ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಒಂದೋದಾಗಿ ಜಾರಿಗೆ ತರುತ್ತಿದೆ. ಐದು ಗ್ಯಾರಂಟಿಗಳ ಪೈಕಿ ಜನರನ್ನು ಮೊದಲು ತಲುಪುತ್ತಿರುವುದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ. ಇದೇ ಜೂನ್ 11ರಿಂದ ಯೋಜನೆ ಜಾರಿಯಾಗುತ್ತಿದ್ದು, ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ್ ಬಸ್ ಪ್ರಯಾಣದ ಅವಕಾಶವನ್ನು ನೀಡಲಾಗಿದೆ.
ಇದನ್ನೂ ಓದಿ; ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ
ಇದನ್ನೂ ಓದಿ; ಯುವಕನ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ
ಆದರೆ, ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೂ ಒಂದಿಷ್ಟು ಷರತ್ತುಗಳನ್ನು ರಾಜ್ಯ ಸರ್ಕಾರ ವಿಧಿಸಿದೆ. ಯೋಜನೆ ಯಾವಾಗಿನಿಂದ ಜಾರಿ? ಯೋಜನೆಯ ಫಲಾನುಭವಿಗಳಾಗುವುದು ಹೇಗೆ? ಅರ್ಜಿ ಸಲ್ಲಿಕೆ ಎಲ್ಲಿ? ಎಲ್ಲ ಬಸ್‌ಗಳಲ್ಲಿಯೂ ಉಚಿತವಾಗಿ ಪ್ರಯಾಣಿಸಬಹುದಾ? ಸೇರಿ ಅನೇಕ ಗೊಂದಲಗಳು ಮಹಿಳೆಯರಲ್ಲಿ ಸೃಷ್ಟಿಯಾಗಿವೆ. ಆ ಎಲ್ಲ ಗೊಂದಲಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಮಾಡಿದ್ದೇವೆ.
ಉಚಿತ ಬಸ್ ಪ್ರಯಾಣ ಯಾವಾಗಿನಿಂದ ಜಾರಿ?:
ರಾಜ್ಯ ಸರ್ಕಾರ ತಿಳಿಸಿರುವ ಮಾಹಿತಿಯಂತೆ ಜೂನ್ 11 ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಲಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಗೋ ಪೂಜೆ ಮಾಡಿ ವಿನೂತನ ರೀತಿಯಲ್ಲಿ ಶ್ರೀರಾಮಸೇನೆಯಿಂದ ಪ್ರತಿಭಟನೆ
- ಅಕ್ರಮವಾಗಿ ನಕಲಿ ಖಾತೆ ಸೇರ್ಪಡೆ; ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಅಮಾನತು
- ಪ್ರಭಾವಿ ಹುದ್ದೆ ಬಳಸಿಕೊಂಡು ಜೀವರಾಜ್ ನಡೆಸಿದ ನಂಜಿನ ರಾಜಕಾರಣದಿಂದಾಗಿ ಕ್ಷೇತ್ರದಲ್ಲಿ ಈ ಹಿಂದೆ ಅಭಿವೃದ್ಧಿ ಮಾಡಲಾಗಿರಲಿಲ್ಲ
ಯಾರಿಗೆ ಉಚಿತ ಬಸ್ ಪ್ರಯಾಣ?:
ಕರ್ನಾಟಕ ರಾಜ್ಯದ ಮಹಿಳಾ ಪ್ರಯಾಣಿಕರು ಸೇರಿ 6 ರಿಂದ 12 ವರ್ಷದೊಳಗಿನ ಬಾಲಕಿಯರು, ಲೈಂಗಿಕ ಅಲ್ಪಸಂಖ್ಯಾತರು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಎಲ್ಲ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದಾ?:
ಎಲ್ಲಾ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸುವಂತಿಲ್ಲ. ಕೇವಲ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿಯ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಖಾಸಗಿ ಬಸ್‌ಗಳಲ್ಲಿ, ಹೊರ ರಾಜ್ಯದ ಬಸ್‌ಗಳಲ್ಲಿ ದುಡ್ಡು ಪಾವತಿಸಿಯೇ ಮಹಿಳೆಯರು ಪ್ರಯಾಣಿಸಬೇಕು.
ಇದನ್ನೂ ಓದಿ; ಕುಸಿದು ಬಿದ್ದು ವ್ಯಕ್ತಿ ಸಾವು; ಬ್ಯಾಟರಿ ಲೈಟ್‌ನಲ್ಲಿ ಮರಣೋತ್ತರ ಪರೀಕ್ಷೆ
ಹಾಗಾದರೆ ಎಸಿ ಮತ್ತು ಸ್ಲೀಪರ್ ಬಸ್‌ಗಳಲ್ಲಿ ಫ್ರೀ ಹೋಗಬಹುದಾ?:
ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್‌ಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
ಅಂತರ್ ರಾಜ್ಯ ಬಸ್‌ಗಳಲ್ಲಿಯೂ ಉಚಿತ ಪ್ರಯಾನ ಮಾಡಬಹುದಾ?:
ಉಚಿತ ಪ್ರಯಾಣವು ರಾಜ್ಯದ ಒಳಗೆ ಮಾತ್ರ ಸಿಮೀತವಾಗಿರುತ್ತದೆ ಹೊರತು, ಕೆಲವು ಆಯ್ದ ಅಂತರ್ ರಾಜ್ಯ ಬಸ್‌ಗಳಲ್ಲಿಯೂ ಉಚಿತ ಬಸ್ ಪ್ರಯಾಣ ಇರುವುದಿಲ್ಲ.
ಇದನ್ನೂ ಓದಿ; ಚಾರ್ಮಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಓರ್ವ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ
ಉಚಿತ ಬಸ್ ಪ್ರಯಾಣಕ್ಕೆ ದೂರದ ಮಿತಿ ಏನಾದರೂ ಇದೆಯಾ?:
ಮಹಿಳಾ ಪ್ರಯಾಣಿಕರಿಗೆ ದೂರದ ಮಿತಿ ಯಾವುದೇ ಇರುವುದಿಲ್ಲ ಆದರೆ, ಈ ಪ್ರಯಾನದ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯವಾಗುತ್ತದೆ.
ಪ್ರಯಾಣಿಸುವಾಗ ಅಗತ್ಯ ದಾಖಲೆ ಇರಬೇಕಾ?:
ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್, ಚುನಾವಣಾ ಆಯೋಗ ವಿತರಿಸಿರುವ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ವಾಸಸ್ಥಳ ನಮೂದಿಸಿರುವ ಗುರುತಿನ ಚೀಟಿ, ಅಂಗವಿಕಲ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಅಥವಾ ಇವುಗಳಲ್ಲಿ ಯಾವುದಾದರೊಂದು ಗುರುತಿನ ಪತ್ರ ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇರಬೇಕು. ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ವಾಸಸ್ಥಳ ನಮೂದಾಗಿರಬೇಕು.
ಇದನ್ನೂ ಓದಿ; ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ
ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕಾ?
ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉಚಿತ ಬಸ್ ಪ್ರಯಾಣಕ್ಕೆ ನೋಂದಾಯಿಸಿಕೊಳ್ಳಬೇಕು. ಅದಾದ ಬಳಿಕ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಸರ್ಕಾರ ವಿತರಿಸಲಿದೆ.
ಅರ್ಜಿ ಸಲ್ಲಿಕೆಗೆ ಯಾವುದೇ ಹಣವನ್ನು ಮಹಿಳೆಯರು ನೀಡಬೇಕಿಲ್ಲ. ನೀವೇ ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಇನ್ನು, ಸ್ಮಾರ್ಟ್ ಕಾರ್ಡ್ ಪಡೆಯಲು ಸದ್ಯದ ಮಾಹಿತಿ ಪ್ರಕಾರ ಸರ್ಕಾರ ಯಾವುದೇ ಶುಲ್ಕವನ್ನು ವಿಧಿಸಿಲ್ಲ.
ಇದನ್ನೂ ಓದಿ; ಲಾರಿಗೆ ಡಿಕ್ಕಿ ಹೊಡೆದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು
ಸ್ಮಾರ್ಟ್ ಕಾರ್ಡ್ ಬರೋವರೆಗೂ ಉಚಿತ ಪ್ರಯಾಣ ಇಲ್ವಾ?
ಸ್ಮಾರ್ಟ್ ಕಾರ್ಡ್ ವಿತರಣೆ ತಡವಾಗುತ್ತದೆ. ಈ ಹಿನ್ನೆಲೆ ಮಹಿಳೆಯರಿಗೆ ಶೂನ್ಯ ದರದ ಟಿಕೆಟ್ ನೀಡಲು ಸೂಚಿಸಲಾಗಿದೆ. ಆದ್ದರಿಂದ ಸ್ಮಾರ್ಟ್ ಕಾರ್ಡ್ ಮಹಿಳೆಯರ ಕೈ ಸೇರೋವರೆಗೂ ಕೂಡ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಬಹುದು.
ಲಗೇಜ್‌ಗೆ ಏನಾದರೂ ಶುಲ್ಕ ಇದೆಯಾ?;
ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಎಲ್ಲರಿಗೂ ಉಚಿತ ಲಗೇಜ್ ಮಿತಿ ಇದೆ. ಅದನ್ನು ಹೊರತುಪಡಿಸಿ ಹೆಚ್ಚು ಲಗೇಜ್ ಇದ್ದರೆ ಅದರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.