ರಾಜ್ಯ ವಿಧಾನಸಭಾ ಚುನಾವಣೆ ಸಿಬ್ಬಂದಿಗಳಿಗೆ ಮತ್ತು ಮತಗಟ್ಟೆ ಅಧಿಕಾರಿಗಳ ಗೌರವಧನ ಹೆಚ್ಚಿಸಲಾಗಿದೆ. ಇತ್ತೀಚೆಗಷ್ಟೇ ಚುನಾವಣಾ ಕರ್ತವ್ಯ ನಿರತ ಪೊಲೀಸರ ಗೌರವಧನ ಹೆಚ್ಚಿಸಲಾಗಿತ್ತು. ಇದೀಗ ಚುನಾವಣಾ ಅಧಿಕಾರಿ, ಸಿಬ್ಬಂದಿ ಮತ್ತು ಬೂತ್ ಅಧಿಕಾರಿಗಳ ಗೌರವಧನ ಕೂಡ ಹೆಚ್ಚಿಸಲಾಗಿದೆ. ಹಾಗಾದರೆ ಎಷ್ಟು ಗೌರವ ಧನ ಸಿಗತ್ತೆ ಅಂತ ಆಶ್ಚರ್ಯವಾಗುತ್ತಿದ್ಯಾ ಇದರ ಬಗ್ಗೆ ಚುನಾವಣಾ ಅಧಿಕಾರಿ ತಿಳಿಸಿದ್ದೇನು? ನೋಡೋಣ ಬನ್ನಿ.
ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು
ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ
ಗೌರವಧನ ಹೆಚ್ಚಳದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ತುಮಕೂರು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯವರು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023 ರ ಸಂಬಂಧ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳ ಗೌರವಧನ ಹೆಚ್ಚಿಸಲಾಗಿರುವ ಮಾಹಿತಿ ನೀಡಿದ್ದಾರೆ.
24-5-2018ರ ಕರ್ನಾಟಕ ಸರ್ಕಾರ ಹೊರಡಿಸಿದ ಅಧಿಕೃತ ಆದೇಶದ ಅನ್ವಯ ಗೌರವಧನ ಪಾವತಿಸಲಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ಕೆಳಗಿನಂತೆ ಗೌರವಧನ ನೀಡಲಾಗುತ್ತದೆ.
ಪ್ರೆಸಿಡಿಂಗ್ ಆಫಿಸರ್- ರೂ.500 ರಂತೆ ನಾಲ್ಕು ದಿನಕ್ಕೆ 2000.
ಎ.ಆರ್.ಪಿ.ಓ- 350 ರಂತೆ ನಾಲ್ಕು ದಿನಕ್ಕೆ 1,400.
ಪೋಲಿಂಗ್ ಆಫಿಸರ್- 350 ರಂತೆ ನಾಲ್ಕು ದಿನಕ್ಕೆ 1,400.
ಪೊಲೀಂಗ್ ದಿನದ ಬಿಎಲ್ ಒ ಗಳಿಗೆ 350.
ಗ್ರೂಪ್ ಡಿ ಗಳಿಗೆ -200ರೂ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾರು ಹಾಗೂ ಸ್ಕೂಟಿಯ ನಡುವೆ ಡಿಕ್ಕಿ
- ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ದಾಳಿ
- ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?
ಇದು ಗೌರವಧನದ ಮಾಹಿತಿ ಈ ರೀತಿ ಇದ್ದು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳಿಗೂ ಅನ್ವಯವಾಗಲಿದೆ ಎಂದು ಸರ್ಕಾರದ ಅಧಿಕೃತ ಆದೇಶ ತಿಳಿಸಿದೆ.
ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ; ಯಾವ ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು? ಇಲ್ಲಿದೆ ಮಾಹಿತಿ
ಚಿಕ್ಕಮಗಳೂರು; ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆ, ತೆಗೆದು ಹಾಕುವುದು ಸೇರಿ ಎಲ್ಲ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮತದಾರರ ಅಂತಿಮ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 9,73,238 ಮತದಾರರಿದ್ದಾರೆ.
ಅಧಿಕ ಮತದಾರರ ಸಂಖ್ಯೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಮೊದಲ ಸ್ಥಾನದಲ್ಲಿದ್ದು, ಶೃಂಗೇರಿ ಕೊನೆಯ ಸ್ಥಾನದಲ್ಲಿದೆ. ಒಟ್ಟು 4,81,466 ಪುರುಷರು, 4,91,737 ಮಹಿಳಾ ಹಾಗೂ 35 ಇತರೆ ಮತದಾರರು ಇದ್ದಾರೆ. ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಹಾಗೂ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅಭಿಯಾನ ನಡೆಸಲಾಗಿತ್ತು. ಈವರೆಗೆ 18,525 ಯುವ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಈ ಪೈಕಿ 10,059 ಯುವಕರು, 8464 ಯುವತಿಯರು ಇದ್ದಾರೆ. ಅರೆ ಸೇನಾಪಡೆ, ಸೈನಿಕರು ಸೇರಿ ಕ್ಷೇತ್ರದಿಂದ ಹೊರಗೆ ಜಿಲ್ಲೆಯ 492 ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
4,125 ಅಂಗವಿಕಲ ಮತದಾರರು ಇದ್ದು, ಈ ಪೈಕಿ ಹೆಚ್ಚು ಮತದಾರರು ತರೀಕೆರೆ ಕ್ಷೇತ್ರದಲ್ಲಿದ್ದರೆ, ಅತಿ ಕಡಿಮೆ ಮತದಾರರು ಕಡೂರು ಕ್ಷೇತ್ರದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ 1,224 ಮತಗಟ್ಟೆಗಳಿವೆ
ಅತಿ ಕಡಿಮೆ ಮತದಾರರು ಇರುವ ಮತಗಟ್ಟೆ;
ಶೃಂಗೇರಿ ತಾಲೂಕಿನ ನಂದಿಗಾವಿ, ಮತಗಟ್ಟೆಯಲ್ಲಿ 60 ಮತದಾರರು ಇದ್ದಾರೆ, ಇದೇ ಕ್ಷೇತ್ರದ ದಂಡುಬಿಟ್ಟಹಾರ ಮತಗಟ್ಟೆಯಲ್ಲಿ 95, ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಮತಗಟ್ಟೆಯಲ್ಲಿ 46 ಮತದಾರರು ಇದ್ದಾರೆ ಎಂದರು.
ಅತಿ ಹೆಚ್ಚು ಮತದಾರರು ಇರುವ ಮತಗಟ್ಟೆ;
ಜಿಲ್ಲೆಯಲ್ಲಿ 1,500 ಕ್ಕಿಂತ ಹೆಚ್ಚು ಮತದಾರರು ಹೊಂದಿರುವ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ್ಪಳ್ಳಿಯ ಉರ್ದು ಶಾಲೆಯ ಬೂತ್ ನಲ್ಲಿ 1534, ಸಿಡಿಎ ಬೂತ್‌ನಲ್ಲಿ 1662, ತಮಿಳು ಕಾಲನಿಯಲ್ಲಿ 1550, ಸೆಂಟ್ ಜೋಸೆಫ್ ಬಾಲಕರ ಶಾಲೆಯಲ್ಲಿ 1653, ಆದಿಶಕ್ತಿ ನಗರದಲ್ಲಿ 1506, ಕಡೂರು ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಉರ್ದು ಶಾಲೆ ಮತಗಟ್ಟೆಯಲ್ಲಿ 1503 ಮಂದಿ ಮತದಾರರು ಇದ್ದಾರೆ.
ಅಂಚೆ ಮತದಾನ:
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 26396 ಮತದಾರರು ಇದ್ದು, ಇವರಲ್ಲಿ 1594 ಮಂದಿ ಅಂಚೆ ಮೂಲಕ ಮತದಾನ ಮಾಡಲು ಆಕ್ಷೇಪಿಸಿದ್ದು, ಇನ್ನುಳಿದವರು ಮತಗಟ್ಟೆಗೆ ಬರಲು ಒಪ್ಪಿಕೊಂಡಿದ್ದಾರೆ.
80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರಿಗೆ ಮನೆಯಿಂದಲೆ ಮತದಾನ ಮಾಡಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಈ ಪ್ರಕ್ರಿಯೆ ಏ.29 ರಿಂದ ಮೇ 6ರವರೆಗೆ ನಡೆಯಲಿದೆ ಎಂದರು. ಎಸ್ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಜಿ. ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.
ಕಡಿಮೆ ಮತದಾನವಾದ ಬೂತ್ ಗಳು:
- ಜಿಲ್ಲೆಯಲ್ಲಿ ಕಳೆದ ಬಾರಿ ಶೇ.72,13 ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ,
- ಶೃಂಗೇರಿ ಕ್ಷೇತ್ರದ ಬಿದರೆಯಲ್ಲಿ ಶೇ. 59 56,
- ಮೂಡಿಗೆರೆ ಕ್ಷೇತ್ರದ ಕುದುರೆಮುಖ ಜ್ಯೂನಿಯರ್ ಕಾಲೇಜ್ ಬೂತ್‌ನಲ್ಲಿ ಶೇ.24.70,
- ಮೂಡಿಗೆರೆ ಜ್ಯೂನಿಯರ್ ಕಾಲೇಜಿನಲ್ಲಿ ಶೇ.36.01,
- ಹಿರೇಬೈಲಿನಲ್ಲಿ ಶೇ.57,
- ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇ.57,
- ಇಡಕಣಿ ಬೂತ್‌ನಲ್ಲಿ ಶೇ.57.05 ಮತದಾನವಾಗಿದೆ.
- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಮತ್ತೋಡಿಯಲ್ಲಿ ಶೇ.33, ಕೆಸವಿನ ಮನೆಯಲ್ಲಿ ಶೇ.39.83 ಮತದಾನವಾಗಿತ್ತು ಎಂದು ಕೆ.ಎನ್.ರಮೇಶ್ ತಿಳಿಸಿದರು.
- ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಬೂತ್‌ನಲ್ಲಿ ಶೇ.50.14,
- ವಿಜಯಪುರದ ಎಂಇಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೇ.50.97 ರಷ್ಟು ಮತದಾನ ನಡೆದಿದೆ.
- ಅಜ್ಜಂಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೇ.57.31,
- ಕಡೂರಿನ ಮರವಂಜಿಯಲ್ಲಿ ಶೇ.53.43,
- ವೆಂಕಟರೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ಶೇ.53.29,
- ತಾಲೂಕು ಪಂಚಾಯಿತಿ ಬೂತ್‌ನಲ್ಲಿ ಶೇ. 54.0 ಮತದಾನವಾಗಿದೆ ಎಂದರು.