Google Maps: ಗೂಗಲ್ ಮ್ಯಾಪ್ ಬಳಸಲು ಇಂಟರ್ನೆಟ್ ಬೇಡ

Google Maps: ಗೂಗಲ್ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಗೂಗಲ್ ಮ್ಯಾಪ್ ಕೂಡ ಒಂದು. ಇಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಸಾಕಷ್ಟು ಸಹಾಯಕವಾಗಿದೆ. ಯಾವುದೇ ಸ್ಥಳ ತಲುಪಬೇಕಾದರೂ ಗೂಗಲ್ ಮ್ಯಾಪ್‌ನ ಸಹಾಯ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಸಂಚಾರ ಮಾಡುವಾಗ ಗೂಗಲ್ ಮ್ಯಾಪ್ ಉಪಯುಕ್ತವಾಗಿದೆ. ಗೂಗಲ್ ಮ್ಯಾಪ್ ಲೊಕೇಶನ್ ಟ್ರ‍್ಯಾಕ್ ಮಾಡುವ ಮೂಲಕ ನೀವು ತಲುಪಬೇಕಾದ ಸ್ಥಳವನ್ನು ತಲುಪಲು ಸಹಾಯ ಮಾಡುತ್ತದೆ.

ಇದನ್ನೂ ಓದಿ; ಶೃಂಗೇರಿ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ಗೂಳಿ ದಾಳಿ ಪ್ರಕರಣಗಳು: ನಿದ್ದೆಯಲ್ಲಿರುವ ಪಟ್ಟಣ ಪಂಚಾಯಿತಿ

ಆಧುನಿಕ ತಂತ್ರಜ್ಞಾನ ಜೀವನವನ್ನು ಹೇಗೆ ಸರಳಗೊಳಿಸುತ್ತದೆ ಎನ್ನುವುದಕ್ಕೆ ಗೂಗಲ್ ಮ್ಯಾಪ್ ಉತ್ತಮ ಉದಾರಣೆ. ಹಿಂದೆಲ್ಲ ಅಪರಿಚಿತ ಊರಿಗೆ ಹೊಗುವುದೆಂದರೆ ಅದೇ ದೊಡ್ಡ ಸಾಹಸದ ಕೆಲವಾಗಿತ್ತು. ಅವರಿವರಲ್ಲಿ ದಾರಿ ವಿಚಾರಿಸಿಕೊಳ್ಳಬೇಕಿತ್ತು. ಆದರೆ ಈಗ ಹಾಗಲ್ಲ. ಮ್ಯಾಪ್ ನಲ್ಲಿ ಊರ ಹೆಸರು ಹಾಕಿದರೆ ಅದುವೇ ದಾರಿ ತೋರಿಸುತ್ತದೆ. ಆದರೆ ಇಂಟರ್‌ನೆಟ್ ಸಂಪರ್ಕವಿಲ್ಲದ ಸಂದರ್ಭದಲ್ಲಿ ಗೂಗಲ್ ಮ್ಯಾಪ್ ಬಳಸುವುದು ಸವಾಲಿನ ಸಂಗತಿಯಾಗಿದೆ. ಆದರೂ ಕೂಡ ಇಂಟರ್‌ನೆಟ್ ಕನೆಕ್ಟಿವಿಟಿ ಇಲ್ಲದ ಸಂದರ್ಭದಲ್ಲಿಯೂ ಸಹ ನೀವು ಗೂಗಲ್ ಮ್ಯಾಪ್ ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಇಂಟರ್‌ನೆಟ್ ಇಲ್ಲದಿದ್ದರೂ ಗೂಗಲ್ ಮ್ಯಾಪ್ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.

Google Maps:
Google Maps:

ಇದನ್ನೂ ಓದಿ; ಅಡಿಕೆ ತೋಟದ ಮೇಲೆ ಪೊಲೀಸರ ದಾಳಿ | ಇಬ್ಬರು ಅರೆಸ್ಟ್‌

Google Maps: ಆಫ್ ಲೈನ್ ನಲ್ಲಿ ಬಳಸುವುದು ಹೇಗೆ?:
ಗೂಗಲ್ ಮ್ಯಾಪ್ ಆಫ್ ಲೈನ್ ಫೀಚರ್ ಸಹಾಯದಿಂದಾಗಿ ನೀವು ಗೂಗಲ್ ಮ್ಯಾಪ್ ಅನ್ನು ಆಫ್ ಲೈನ್ ನಲ್ಲಿ ಬಳಸಬಹುದು. ಒಮ್ಮೆ ನೀವು ಮ್ಯಾಪ್ ಡೌನ್ ಲೋಡ್ ಮಾಡಿದ ನಂತರ ನೀವು ಅಂತರ್ಜಾಲದ ಸಹಾಯವಿಲ್ಲದೆ ದಾರಿಯ ಹುಡುಕಾಟ ನಡೆಸಬಹುದು ಮತ್ತು ಆಫ್ ಲೈನ್ ನಲ್ಲಿ ಇದನ್ನು ಬಳಸಬಹುದು.

* ಇದಕ್ಕಾಗಿ ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಗೂಗಲ್ ಮ್ಯಾಪ್ ಆಪ್ ಅನ್ನು ತೆರೆಯಿರಿ.
* ನೀವು ತಲುಪಬೇಕಿರುವ ಸ್ಥಳವನ್ನು ಹುಡುಕಾಡಿ.
* ಡೈರೆಕ್ಷನ್ ಅನ್ನು ಟ್ಯಾಪ್ ಮಾಡಿ. ಅದು ನಿಮ್ಮ ಸ್ಕ್ರೀನಿನ ಕೆಳಭಾಗದ ಎಡದಲ್ಲಿರುತ್ತದೆ.
* ನೀವು ಯಾವ ರೀತಿ ಪ್ರಯಾಣ ಬೆಳೆಸಲು ಇಚ್ಛಿಸುತ್ತೀರಿ ಅದನ್ನು ಆಯ್ಕೆ ಮಾಡಿ.
* ನಂತರ ಬಿಳಿ ಬಾರ್ ಅನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ.
* ಇದೀಗ ಸೇವ್ ಆಫ್ ಲೈನ್ ಅನ್ನು ಟ್ಯಾಪ್ ಮಾಡಿದರೆ ಆಯಿತು.


ಇತ್ತೀಚಿನ ಜನಪ್ರಿಯ ಸುದ್ದಿಗಳು   


ಇನ್ನು ಗೂಗಲ್ ಮ್ಯಾಪ್ ಬಳಕೆದಾರರು ತಮ್ಮ ಮನೆಯ ನಿಖರ ವಿಳಾಸವನ್ನು ಉಳಿಸಿಕೊಳ್ಳುವ ಜೊತೆಗೆ ಇತರರೊಂದಿಗೆ ಹಂಚಿಕೊಳ್ಳಬಹುದು. ತಮ್ಮ ಮನೆಯ ವಿಳಾಸಗಳನ್ನು ಸೇವ್ ಮಾಡುವಾಗ ಮತ್ತು ಶೇರ್ ಮಾಡುವಾಗ ಪ್ಲಸ್ ಕೋಡ್ ಗಳನ್ನು ಬಳಸಬಹುದಾಗಿದೆ. ಈ ಪ್ಲಸ್ ಕೋಡ್ ಗಳನ್ನು ಮನೆಯ ವಿಳಾಸಕ್ಕೆ ಸೆಟ್ ಮಾಡಬಹುದಾಗಿದೆ.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಶೃಂಗೇರಿ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ಗೂಳಿ ದಾಳಿ ಪ್ರಕರಣಗಳು: ನಿದ್ದೆಯಲ್ಲಿರುವ ಪಟ್ಟಣ ಪಂಚಾಯಿತಿ
  2. ಅಡಿಕೆ ತೋಟದ ಮೇಲೆ ಪೊಲೀಸರ ದಾಳಿ | ಇಬ್ಬರು ಅರೆಸ್ಟ್‌
  3. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಮಳೆ; ಇಂದಿನ ಹವಾಮಾನ ವರದಿ
  4. ಬಾಳೆಹೊನ್ನೂರು: ಸಾಮಾಜಿಕ ಜಾಲತಾಣದಲ್ಲಿ ಕಾನೂನುಬಾಹಿರ ಪೋಸ್ಟ್;  12 ಜನರ ವಿರುದ್ದ ಪ್ರಕರಣ ದಾಖಲು
  5. ಕೊಪ್ಪ: ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡುವಂತೆ ಆಗ್ರಹ
  6. ಚಿಕ್ಕಮಗಳೂರು: ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಧರಿಸಿ ತರಗತಿ ಕೇಳಿದ ವಿದ್ಯಾರ್ಥಿನಿಯರು
  7. ಮೆಟಾದಿಂದ ಹೊಸ ಅಪ್ಡೇಟ್​ | ವಾಟ್ಸಾಪ್​​ನಲ್ಲೂ ’ಸ್ಕ್ರೀನ್​ ಶೇರ್‘ ಮಾಡ್ಬಹುದು
  8. ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 10-08-2023
  9. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-10.08.2023
  10. ಬೆಕ್ಕು ತಾನೆ? ಕಚ್ಚಿದರೆ ಏನಾಗುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇