HEALTH TIPS ; ನಾವು ದೃಷ್ಟಿ ತೆಗೆಯುವಾಗಲೋ ಅಥವಾ ಗಹನವಾದ ವಿಚಾರದಲ್ಲಿ ಮುಳುಗಿರುವಾಗಲೋ ಕೈಗಳ ಲಟಿಕೆಯನ್ನು ತೆಗೆಯುತ್ತೇವೆ. ಕೆಲವರಿಗೆ ಇದು ಒಂದು ರೀತಿಯ ಚಟವೇ ಆಗಿಬಿಡುತ್ತದೆ. ಕೈಗಳ ಹೊರತಾಗಿ ಬೆನ್ನು, ಕುತ್ತಿಗೆ ಮುಂತಾದ ಶರೀರದ ಭಾಗಗಳ ಲಟಿಕೆಗಳನ್ನು ಕೂಡ ತೆಗೆಯುವವರಿದ್ದಾರೆ. ಕೆಲವರು ಬೆಳಿಗ್ಗೆ ಎದ್ದೊಡನೆ ಲಟಿಕೆ ತೆಗೆಯುತ್ತಾರೆ. ಕಂಪ್ಯೂಟರ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವ ಜನರಿಗೆ ಕೈ, ಕತ್ತಿನ ನೋವು ಕಾಣಿಸಿಕೊಳ್ಳೋದು ಸಾಮಾನ್ಯ. ಅದ್ರಿಂದ ಹೊರಗೆ ಬರಲು ಅವರು ಬ್ರೇಕ್ ಸಿಕ್ಕಾಗೆಲ್ಲ ಲಟಿಕೆ ಮೊರೆ ಹೋಗ್ತಾರೆ. ಇದು ಹಿತವಾದ ಅನುಭವ ನೀಡುತ್ತದೆ.
ಇದನ್ನೂ ಓದಿ; ಶೃಂಗೇರಿಯಿಂದ ಹೊರ ಹೊಮ್ಮುವ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಲಟಿಕೆ ತೆಗೆಯುತ್ತಾರೆ. ಹಾಗಾಗಿ ಲಟಿಕೆ ತೆಗೆಯುವ ಶೈಲಿ ಕೂಡ ಭಿನ್ನವಾಗಿಯೇ ಇರುತ್ತದೆ. ಅನೇಕರು ಲಟಿಕೆ ತೆಗೆಯುವುದನ್ನು ಅಪಶಕುನ ಎಂದೂ ಹೇಳುವುದುಂಟು. ನಾವು ನಮ್ಮ ಅಭ್ಯಾಸಬಲದಿಂದಲೋ ಅಥವಾ ಹಿತಕ್ಕಾಗಿಯೋ ತೆಗೆಯುವ ಇಂತಹ ಲಟಿಕೆ ಬಹಳ ಅಪಾಯಕಾರಿ ಎಂದು ವೈದ್ಯಲೋಕ ಹೇಳುತ್ತೆ. ಇದರಿಂದ ನಮ್ಮ ಶರೀರದ ಮೇಲೆ ಅನೇಕ ರೀತಿಯ ಪ್ರತಿಕೂಲ ಪರಿಣಾಮ ಬೀರುತ್ತದೆ. ಕುತ್ತಿಗೆ ಮತ್ತು ಬೆನ್ನಿನ ಲಟಿಕೆಗಳನ್ನು ತೆಗೆಯುವುದರಿಂದ ಕೀಲುಗಳು ಸಡಿಲಗೊಳ್ಳುತ್ತವೆ. ಇದನ್ನು ಹೈಪರ್ ಮೊಬಿಲಿಟಿ ಎನ್ನಲಾಗುತ್ತದೆ. ಇದರಿಂದ ನಿಮ್ಮ ಕೀಲುಗಳು ದುರ್ಬಲಗೊಳ್ಳುತ್ತದೆ.
ಇದನ್ನೂ ಓದಿ; ಶೃಂಗೇರಿ: ಇಂದಿನಿಂದ ಸಿರಿಮನೆ ಜಲಪಾತ ವೀಕ್ಷಣೆಗೆ ಮುಕ್ತ
HEALTH TIPS ; ಬೆರಳಿನ ಲಟಿಕೆ ತೆಗೆಯುವುದರಿಂದ ಏನಾಗುತ್ತೆ?:
ಕೀಲುಗಳ ನಡುವಲ್ಲಿ ಸೈನೋವೈಲ್ ಫ್ಲೂಡ್ ಎಂಬ ಲಿಕ್ವಿಡ್ ಇರುತ್ತದೆ. ಈ ಲಿಕ್ವಿಡ್ ಮೂಳೆಗಳು ಘರ್ಷಣೆ ಆಗದಂತೆ ನೋಡಿಕೊಳ್ಳುತ್ತವೆ. ಇದರ ನಡುವೆ ಸಂಗ್ರಹವಾಗು ಕಾರ್ಬನ್ ಡೈ ಆಕ್ಸೈಡ್ ನಾವು ಲಟಿಕೆ ತೆಗೆದಾಗ ಒಡೆದು ಸಪ್ಪಳವಾಗುತ್ತೆ. ನಾವು ಪದೇ ಪದೇ ಲಟಿಕೆ ತೆಗೆದಾಗ ಸೈನೋವೈಲ್ ಫ್ಲೂಡ್ ಖಾಲಿಯಾಗುತ್ತೆ. ಇದು ಶರೀರದಲ್ಲಿ ಕಡಿಮೆಯಾದಾಗಲೇ ಮೂಳೆಗಳ ನೋವು ಆರಂಭವಾಗುತ್ತೆ. ಸೈನೋವೋಲ್ ಲಿಕ್ವಿಡ್ ನ ಕೊರತೆಯಿಂದ ಮೂಳೆಗಳ ನಡುವೆ ಘರ್ಷಣೆ ಉಂಟಾಗಿ ಅವುಗಳು ಸವೆಯುತ್ತದೆ. ಕೈಗಳ ಹಿಡಿತ ಕೂಡ ದುರ್ಬಲವಾಗುತ್ತೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?
- ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಈ ದಿನದಿಂದ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ
- ಕನ್ನಡಕ ಹಾಕುವುದು ಕಿರಿಕಿರಿನ ?; ಪ್ರತಿದಿನ ಈ ಟಿಪ್ಸ್ ಫಾಲೋ ಮಾಡಿದರೆ ಸಾಕು ಕನ್ನಡಕ ಹಾಕುವುದೇ ಬೇಡ
ಕೆಲಸವಿಲ್ಲದೇ ಖಾಲಿ ಕುಳಿತಾದ ಅಥವಾ ಎದುರಿನಲ್ಲಿ ನಿಂತಿರುವವರ ಜೊತೆ ಮಾತನಾಡುವಾಗ ಕೆಲವರು ಕೈ ಬೆರಳುಗಳ ಲಟಿಕೆ ತೆಗೆಯುತ್ತಿರುತ್ತಾರೆ. ಅವರಿಗೆ ತಿಳಿಯದೇ ಆ ಕ್ರಿಯೆ ನಡೆಯುತ್ತದೆ. ಆದರೆ ನಾವು ಹೀಗೆ ಪದೇ ಪದೇ ಬೆರಳುಗಳ ಲಟಿಕೆ ತೆಗೆಯುವುದರಿಂದ ಕೈಗಳ ಶಕ್ತಿ ದುರ್ಬಲಗೊಳ್ಳುತ್ತೆ. ಲಟಿಕೆಯಿಂದ ಕೈಗಳು ಊದಿಕೊಳ್ಳಬಹುದು. ಕೀಲುಗಳ ನಡುವೆ ಸವಕಳಿ ಉಂಟಾಗಿ ಕೈ, ಬೆರಳುಗಳ ನೋವು ಕಾಣಿಸಿಕೊಳ್ಳಬಹುದು. ಹಾಗಾಗಿಯೇ ಮತ್ತೆ ಮತ್ತೆ ಲಟಿಕೆ ತೆಗೆಯದೇ ಇರುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 18-08-2023
ಸಂಧಿವಾತದ ತೊಂದರೆ:
ದಿನವಿಡೀ ಲಟಿಕೆ ತೆಗೆಯುತ್ತ ಇರುವುದರಿಂದ ಸಂಧಿವಾತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಂಧಿವಾತ ಸಮಸ್ಯೆ ಶುರುವಾದರೆ ಕೈಗಳಲ್ಲಿ ತೀವ್ರವಾದ ನೋವು, ಬೆರಳುಗಳನ್ನು ಸುಲಭವಾಗಿ ತೆರೆಯಲು ಮತ್ತು ಮುಚ್ಚಲು ಕಷ್ಟವಾಗುವುದು ಅಥವಾ ಹಾಗೆ ಮಾಡುವಾಗ ಶಬ್ದ ಬರುವುದು ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಅನೇಕ ಮಂದಿ ಚಿಕ್ಕ ಮಕ್ಕಳಿಗೆ ಕೂಡ ಬೆರಳು, ಕಿವಿಯ ಭಾಗ ಮುಂತಾದ ಕಡೆಗಳಲ್ಲಿ ಲಟಿಕೆ ತೆಗೆಯುವ ರೂಢಿ ಇಟ್ಟುಕೊಂಡಿರುತ್ತಾರೆ. ಮಕ್ಕಳು ಕೂಡ ಕಾಲು, ಕೈಗಳ ಲಟಿಕೆ ತೆಗೆಯುವುದನ್ನು ಎಂಜಾಯ್ ಮಾಡುತ್ತಾರೆ. ಅವರಿಗೆ ಕೂಡ ಅದು ಹಿತ ಕೊಡುತ್ತೆ. ನವಜಾತ ಶಿಶುಗಳಿಗೆ ಎಣ್ಣೆ ಹಚ್ಚಿ ಲಟಿಕೆ ತೆಗೆಯುವ ಜನರು ಮಗುವಿನ ಶರೀರಕ್ಕೆ ಸರಿಯಾದ ವ್ಯಾಯಮ ಸಿಗುತ್ತೆ ಎಂದುಕೊಳ್ತಾರೆ. ಆದರೆ ಹೀಗೆ ನವಜಾತ ಶಿಶುಗಳಿಗೆ ಲಟಿಕೆ ತೆಗೆಯುವುದು ಕೂಡ ಒಳ್ಳೆಯದಲ್ಲ. ಮಕ್ಕಳ ಶರೀರ ಬಹಳ ಸೂಕ್ಷ್ಮವಾಗಿರುವುದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಮಕ್ಕಳು ಮುಂದೆ ಕೀಲುನೋವು, ಸಂಧಿವಾತದಂತಹ ಸಮಸ್ಯೆಗಳು ಎದುರಿಸಬೇಕಾಗುತ್ತದೆ.
- ನೀವು ಅತಿಯಾಗಿ ನಿದ್ದೆ ಮಾಡುತ್ತೀರಾ?; ಹಾಗದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
- ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ಅಪಘಾತ; ಒಬ್ಬನ ಸ್ಥಿತಿ ಗಂಭೀರ
- ಕರ್ನಾಟಕ ಬ್ಯಾಂಕ್ ನಲ್ಲಿ ಭರ್ಜರಿ ಉದ್ಯೋಗಾವಕಾಶ
- ಕಾಫಿತೋಟದಲ್ಲಿ ಕಾಡಾನೆ ದಾಂಧಲೆ; ಮರದ ಮೇಲೆ ನಿಂತು ವಿಡಿಯೋ ಮಾಡಿದ ವ್ಯಕ್ತಿ
- ಶೃಂಗೇರಿಯಿಂದ ಹೊರ ಹೊಮ್ಮುವ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ
- ಒಂಟಿ ಸಲಗ ದಾಳಿಗೆ ಮತ್ತೊಂದು ಬಲಿ
- ಪ್ಯಾಕೆಟ್ ಮಾಡಿ ಸ್ಕೂಟರ್ ನಲ್ಲಿ ದನದ ಮಾಂಸದ ಹೋಂ ಡೆಲಿವರಿ: ಇಬ್ಬರ ಬಂಧನ
- ಶೃಂಗೇರಿ: ಇಂದಿನಿಂದ ಸಿರಿಮನೆ ಜಲಪಾತ ವೀಕ್ಷಣೆಗೆ ಮುಕ್ತ
- ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 18-08-2023
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-18.08.2023
- ನಿಮಗೆ ಮಧುಮೇಹ&ಕೊಲೆಸ್ಟ್ರಾಲ್ ಇದೀಯಾ?; ಈ ಅರೋಗ್ಯದ ಸಮಸ್ಯೆಯ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
- ಬೇಲ್ ಬಗ್ಗೆ ನಿಮಗೆಷ್ಟು ಗೊತ್ತು?; ಯಾರು ಯಾವಾಗ ಜಾಮೀನು ಪಡೆಯಬಹುದು?
- ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಈ ದಿನದಿಂದ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ
- ಸ.ಹಿ.ಪ್ರ ಶಾಲೆ ಆನೆಗುಂದದಲ್ಲಿ 77 ನೇ ಸ್ವಾತಂತ್ರ‍್ಯ ದಿನಾಚರಣೆ
- ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?; ಇದರ ಬಗ್ಗೆ ಹಿರಿಯರ ಹತ್ತಿರ ಕೇಳಿದ್ರೆ ಉತ್ತರ ಇಲ್ಲ
intresting story ಓದಲು ಇಲ್ಲಿ ಕ್ಲಿಕ್ ಮಾಡಿ