Drought Relief: ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ

Drought Relief:ಬರ ಪರಿಹಾರದ ಮೊದಲ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇದನ್ನೂ ಓದಿ; ಡಿಸಿಸಿ ಬ್ಯಾಂಕ್‌ ನಲ್ಲಿ ಉದ್ಯೋಗ; 93 ಹುದ್ದೆಗಗಳಿಗೆ ಅರ್ಜಿ ಆಹ್ವಾನ

ಶುಕ್ರವಾರ ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೂಟ್ಸ್ ನಲ್ಲಿ ಶೇ.75 ರಷ್ಟು ರೈತರ ಸಂಪೂರ್ಣ ಜಮೀನಿನ ಮಾಹಿತಿಯನ್ನು ನವೀಕರಿಸಿದ್ದು ಮುಂದಿನ ಒಂದು ವಾರದಲ್ಲಿ 30 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ತಲುಪಲಿದೆ ಎಂದರು.

ಇದನ್ನೂ ಓದಿ; ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ; ಏನದು ಬದಲಾವಣೆ?

ರೈತರಿಗೆ ಬರ (Drought Relief:) ಹಾಗೂ ಮಳೆಹಾನಿ ಪರಿಹಾರ ತಲುಪಿಸುವ ವಿಚಾರದಲ್ಲೂ ಈ ಹಿಂದೆ ಭಾರಿ ಅವ್ಯವಹಾರಗಳು ನಡೆದಿವೆ. ಜಮೀನು ಯಾರದ್ದೂ ಇದೆ, ಪರಿಹಾರ ಇನ್ಯಾರಿಗೋ ಹೋಗಿರುವ ಹಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಕಡೂರು ಒಂದೇ ತಾಲೂಕಿನಲ್ಲಿ 6 ಕೋಟಿ ರೂ. ಪರಿಹಾರದ ಹಣ ಅಕ್ರಮ ಎಸಲಾಗಿದೆ. ಹಣ ದುರ್ಬಳಕೆಯಾದವರ ಪಟ್ಟಿ ನನ್ನ ಬಳಿ ಇದೆ. ಹಾನಗಲ್, ಶಿಗ್ಗಾಂವ್ ನಲ್ಲೂ ಇಂತಹ ಪ್ರಕರಣಗಳು ಕಂಡುಬಂದಿದೆ ಎಂದು ಮಾಹಿತಿ ನೀಡಿದರು.

Drought Relief: ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ
Drought Relief: ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ

ಇದನ್ನೂ ಓದಿ; ಚಾಕ್ ಪೀಸ್ ನಲ್ಲಿ ಯುವಕನ ಕೈಚಳಕ; ರಾಮ ಮಂದಿರ ಕಲಾಕೃತಿ ನಿರ್ಮಾಣ

ಗರಿಷ್ಠ 5 ಎಕರೆ ವರೆಗೆ ಪರಿಹಾರ ಕೊಡಬಹುದು. ಆದರೆ, 5 ಎಕರೆ ಮೀರಿ ಪರಿಹಾರ ವಿತರಿಸಿದ್ದಾರೆ. ರೈತರಲ್ಲದವರ ಖಾತೆಗೆ 49,999 ರೂ. ಜಮೆ ಆಗಿದೆ. ಅಸಲಿ ರೈತರ ಖಾತೆಗೆ ಅಲ್ಪ ಪ್ರಮಾಣದ ಮೊತ್ತ ಮಾತ್ರ ಜಮೆ ಆಗಿದೆ. ಇದೇ ಕಾರಣಕ್ಕೆ ಈ ಬಾರಿ ರೈತರಿಗೆ ಬರ ಪರಿಹಾರ (Drought Relief:) ನೀಡಲು ‘ಫೂಟ್ಸ್’ ದಾಖಲಾತಿ ಕಡ್ಡಾಯಗೊಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಈ ಹಿಂದೆ ಫೂಟ್ಸ್ ಡಾಟಾಬೇಸ್ ನಲ್ಲಿ 7.7 ಲಕ್ಷ ರೈತರ ಮಾಹಿತಿಯೆ ಇರಲಿಲ್ಲ. ಇದೀಗ ಹೊಸದಾಗಿ ಸೇರಿಸಲಾಗಿದೆ. 34 ಲಕ್ಷ ರೈತರ ಜಮೀನ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಬಿಟ್ಟು ಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಕಳೆದ 15 ದಿನಗಳಿಂದ ನಮ್ಮ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದು, ರೈತರ ಹಣ ದುರುಪಯೋಗವಾಗದಂತೆ ಅವರಿಗೆ ತಲುಪಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ರೈತರಿಗೆ ಈಗಾಗಲೆ ಹಣ ತಲುಪಿಸಲಾಗಿದೆ. ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಪರಿಹಾರದ ಹಣ ತಲುಪಲಿದೆ ಎಂದರು.

ಇದನ್ನೂ ಓದಿ; ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ; ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ಕೇಂದ್ರದಿಂದ ಬಂದಿಲ್ಲ ಪರಿಹಾರ:
ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ನಾಲ್ಕು ತಿಂಗಳಾದರೂ ಕೇಂದ್ರ ಸರಕಾರದಿಂದ ಬರ ಪರಿಹಾರದ ಹಣ ಇನ್ನೂ ಬಂದಿಲ್ಲ ಎಂದು ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ.ಪರಿಹಾರ ನೀಡುವಂತೆ ಸೆ.22 ರಂದೆ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಭಾರತ ಸರಕಾರದ ಬರ ಅಧ್ಯಯನ ತಂಡ ಅ.4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ. ಆದರೂ, ಕೇಂದ್ರ ಸರಕಾರ ಈವರೆಗೆ ನಮ್ಮ ಮನವಿಯ ಮೇಲೆ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿಲ್ಲ. ಸಭೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದರೂ ಉಪಯೋಗವಾಗಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ರಾಜ್ಯ ಸರಕಾರವೇ ಮೊದಲ ಕಂತಿನಲ್ಲಿ 2 ಸಾವಿರ ರೂ. ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ; ಏರ್‌ ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಉದ್ಯೋಗ; ಡಿಗ್ರಿ, ಡಿಪ್ಲೊಮ, ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನ

ಕುಡಿಯುವ ನೀರಿನಲ್ಲಿ ಮುಂಜಾಗ್ರತೆಗೆ ಸೂಚನೆ:
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. 36 ಗ್ರಾಮಗಳಲ್ಲಿ ಮಾತ್ರ ನೀರಿನ ಕೊರತೆ ಇದೆ. ಈ ಎಲ್ಲಾ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 139 ಗ್ರಾಮಗಳಿಗೆ ಬೋರೈಲ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು. ಇನ್ನು ಚಿತ್ರದುರ್ಗದ ಕೆಲವು ಭಾಗಗಳನ್ನು ಹೊರತುಪಡಿಸಿ ರಾಜ್ಯದ ಬೇರೆಲ್ಲೂ ಮೇವಿನ ಕೊರತೆ ಇಲ್ಲ. ಈಗಾಗಲೇ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಅನ್ನು ಉಚಿತವಾಗಿ ವಿತರಿಸಲಾಗಿದೆ. ಫೆಬ್ರವರಿಯಲ್ಲಿ ಮತ್ತೊಮ್ಮೆ ಕಿಟ್ ನೀಡಲಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ನಡೆದಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ; ಜಿಯೋದಿಂದ ಗಣರಾಜ್ಯೋತ್ಸವಕ್ಕೆ ವಿಶೇಷ ಆಫರ್; ರೀಚಾರ್ಜ್‌ ನಲ್ಲಿ 3 ಸಾವಿರಕ್ಕೂ ಹೆಚ್ಚು ಮೌಲ್ಯದ ಕೂಪನ್‌ ಗೆಲ್ಲುವ ಅವಕಾಶ

ಎಸಿ-ತಹಶೀಲ್ದಾರ್ ನ್ಯಾಯಾಲಯಗಳ ಪ್ರಗತಿ:
ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯ ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 59,800 ಪ್ರಕರಣಗಳು ಇದ್ದವು. ಕಳೆದ ಮೂರು ತಿಂಗಳಲ್ಲಿ 33 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಹಶೀಲ್ದಾರ್ ನ್ಯಾಯಾಲಯದಲ್ಲಿದ್ದ 2215 ಪ್ರಕರಣಗಳನ್ನು 170 ಕ್ಕೆ ಇಳಿಸಲಾಗಿದೆ. ರೈತರು ತಕರಾರು ಅರ್ಜಿಗಳ ಇತ್ಯರ್ಥಕ್ಕಾಗಿ ದಿನಂಪ್ರತಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳನ್ನು ಓದಿ

  1. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ; ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ
  2. ಜಿಯೋದಿಂದ ಗಣರಾಜ್ಯೋತ್ಸವಕ್ಕೆ ವಿಶೇಷ ಆಫರ್; ರೀಚಾರ್ಜ್‌ ನಲ್ಲಿ 3 ಸಾವಿರಕ್ಕೂ ಹೆಚ್ಚು ಮೌಲ್ಯದ ಕೂಪನ್‌ ಗೆಲ್ಲುವ ಅವಕಾಶ
  3. ರೈತರೇ ಗಮನಿಸಿ; pm kisan ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ
  4. ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಹೇಗೆ?
  5. ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ
  6. 6 ಸಂಸ್ಥೆಗಳ 5000 ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ; ಯಾವುದೆಲ್ಲಾ ಸಂಸ್ಥೆಗಳಲ್ಲಿ ಹುದ್ದೆ
  7.  ರೈತರು ಅತಿ ಕಡಿಮೆ ಬೆಲೆಗೆ ಮಣ್ಣು ಪರೀಕ್ಷೆ ಹೇಗೆ ಮಾಡಿಸಬಹುದು?; ಮಣ್ಣನ್ನು ಹೇಗೆ ತೆಗೆಯಬೇಕು? ಎಷ್ಟು ಶುಲ್ಕ? ಸಂಪೂರ್ಣ ವಿವರವನ್ನು ಓದಿ
  8. ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
  9. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ
  10.  ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ pm kisan ಮೊತ್ತ ಏರಿಕೆ
  11. ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
  12. ಪ್ರಬೋಧಿನೀ ಗುರುಕುಲ ಅಧ್ಯಯನಕ್ಕೆ ಅರ್ಜಿ ಆಹ್ವಾನ; ಗುರುಕುಲ ಶಿಕ್ಷಣ ಯಾರಿಗೆ, ಹೇಗೆ?
  13. rbi ನಿಂದ ಉದ್ಯೋಗಾವಕಾಶ: ವಿವಿಧ ಪ್ರದೇಶಗಳಲ್ಲಿ ಮೆಡಿಕಲ್ ಕನ್ಸಲ್‌ ಟಂಟ್‌ಗಳ ನೇಮಕ
  14. ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ; ಯಾವುದೇ ಪರೀಕ್ಷೆ ಇಲ್ಲದೆ ಆಯ್ಕೆ; ಅರ್ಜಿ ಸಲ್ಲಿಕೆಯ ಎಲ್ಲಾ ಮಾಹಿತಿ ಇಲ್ಲಿದೆ
  15. ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ
  16. ರಾಜ್ಯದ ರೈತರಿಗೆ ಗುಡ್‌ ನ್ಯೂಸ್‌: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ
  17. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಾವಕಾಶ;133 ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ; ನೇರ ಸಂದರ್ಶನದ ಮೂಲಕ ಆಯ್ಕೆ
  18.  ಸ್ವಯಂ ಸೇವಕ ಗೃಹರಕ್ಷಕ ದಳದಲ್ಲಿ ಉದ್ಯೋಗಾವಕಾಶ; 247 ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ?, ಯಾವುದೆಲ್ಲಾ ದಾಖಲೆಗಳು ಬೇಕು?
  19.  ಪಡಿತರ ಚೀಟಿದಾರರೇ ಗಮನಿಸಿ; ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ, ಏನದು?
  20. ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
  21. ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ
  22.  ಉಜ್ವಲ ಗ್ಯಾಸ್ ಸಂಪರ್ಕ ಹೊಂದಿದವರು ಸಬ್ಸಿಡಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯ; ಉಳಿದ ಗ್ಯಾಸ್ ಬಳಕೆದಾರರಿಗೆ ಕಡ್ಡಾಯವಿಲ್ಲ : ಮೇಲಾಧಿಕಾರಿಗಳ ಸ್ಪಷ್ಟನೆ
  23. ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ; ಏನಿದು ಎಮರ್ಜೆನ್ಸಿ ಪ್ಯಾನಿಕ್ ಬಟನ್;  ಯಾವ್ಯಾವ ವಾಹನಗಳಿಗೆ ಇದು ಕಡ್ಡಾಯ?, ದರವೆಷ್ಟು?
  24. ನಿಮ್ಮ ವಾಹನಗಳಿಗೆ ಇನ್ನೂ hsrp ನಂಬರ್ ಪ್ಲೇಟ್ ಹಾಕಿಲ್ವಾ..?; ಚಿಂತೆ ಬಿಡಿ, ಗಡುವು ವಿಸ್ತರಿಸಿದ ಸರ್ಕಾರ; ಏನಿದು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ? ಅಳವಡಿಕೆ ಹೇಗೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇