚ್ಚು ಅಡಕೆ ಗಿಡಗಳು ಸಿಡಿಲಿನ ರಭಸಕ್ಕೆ ಸುಟ್ಟು ಭಸ್ಮವಾದವು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಸಿಡಿಲಿಗೆ ಮನೆಯ ವಿದ್ಯುತ್ ಉಪಕರಣಗಳು ಕೆಟ್ಟು ಹೋಗುತ್ತವೆ ಅಂದುಕೊಂಡು ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಹೋದವರು ಸಿಡಿಲು ಬಡಿದು ಹೆಣವಾದರು. ವಿದ್ಯುತ್ ಕಂಬಕ್ಕೆ ಕಟ್ಟಿದ್ದ ದನ-ಕರುಗಳು, ಪಕ್ಕದಲ್ಲಿದ್ದ ಕುರಿಯ ಹಿಂಡುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿದವು. ಇಂತಹ ವರದಿಗಳನ್ನು ಮಳೆಗಾಲದ ಆರಂಭದಲ್ಲಿ ಕೇಳುತ್ತಿರುತ್ತೇವೆ. ಮಳೆಗಾಲ ಯಾರಿಗೂ ಹೊಸತಲ್ಲ. ಸಿಡಿಲಾಘಾತದ ವರದಿಗಳು ಹೊಸತಲ್ಲ. ಹಾಗಾದರೆ ಸಿಡಿಲಿನಿಂದ ಜನ-ಜಾನುವಾರುಗಳ ಪ್ರಾಣ ರಕ್ಷಣೆ ಹೇಗೆ? ಎಂಬ ಕುರಿತು ಯೋಚಿಸಲು ಇದು ಸಕಾಲ.

ಇದನ್ನೂ ಓದಿ;  ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ

ನಿರ್ಲಕ್ಷ್ಯವೇ ಪ್ರಮುಖ ಕಾರಣ:
ವಿಶ್ವದಾದ್ಯಂತ ಪ್ರತಿವರ್ಷ ಮೂವತ್ತು ಸಾವಿರ ಮಂದಿ ಸಿಡಿಲಿನಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಮಳೆಗಾಲದ ಆರಂಭದಲ್ಲಿ ಬರುವ ಸಿಡಿಲಿನಿಂದಲೇ ಹೆಚ್ಚಿನ ಪ್ರಾಣಹಾನಿಗಳಾಗಿದೆ. ಪ್ರತಿವರ್ಷ ಮಳೆಗಾಲ ಆರಂಭವಾಗುವುದೇ ಸಿಡಿಲಿನಿಂದ, ಆ ಸಂದರ್ಭದಲ್ಲಿಯೂ ಹೊಲದ ಕೆಲಸಗಳಿಗೆ ತೆರಳುವುದು. ಹೊರಗಡೆ ತಿರುಗಾಡಲು ಹೋಗುವುದು ಸಿಡಿಲಿನಿಂದ ಪ್ರಾಣ ತೆಗೆದುಕೊಂಡ ವರದಿಯಗಳೇ ಹಲವಾರು, ಸಾಕಷ್ಟು ಸಂದರ್ಭಗಳಲ್ಲಿ ಸಿಡಿಲು ಬರುವಾಗ ಏನು ಮಾಡಬೇಕೆಂದು ತೋಚದೆ ಅನತಿ ದೂರದಲ್ಲಿರುವ ಮರಗಳ ಕೆಳಗೆ ಹೊಗಿ ನಿಲ್ಲುತ್ತೇವೆ. ಮರಕ್ಕೆ ಸಿಡಿಲು ಬಡಿಯುವ ಸಂದರ್ಭಗಳು ಅಧಿಕವಾಗಿರುವ ಕಾರಣ ಯಾವುದೇ ಕಾರಣಕ್ಕೂ ಮರದ ಕೆಳಗೆ ನಿಲ್ಲಬಾರದು.

ಸಿಡಿಲು ಬಡಿಯುವುದು ಹೇಗೆ?
ಸಾಮಾನ್ಯವಾಗಿ ಸಿಡಿಲು ಎತ್ತರದ ಪ್ರದೇಶಗಳಲ್ಲಿ ಅದರಲ್ಲೂ ಲೋಹದ ವಸ್ತುಗಳು ಇರುವ ಕಡೆ ಹೆಚ್ಚಾಗಿ ಬಡಿಯುತ್ತದೆ. ಲೋಹದ ವಸ್ತುಗಳು ವಾಹಕವಾಗಿರುವ ಹಿನ್ನೆಲೆಯಲ್ಲಿ ಇದರಲ್ಲಿ ವಿದ್ಯುತ್ ಕಣಗಳು ಸರಾಗವಾಗಿ ಹರಿಯುತ್ತವೆ. ಇದರಿಂದಾಗಿ ಮೋಡದಲ್ಲಿರುವ ವಿದ್ಯುತ್ ಕಣಗಳನ್ನು ವಾಹಕಗಳಾದ ಲೋಹಗಳು ಆಕರ್ಷಿಸಿರುವುದರಿಂದ ಮರಗಳು, ಬಹುಮಹಡಿ ಕಟ್ಟಡಗಳ ಮೇಲೆ ಸಿಡಿಲು ಹೆಚ್ಚಾಗಿ ಬೀಳುತ್ತದೆ. ಮೋಡಗಳಲ್ಲಿ ವಿದ್ಯುತ್ ಕಣಗಳುವಿರುತ್ತದೆ. ಮರಗಳು ಮಳೆಯಲ್ಲಿ ತೇಯ್ದು ಹಸಿಯಾಗಿರುವುದರಿಂದ ಮತ್ತು ನೀರು ವಾಹಕವಾಗಿರುವುದರಿಂದ ಸಿಡಿಲು ಹೆಚ್ಚಾಗಿ ಮರಗಳಿಗೆ ಬಡಿಯುತ್ತದೆ.

ಇದನ್ನೂ ಓದಿ; ಯುವಕನ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಸಿಡಿಲಿನಲ್ಲಿ ವಿದ್ಯುತ್:
ಒಂದು ಆಂಪಿಯರ್ ಮನುಷ್ಯನ ದೇಹ ಪ್ರವೇಶಿಸಿದರೆ ಮನುಷ್ಯ ಸಾವನ್ನಪ್ಪುತ್ತಾನೆ. ಸಿಡಿಲಿನಲ್ಲಿ 30 ಸಾವಿರದಿಂದ 50 ಸಾವಿರ ಆಂಪಿಯರ್‌ನಷ್ಟು ವಿದ್ಯುತ್ ಪ್ರವಾಹ ಇರುತ್ತದೆ. ಇದರಿಂದಾಗಿ ಸಿಡಿಲು ಮತ್ತು ಅದರ ಪ್ರವಾಹಕ್ಕೆ ಎಂತಹ ಪ್ರಾಣಿಯೂ ಕ್ಷಣಾರ್ಧದಲ್ಲಿ ಸಾವನ್ನಪ್ಪುತ್ತದೆ. ದೇಹಕ್ಕೆ, ವಿದ್ಯುತ್ ಪ್ರವಹಿಸಿದ ಕೂಡಲೇ ಜೀವಕೋಶದ ನರಗಳು ಹಾನಿಯಾಗಿ ತಕ್ಷಣ ಹೃದಯಾಘಾತವಾಗುತ್ತದೆ. ಕೆಲವೊಮ್ಮೆ ಸಿಡಿಲಿನ ಪ್ರಮಾಣ ಕಡಿಮೆಯಿದ್ದಲ್ಲಿ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮನುಷ್ಯ ಬದುಕಿ ಉಳಿದರೂ ನರಗಳು ದುರ್ಬಲಗೊಂಡಿರುತ್ತವೆ.

ಇದನ್ನೂ ಓದಿ; ಕುಸಿದು ಬಿದ್ದು ವ್ಯಕ್ತಿ ಸಾವು; ಬ್ಯಾಟರಿ ಲೈಟ್‌ನಲ್ಲಿ ಮರಣೋತ್ತರ ಪರೀಕ್ಷೆ

ಮುಂಜಾಗರೂಕತೆ ಏನು?:
* ಬಹುಮಹಡಿ ಕಟ್ಟಡಗಳ ಮೇಲೆ ವಿದ್ಯುತ್ ಕಣಗಳು ಹೆಚ್ಚಿರುತ್ತವೆ. ಕಟ್ಟಡಗಳ ಮೇಲೆ ಮೊನಚಾದ ಲೋಹದ ವಸ್ತುಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಕಣಗಳನ್ನು ಗಾಳಿಯಲ್ಲಿ ಸೋರಿಕೆಯಾಗುವಂತೆ ಮಾಡಬೇಕು. ಇದರಿಂದಾಗಿ ಕಟ್ಟಡಗಳ ಮೇಲೆ ಸಿಡಿಲು ಬೀಳುವುದಿಲ್ಲ.
* ಸಿಡಿಲು ಬರುವ ಸಂದರ್ಭದಲ್ಲಿ ಮನೆಯೊಳಗೆ ಇರುವವರು ವಸ್ತುಗಳನ್ನು ಮುಟ್ಟುವುದನ್ನು ಮಾಡಬಾರದು. ಲೋಹದ ವಸ್ತುಗಳಿಂದ ದೂರವಿರಿ. ಕಿಟಕಿಯ ಕಬ್ಬಿಣದ ಸರಳು ಹೀಗೆ ಕಬ್ಬಿಣದ ಯಾವುದೇ ವಸ್ತುಗಳನ್ನು ಮುಟ್ಟಬೇಡಿ.
* ಮೊಬೈಲ್‌ಗಳಲ್ಲೂ ಲೋಹದ ತುಣುಕುಗಳಿವೆ. ಆದ್ದರಿಂದ ಗುಡುಗು, ಮಿಂಚು, ಬೀಳುವಾಗ ಮೊಬೈಲ್ ಅನ್ನು ಹೆಚ್ಚಾಗಿ ಬಳಸಬೇಡಿ.
* ವಿಪರೀತ ಗುಡುಗು ಇರುವಾಗ ಹೊಲದತ್ತ ಹೋಗಬೇಡಿ. ಒಂದು ವೇಳೆ ಹೊಲದಲ್ಲಿರುವಾಗ ಗುಡುಗು ಆರಂಭವಾದರೆ ಮರದ ಕೆಳಗೆ ಆಸರೆಗಾಗಿ ಹೋಗಬೇಡಿ, ಬದಲಾಗಿ ಹೊಲದಲ್ಲಿಯೇ ಕಾಲು ಮಡಚಿ ಕುಳಿತುಕೊಳ್ಳುವ ಮೂಲಕ ಸಿಡಿಲಿನಿಂದ ರಕ್ಷಣೆ ಪಡೆಯಬಹುದಾಗಿದೆ.
* ಎತ್ತರದ ಪ್ರದೇಶಗಳಿಗೆ 100% ಬಡಿಯುವ ಸಾಧ್ಯತೆ ಹೆಚ್ಚಿರುವುದರಿಂದ ಆದಷ್ಟು ತಗ್ಗು ಪ್ರದೇಶಗಳಿಗೆ ತೆರಳಿರಿ.
* ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ
* ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೂರವಿರಿ
* ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು
* ಕಂಪ್ಯೂಟರ್ ಗಳಿಂದ ದೂರ ಇರಿ

ಈ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಈ ಬಗ್ಗೆ ನೀವು ತಿಳಿದುಕೊಳ್ಳಿ ಹಾಗೂ ಇನ್ನೊಬ್ಬರಿಗೆ ಮಾಹಿತಿ ನೀಡಿ..

Most Popular

Recent Comments