Fastag KYC: ವಾಹನದ ಫಾಸ್ಟ್ ಟ್ಯಾಗ್‌ KYC ಆಗಿದ್ಯಾ?

Fastag KYC:ವಾಹನಗಳಲ್ಲಿ ಅಳವಡಿಕೆ ಮಾಡಿರುವ ಫಾಸ್ಟ್ ಟ್ಯಾಗ್ ಸಂಬಂಧ ಹೊಸ ಅಪ್ ಡೇಟ್ ಈ ಹಿಂದೆ ಹೊರ ಬಿದ್ದಿತ್ತು. ಎಲ್ಲಾ ರೀತಿಯ ಫಾಸ್ಟ್ ಟ್ಯಾಗ್ ಗಳ ಕೆವೈಸಿ ಆಗಿರಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದ್ದು, ಜನವರಿ 31 ರ ಒಳಗೆ ಫಾಸ್ಟ್ ಟ್ಯಾಗ್ ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್ ಲೈನ್ ನೀಡಲಾಗಿದೆ. ಒಂದು ವೇಳೆ ಜನವರಿ 31 ರ ಒಳಗೆ ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ನ ಕೆವೈಸಿ ಪೂರ್ಣಗೊಳಿಸದೇ ಇದ್ದರೆ ಅಂಥಾ ಫಾಸ್ಟ್ ಟ್ಯಾಗ್ ಗಳನ್ನು ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ; 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಇಲ್ಲಿದೆ ಪಟ್ಟಿ

ಫಾಸ್ಟ್ ಟ್ಯಾಗ್ ನ ಕೆವೈಸಿ ಮಾಡದಿದ್ದರೇ ಎದುರಾಗುವ ತೊಂದರೆ ಏನು?:
ಒಂದು ವೇಳೆ ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ನ ಕೆವೈಸಿ ಮಾಡಿಸದೆ ಅದು ಜನವರಿ 31 ರ ಬಳಿಕ ರದ್ದಾದರೆ ಟೋಲ್ ಬೂತ್ ಗಳಲ್ಲಿ ಶುಲ್ಕ ಪಾವತಿ ಮಾಡುವಾಗ ತೊಂದರೆ ಎದುರಾಗಲಿದೆ.

ಹಾಗಾದರೆ ಕೆವೈಸಿ ಆಗಿದೆಯೋ? ಇಲ್ಲವೋ? ಎಂಬುದನ್ನು ಪರಿಶೀಲಿಸುವುದು ಹೇಗೆ?:
ವಾಹನ ಚಾಲಕರು, ಫಾಸ್ಟ್ ಟ್ಯಾಗ್ ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್ ಸಂಪರ್ಕಿಸಿ ತಮ್ಮ ಪಾಸ್ಟ್ ಟ್ಯಾಗ್ ನ ಕೆವೈಸಿ ಮಾಡಿಸಬಹುದು. ಇಲ್ಲವಾದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಬೂತ್ ಗಳಲ್ಲೂ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ.

Fastag KYC: ವಾಹನದ ಫಾಸ್ಟ್ ಟ್ಯಾಗ್‌ KYC ಆಗಿದ್ಯಾ?
Fastag KYC: ವಾಹನದ ಫಾಸ್ಟ್ ಟ್ಯಾಗ್‌ KYC ಆಗಿದ್ಯಾ?

ಇದನ್ನೂ ಓದಿ; ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ ಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ

Fastag KYC: ವಾಹನ ಚಾಲಕರು ಏನು ಮಾಡಬೇಕು?
ನಿಮ್ಮ ಫಾಸ್ಟ್ ಟ್ಯಾಗ್ ಅನ್ನು ಬ್ಲ್ಯಾಕ್ ಲಿಸ್ಟ್ ಮಾಡಬಾರದು ಎಂದಾದಲ್ಲಿ ನೀವು ಈ ಕೆಳಗಿನ ಕೆಲಸಗಳನ್ನು ಮಾಡಬೇಕು

* fastag.ihmcl.com ಗೆ ಭೇಟಿ ನೀಡಿ
* ಪುಟದ ಮೇಲ್ಭಾಗದಲ್ಲಿ ಲಾಗ್ ಇನ್ ಬಾಕ್ಸ್ ಅನ್ನು ಗುರುತಿಸಿದರೆ, ಒಂದು ಬಾರಿ ಪಾಸ್‌ ವರ್ಡ್ ಅನ್ನು ರಚಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ
* ಅಥವಾ ಲಾಗ್ ಇನ್ ಮಾಡಲು ನಿಮ್ಮ ನೋಂದಾಯಿತ ಸೆಲ್ ಸಂಖ್ಯೆ ಮತ್ತು ಪಾಸ್‌ ವರ್ಡ್ ಅನ್ನು ನಮೂದಿಸಿ.
* ಎಡ ಮೇಲ್ಭಾಗದಲ್ಲಿರುವ ನನ್ನ ಪ್ರೊಫೈಲ್ ವಿಭಾಗಕ್ಕೆ ಹೋಗಿ.
* ಇಲ್ಲಿ ನಿಮ್ಮ ಫಾಸ್ಟ್ ಟ್ಯಾಗ್ ನ ಪ್ರಸ್ತುತ ಸ್ಥಿತಿಯನ್ನು ನೋಡಬಹುದು. ಅಂತೆಯೇ ಕೆವೈಸಿ ಅನ್ನು ಅಪ್ ಡೇಟ್ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.
* ಮುಂದಿನ ಪುಟದಲ್ಲಿ, ವಿಳಾಸ ಪುರಾವೆಗಳಲ್ಲಿ ನಮೂದಿಸಿರುವಂತೆ ನಿಮ್ಮ ವಿವರಗಳನ್ನು ಅನುಸರಿಸಿ, ಬಾಕ್ಸ್ ಗಳನ್ನು ಭರ್ತಿ ಮಾಡಿ ಪಾಸ್ ಪೋರ್ಟ್ ಗಾತ್ರದ ಫೋಟೋವನ್ನು ಸಲ್ಲಿಸಿ.

ಇದನ್ನೂ ಓದಿ; ವಿದ್ಯುತ್ ಬಿಲ್ ಹೊರೆ ಇಳಿಸಲು ಕೇಂದ್ರದ ಹೊಸ ಯೋಜನೆ ಜಾರಿ; 1 ಕೋಟಿ ಮನೆಗಳ ಮೇಲೆ ಬರಲಿದೆ ಸೋಲಾರ್‌ ಫಲಕಗಳು;ಯಾರಿಗೆ ಸಿಗಲಿದೆ ಪ್ರಯೋಜನ, ಯಾವ ದಾಖಲೆಗಳು ಬೇಕು?

* ಇಲ್ಲಿ ನೀವು ನಿಮ್ಮ ವಿಳಾಸ ಪುರಾವೆಗಳು ಮತ್ತು ಮಾನ್ಯ ಗುರುತಿನ ಪುರಾವೆಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
* ಮುಂದಿನ ಪುಟದಲ್ಲಿ, ನೀವು ಸಲ್ಲಿಸಿದ ವಿವರಗಳು ಮತ್ತು ದಾಖಲೆಗಳು ಅಧಿಕೃತವೇ ಎಂಬುದನ್ನು ಖಚಿತಪಡಿಸಲು ನಿಮ್ಮನ್ನು ಕೇಳಲಾಗುತ್ತದೆ.
* ಸೂಚನೆಗಳನ್ನು ಅನುಸರಿಸಿ ಮತ್ತು ನೀವು ಮೇಲೆ ತಿಳಿಸಲಾದ ವಿವರಗಳನ್ನು ಭರ್ತಿ ಮಾಡುವಾಗ ಈ ಕೆಳಗಿನ ದಾಖಲೆಗಳನ್ನು ನಿಮ್ಮೊಂದಿಗೆ ಹೊಂದಲು ಮರೆಯದಿರಿ.

ಬೇಕಾಗುವ ದಾಖಲೆಗಳಾವುವು?:
* ನಿಮ್ಮ ವಾಹನವನ್ನು ಯಾವ ವಿಭಾಗದಲ್ಲಿ ಪರಿಗಣಿಸಲಾಗಿದೆ ಎಂಬುದನ್ನು ಆಧರಿಸಿ ಕೆವೈಸಿ ಡಾಕ್ಯುಮೆಂಟ್ ಗಳು.
* ನಿಮ್ಮ ಫಾಸ್ಟ್ ಟ್ಯಾಗ್ ನ KYC ಅನ್ನು ನವೀಕರಿಸುತ್ತಿರುವ ವಾಹನದ ನೋಂದಣಿ ಪ್ರಮಾಣಪತ್ರ.
* ಚಾಲಕರ ಪರವಾನಗಿ ಮತ್ತು ಪ್ಯಾನ್ ಮತ್ತು ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳು ಹೊಂದಿರಬೇಕು.

ಇದನ್ನೂ ಓದಿ; ದಕ್ಷ ಪೊಲೀಸ್ ಅಧಿಕಾರಿ ಸುಧೀರ್ ಹೆಗ್ಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ

ಇನ್ನು ಈ ಕುರಿತಾದ ಹೆಚ್ಚಿನ ಮಾಹಿತಿ ಪಡೆಯಲು ಸಮೀಪದ ಟೋಲ್ ಪ್ಲಾಜಾಗಳ (Fastag KYC: ) ಬಳಿ ಹೋಗಬಹುದಾಗಿದೆ. ಅಥವಾ ಆಯಾ ಬ್ಯಾಂಕ್ ಗಳ ಗ್ರಾಹಕ ಸೇವೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಫಾಸ್ಟ್ ಟ್ಯಾಗ್ ದುರ್ಬಳಕೆ ಹಾಗೂ ಟೋಲ್ ಬೂತ್ ಗಳಲ್ಲಿ ವಾಹನಗಳ ಸಮರ್ಪಕ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕೆವೈಸಿ ಮಾಡಿಸೋದು ಅತಿ ಮುಖ್ಯವಾಗಿದ್ದು, ಜನವರಿ 31 ರೊಳಗೆ ಮಾಡಿಸುವುದು ಕಡ್ಡಾಯವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಿ

  1. 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಇಲ್ಲಿದೆ ಪಟ್ಟಿ
  2. ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ ಗೆ ಮರಣೋತ್ತರ ಶೌರ್ಯ ಚಕ್ರ ಪ್ರಶಸ್ತಿ
  3. ವಿದ್ಯುತ್ ಬಿಲ್ ಹೊರೆ ಇಳಿಸಲು ಕೇಂದ್ರದ ಹೊಸ ಯೋಜನೆ ಜಾರಿ; 1 ಕೋಟಿ ಮನೆಗಳ ಮೇಲೆ ಬರಲಿದೆ ಸೋಲಾರ್‌ ಫಲಕಗಳು;ಯಾರಿಗೆ ಸಿಗಲಿದೆ ಪ್ರಯೋಜನ, ಯಾವ ದಾಖಲೆಗಳು ಬೇಕು?
  4. ದಕ್ಷ ಪೊಲೀಸ್ ಅಧಿಕಾರಿ ಸುಧೀರ್ ಹೆಗ್ಡೆಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ
  5. ಲೋಕಸಭೆ ಚುನಾವಣೆ: ಕ್ಷೇತ್ರ ಬದಲಿಸುವ ಪ್ರಶ್ನೆಯೇ ಇಲ್ಲ- ಶೋಭಾ ಕರಂದ್ಲಾಜೆ
  6. ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ; 10th ಪಾಸಾದವರಿಗೆ ಅರ್ಜಿ ಆಹ್ವಾನ
  7. hsrp ನಂಬರ್ ಪ್ಲೇಟ್; ನೋಂದಣಿ ಹೇಗೆ? ವೆಬ್‌ ಸೈಟ್ ಯಾವುದು?; ರಿಜಿಸ್ಟ್ರೇಷನ್ ಪ್ರಕ್ರಿಯೆ ವೇಳೆ ಹುಷಾರು! ಯಾಮಾರಬೇಡಿ!
  8. ಆಡಳಿತ ತರಬೇತಿ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಆಹ್ವಾನ; ಎಸ್‌.ಎಸ್‌.ಎಲ್‌.ಸಿ, ಪಿಯುಸಿ ಪಾಸಾದವರಿಗೆ ಜಾಬ್
  9. ಬಿಯರ್ ಪ್ರಿಯರಿಗೆ ಬಿಗ್ ಶಾಕ್; ಮತ್ತೆ ಬಿಯರ್ ದರ ಹೆಚ್ಚಿಸಲು ಅಬಕಾರಿ ಇಲಾಖೆ ಸಿದ್ಧತೆ
  10. ರೈತರ ಕೃಷಿ ಸಾಲದ ಬಡ್ಡಿ ಮನ್ನಾ; ಯಾವ ರೈತರ, ಯಾವ ಸಾಲದ ಬಡ್ಡಿ ಮನ್ನಾ?; ಯಾವ ದಿನಾಂಕದಿಂದ ಈ ಆದೇಶ ಒಳಪಡುತ್ತದೆ?
  11. ರೈತರೇ ಗಮನಿಸಿ; pm kisan ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ
  12. ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಹೇಗೆ?
  13. ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ
  14.  ರೈತರು ಅತಿ ಕಡಿಮೆ ಬೆಲೆಗೆ ಮಣ್ಣು ಪರೀಕ್ಷೆ ಹೇಗೆ ಮಾಡಿಸಬಹುದು?; ಮಣ್ಣನ್ನು ಹೇಗೆ ತೆಗೆಯಬೇಕು? ಎಷ್ಟು ಶುಲ್ಕ? ಸಂಪೂರ್ಣ ವಿವರವನ್ನು ಓದಿ
  15. ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
  16. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ
  17.  ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ pm kisan ಮೊತ್ತ ಏರಿಕೆ
  18. ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
  19. ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ
  20. ರಾಜ್ಯದ ರೈತರಿಗೆ ಗುಡ್‌ ನ್ಯೂಸ್‌: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
  21.  ಪಡಿತರ ಚೀಟಿದಾರರೇ ಗಮನಿಸಿ; ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ, ಏನದು?
  22. ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
  23. ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇